ಪ್ರಧಾನ ಮಂತ್ರಿಯವರ ಕಛೇರಿ

2022ರ ಮೇ 16ರಂದು ನೇಪಾಳದ ಲುಂಬಿನಿಗೆ ಭೇಟಿ ನೀಡಿದ ಪ್ರಧಾನಮಂತ್ರಿ

Posted On: 16 MAY 2022 6:09PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2022ರ ಮೇ 16ರಂದು ನೇಪಾಳದ ಪ್ರಧಾನಮಂತ್ರಿ ಗೌರವಾನ್ವಿತ ಶೇರ್‌ ಬಹದ್ದೂರ್‌ ದೇವುಬಾ ಅವರ ಆಹ್ವಾನದ ಮೇರೆಗೆ ಬುದ್ಧ ಪೂರ್ಣಿಮೆಯ ಶುಭ ಸಂದರ್ಭದಲ್ಲಿನೇಪಾಳದ ಲುಂಬಿನಿಗೆ ಅಧಿಕೃತ ಭೇಟಿ ನೀಡಿದರು. ಪ್ರಧಾನಮಂತ್ರಿಯಾಗಿ ಶ್ರೀ ನರೇಂದ್ರ ಮೋದಿ ಅವರು ನೇಪಾಳಕ್ಕೆ ನೀಡಿದ ಐದನೇ ಭೇಟಿ ಇದಾಗಿದ್ದು, ಲುಂಬಿನಿಗೆ ಮೊದಲ ಬಾರಿಗೆ ಭೇಟಿ ನೀಡಿದರು.

ಪ್ರಧಾನಮಂತ್ರಿ ದೇವುಬಾ, ಅವರ ಪತ್ನಿ ಡಾ. ಅರ್ಜು ರಾಣಾ ದೇವುಬಾ, ಗೃಹ ವ್ಯವಹಾರಗಳ ಸಚಿವ ಶ್ರೀ ಬಾಲ ಕೃಷ್ಣ ಖಂಡ್‌, ವಿದೇಶಾಂಗ ವ್ಯವಹಾರಗಳ ಸಚಿವ ಡಾ. ನಾರಾಯಣ್‌ ಖಡ್ಕ, ಭೌತಿಕ ಮೂಲಸೌಕರ್ಯ ಮತ್ತು ಸಾರಿಗೆ ಸಚಿವೆ ಶ್ರೀಮತಿ ರೇಣು ಕುಮಾರಿ ಯಾದವ್‌, ಇಂಧನ, ಜಲಸಂಪನ್ಮೂಲ ಮತ್ತು ನೀರಾವರಿ ಸಚಿವರಾದ ಶ್ರೀಮತಿ ಪಂಫಾ ಭುಸಾಲ್‌, ಸಂಸ್ಕೃತಿ, ನಾಗರಿಕ ವಿಮಾನಯಾನ ಮತ್ತು ಪ್ರವಾಸೋದ್ಯಮ ಸಚಿವರಾದ ಶ್ರೀ ಪ್ರೇಮ್‌ ಬಹದ್ದೂರ್‌ ಆಲೆ,  ಶಿಕ್ಷ ಣ ಸಚಿವ ಶ್ರೀ ದೇವೇಂದ್ರ ಪೌಡೆಲ್‌, ಕಾನೂನು, ನ್ಯಾಯ ಮತ್ತು ಸಂಸದೀಯ ವ್ಯವಹಾರಗಳ ಸಚಿವರಾದ ಶ್ರೀ ಗೋವಿಂದ ಪ್ರಸಾದ್‌ ಶರ್ಮಾ ಮತ್ತು ಲುಂಬಿನಿ ಪ್ರಾಂತ್ಯದ ಮುಖ್ಯಮಂತ್ರಿ ಶ್ರೀ ಕುಲ್‌ ಪ್ರಸಾದ್‌ ಕೆ.ಸಿ., ಪ್ರಧಾನಮಂತ್ರಿ ಅವರನ್ನು ಆತ್ಮೀಯವಾಗಿ ಸ್ವಾಗತಿಸಿದರು. 

