ಸಂಪುಟ
ವಿಕೇಂದ್ರೀಕೃತ ಗೃಹಬಳಕೆ ತ್ಯಾಜ್ಯನೀರಿನ ನಿರ್ವಹಣೆ ಕ್ಷೇತ್ರದಲ್ಲಿ ಭಾರತ ಮತ್ತು ಜಪಾನ್ ನಡುವಿನ ಸಹಕಾರ ಒಪ್ಪಂದಕ್ಕೆ ಸಂಪುಟದ ಅನುಮೋದನೆ
Posted On:
13 APR 2022 3:29PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ಜಲಶಕ್ತಿ ಸಚಿವಾಲಯದ ಜಲಸಂಪನ್ಮೂಲ, ನದಿ ಅಭಿವೃದ್ಧಿ ಮತ್ತು ಗಂಗಾ ಪುನರುಜ್ಜೀವನ ಇಲಾಖೆ ಮತ್ತು ಜಪಾನ್‌ನ ಪರಿಸರ ಸಚಿವಾಲಯದ ನಡುವೆ ಸಹಿ ಹಾಕಲಾದ ವಿಕೇಂದ್ರೀಕೃತ ಗೃಹಬಳಕೆ ತ್ಯಾಜ್ಯ ನೀರು ನಿರ್ವಹಣೆಯ ಸಹಕಾರ ಒಪ್ಪಂದಕ್ಕೆ (ಎಂಒಸಿ) ಪೂರ್ವಾನ್ವಯ ಅನುಮೋದನೆಯನ್ನು ನೀಡಿದೆ.
ಅನುಷ್ಠಾನ ತಂತ್ರ ಮತ್ತು ಗುರಿಗಳು
ಸಹಯೋಗದ ವಿವರವಾದ ಚಟುವಟಿಕೆಗಳನ್ನು ರೂಪಿಸುವ ಮತ್ತು ಅದರ ಪ್ರಗತಿಯ ಮೇಲ್ವಿಚಾರಣೆಯ ಮೂಲಕ ಈ ಸಹಕಾರ ಒಪ್ಪಂದದ ಅನುಷ್ಠಾನಕ್ಕೆ ನಿರ್ವಹಣಾ ಮಂಡಳಿಯನ್ನು (ಎಂಸಿ) ರಚಿಸಲಾಗುತ್ತದೆ.
ಪ್ರಮುಖ ಪರಿಣಾಮಗಳು
ಸಹಕಾರ ಒಪ್ಪಂದದ ಮೂಲಕ ಜಪಾನ್‌ನೊಂದಿಗಿನ ಸಹಯೋಗವು ವಿಕೇಂದ್ರೀಕೃತ ಗೃಹಬಳಕೆ ತ್ಯಾಜ್ಯನೀರಿನ ನಿರ್ವಹಣೆ ಮತ್ತು ಜೋಕಾಸೌ ತಂತ್ರಜ್ಞಾನವನ್ನು ಬಳಸಿಕೊಂಡು ಸಂಸ್ಕರಿಸಿದ ತ್ಯಾಜ್ಯನೀರಿನ ಪರಿಣಾಮಕಾರಿ ಮರುಬಳಕೆಯಂತಹ ಕ್ಷೇತ್ರಗಳಲ್ಲಿ ಬಹಳ ಫಲಪ್ರದವಾಗಲಿದೆ. ತ್ಯಾಜ್ಯನೀರಿನ ನಿರ್ವಹಣೆಯಲ್ಲಿ ವಿಕೇಂದ್ರೀಕೃತ ಜೋಕಾಸೌ ವ್ಯವಸ್ಥೆಗಳು ಜಲ ಜೀವನ್ ಮಿಷನ್ ವ್ಯಾಪ್ತಿಯ ಬೂದು/ಕಪ್ಪು ನೀರಿನ ನಿರ್ವಹಣೆಯಲ್ಲಿ ಹೆಚ್ಚಿನ ಪರಿಣಾಮಗಳನ್ನು ಬೀರಬಹುದು ಮತ್ತು ಮಿಷನ್ ಅಡಿಯಲ್ಲಿ ತಾಜಾ ನೀರಿನ ಮೂಲಗಳ ಸುಸ್ಥಿರತೆ, ನಮಾಮಿ ಗಂಗೆ ಕಾರ್ಯಕ್ರಮಕ್ಕೂ ಇದೇ ರೀತಿಯ ಪರಿಣಾಮಗಳನ್ನು ಬೀರಬಹುದು. ತ್ಯಾಜ್ಯ ನೀರನ್ನು ಸಂಸ್ಕರಿಸುವ ಸಂಕೀರ್ಣ ಸಮಸ್ಯೆಗೆ ಉತ್ತಮ ಯೋಜನೆಗಳನ್ನು ರೂಪಿಸಲು ನಗರ ಸ್ಥಳೀಯ ಸಂಸ್ಥೆಗಳಿಗೆ ಇದು ಸಹಾಯ ಮಾಡುತ್ತದೆ.
