ಚುನಾವಣಾ ಆಯೋಗ
2022-24ನೇ ಸಾಲಿನ ಏಷ್ಯನ್ ಚುನಾವಣಾ ಪ್ರಾಧಿಕಾರಗಳ ಒಕ್ಕೂಟದ (ಎಎಇಎ) ಅಧ್ಯಕ್ಷ ರಾಷ್ಟ್ರವಾಗಿ ಭಾರತ ಆಯ್ಕೆ
Posted On:
11 MAY 2022 12:19PM by PIB Bengaluru
2022, ಮೇ 7 ರಂದು ಫಿಲಿಪ್ಪೀನ್ಸ್‌ನ ಮನಿಲಾದಲ್ಲಿ ಇತ್ತೀಚೆಗೆ ನಡೆದ ಕಾರ್ಯಕಾರಿ ಮಂಡಳಿ ಮತ್ತು ಸಾಮಾನ್ಯ ಸಭೆಯಲ್ಲಿ ಭಾರತವನ್ನು 2022-2024 ರ ಏಷ್ಯನ್ ಚುನಾವಣಾ ಪ್ರಾಧಿಕಾರಗಳ ಸಂಘದ (ಎಎಇಎ) ನೂತನ ಅಧ್ಯಕ್ಷ ರಾಷ್ಟ್ರವಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ. ಇದುವರೆಗೆ ಮನಿಲಾ (ಫಿಲಿಪ್ಪೀನ್ಸ್) ಎಎಇಎಯನ ಅಧ್ಯಕ್ಷ ಸ್ಥಾನದಲ್ಲಿ ಇತ್ತು. ಕಾರ್ಯಕಾರಿ ಮಂಡಳಿಯ ಹೊಸ ಸದಸ್ಯ ರಾಷ್ಟ್ರಗಳಲ್ಲಿ ರಷ್ಯಾ, ಉಜ್ಬೇಕಿಸ್ತಾನ್, ಶ್ರೀಲಂಕಾ, ಮಾಲ್ಡೀವ್ಸ್, ತೈವಾನ್ ಮತ್ತು ಫಿಲಿಪೈನ್ಸ್ ಸೇರಿವೆ.
ಭಾರತದ ಚುನಾವಣಾ ಆಯೋಗದ ಉಪ ಚುನಾವಣಾ ಆಯುಕ್ತರಾದ ಶ್ರೀ ನಿತೇಶ್ ವ್ಯಾಸ್ ಅವರ ನೇತೃತ್ವದ ಮೂವರು ಸದಸ್ಯರ ನಿಯೋಗವು ಮಣಿಪುರದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀ ರಾಜೇಶ್ ಅಗ್ರವಾಲ್ ಮತ್ತು ರಾಜಸ್ಥಾನದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀ ಪ್ರವೀಣ್ ಗುಪ್ತಾ ಅವರೊಂದಿಗೆ ಮನಿಲಾದಲ್ಲಿ ನಡೆದ ಕಾರ್ಯಕಾರಿ ಮಂಡಳಿ ಸಭೆಯಲ್ಲಿ ಪಾಲ್ಗೊಂಡು 2022-23ನೇ ಸಾಲಿನ ಕಾರ್ಯಯೋಜನೆ ಮತ್ತು 2023-24ನೇ ಸಾಲಿನ ಭವಿಷ್ಯದ ಚಟುವಟಿಕೆಗಳನ್ನು ಕಾರ್ಯಕಾರಿ ಮಂಡಳಿಗೆ ಸಲ್ಲಿಸಿತು. ‘ಚುನಾವಣೆಗಳಲ್ಲಿ ಲಿಂಗತ್ವ ಸಮಸ್ಯೆಗಳು’ ಎಂಬ ವಿಷಯದ ಬಗ್ಗೆ ಪ್ರಾತ್ಯಕ್ಷಿಕೆಯನ್ನು ಸಹ ನೀಡಲಾಯಿತು. ಒಳಗೊಳ್ಳುವ ಮತ್ತು ಭಾಗವಹಿಸುವ ಚುನಾವಣೆಗಳಿಗಾಗಿ ಚುನಾವಣಾ ಮತ್ತು ರಾಜಕೀಯ ಪ್ರಕ್ರಿಯೆಗಳಲ್ಲಿನ ಸಾಮಾಜಿಕ-ರಾಜಕೀಯ ಅಡೆತಡೆಗಳನ್ನು ಮುರಿಯಲು ಭಾರತವು ವಿವಿಧ ಸಂಘಟಿತ ಮತ್ತು ಉದ್ದೇಶಿತ ಮಧ್ಯಸ್ಥಿಕೆಗಳನ್ನು ಈ ಸಂದರ್ಭದಲ್ಲಿ ಬಿಂಬಿಸಲಾಯಿತು.