ಆಗಮಿಸಿದ ನಂತರ, ಇಬ್ಬರೂ ಪ್ರಧಾನ ಮಂತ್ರಿಗಳು ಭಗವಾನ್‌ ಬುದ್ಧನ ಜನ್ಮಸ್ಥಳವಾದ ಮಾಯಾದೇವಿ ದೇವಾಲಯಕ್ಕೆ ಭೇಟಿ ನೀಡಿದರು. ದೇವಾಲಯದಲ್ಲಿ, ಪ್ರಧಾನ ಮಂತ್ರಿಗಳು ಬೌದ್ಧ ಆಚರಣೆಗಳ ಪ್ರಕಾರ ನಡೆಸಲಾದ ಪ್ರಾರ್ಥನೆಗಳಲ್ಲಿಭಾಗವಹಿಸಿದರು ಮತ್ತು ಅರ್ಪಣೆಗಳನ್ನು ಮಾಡಿದರು. ಪ್ರಧಾನ ಮಂತ್ರಿಗಳು ದೀಪಗಳನ್ನು ಬೆಳಗಿಸಿದರು ಮತ್ತು ಐತಿಹಾಸಿಕ ಅಶೋಕ ಸ್ತಂಭಕ್ಕೆ ಭೇಟಿ ನೀಡಿದರು, ಇದು ಲುಂಬಿನಿ ಭಗವಾನ್‌ ಬುದ್ಧನ ಜನ್ಮಸ್ಥಳವಾಗಿದೆ ಎಂಬುದಕ್ಕೆ ಮೊದಲ ಶಾಸನದ ಪುರಾವೆಗಳನ್ನು ಹೊಂದಿದೆ. 2014ರಲ್ಲಿನೇಪಾಳಕ್ಕೆ ಭೇಟಿ ನೀಡಿದ ಪ್ರಧಾನಿ ಮೋದಿಯವರು ಉಡುಗೊರೆಯಾಗಿ ತಂದಿದ್ದ ಪವಿತ್ರ ಬೋಧಿ ವೃಕ್ಷಕ್ಕೆ ನೀರುಣಿಸಿದರು.

ನವದೆಹಲಿಯಲ್ಲಿರುವ ಅಂತಾರಾಷ್ಟ್ರೀಯ ಬೌದ್ಧ ಒಕ್ಕೂಟಕ್ಕೆ (ಐಬಿಸಿ) ಸೇರಿದ ಲುಂಬಿನಿಯಲ್ಲಿರುವ ಪ್ಲಾಟ್‌ನಲ್ಲಿಭಾರತ ಅಂತಾರಾಷ್ಟ್ರೀಯ ಬೌದ್ಧ ಸಂಸ್ಕೃತಿ ಮತ್ತು ಪರಂಪರೆಯ ಕೇಂದ್ರ ನಿರ್ಮಾಣಕ್ಕಾಗಿ ನಡೆದ ಶಿಲಾನ್ಯಾಸ ಸಮಾರಂಭದಲ್ಲಿಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಪ್ರಧಾನಮಂತ್ರಿ ದೇವುಬಾ ಅವರು ಭಾಗವಹಿಸಿದ್ದರು. ಈ ಜಾಗವನ್ನು ಲುಂಬಿನಿ ಅಭಿವೃದ್ಧಿ ಟ್ರಸ್ಟ್‌ 2021 ರ ನವೆಂಬರ್‌ನಲ್ಲಿಐಬಿಸಿಗೆ ಹಂಚಿಕೆ ಮಾಡಿದೆ. ಶಿಲಾನ್ಯಾಸ ಸಮಾರಂಭದ ನಂತರ, ಪ್ರಧಾನ ಮಂತ್ರಿಗಳು ಬೌದ್ಧ ಕೇಂದ್ರದ ಮಾದರಿಯನ್ನು ಅನಾವರಣಗೊಳಿಸಿದರು. ಇದು ಪ್ರಾರ್ಥನಾ ಮಂದಿರಗಳು, ಧ್ಯಾನ ಕೇಂದ್ರ, ಗ್ರಂಥಾಲಯ, ವಸ್ತುಪ್ರದರ್ಶನ ಸಭಾಂಗಣ, ಕೆಫೆಟೇರಿಯಾ ಮತ್ತು ಇತರ ಸೌಲಭ್ಯಗಳನ್ನು ಹೊಂದಿದೆ  ಮತ್ತು ವಿಶ್ವದಾದ್ಯಂತದ ಬೌದ್ಧ ಯಾತ್ರಿಕರು ಮತ್ತು ಪ್ರವಾಸಿಗರಿಗೆ ಮುಕ್ತವಾಗಿರುತ್ತದೆ.

