ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಕೇಂದ್ರ ಆರೋಗ್ಯ ಸಚಿವ ಡಾ. ಮನ್ಸುಖ್ ಮಾಂಡವಿಯಾ ಅವರು ಪ್ರಮುಖ ತಜ್ಞರು ಮತ್ತು ಅಧಿಕಾರಿಗಳೊಂದಿಗೆ ಕೊವಿಡ್-19 ರ ಹೊಸ ಎಕ್ಸ್ ಇ – ರೂಪಾಂತರಿಯ ಬಗೆಗಿನ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿದರು


ಹೊಸ ರೂಪಾಂತರಗಳು ಮತ್ತು ಪ್ರಕರಣಗಳ ಮೇಲೆ ನಡೆಯುತ್ತಿರುವ ಪರಿವೀಕ್ಷಣೆ ಮತ್ತು ನಿಗಾ ಮತ್ತಷ್ಟು ಹೆಚ್ಚಿಸಲು ಅಧಿಕಾರಿಗಳಿಗೆ ನಿರ್ದೇಶಿಸಿದರು

Posted On: 12 APR 2022 11:57AM by PIB Bengaluru

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಡಾ ಮನ್ಸುಖ್ ಮಾಂಡವಿಯಾ ಅವರು ಇಂದು, ದೇಶದ ಪ್ರಮುಖ ತಜ್ಞರು ಮತ್ತು ಅಧಿಕಾರಿಗಳೊಂದಿಗೆ ಕೊವಿಡ್-19 ರ ಹೊಸ ‘ಎಕ್ಸ್ ಇ – ರೂಪಾಂತರಿಯ’ ಬಗೆಗಿನ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿದರು. ದೇಶದಲ್ಲಿನ ಕೊವಿಡ್-19 ಪ್ರಕರಣಗಳನ್ನು ಪರಿಶೀಲಿಸುವಾಗ, ಹೊಸ ರೂಪಾಂತರಗಳು ಮತ್ತು ಪ್ರಕರಣಗಳ ಮೇಲೆ ನಡೆಯುತ್ತಿರುವ ಮೇಲ್ವಿಚಾರಣೆ ಮತ್ತು ನಿಗಾ ಹೆಚ್ಚಿಸಲು ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.


ವೈದ್ಯಕೀಯ ಮೂಲಸೌಕರ್ಯ ಮತ್ತು ಸಂಪನ್ಮೂಲಗಳ ವಿಷಯದಲ್ಲಿ, ಕೊವಿಡ್ ಚಿಕಿತ್ಸೆಗೆ ಅವಶ್ಯಕವಿರುವ ಔಷಧಿಗಳ ಲಭ್ಯತೆಯನ್ನು ನಿರಂತರವಾಗಿ ಪರಿಶೀಲಿಸಿ ಖಚಿತಪಡಿಸಿಕೊಳ್ಳುವಂತೆ ಡಾ.ಮಾಂಡವಿಯ ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಜೊತೆಗೆ, ಪ್ರಸ್ತುತ ನಡೆಯುತ್ತಿರುವ ಲಸಿಕಾ ಅಭಿಯಾನ ಸಂಪೂರ್ಣ ವೇಗದೊಂದಿಗೆ ಮುಂದುವರೆಯಬೇಕು ಮತ್ತು ಎಲ್ಲಾ ಅರ್ಹರಿಗೆ ಲಸಿಕೆ ನೀಡಬೇಕು ಎಂದೂ ಅವರು ಒತ್ತಿ ಹೇಳಿದರು.

ಈ ಸಭೆಯಲ್ಲಿ ನೀತಿ ಆಯೋಗದ, ಆರೋಗ್ಯ ಸದಸ್ಯರಾದ ಡಾ. ವಿ.ಕೆ. ಪಾಲ್, ಆರೋಗ್ಯ ಕಾರ್ಯದರ್ಶಿ, ಶ್ರೀ. ರಾಜೇಶ್ ಭೂಷಣ್, ಏಮ್ಸ್ ನಿರ್ದೇಶಕರು, ಡಾ. ರಣದೀಪ್ ಗುಲೇರಿಯಾ, ಐಸಿಎಂಆರ್ ಮಹಾ ನಿರ್ದೇಶಕರು, ಡಾ. ಬಲರಾಮ್ ಭಾರ್ಗವ, ಎನ್‌ ಟಿ ಎ ಜಿ ಐ ನ ಡಾ. ಎನ್‌. ಕೆ. ಅರೋರಾ ಮತ್ತು ಆರೋಗ್ಯ ಸಚಿವಾಲಯದ ಇತರ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

***



(Release ID: 1816028) Visitor Counter : 175