ಉತ್ತಮ ಆಡಳಿತ ಮತ್ತು ಪ್ರಜಾಪ್ರಭುತ್ವವನ್ನು ಬೆಂಬಲಿಸುವ ಉದ್ದೇಶದಿಂದ ಮುಕ್ತ ಹಾಗು ಪಾರದರ್ಶಕ ಚುನಾವಣೆಗಳನ್ನು ಉತ್ತೇಜಿಸುವ ಮಾರ್ಗಗಳ ಬಗ್ಗೆ ಚರ್ಚಿಸಲು ಮತ್ತು ಕಾರ್ಯನಿರ್ವಹಿಸಲು ಚುನಾವಣಾ ಪ್ರಾಧಿಕಾರಗಳ ನಡುವೆ ಅನುಭವ ಹಾಗು ಉತ್ತಮ ಅಭ್ಯಾಸಗಳನ್ನು ಹಂಚಿಕೊಳ್ಳಲು ಏಷ್ಯಾ ವಲಯದಲ್ಲಿ ಪಕ್ಷಾತೀತ ವೇದಿಕೆಯನ್ನು ಒದಗಿಸುವುದು ಏಷ್ಯನ್ ಚುನಾವಣಾ ಪ್ರಾಧಿಕಾರಗಳ ಸಂಘದ ಧ್ಯೇಯವಾಗಿದೆ.
ಅನೇಕ ಎಎಇಎ ಸದಸ್ಯ ರಾಷ್ಟ್ರಗಳ ಅಧಿಕಾರಿಗಳು ಕಾಲಕಾಲಕ್ಕೆ ಇಂಡಿಯಾ ಇಂಟರ್‌ನ್ಯಾಷನಲ್ ಇನ್‌ಸ್ಟಿಟ್ಯೂಟ್ ಫಾರ್ ಡೆಮಾಕ್ರಸಿ ಅಂಡ್ ಎಲೆಕ್ಷನ್ ಮ್ಯಾನೇಜ್ಮೆಂಟ್ (ಐಐಡಿಇಎಂ) ನಡೆಸುವ ಅಂತಾರಾಷ್ಟ್ರೀಯ ತರಬೇತಿ
ಕಾರ್ಯಕ್ರಮಗಳಲ್ಲಿ ನಿಯಮಿತವಾಗಿ ಭಾಗವಹಿಸುತ್ತಿದ್ದಾರೆ. 2019 ರಿಂದ, ಎಎಇಎ ಸದಸ್ಯ ರಾಷ್ಟ್ರಗಳ 250 ಕ್ಕೂ ಹೆಚ್ಚು ಅಧಿಕಾರಿಗಳು ಈ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ. ಐಐಡಿಇಎಂ ನಿರ್ದಿಷ್ಟ ಎಎಇಎ ಸದಸ್ಯ ರಾಷ್ಟ್ರಗಳಿಗೆ ಅನುಕೂಲಕ್ಕೆ ತಕ್ಕಂತೆ ಸಾಮರ್ಥ್ಯ ಅಭಿವೃದ್ಧಿ ತರಬೇತಿ ಕಾರ್ಯಕ್ರಮಗಳನ್ನು ಸಹ ನಡೆಸುತ್ತದೆ. ಬಾಂಗ್ಲಾದೇಶ ಚುನಾವಣಾ ಆಯೋಗದ 50 ಅಧಿಕಾರಿಗಳಿಗೆ 2021-22ರಲ್ಲಿ ತರಬೇತಿ ನೀಡಲಾಗಿದೆ.
