ಹಣಕಾಸು ಸಚಿವಾಲಯ

6 ವರ್ಷಗಳಲ್ಲಿ ಸ್ಟ್ಯಾಂಡ್-ಅಪ್ ಇಂಡಿಯಾ ಯೋಜನೆಯಡಿ 1,33,995 ಖಾತೆಗಳಿಗೆ 30,160 ಕೋಟಿ ರೂ.ಗಿಂತ ಹೆಚ್ಚಿನ ಸಾಲ ಮಂಜೂರು ಮಾಡಲಾಗಿದೆ.


" ಸೌಲಭ್ಯ ವಂಚಿತ ವರ್ಗಗಳಿಗೆ ಸೇರಿದ ಉದ್ಯಮವಲಯದ ಹೆಚ್ಚು ಹೆಚ್ಚು ಫಲಾನುಭವಿಗಳನ್ನು ಇದರ ವ್ಯಾಪ್ತಿಗೆ ತರುವುದು ಗುರಿಯಾಗಿದ್ದು, ನಾವು ಆತ್ಮನಿರ್ಭರ ಭಾರತ ನಿರ್ಮಾಣದತ್ತ ಗಮನಾರ್ಹ ದಾಪುಗಾಲು ಹಾಕುತ್ತೇವೆ": ಹಣಕಾಸು ಸಚಿವರು

Posted On: 05 APR 2022 8:00AM by PIB Bengaluru

ನಾವು ಸ್ಟ್ಯಾಂಡ್ ಅಪ್ ಇಂಡಿಯಾ ಯೋಜನೆಯ ಆರನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿರುವ ಸಂದರ್ಭದಲ್ಲಿ , ಯೋಜನೆಯು ಉದ್ಯಮಿಗಳಿಗೆ, ವಿಶೇಷವಾಗಿ ಮಹಿಳೆಯರು ಮತ್ತು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರ ಆಕಾಂಕ್ಷೆಗಳನ್ನು ಹೇಗೆ ಪೂರೈಸಿದೆ ಎನ್ನುವುದನ್ನು ನೋಡೋಣ ಮತ್ತು ಯೋಜನೆಯ ಸಾಧನೆಗಳು, ಅದರ ಮುಖ್ಯ ಲಕ್ಷಣಗಳು ಮತ್ತು ಅದರ ವಿವರಗಳನ್ನು ಸಹ ಪರಿಶೀಲಿಸೋಣ.  

 ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ  ಹಾಗು ಮಹಿಳಾ ಉದ್ಯಮಿಗಳು ಎದುರಿಸುತ್ತಿರುವ ಸವಾಲುಗಳನ್ನು ಗುರುತಿಸಿ, ಆರ್ಥಿಕ ಸಬಲೀಕರಣ ಮತ್ತು ಉದ್ಯೋಗ ಸೃಷ್ಟಿಯ ಮೇಲೆ ಕೇಂದ್ರೀಕರಿಸುವ ತಳಮಟ್ಟದಲ್ಲಿ ಉದ್ಯಮಶೀಲತೆಯನ್ನು ಉತ್ತೇಜಿಸಲು ಮಹತ್ವಾಕಾಂಕ್ಷೆಯ ಸ್ಟ್ಯಾಂಡ್ ಅಪ್ ಇಂಡಿಯಾ ಯೋಜನೆಯನ್ನು 5 ಏಪ್ರಿಲ್ 2016 ರಂದು ಪ್ರಾರಂಭಿಸಲಾಯಿತು. 2019-20 ರಲ್ಲಿ, 2020-25 15 ನೇ ಹಣಕಾಸು ಆಯೋಗದ ಅವಧಿಗೆ ಹೊಂದಿಕೆಯಾಗುವ ಸಂಪೂರ್ಣ ಅವಧಿಗೆ ಸ್ಟ್ಯಾಂಡ್ ಅಪ್ ಇಂಡಿಯಾ ಯೋಜನೆಯನ್ನು ವಿಸ್ತರಿಸಲಾಯಿತು.

