ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಗುರುದೇವ ಟ್ಯಾಗೋರ್ ಅವರ ಜಯಂತಿಯಂದು ಪ್ರಧಾನ ಮಂತ್ರಿ ನಮನ

प्रविष्टि तिथि: 09 MAY 2022 8:58AM by PIB Bengaluru

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಗುರುದೇವ ಟ್ಯಾಗೋರ್ ಅವರಿಗೆ ಅವರ ಜಯಂತಿಯಂದು ತಮ್ಮ ಗೌರವ ನಮನಗಳನ್ನು ಸಲ್ಲಿಸಿದ್ದಾರೆ.

ಟ್ವೀಟೊಂದರಲ್ಲಿ ಪ್ರಧಾನ ಮಂತ್ರಿ ಅವರು:

“ನಾನು ಗುರುದೇವ ಟ್ಯಾಗೋರ್ ಅವರಿಗೆ ಅವರ ಜಯಂತಿಯಂದು ಶಿರಬಾಗಿ ನಮಿಸುತ್ತೇನೆ. ಚಿಂತನೆ ಮತ್ತು ಕ್ರಿಯೆಗಳಲ್ಲಿ ಅವರು ನಿರಂತರವಾಗಿ ಮಿಲಿಯಾಂತರ ಜನರನ್ನು ಪ್ರಭಾವಿಸುತ್ತಿದ್ದಾರೆ. ಅವರು ನಮಗೆ ನಮ್ಮ ದೇಶದ ಬಗ್ಗೆ, ಸಂಸ್ಕೃತಿಯ ಬಗ್ಗೆ ಮತ್ತು ನೈತಿಕತೆ,   ಆಚಾರ ವಿಚಾರಗಳ ಬಗ್ಗೆ ಹೆಮ್ಮೆಪಡುವಂತೆ ಹೇಳಿಕೊಟ್ಟರು. ಅವರು ಶಿಕ್ಷಣ, ಕಲಿಕೆ ಮತ್ತು ಸಾಮಾಜಿಕ ಸಶಕ್ತೀಕರಣಕ್ಕೆ ಒತ್ತು ನೀಡಿದರು. ಭಾರತವನ್ನು  ಕುರಿತ ಅವರ ದೂರದೃಷ್ಟಿಯ ಚಿಂತನೆಯನ್ನು ಈಡೇರಿಸಲು ನಾವು ಬದ್ಧರಾಗಿದ್ದೇವೆ” ಎಂದು ಹೇಳಿದ್ದಾರೆ.

 

*****


(रिलीज़ आईडी: 1823762) आगंतुक पटल : 247
इस विज्ञप्ति को इन भाषाओं में पढ़ें: English , Urdu , Marathi , हिन्दी , Bengali , Assamese , Manipuri , Punjabi , Gujarati , Odia , Tamil , Telugu , Malayalam