ವೆಚ್ಚ
ಈ ಒಪ್ಪಂದದ ಅಡಿಯಲ್ಲಿ ಎರಡೂ ದೇಶಗಳ ಮೇಲೆ ಯಾವುದೇ ಹಣಕಾಸಿನ ಬಾಧ್ಯತೆಗಳು ಇರುವುದಿಲ್ಲ. ಇದರ ಅಡಿಯಲ್ಲಿ ಚಟುವಟಿಕೆಗಳನ್ನು ಸುಗಮಗೊಳಿಸಲು, ಕಾರ್ಯಸಾಧ್ಯತಾ ಪೂರ್ವ ವರದಿಗಳು, ಕಾರ್ಯಸಾಧ್ಯತಾ ವರದಿಗಳು ಮತ್ತು ವಿವರವಾದ ಯೋಜನಾ ವರದಿಗಳಂತಹ ಪ್ರಕರಣ ನಿರ್ದಿಷ್ಟ ವಿವರವಾದ ದಾಖಲೆಗಳನ್ನು ರಚಿಸಬಹುದು, ಆಯಾ ಪ್ರದೇಶಗಳಲ್ಲಿನ ವಿಶಿಷ್ಟ ವಿವರಗಳು ಮತ್ತು ಇತರ ಸಂಬಂಧಿತ ವಿಷಯಗಳು ಅಗತ್ಯವೆಂದು ಭಾವಿಸಿದರೆ, ಅಂತಹ ಸಂದರ್ಭ ನಿರ್ದಿಷ್ಟ ಕಾರ್ಯಕ್ರಮ ಮತ್ತು ಯೋಜನೆಗೆ ಹಣಕಾಸಿನ ವ್ಯವಸ್ಥೆ ರೂಪಿಸಬಹುದು.
ಒಪ್ಪಂದದ ವಿವರಗಳು
ಜಲ ಶಕ್ತಿ ಸಚಿವಾಲಯದ ಜಲಸಂಪನ್ಮೂಲ, ನದಿ ಅಭಿವೃದ್ಧಿ ಮತ್ತು ಗಂಗಾ ಪುನರುಜ್ಜೀವನ ಇಲಾಖೆ ಮತ್ತು ಜಪಾನ್‌ನ ಪರಿಸರ ಸಚಿವಾಲಯದ ನಡುವೆ ವಿಕೇಂದ್ರೀಕೃತ ಗೃಹಬಳಕೆ ತ್ಯಾಜ್ಯನೀರಿನ ನಿರ್ವಹಣೆಯಲ್ಲಿ ಸಹಕಾರ ಒಪ್ಪಂದಕ್ಕೆ 19.03.2022 ರಂದು ಸಹಿ ಹಾಕಲಾಯಿತು. ಎರಡು ದೇಶಗಳ ನಡುವಿನ ಸಮಾನತೆ ಮತ್ತು ಪರಸ್ಪರ ಲಾಭದ ತತ್ವಗಳ ಆಧಾರದ ಮೇಲೆ ಸಾರ್ವಜನಿಕ ನೀರಿನ ಪ್ರದೇಶಗಳಲ್ಲಿ ನೀರಿನ ಪರಿಸರವನ್ನು ಸಂರಕ್ಷಿಸಲು ಮತ್ತು ಸಾರ್ವಜನಿಕ ಆರೋಗ್ಯದ ಸುಧಾರಣೆಯಲ್ಲಿ ವಿಕೇಂದ್ರೀಕೃತ ಗೃಹ ತ್ಯಾಜ್ಯನೀರಿನ ನಿರ್ವಹಣೆಗೆ ಸಹಕಾರವನ್ನು ಉತ್ತೇಜಿಸಲು ಈ ಎಂಒಸಿಗೆ ಸಹಿ ಹಾಕಲಾಗಿದೆ.