ಭಾರತದ ಚುನಾವಣಾ ಆಯೋಗವು ಆಯೋಜಿಸುವ ಅಂತಾರಾಷ್ಟ್ರೀಯ ಚುನಾವಣಾ ಸಂದರ್ಶಕರ ಕಾರ್ಯಕ್ರಮದಲ್ಲಿ ಎಎಇಎಯ ಪ್ರತಿನಿಧಿಗಳು ನಿಯಮಿತವಾಗಿ ಭಾಗವಹಿಸುತ್ತಿದ್ದಾರೆ. 2022 ರ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಇಸಿಐ ಆಯೋಜಿಸಿದ 3ನೇ ಅಂತಾರಾಷ್ಟ್ರೀಯ ವರ್ಚುವಲ್ ಚುನಾವಣಾ ಸಂದರ್ಶಕರ ಕಾರ್ಯಕ್ರಮದಲ್ಲಿ(ಐಇವಿಪಿ) 12 ಎಎಇಎ ಸದಸ್ಯರಿಂದ 62 ಅಧಿಕಾರಿಗಳು ಭಾಗವಹಿಸಿದ್ದರು. ಎಎಇಎ 118 ಸದಸ್ಯರ ವಿಶ್ವ ಚುನಾವಣಾ ಸಂಸ್ಥೆಗಳ ಸಂಘ (ಎ-ವೆಬ್)ದ ಸಹ ಸದಸ್ಯ ರಾಷ್ಟ್ರವಾಗಿದೆ.
ಎಎಇಎ ನ ಸ್ಥಾಪನೆ ಮತ್ತು ಸದಸ್ಯತ್ವ
1997ರ ಜನವರಿ 26ರಿಂದ 29ರವರೆಗೆ ಫಿಲಿಪೈನ್ಸ್‌ನ ಮನಿಲಾದಲ್ಲಿ ನಡೆದ ಇಪ್ಪತ್ತೊಂದನೇ ಶತಮಾನದಲ್ಲಿ ಏಷ್ಯನ್ ಚುನಾವಣೆಗಳ ಕುರಿತ ವಿಚಾರ ಸಂಕಿರಣದಲ್ಲಿ ಭಾಗವಹಿಸಿದ್ದವರು ಅಂಗೀಕರಿಸಿದ ನಿರ್ಣಯದ ಅನುಸಾರ, 1998ರಲ್ಲಿ ಏಷ್ಯನ್ ಚುನಾವಣಾ ಪ್ರಾಧಿಕಾರಗಳ ಸಂಘ (ಎಎಇಎ) ವನ್ನು ಸ್ಥಾಪಿಸಲಾಯಿತು. ಪ್ರಸ್ತುತ 20 ಏಷ್ಯನ್ ಇಎಂಬಿಗಳು ಎಎಇಎಯ ಸದಸ್ಯ ರಾಷ್ಟ್ರಗಳಾಗಿವೆ. ಇಸಿಐ ಎಎಇಎಯ ಸ್ಥಾಪಕ ಸದಸ್ಯ ಮತ್ತು 2011-13 ರಲ್ಲಿಉಪಾಧ್ಯಕ್ಷ ರಾಗಿ ಮತ್ತು 2014-16 ರಲ್ಲಿಅಧ್ಯಕ್ಷ ರಾಗಿ ಎಎಇಎಯ ಕಾರ್ಯನಿರ್ವಾಹಕ ಮಂಡಳಿಯಲ್ಲಿ ಸೇವೆ ಸಲ್ಲಿಸಿದೆ.
***
(Release ID: 1824529)
Visitor Counter : 224
Read this release in:
Tamil
,
Telugu
,
Malayalam
,
Bengali
,
English
,
Urdu
,
Hindi
,
Marathi
,
Manipuri
,
Punjabi
,
Gujarati
,
Odia