ಪ್ರಧಾನ ಮಂತ್ರಿಯವರ ಕಛೇರಿ

ಏಪ್ರಿಲ್ 16 ರಂದು ಮೊರ್ಬಿಯಲ್ಲಿ 108 ಅಡಿ ಹನುಮಾನ್ ಪ್ರತಿಮೆಯನ್ನು ಅನಾವರಣಗೊಳಿಸಲಿರುವ ಪ್ರಧಾನಿ

Posted On: 15 APR 2022 3:49PM by PIB Bengaluru

ಹನುಮಾನ್ ಜಯಂತಿಯ ಸಂದರ್ಭದಲ್ಲಿ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 16 ಏಪ್ರಿಲ್, 2022ರಂದು ಗುಜರಾತಿನ ಮೋರ್ಬಿಯಲ್ಲಿ 108 ಅಡಿ ಹನುಮಾನ್ ಪ್ರತಿಮೆಯನ್ನು ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಅನಾವರಣಗೊಳಿಸಲಿದ್ದಾರೆ. 

"ಹನುಮಾನ್ ಜೀ 4 ಧಾಮ್" (#Hanumanji4dham) ಯೋಜನೆಯ ಭಾಗವಾಗಿ ದೇಶದಾದ್ಯಂತ ನಾಲ್ಕು ದಿಕ್ಕುಗಳಲ್ಲಿ ಸ್ಥಾಪಿಸಲಾಗುತ್ತಿರುವ 4 ಪ್ರತಿಮೆಗಳಲ್ಲಿ ಇದು ಎರಡನೆಯದು. ಇದನ್ನು ಪಶ್ಚಿಮದಲ್ಲಿ ಮೊರ್ಬಿಯಲ್ಲಿರುವ ಪರಮ ಪೂಜ್ಯ ಬಾಪು ಕೇಶವಾನಂದ ಜೀ ಅವರ ಆಶ್ರಮದಲ್ಲಿ ಸ್ಥಾಪಿಸಲಾಗಿದೆ. 

ಈ ಸರಣಿಯ ಮೊದಲ ಪ್ರತಿಮೆಯನ್ನು 2010ರಲ್ಲಿ ಉತ್ತರದಲ್ಲಿ ಶಿಮ್ಲಾದಲ್ಲಿ ಸ್ಥಾಪಿಸಲಾಯಿತು. ದಕ್ಷಿಣದಲ್ಲಿ ರಾಮೇಶ್ವರಂನಲ್ಲಿ ಪ್ರತಿಮೆಯ ಕೆಲಸವನ್ನು ಪ್ರಾರಂಭಿಸಲಾಗಿದೆ.

****
 



(Release ID: 1817145) Visitor Counter : 262