ಪ್ರಧಾನ ಮಂತ್ರಿಯವರ ಕಛೇರಿ
ಭಾರತ ಮತ್ತು ಜಪಾನ್ ನಡುವಿನ ರಾಜತಾಂತ್ರಿಕ ಸಂಬಂಧಗಳು ಸ್ಥಾಪನೆಯಾಗಿ 70 ವರ್ಷಗಳು ಪೂರ್ಣಗೊಂಡ ಬಗ್ಗೆ ಪ್ರಧಾನಮಂತ್ರಿಯವರು ಸಂತಸ ವ್ಯಕ್ತಪಡಿಸಿದ್ದಾರೆ
Posted On:
28 APR 2022 11:39AM by PIB Bengaluru
ಇಂದು ಭಾರತ ಮತ್ತು ಜಪಾನ್ ನಡುವಿನ ರಾಜತಾಂತ್ರಿಕ ಸಂಬಂಧಗಳು ಸ್ಥಾಪನೆಯಾಗಿ 70 ವರ್ಷಗಳು ಪೂರ್ಣಗೊಂಡ ಬಗ್ಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಸಂತಸ ವ್ಯಕ್ತಪಡಿಸಿದ್ದಾರೆ. ತಂತ್ರಕುಶಲತೆ ಆಗಿರಬಹುದು, ಆರ್ಥಿಕ ಅಥವಾ ಜನರ ನಡುವೆ ಪರಸ್ಪರ ಸಂಪರ್ಕ ಕಲ್ಪಿಸುವುದೇ ಆಗಿರಬಹುದು, ಎಲ್ಲ ಆಯಾಮಗಳಲ್ಲೂ ನಮ್ಮ ಸಂಬಂಧಗಳು ಗಾಢವಾಗಿ ವೃದ್ಧಿಸಿವೆ ಎಂದೂ ಶ್ರೀ ಮೋದಿಯವರು ಹೇಳಿದರು.
ತಮ್ಮ ಸರಣಿ ಟ್ವೀಟ್ ಗಳಲ್ಲಿ ಪ್ರಧಾನಮಂತ್ರಿಯವರು ಹೀಗೆ ತಿಳಿಸಿದ್ದಾರೆ;
“ಇಂದು ನಾವು ಭಾರತ ಮತ್ತು ಜಪಾನ್ ನಡುವಿನ ರಾಜತಾಂತ್ರಿಕ ಸಂಬಂಧಗಳು ಸ್ಥಾಪನೆಯಾಗಿ 70 ವರ್ಷಗಳು ಪೂರ್ಣಗೊಂಡಿರುವದನ್ನು ಆಚರಿಸುತ್ತಿರುವ ಸಂದರ್ಭದಲ್ಲಿ, ತಂತ್ರಕುಶಲತೆ ಆಗಿರಬಹುದು, ಆರ್ಥಿಕ ಅಥವಾ ಜನರ ನಡುವೆ ಪರಸ್ಪರ ಸಂಪರ್ಕ ಕಲ್ಪಿಸುವುದೇ ಆಗಿರಬಹುದು, ಎಲ್ಲ ಆಯಾಮಗಳಲ್ಲೂ ನಮ್ಮ ಸಂಬಂಧಗಳು ಗಾಢವಾಗಿ ವೃದ್ಧಿಸಿವೆ ಎಂಬುದನ್ನು ನೋಡಲು ನನಗೆ ಬಹಳ ಸಂತೋಷವಾಗಿದೆ”
“ವಾರ್ಷಿಕ ಶೃಂಗಸಭೆಗಾಗಿ ನನ್ನ ಸ್ನೇಹಿತ ಪ್ರಧಾನಮಂತ್ರಿ ಕಿಶಿದಾ @kishida230 ಅವರು ಇತ್ತೀಚೆಗೆ ಭಾರತಕ್ಕೆ ನೀಡಿದ ಭೇಟಿಯು, ಕೊವಿಡ್ ನಂತರದ ಜಗತ್ತಿನಲ್ಲಿ ನಮ್ಮ ವಿಶೇಷ ಕಾರ್ಯತಂತ್ರ ಮತ್ತು ಜಾಗತಿಕ ಪಾಲುದಾರಿಕೆಯನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯಲು ಇದು ಮಾರ್ಗಸೂಚಿಯನ್ನು ರೂಪಿಸಿದೆ. ಈ ಗುರಿಯನ್ನು ಸಾಧಿಸಲು ನಾನು ಪ್ರಧಾನಮಂತ್ರಿ ಕಿಶಿದಾ ಅವರೊಂದಿಗೆ ಜೊತೆಗೂಡಿ ಕಾರ್ಯನಿರ್ವಹಿಸಲು ಎದುರು ನೋಡುತ್ತಿದ್ದೇನೆ”.
***
(Release ID: 1820914)
Visitor Counter : 148
Read this release in:
English
,
Urdu
,
Hindi
,
Marathi
,
Manipuri
,
Bengali
,
Assamese
,
Punjabi
,
Gujarati
,
Odia
,
Tamil
,
Telugu
,
Malayalam