ಭಾರತದ ಜಲಸಂಪನ್ಮೂಲ, ನದಿ ಅಭಿವೃದ್ಧಿ ಮತ್ತು ಗಂಗಾ ಪುನರುಜ್ಜೀವನ ಇಲಾಖೆ ಮತ್ತು ಜಪಾನ್‌ನ ಪರಿಸರ ಸಚಿವಾಲಯದ ನಡುವೆ ವಿಕೇಂದ್ರೀಕೃತ ಗೃಹ ತ್ಯಾಜ್ಯ ನೀರಿನ ನಿರ್ವಹಣೆಯ ಸಾಮರ್ಥ್ಯವನ್ನು ಬಲಪಡಿಸಲು, ಸುಗಮಗೊಳಿಸಲು ಮತ್ತು ಅಭಿವೃದ್ಧಿಪಡಿಸಲು ಒಪ್ಪಂದಕ್ಕೆ ಸಹಿ ಮಾಡಲಾಗಿದೆ. ಸಹಕಾರದ ವ್ಯಾಪ್ತಿಯು ಹೆಚ್ಚಾಗಿ ವಿಕೇಂದ್ರೀಕೃತ ಗೃಹ ತ್ಯಾಜ್ಯನೀರಿನ ನಿರ್ವಹಣೆಯ ಮೇಲೆ ಕೇಂದ್ರೀಕರಿಸುತ್ತದೆ ಮತ್ತು ಸಂಸ್ಕರಿಸಿದ ತ್ಯಾಜ್ಯನೀರಿನ ಪರಿಣಾಮಕಾರಿ ಮರುಬಳಕೆಯನ್ನು ಪ್ರೋತ್ಸಾಹಿಸುತ್ತದೆ ಮತ್ತು ಸುಗಮಗೊಳಿಸುತ್ತದೆ, ಇದು ವಿಕೇಂದ್ರೀಕೃತ ಗೃಹ ತ್ಯಾಜ್ಯನೀರಿನ ಬಗ್ಗೆ ಮಾಹಿತಿ ಮತ್ತು ಪರಿಣತಿಯನ್ನು ವಿನಿಮಯ ಮಾಡಿಕೊಳ್ಳುವಲ್ಲಿ ಸೆಮಿನಾರ್‌ಗಳು, ಸಮ್ಮೇಳನಗಳು ಮತ್ತು ಸಾಮರ್ಥ್ಯ ವರ್ಧನೆಯ ಮೂಲಕ ನಿರ್ವಹಣೆಯಂತಹ ಪರಸ್ಪರ ಆಸಕ್ತಿಯ ಕ್ಷೇತ್ರಗಳನ್ನು ಒಳಗೊಂಡಿರುತ್ತದೆ. ಆದರೆ ಅದಕ್ಕಷ್ಟೇ ಸೀಮಿತವಾಗಿರುವುದಿಲ್ಲ.