ಇಬ್ಬರೂ ಪ್ರಧಾನ ಮಂತ್ರಿಗಳು ದ್ವಿಪಕ್ಷೀಯ ಸಭೆ ನಡೆಸಿದರು. ಈ ಸಮಯದಲ್ಲಿಅವರು ಏಪ್ರಿಲ್‌ 2 ರಂದು ನವದೆಹಲಿಯಲ್ಲಿನಡೆದ ತಮ್ಮ ಚರ್ಚೆಗಳನ್ನು ಅನುಸರಿಸಿದರು. ಸಂಸ್ಕೃತಿ, ಆರ್ಥಿಕತೆ, ವ್ಯಾಪಾರ, ಸಂಪರ್ಕ, ಇಂಧನ ಮತ್ತು ಅಭಿವೃದ್ಧಿ ಪಾಲುದಾರಿಕೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿಸಹಕಾರವನ್ನು ಮತ್ತಷ್ಟು ಬಲಪಡಿಸುವ ನಿರ್ದಿಷ್ಟ ಉಪಕ್ರಮಗಳು ಮತ್ತು ಆಲೋಚನೆಗಳ ಬಗ್ಗೆ ಅವರು ಚರ್ಚಿಸಿದರು. ಬೌದ್ಧಧರ್ಮದ ಪವಿತ್ರ ತಾಣಗಳಲ್ಲಿಒಂದಾಗಿರುವ ಮತ್ತು ಎರಡೂ ದೇಶಗಳ ನಡುವಿನ ಬೌದ್ಧ ಪರಂಪರೆಯನ್ನು ಪ್ರತಿಬಿಂಬಿಸುವ ಲುಂಬಿನಿ ಮತ್ತು ಕುಶಿನಗರಗಳ ನಡುವೆ ಸಹೋದರಿ ನಗರ ಸಂಬಂಧಗಳನ್ನು ಸ್ಥಾಪಿಸಲು ಎರಡೂ ಕಡೆಯವರು ತಾತ್ವಿಕವಾಗಿ ಒಪ್ಪಿಕೊಂಡರು.

ಉತ್ಪಾದನಾ ಯೋಜನೆಗಳು, ವಿದ್ಯುತ್‌ ಪ್ರಸರಣ ಮೂಲಸೌಕರ್ಯ ಮತ್ತು ವಿದ್ಯುತ್‌ ವ್ಯಾಪಾರದ ಅಭಿವೃದ್ಧಿಯನ್ನು ಒಳಗೊಂಡಿರುವ ದ್ವಿಪಕ್ಷೀಯ ವಿದ್ಯುತ್‌ ವಲಯದ ಸಹಕಾರದಲ್ಲಿಇತ್ತೀಚಿನ ತಿಂಗಳುಗಳಲ್ಲಿಆಗಿರುವ ಪ್ರಗತಿಯ ಬಗ್ಗೆ ಉಭಯ ಪ್ರಧಾನ ಮಂತ್ರಿಗಳು ಸಂತೃಪ್ತಿ ವ್ಯಕ್ತಪಡಿಸಿದರು. ನೇಪಾಳದಲ್ಲಿಪಶ್ಚಿಮ ಸೇಟಿ ಜಲವಿದ್ಯುತ್‌ ಯೋಜನೆಯ ಅಭಿವೃದ್ಧಿಯನ್ನು ಕೈಗೊಳ್ಳುವಂತೆ ಪ್ರಧಾನಮಂತ್ರಿ ದೇವುಬಾ ಅವರು ಭಾರತೀಯ ಕಂಪನಿಗಳಿಗೆ ಆಹ್ವಾನ ನೀಡಿದರು. ನೇಪಾಳದ ಜಲವಿದ್ಯುತ್‌ ಕ್ಷೇತ್ರದ ಅಭಿವೃದ್ಧಿಯಲ್ಲಿಭಾರತದ ಬೆಂಬಲ ಮತ್ತು ಈ ನಿಟ್ಟಿನಲ್ಲಿಹೊಸ ಯೋಜನೆಗಳನ್ನು ತ್ವರಿತವಾಗಿ ಅನ್ವೇಷಿಸಲು ಆಸಕ್ತಿಯುಳ್ಳ ಭಾರತೀಯ ಅಭಿವರ್ಧಕರನ್ನು ಉತ್ತೇಜಿಸುವ ಕುರಿತು ಭಾರತದ ಬೆಂಬಲದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದರು. ಎರಡೂ ದೇಶಗಳ ಜನರನ್ನು ಹತ್ತಿರಕ್ಕೆ ತರಲು ಶೈಕ್ಷ ಣಿಕ ಮತ್ತು ಸಾಂಸ್ಕೃತಿಕ ವಿನಿಮಯವನ್ನು ಮತ್ತಷ್ಟು ವಿಸ್ತರಿಸಲು ಇಬ್ಬರೂ ಪ್ರಧಾನ ಮಂತ್ರಿಗಳು ಸಮ್ಮತಿಸಿದರು. ಪ್ರಧಾನಮಂತ್ರಿ ಶ್ರೀ ದೇವುಬಾ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಗೌರವಾರ್ಥ ಭೋಜನ ಕೂಟವನ್ನು ಆಯೋಜಿಸಿದ್ದರು.

