ಪ್ರಧಾನ ಮಂತ್ರಿಯವರ ಕಛೇರಿ
ಬ್ರೆಜಿಲ್‌ನಲ್ಲಿ ನಡೆಯುವ ಡೆಫ್ ಒಲಿಂಪಿಕ್ಸ್ 2021 ರಲ್ಲಿ ಭಾಗವಹಿಸುವ ಪ್ರತಿಭಾನ್ವಿತ ಕ್ರೀಡಾಪಟುಗಳಿಗೆ ಪ್ರಧಾನಮಂತ್ರಿಯವರಿಂದ ಶುಭಹಾರೈಕೆ
प्रविष्टि तिथि:
01 MAY 2022 7:35PM by PIB Bengaluru
ಬ್ರೆಜಿಲ್‌ನಲ್ಲಿ ನಡೆಯುವ 2021 ರ ಡೆಫ್ ಒಲಿಂಪಿಕ್ಸ್ ನಲ್ಲಿ ಭಾಗವಹಿಸುವ ಪ್ರತಿಭಾವಂತ ಕ್ರೀಡಾಪಟುಗಳಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶುಭ ಹಾರೈಸಿದ್ದಾರೆ. ಕ್ರೀಡಾಕೂಟಕ್ಕೆ ತೆರಳುವ ಮುನ್ನ ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಿದ ಕ್ರೀಡಾಪಟುಗಳ ಲವಲವಿಕೆ ನಿಜವಾಗಿಯೂ ಹೃದಯಸ್ಪರ್ಶಿ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೇಳಿದ್ದಾರೆ.
ಪ್ರಧಾನಮಂತ್ರಿ ಅವರು ಈ ರೀತಿ ಸಂದೇಶ ಟ್ವೀಟ್ ಮಾಡಿದ್ದಾರೆ;
"ಇಂದು ಆರಂಭವಾಗಲಿರುವ ಶ್ರವಣ ಮಾಂದ್ಯರಿಗಾಗಿ ಇರುವ ಜಾಗತಿಕ ಕ್ರೀಡಾ ಸ್ಪರ್ಧೆ 'ಡೆಫ್ ಒಲಿಂಪಿಕ್ಸ್ 2021' ( #Deaflympics2021) ರಲ್ಲಿ ನಮ್ಮ ತಂಡವನ್ನು ಭಾರತವು ಪ್ರೋತ್ಸಾಹಿಸಿ ಹುರಿದುಂಬಿಸುತ್ತಿದೆ. ನಮ್ಮ ಎಲ್ಲಾ ಪ್ರತಿಭಾವಂತ ಕ್ರೀಡಾಪಟುಗಳಿಗೆ ಶುಭಾಶಯಗಳು.
ಕ್ರೀಡಾ ಸ್ಪರ್ಧೆಗೆ ತೆರಳುವ ಮೊದಲು ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಭೇಟಿ ನೀಡುವ ಅವರುಗಳ ಮನದ ಇಂಗಿತವು ನಿಜವಾಗಿಯೂ ಹೃದಯಸ್ಪರ್ಶಿ."
*****
(रिलीज़ आईडी: 1822009)
आगंतुक पटल : 187
इस विज्ञप्ति को इन भाषाओं में पढ़ें:
English
,
Urdu
,
हिन्दी
,
Marathi
,
Manipuri
,
Bengali
,
Assamese
,
Punjabi
,
Gujarati
,
Odia
,
Tamil
,
Telugu
,
Malayalam