ಈ ಎಂಒಸಿ ಅಡಿಯಲ್ಲಿ ಚಟುವಟಿಕೆಗಳನ್ನು ನಡೆಸಲು, ಕಾರ್ಯಸಾಧ್ಯತಾ ಪೂರ್ವ ವರದಿಗಳು, ಕಾರ್ಯಸಾಧ್ಯತಾ ವರದಿಗಳು ಮತ್ತು ವಿವರವಾದ ಕಾರ್ಯಸಾಧ್ಯತಾ ಪೂರ್ವ ವರದಿಗಳು, ಕಾರ್ಯಸಾಧ್ಯತಾ ವರದಿಗಳು ಮತ್ತು ವಿವರವಾದ ಯೋಜನಾ ವರದಿಗಳಂತಹ ಪ್ರಕರಣ ನಿರ್ದಿಷ್ಟ ವಿವರವಾದ ದಾಖಲೆಗಳನ್ನು ರಚಿಸಬಹುದು, ಆಯಾ ಪ್ರದೇಶಗಳಲ್ಲಿನ ವಿಶಿಷ್ಟ ವಿವರಗಳು ಮತ್ತು ಇತರ ಸಂಬಂಧಿತ ವಿಷಯಗಳು ಅಗತ್ಯವೆಂದು ಭಾವಿಸಿದರೆ, ಅಂತಹ ಸಂದರ್ಭ ನಿರ್ದಿಷ್ಟ ಕಾರ್ಯಕ್ರಮ ಮತ್ತು ಯೋಜನೆಯ ಹಣಕಾಸಿನ ವ್ಯವಸ್ಥೆ ರೂಪಿಸಬಹುದು. ಎರಡೂ ಕಡೆಯವರು ನಿರ್ವಹಣಾ ಮಂಡಳಿ (ಎಂಸಿ) ಯನ್ನು ಸ್ಥಾಪಿಸುತ್ತಾರೆ, ಇದು ಸಹಯೋಗದ ವಿವರವಾದ ಚಟುವಟಿಕೆಗಳನ್ನು ರೂಪಿಸುವ ಮೂಲಕ ಮತ್ತು ಅದರ ಪ್ರಗತಿಯನ್ನು ಮೇಲ್ವಿಚಾರಣೆ ಮಾಡುವ ಮೂಲಕ ಈ ಒಪ್ಪಂದದ ಅನುಷ್ಠಾನಕ್ಕೆ ಜವಾಬ್ದಾರವಾಗಿರುತ್ತದೆ.
ಹಿನ್ನೆಲೆ
ಜಲಸಂಪನ್ಮೂಲ, ನದಿ ಅಭಿವೃದ್ಧಿ ಮತ್ತು ಗಂಗಾ ಪುನರುಜ್ಜೀವನ ಸಚಿವಾಲಯವು ನೀತಿ ಮತ್ತು ತಾಂತ್ರಿಕ ಪರಿಣತಿಯ ಹಂಚಿಕೆ, ತರಬೇತಿ ಕೋರ್ಸ್‌ಗಳು, ಕಾರ್ಯಾಗಾರಗಳು, ವೈಜ್ಞಾನಿಕ ಮತ್ತು ತಾಂತ್ರಿಕ ವಿಚಾರ ಸಂಕಿರಣಗಳು, ತಜ್ಞರ ವಿನಿಮಯ ಮತ್ತು ಅಧ್ಯಯನ ಪ್ರವಾಗಳ ಮೂಲಕ ಜಲಸಂಪನ್ಮೂಲ ಅಭಿವೃದ್ಧಿ ಮತ್ತು ನಿರ್ವಹಣೆಯಲ್ಲಿ ಇತರ ದೇಶಗಳೊಂದಿಗೆ ದ್ವಿಪಕ್ಷೀಯ ಸಹಕಾರವನ್ನು ಹೊಂದುತ್ತಿದೆ. ಭಾರತ-ಜಪಾನ್ ಸಹಕಾರವನ್ನು ಗಮನದಲ್ಲಿಟ್ಟುಕೊಂಡು, ವಿಕೇಂದ್ರೀಕೃತ ಸಂಸ್ಕರಣಾ ಕ್ಷೇತ್ರದಲ್ಲಿ ಅನುಭವ ಮತ್ತು ಪರಿಣತಿಯನ್ನು ವಿನಿಮಯ ಮಾಡಿಕೊಳ್ಳಲು ಜಪಾನ್‌ನೊಂದಿಗೆ ಒಪ್ಪಂದ ಮಾಡಿಕೊಳ್ಳಲು ನಿರ್ಧರಿಸಲಾಯಿತು.
***
(Release ID: 1816537)
Visitor Counter : 244
Read this release in:
English
,
Urdu
,
Hindi
,
Marathi
,
Assamese
,
Bengali
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam