ಪ್ರಧಾನ ಮಂತ್ರಿಯವರ ಕಛೇರಿ

ಮನ್ ಕಿ ಬಾತ್ ಗೆ ಅನಿಸಿಕೆಗಳನ್ನು ಆಹ್ವಾನಿಸಿದ ಪ್ರಧಾನಮಂತ್ರಿ

Posted On: 08 APR 2022 9:11AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮುಂಬರುವ ಮನ್ ಕಿ ಬಾತ್ ಆವೃತ್ತಿಗಾಗಿ ಜನರಿಂದ ಪ್ರಮುಖ ವಿಷಯಗಳ ಕುರಿತು ಅನಿಸಿಕೆ ಹಾಗೂ ಸಮಸ್ಯೆಗಳ ಬಗ್ಗೆ ತಮ್ಮ ಆಲೋಚನೆಗಳನ್ನು ಹಂಚಿಕೊಳ್ಳುವಂತೆ ಆಹ್ವಾನಿಸಿದ್ದಾರೆ.ಚಿಂತನೆಗಳನ್ನು MyGov, Namo App ಆಪ್ ಮೂಲಕ ಅಥವಾ ಸಂಖ್ಯೆ 1800-11-7800ಗೆ ಕರೆ ಮಾಡಿ ಸಂದೇಶವನ್ನು ದಾಖಲಿಸಬಹುದು.

ಮನ್  ಕಿ ಬಾತ್ ನ 88ನೇ ಆವೃತ್ತಿ 2022ರ ಏಪ್ರಿಲ್ 24ರಂದು ಪ್ರಸಾರವಾಗಲಿದೆ.

ಮೈ ಗೌ ವೇದಿಕೆಯಲ್ಲಿ ಆಹ್ವಾನವನ್ನು ಹಂಚಿಕೊಂಡಿರುವ ಪ್ರಧಾನಮಂತ್ರಿ ಟ್ವಿಟ್ ನಲ್ಲಿ ಹೀಗೆ ಹೇಳಿದ್ದಾರೆ.

“ಮನ್ ಕಿ ಬಾತ್ ಮೂಲಕ ನಾವು ತಳಮಟ್ಟದಲ್ಲಿ ಬದಲಾವಣೆಗಳನ್ನು ತರುತ್ತಿರುವ ಅಸಾಮಾನ್ಯ ಸಾಧಕರ ಸಾಹಸಗಳನ್ನು ಪರಿಚಯಿಸುತ್ತಿದ್ದೇವೆ. ನೀವು ಅಂತಹ ಸ್ಫೂರ್ತಿದಾಯಕ ಜೀವನ ಪಯಣಗಳ ಬಗ್ಗೆ ತಿಳಿದಿದ್ದರೆ, ಈ ತಿಂಗಳ 24ರ ಕಾರ್ಯಕ್ರಮಕ್ಕಾಗಿ ಅವರ ಬಗ್ಗೆ ವಿವರವನ್ನು ಹಂಚಿಕೊಳ್ಳಿ. MyGov, NaMo App ಆಪ್ ನಲ್ಲಿ ಬರೆದು ತಿಳಿಸಿ ಅಥವಾ  ಸಂಖ್ಯೆ  or dial 1800-11-7800 ಕರೆ ಮಾಡಿ ಸಂದೇಶ ದಾಖಲಿಸಿ’’

 

***

 



(Release ID: 1814694) Visitor Counter : 166