ನೇಪಾಳ ಸರ್ಕಾರದ ಆಶ್ರಯದಲ್ಲಿ ಲುಂಬಿನಿ ಅಭಿವೃದ್ಧಿ ಟ್ರಸ್ಟ್‌ ಆಯೋಜಿಸಿದ್ದ 2566ನೇ ಬುದ್ಧ ಜಯಂತಿ ಆಚರಣೆಯ ಅಂಗವಾಗಿ ನಡೆದ ವಿಶೇಷ ಕಾರ್ಯಕ್ರಮದಲ್ಲಿಇಬ್ಬರೂ ಪ್ರಧಾನ ಮಂತ್ರಿಗಳು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ಸನ್ಯಾಸಿಗಳು, ಅಧಿಕಾರಿಗಳು, ಗಣ್ಯರು ಮತ್ತು ಬೌದ್ಧ ಜಗತ್ತಿಗೆ ಸಂಬಂಧಿಸಿದವರ ಬೃಹತ್‌ ಸಭೆಯನ್ನುದ್ದೇಶಿಸಿ ಮಾತನಾಡಿದರು.

2022ರ ಏಪ್ರಿಲ್‌ 1ರಿಂದ 3ರವರೆಗೆ ಪ್ರಧಾನಮಂತ್ರಿ ದೇವುಬಾ ಅವರು ದೆಹಲಿ ಮತ್ತು ವಾರಾಣಸಿಗೆ ನೀಡಿದ ಯಶಸ್ವಿ ಭೇಟಿಯ ನಂತರ ನೇಪಾಳದ ಲುಂಬಿನಿಗೆ ಪ್ರಧಾನಮಂತ್ರಿ ಅವರ ಭೇಟಿಯು ಅನ್ವಯಿಸುತ್ತದೆ. ಇಂದಿನ ಭೇಟಿಯು ಎರಡೂ ದೇಶಗಳ ನಡುವಿನ ಬಹುಮುಖಿ ಪಾಲುದಾರಿಕೆಗೆ ಮತ್ತಷ್ಟು ವೇಗವನ್ನು ಒದಗಿಸಿದೆ ಮತ್ತು ಪ್ರಮುಖ ಕ್ಷೇತ್ರಗಳಲ್ಲಿ, ವಿಶೇಷವಾಗಿ ಶಿಕ್ಷ ಣ, ಸಂಸ್ಕೃತಿ, ಇಂಧನ ಮತ್ತು ಜನರ ನಡುವಿನ ವಿನಿಮಯದಲ್ಲಿಸುಧಾರಿತ ಸಹಕಾರವನ್ನು ಒದಗಿಸಿದೆ. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಲುಂಬಿನಿಗೆ ನೀಡಿದ ಭೇಟಿಯು ಭಾರತ ಮತ್ತು ನೇಪಾಳದ ನಡುವಿನ ಆಳವಾದ ಮತ್ತು ಶ್ರೀಮಂತ ನಾಗರಿಕ ಸಂಪರ್ಕ ಮತ್ತು ಅದನ್ನು ಪೋಷಿಸಲು ಮತ್ತು ಉತ್ತೇಜಿಸಲು ಎರಡೂ ಕಡೆಯ ಜನರ ಕೊಡುಗೆಯನ್ನು ಪ್ರತಿಪಾದಿಸುತ್ತದೆ.

ಭೇಟಿಯ ಸಮಯದಲ್ಲಿಮುಕ್ತಾಯವಾದ ದಾಖಲೆಗಳ ಪಟ್ಟಿಯನ್ನು ಇಲ್ಲಿ ನೋಡಬಹುದು

 

***



(Release ID: 1825941) Visitor Counter : 181