ಪ್ರಧಾನ ಮಂತ್ರಿಯವರ ಕಛೇರಿ
ಮೇ 6 ರಂದು ನಡೆಯವ 'ಜೆ.ಐ.ಟಿ.ಒ. ಕನೆಕ್ಟ್ 2022' ರ ಕಾರ್ಯಕ್ರಮದ ಉದ್ಘಾಟನಾ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ ಪ್ರಧಾನಮಂತ್ರಿ
Posted On:
05 MAY 2022 6:53PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 6 ಮೇ 2022 ರಂದು ಬೆಳಗ್ಗೆ 10:30 ಗಂಟೆಗೆ ವಿಡಿಯೊ ಸಮಾವೇಶ ಮೂಲಕ ಜೈನ್ ಇಂಟರ್ನ್ಯಾಷನಲ್ ಟ್ರೇಡ್ ಆರ್ಗನೈಸೇಶನ್ ಇದರ 'ಜೆ.ಐ.ಟಿ.ಒ ಕನೆಕ್ಟ್ 2022' ಕಾರ್ಯಕ್ರಮದ ಉದ್ಘಾಟನಾ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.
ಜೈನ್ ಇಂಟರ್ನ್ಯಾಷನಲ್ ಟ್ರೇಡ್ ಆರ್ಗನೈಸೇಶನ್ (ಜೆ.ಐ.ಟಿ.ಒ.) ವಿಶ್ವದಾದ್ಯಂತ ಜೈನರನ್ನು ಸಂಪರ್ಕಿಸುವ ಜಾಗತಿಕ ಸಂಸ್ಥೆಯಾಗಿದೆ. ಜೆ.ಐ.ಟಿ.ಒ. ಕನೆಕ್ಟ್ ಪರಸ್ಪರ ನೆಟ್ ವರ್ಕಿಂಗ್ ಮತ್ತು ವೈಯಕ್ತಿಕ ಸಂವಹನಗಳಿಗೆ ಮಾರ್ಗವನ್ನು ಒದಗಿಸುವ ಮೂಲಕ ವ್ಯಾಪಾರ ಮತ್ತು ಉದ್ಯಮಕ್ಕೆ ಸಹಾಯ ಮಾಡುವ ಪ್ರಯತ್ನ ಮಾಡುತ್ತಿದೆ. 'ಜೆ.ಐ.ಟಿ.ಒ ಕನೆಕ್ಟ್ 2022' ಮೂರು ದಿನಗಳ ಕಾರ್ಯಕ್ರಮವಾಗಿದ್ದು, ಪುಣೆಯ ಗಂಗಾಧಮ್ ಅನೆಕ್ಸ್ ನಲ್ಲಿ ಮೇ 6 ರಿಂದ 8, 2022 ರವರೆಗೆ ಆಯೋಜಿಸಲಾಗಿದೆ ಮತ್ತು ವ್ಯಾಪಾರ ಮತ್ತು ಆರ್ಥಿಕತೆಗೆ ಸಂಬಂಧಿಸಿದ ವೈವಿಧ್ಯಮಯ ವಿಷಯಗಳ ಕುರಿತು ಬಹು ಅವಧಿಯ ವಿವಿಧ ಸಮಾವೇಶಗಳನ್ನು ಒಳಗೊಂಡಿರುತ್ತದೆ.
***
(Release ID: 1823126)
Visitor Counter : 226
Read this release in:
Tamil
,
Assamese
,
English
,
Urdu
,
Marathi
,
Hindi
,
Bengali
,
Manipuri
,
Punjabi
,
Gujarati
,
Odia
,
Telugu
,
Malayalam