ಸಂಪುಟ

ವಿಶೇಷ ಚೇತನ ವಲಯದಲ್ಲಿನ ಸಹಕಾರಕ್ಕಾಗಿ ಭಾರತ ಮತ್ತು ಚಿಲಿ ನಡುವೆ ತಿಳಿವಳಿಕೆ ಒಪ್ಪಂದಕ್ಕೆ ಸಹಿ ಹಾಕುವ ಪ್ರಸ್ತಾವನೆಗೆ ಸಂಪುಟ ಅನುಮೋದನೆ

Posted On: 27 APR 2022 4:43PM by PIB Bengaluru

ವಿಶೇಷ ಚೇತನ ವಲಯದಲ್ಲಿನ ಸಹಕಾರಕ್ಕಾಗಿ ಭಾರತ ಮತ್ತು ಚಿಲಿ ನಡುವೆ ತಿಳಿವಳಿಕೆ ಒಪ್ಪಂದಕ್ಕೆ ಸಹಿ ಹಾಕುವ ಪ್ರಸ್ತಾವನೆಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ ಅನುಮತಿ ನೀಡಿದೆ.   

ಭಾರತ ಸರ್ಕಾರದ ವಿಶೇಷ ಚೇತನರ ಸಬಲೀಕರಣ ಇಲಾಖೆ ಮತ್ತು ಚಿಲಿ ಸರ್ಕಾರದ ವಿಶೇಷ ಚೇತನ ವಲಯದ ನಡುವೆ ಸಹಕಾರವನ್ನು ವೃದ್ಧಿಸಲು ದ್ವಿಪಕ್ಷೀಯ ತಿಳಿವಳಿಕೆ ಒಪ್ಪಂದ ಮಾಡಿಕೊಳ್ಳಲಾಗುತ್ತಿದೆ. ಇದರಿಂದ ಭಾರತ – ಚಿಲಿ ನಡುವೆ ದ್ವಿಪಕ್ಷೀಯ ಸಂಬಂಧ ಬಲಗೊಳ್ಳುವ ನಿರೀಕ್ಷೆ ಹೊಂದಲಾಗಿದೆ.  

ವಿಶೇಷ ಚೇತನರ ವಲಯದಲ್ಲಿ ಸಹಕಾರದ ಬಯಕೆ ಹೊಂದಿರುವ ದೇಶಗಳ ನಡುವೆ ವಿಶೇಷವಾಗಿ ಈ ಕೆಳಗಿನ ಕ್ಷೇತ್ರದಲ್ಲಿ ಜಂಟಿ ಉದ್ದೇಶವನ್ನು ಹೊಂದಲಾಗಿದೆ. 

 i.         ವಿಶೇಷ ಚೇತನರ ನೀತಿ ಮತ್ತು ಸೇವೆಗಳನ್ನು ಒದಗಿಸಲು ಮಾಹಿತಿ ಹಂಚಿಕೆ

 ii.         ಮಾಹಿತಿ ಮತ್ತು ಜ್ಞಾನದ ವಿನಿಮಯ

 iii.         ಸಹಾಯಕ ಸಾಧನ ತಂತ್ರಜ್ಞಾನದಲ್ಲಿ ಸಹಕಾರ

  iv.         ವಿಶೇಷ ವಲಯದಲ್ಲಿ ಪರಸ್ಪರ ಆಸಕ್ತಿದಾಯಕ ಯೋಜನೆಗಳ ಅಭಿವೃದ್ಧಿ   

v.         ಮುಂದಾಗಿಯೇ ಅಂಗ ವೈಕಲ್ಯವನ್ನು ಗುರುತಿಸುವುದು ಮತ್ತು ತಡೆಗಟ್ಟುವುದು

 vi.         ಪರಿಣಿತರು, ಶಿಕ್ಷಣ ತಜ್ಞರು ಮತ್ತು ಇತರೆ ಆಡಳಿತಾತ್ಮಕ ಸಿಬ್ಬಂದಿಯ ವಿನಿಮಯ

ಎಂಒಯು ಅಡಿ ಕೈಗೊಳ್ಳುವ ಚಟುವಟಿಕೆಗಳಿಗೆ ವೆಚ್ಚವನ್ನು ಭರಿಸಲು ಧನ ಸಹಾಯದ ಕಾರ್ಯವಿಧಾನವನ್ನು ಒದಗಿಸುತ್ತದೆ. ಅಂತಹ ಚಟುವಟಿಕೆಗಳ ವೆಚ್ಚವನ್ನು ನಿಧಿ ಮತ್ತು ಸಂಪನ್ಮೂಲಗಳ ಲಭ್ಯತೆಗೆ ಒಳಪಟ್ಟು ಪ್ರಕರಣದ ಆಧಾರದ ಮೇಲೆ ಎರಡೂ ಸರ್ಕಾರಗಳು ಪರಸ್ಪರ ನಿರ್ಧರಿಸುತ್ತವೆ. ಜಂಟಿ ಚಟುವಟಿಕೆಗಳಿಗಾಗಿ ಅಂತರರಾಷ್ಟ್ರೀಯ ಪ್ರಯಾಣ/ವಸತಿ ವೆಚ್ಚವನ್ನು ಭೇಟಿ ನೀಡುವ ದೇಶ ನೋಡಿಕೊಳ್ಳಲಿದೆ. ಆದರೆ ಸಭೆ ನಡೆಸುವ ವೆಚ್ಚವನ್ನು ಆತಿಥೇಯ ದೇಶ ನೋಡಿಕೊಳ್ಳುತ್ತದೆ.   

ಭಾರತ – ಚಿಲಿ ಸಂಬಂಧ ವಿಶಾಲ ವ್ಯಾಪ್ತಿಯಲ್ಲಿ ಸಮಸ್ಯೆಗಳ ಸಾಮಾನ್ಯ ದೃಷ್ಟಿಕೋನದ ಆಧಾರದ ಮೇಲೆ ಸ್ನೇಹಪರವಾಗಿದೆ. 2019 ಮತ್ತು 20 ನೇ ವರ್ಷ ಉಭಯ ದೇಶಗಳಿಗೆ 70 ನೇ ರಾಜತಾಂತ್ರಿಕ ಬಾಂಧವ್ಯದ ವರ್ಷವಾಗಿದೆ. ಈ ವರ್ಷಗಳಲ್ಲಿ ದ್ವಿಪಕ್ಷೀಯ ಸಂಬಂಧ ಉನ್ನತ ಮಟ್ಟದ ಭೇಟಿಗಳು, ಚಿಲಿ ಅಧ್ಯಕ್ಷರು 2005 ಮತ್ತು 2009 ರಲ್ಲಿ ಭಾರತಕ್ಕೆ ಭೇಟಿ ಮೂಲಕ ಬಲಗೊಂಡಿದೆ.  

*****



(Release ID: 1820731) Visitor Counter : 176