ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ

ರಾಷ್ಟ್ರೀಯ ಪಠ್ಯ ಕ್ರಮ ಚೌಕಟ್ಟಿನ [ಎನ್.ಸಿ.ಎಫ್] ಆದೇಶದ ದಾಖಲೆ ಬಿಡುಗಡೆ ಮಾಡಲಿರುವ ಶ್ರೀ ಧರ್ಮೇಂದ್ರ ಪ್ರಧಾನ್

Posted On: 28 APR 2022 12:46PM by PIB Bengaluru

ಕೇಂದ್ರ ಶಿಕ್ಷಣ ಸಚಿವ ಶ್ರೀ ಧರ್ಮೇಂದ್ರ ಪ್ರಧಾನ್ ಅವರು 2022 ರ ಏಪ್ರಿಲ್ 29 ರಂದು ರಾಷ್ಟ್ರೀಯ ಪಠ್ಯ ಕ್ರಮ ಚೌಕಟ್ಟಿನ [ಎನ್.ಸಿ.ಎಫ್] ದಾಖಲೆಗಳನ್ನು ಬಿಡುಗಡೆ ಮಾಡಲಿದ್ದಾರೆ. ರಾಷ್ಟ್ರೀಯ ಶಿಕ್ಷಣ ನೀತಿ [ಎನ್.ಇ.] 2020 ರ ಶಿಫಾರಸ್ಸಿನ ಅನ್ವಯ ಶಾಲಾ ಶಿಕ್ಷಣ, ಆರಂಭಿಕ ಹಂತದಲ್ಲಿ ಮಕ್ಕಳ ಆರೈಕೆ ಮತ್ತು ಶಿಕ್ಷಣ [ಇಸಿಸಿಇ], ಶಿಕ್ಷಕರ ಶಿಕ್ಷಣ ಮತ್ತು ಮಕ್ಕಳ ಶಿಕ್ಷಣ ವಲಯದಲ್ಲಿ  ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು [ಎನ್.ಸಿ.ಎಫ್ ] ರೂಪಿಸಲಾಗಿದೆ. 
ಈ ಕಾರ್ಯಕ್ರಮದಲ್ಲಿ ಕರ್ನಾಟಕ ಸರ್ಕಾರದ ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವತ್ಥ್ ನಾರಾಯಣ್, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್, ರಾಷ್ಟ್ರೀಯ ಪಠ್ಯ ಕ್ರಮ ಚೌಕಟ್ಟು ರೂಪಿಸುವ ರಾಷ್ಟ್ರೀಯ ಪರಿಶೀಲನಾ ಸಮಿತಿಯ ಅಧ್ಯಕ್ಷ ಡಾ.ಕೆ. ಕಸ್ತೂರಿ ರಂಗನ್, ಶಿಕ್ಷಣ ಸಚಿವಾಲಯದ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯ ಕಾರ್ಯದರ್ಶಿ ಶ್ರೀಮತಿ ಅನಿತಾ ಕರ್ವಾಲ್, ರಾಷ್ರೀಯ ಶಿಕ್ಷಣ, ಸಂಶೋಧನೆ ಮತ್ತು ತರಬೇತಿ ಮಂಡಳಿ [ಎನ್.ಸಿ.ಇ.ಆರ್.ಟಿ] ನಿರ್ದೇಶಕರಾದ ಪ್ರೋಫೆಸರ್ ಡಿ.ಪಿ. ಸಕ್ಲಾನಿ ಉಪಸ್ಥಿತರಿರಲಿದ್ದಾರೆ. 
