ಆಯುಷ್
azadi ka amrit mahotsav

ಮೈಸೂರಿನಲ್ಲಿ 8ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ: ಪ್ರಧಾನಮಂತ್ರಿಯವರ ನೇತೃತ್ವದಲ್ಲಿ ಬೃಹತ್ ಪ್ರದರ್ಶನ

Posted On: 23 MAY 2022 4:39PM by PIB Bengaluru

8ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ (ಐಡಿಐ-2022) ಪ್ರಾತ್ಯಕ್ಷಿಕೆ ಕರ್ನಾಟಕದ ಮೈಸೂರಿನಲ್ಲಿ 21 ಜೂನ್ 2022 ರಂದು ನಡೆಯಲಿದೆ.  ಆಯುಷ್ ಸಚಿವ ಶ್ರೀ ಸರ್ಬಾನಂದ್ ಸೋನೋವಾಲ್ ಅವರು 8ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ಸಾಮೂಹಿಕ ಯೋಗ ಪ್ರದರ್ಶನ (ಮುಖ್ಯ ಕಾರ್ಯಕ್ರಮ) ನಡೆಯುವ ಸ್ಥಳವಾಗಿ ಮೈಸೂರನ್ನು ಆಯ್ಕೆ ಮಾಡಲಾಗಿದೆ ಎಂದು ಇಂದು ಘೋಷಿಸಿದರು. 

"ಸ್ವಾತಂತ್ರ್ಯದ  ಅಮೃತ ಮಹೋತ್ಸವ" ವರ್ಷದಲ್ಲಿ ಈ ಅಂತರರಾಷ್ಟ್ರೀಯ ಯೋಗ ದಿನಾಚರಣೆ  ಇರುವುದರಿಂದ, ಸಚಿವಾಲಯವು ದೇಶಾದ್ಯಂತ 75 ಪ್ರಮುಖ ಸ್ಥಳಗಳಲ್ಲಿ  ಅಂತರರಾಷ್ಟ್ರೀಯ ಯೋಗ ದಿನವನ್ನು ಆಚರಿಸಲು  ಯೋಜಿಸಿದೆ ಮತ್ತು ಜಾಗತಿಕ ಮಟ್ಟದಲ್ಲಿ ಭಾರತವನ್ನು ಬ್ರ್ಯಾಂಡ್ ಮಾಡುವತ್ತ ಗಮನಹರಿಸುತ್ತಿದೆ.

ಮಾಧ್ಯಮ ಪ್ರತಿನಿಧಿಗಳನ್ನುದ್ದೇಶಿಸಿ ಮಾತನಾಡಿದ ಶ್ರೀ ಸರ್ಬಾನಂದ್, ಈ ವರ್ಷ ಜೂನ್ 21 ರಂದು ಮೈಸೂರಿನಲ್ಲಿ ಮುಖ್ಯ ಕಾರ್ಯಕ್ರಮದ ಜೊತೆಗೆ ಮತ್ತೊಂದು ಆಕರ್ಷಣೆ ಗಾರ್ಡಿಯನ್ ರಿಂಗ್ ಆಗಿದ್ದು,  ಯೋಗದ ನೇರ ಪ್ರಸಾರದ ಕಾರ್ಯಕ್ರಮವು, ವಿದೇಶದಲ್ಲಿರುವ ಭಾರತೀಯ ಮಿಷನ್‌ಗಳು ಆಯೋಜಿಸುವ ಐಡಿವೈ ಕಾರ್ಯಕ್ರಮಗಳ ಡಿಜಿಟಲ್ ಫೀಡ್ ಅನ್ನು ಸೆರೆಹಿಡಿಯುತ್ತದೆ. ಸ್ಥಳೀಯ ಕಾಲಮಾನ ಬೆಳಗ್ಗೆ 6 ಗಂಟೆಗೆ ಜಪಾನ್‌ನಿಂದ ನೇರ ಪ್ರಸಾರವನ್ನು ಪ್ರಾರಂಭಿಸು ವುದು ಉದ್ದೇಶಿತ ಯೋಜನೆಯಾಗಿದೆ.

ಅಂತರಾಷ್ಟ್ರೀಯ ಯೋಗ ದಿನಾಚರಣೆಯವರೆಗೂ  ಸರಣಿ ಕಾರ್ಯಕ್ರಮಗಳನ್ನು ಯೋಜಿಸಲಾಗಿದೆ ಮತ್ತು ಮೇ 27 ರಂದು ಹೈದರಾಬಾದ್‌ನಲ್ಲಿ 25 ದಿನಗಳ ಕೌಂಟ್‌ಡೌನ್ ಅನ್ನು ಆಚರಿಸಲಾಗುತ್ತಿದ್ದು, ಇದರಲ್ಲಿ ಸುಮಾರು 10 ಸಾವಿರ ಯೋಗಾಸಕ್ತರು ಯೋಗ ಪ್ರದರ್ಶನದಲ್ಲಿ ಭಾಗವಹಿಸಲಿದ್ದಾರೆ ಎಂದು ಸಚಿವರು ತಿಳಿಸಿದರು.

ಈ ಕಾರ್ಯಕ್ರಮವು ಕರ್ನಾಟಕದ ರಾಜ್ಯಪಾಲರು, ಕೇಂದ್ರ ಸಚಿವರು, ಚಲನಚಿತ್ರ ತಾರೆಯರು, ಕ್ರೀಡಾ ವ್ಯಕ್ತಿಗಳು, ಖ್ಯಾತರು, ಪೂಜ್ಯ ಯೋಗ ಗುರುಗಳು, ಗಣ್ಯರು, ಯೋಗ ಮತ್ತು ಸಂಬಂಧಿತ ವಿಜ್ಞಾನ ತಜ್ಞರು, ಸ್ಥಳೀಯ ಯೋಗ ಸಂಸ್ಥೆಗಳು ಮತ್ತು ಯೋಗಾಸಕ್ತರ ಉಪಸ್ಥಿತಿಗೆ ಸಾಕ್ಷಿಯಾಗಲಿದೆ.

ಹಿಂದಿನ ಮೆಗಾ ಕೌಂಟ್‌ಡೌನ್ ಕಾರ್ಯಕ್ರಮಗಳನ್ನು ಶಿವದೋಲ್ (ಮೇ 2 ರಂದು 50 ನೇ ದಿನದ ಕೌಂಟ್‌ಡೌನ್) ಮತ್ತು ಕೆಂಪು ಕೋಟೆಯಲ್ಲಿ (ಏಪ್ರಿಲ್ 7 ರಂದು 75 ನೇ ದಿನದ ಕೌಂಟ್‌ಡೌನ್) ಆಯೋಜಿಸಲಾಗಿತ್ತು.

***
 


(Release ID: 1827684) Visitor Counter : 250