ನಾಲ್ಕು ಪಠ್ಯಕ್ರಮದ ಚೌಕಟ್ಟುಗಳನ್ನು ಒದಗಿಸಲು ಎನ್.ಇ.ಪಿ 2020 ಆಧಾರದ ಮೇಲೆ 25 ವಿಷಯಗಳನ್ನು ಮೂರು ವರ್ಗಗಳಡಿ ಗುರುತಿಸಲಾಗಿದೆ. ಅವುಗಳೆಂದರೆ 1. ಪಠ್ಯಕ್ರಮ ಮತ್ತು ಶಿಕ್ಷಣ ಶಾಸ್ತ್ರ 2. ಸಂಕಲನದ ತಂತ್ರಗಳು 3. ಎನ್.ಇ.ಪಿಯ ಇತರ ಪ್ರಮುಖ ಕ್ಷೇತ್ರಗಳು, 2020 ರ ವ್ಯವಸ್ಥಿತ ಬದಲಾವಣೆಗಳು ಮತ್ತು ಸುಧಾರಣೆಗಳ ಮೇಲೆ ಇವುಗಳನ್ನು ಕೇಂದ್ರೀಕರಿಸಲಾಗಿದೆ. 
ಎನ್.ಸಿ.ಎಫ್ ಅನ್ನು ಅಭಿವೃದ್ಧಿ ಪ್ರಕ್ರಿಯೆಯಲ್ಲಿ ಕಡ್ಡಾಯ ದಾಖಲೆಗಳು, ಅದರ ನಿರೀಕ್ಷಿತ ರಚನೆ ಮತ್ತು ಉದ್ದೇಶಗಳು, ನಾಲ್ಕು ಎನ್.ಸಿ.ಎಫ್ ಗಳ ಅಭಿವೃದ್ಧಿಯನ್ನು ತಿಳಿಸುವ ಎನ್.ಇ.ಪಿ 2020 ರ ಕೆಲವು ಮೂಲ ತತ್ವಗಳನ್ನು ಇವು ವಿವರಿಸುತ್ತವೆ. ಸಹಭಾಗಿತ್ವ ಮತ್ತು ಸಮಾಲೋಚನಾ ಪ್ರಕ್ರಿಯೆ ಮೂಲಕ ಎನ್.ಸಿ.ಎಫ್ ಕರಡು ಸಿದ್ಧಪಡಿಸಲಾಗಿದ್ದು, ಮೊದಲಿಗೆ ಜಿಲ್ಲೆಯಿಂದ ರಾಜ್ಯ ಮಟ್ಟಕ್ಕೆ ಮತ್ತು ಬಳಿಕ ರಾಷ್ಟ್ರೀಯ ಹಂತದಲ್ಲಿ ಈ ಪ್ರಕ್ರಿಯೆ ನಡೆದಿದೆ.  ರಾಷ್ಟ್ರೀಯ ಪಠ್ಯಕ್ರಮದ ಚೌಕಟ್ಟಿನ ಅಭಿವೃದ್ಧಿಗಾಗಿ ಸ್ವಾಧೀನ ಪತ್ರದ ಮಾರ್ಗಸೂಚಿಗಳು ಈ ಆದೇಶದ ದಾಖಲೆಯ ಅವಿಭಾಜ್ಯ ಅಂಗವಾಗಿವೆ. 
ಪಠ್ಯಕ್ರಮದ ಚೌಕಟ್ಟಿನ ಸಂಪೂರ್ಣ ಪ್ರಕ್ರಿಯೆಯನ್ನು ತಂತ್ರಜ್ಞಾನದ ವೇದಿಕೆ ಮತ್ತು ಮೊಬೈಲ್ ಅಪ್ಲಿಕೇಶನ್ ಸಹಾಯದಿಂದ ಶಾಲೆ/ಜಿಲ್ಲೆ/ರಾಜ್ಯಮಟ್ಟದಲ್ಲಿ ಅತ್ಯಂತ ವ್ಯಾಪಕ ಸಮಾಲೋಚನೆಯೊಂದಿಗೆ ಕಾಗದ ರಹಿವಾಗಿ ಮಾಡಲಾಗಿದೆ. 

****



(Release ID: 1820938) Visitor Counter : 240