ಸಂದರ್ಭದಲ್ಲಿ ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು “ಸ್ಟ್ಯಾಂಡ್-ಅಪ್ ಇಂಡಿಯಾ ಯೋಜನೆಯ ಆರನೇ ವಾರ್ಷಿಕೋತ್ಸವವನ್ನು ನಾವು ಆಚರಿಸುತ್ತಿರುವಾಗ, ಯೋಜನೆಯಡಿಯಲ್ಲಿ ಇದುವರೆಗೆ 1.33 ಲಕ್ಷಕ್ಕೂ ಹೆಚ್ಚು ಹೊಸ ಉದ್ಯೋಗ ಸೃಷ್ಟಿಕರ್ತರು ಮತ್ತು ಉದ್ಯಮಿಗಳಿಗೆ ಸೌಲಭ್ಯ ಕಲ್ಪಿಸಿರುವುದು ಹರ್ಷದಾಯಕವಾಗಿದೆ” ಎಂದು ಹೇಳಿದ್ದಾರೆ.

ಶ್ರೀಮತಿ. ಸೀತಾರಾಮನ್ ಅವರು, “ ಯೋಜನೆಯ ಆರು ವರ್ಷಗಳ ಕಾರ್ಯಾಚರಣೆಯಲ್ಲಿ 1 ಲಕ್ಷಕ್ಕೂ ಹೆಚ್ಚು ಮಹಿಳಾ ಪ್ರವರ್ತಕರು ಪ್ರಯೋಜನ ಪಡೆದಿದ್ದಾರೆ. ಉದಯೋನ್ಮುಖ ಉದ್ಯಮಿಗಳು ಕೇವಲ ಸಂಪತ್ತು-ಸೃಷ್ಟಿಕರ್ತರಾಗಿ ಮಾತ್ರವಲ್ಲದೆ ಉದ್ಯೋಗ-ದಾತರಾಗಿಯೂ ಅವರ ಪಾತ್ರಗಳ ಮೂಲಕ ಆರ್ಥಿಕ ಬೆಳವಣಿಗೆಯ  ಸಾಮರ್ಥ್ಯವನ್ನು ಸರ್ಕಾರ ಅರ್ಥಮಾಡಿಕೊಳ್ಳುತ್ತದೆ.

ಯೋಜನೆಯ ಉದ್ದೇಶದಡಿಯಲ್ಲಿ ವಿವಿಧ ರೀತಿಯ ಸೌಲಭ್ಯಗಳಿಂದ ವಂಚಿತವಾಗಿರುವ ಉದ್ಯಮಶೀಲ ವರ್ಗದ ಹೆಚ್ಚು ಹೆಚ್ಚು ಫಲಾನುಭವಿಗಳನ್ನು ಸೇರಿಸಲಾಗಿದೆ ಮೂಲಕ ಆತ್ಮನಿರ್ಭರ ಭಾರತದ ನಿರ್ಮಾಣದತ್ತ ಮಹತ್ವದ ಹೆಜ್ಜೆಗಳನ್ನು ಇಡುತ್ತಿದ್ದೇವೆ ಎಂದು ಹಣಕಾಸು ಸಚಿವರು ಹೇಳಿದರು.

ಭಾರತ ಅಭಿವೃದ್ಧಿ ಪಥದಲ್ಲಿ ವೇಗವಾಗಿ ಸಾಗುತ್ತಿದೆ. ಅದೇ ಸಮಯದಲ್ಲಿ, ಸಂಭಾವ್ಯ ಉದ್ಯಮಿಗಳ ಭರವಸೆಗಳು, ಆಕಾಂಕ್ಷೆಗಳು ಮತ್ತು ನಿರೀಕ್ಷೆಗಳು, ವಿಶೇಷವಾಗಿ ಮಹಿಳೆಯರು ಮತ್ತು ಪರಿಶಿಷ್ಟ ಜಾತಿ (ಎಸ್ಸಿ) ಮತ್ತು ಪರಿಶಿಷ್ಟ ಪಂಗಡ (ಎಸ್ಟಿ) ಸಮುದಾಯಗಳಿಗೆ ಸೇರಿದವರು ಸಹ ಹೆಚ್ಚಾಗುತ್ತಿದ್ದಾರೆ. ಅವರು ತಮ್ಮದೇ ಆದ ಉದ್ಯಮವನ್ನು ಸ್ಥಾಪಿಸಲು ಬಯಸುತ್ತಾರೆ, ಇದರಿಂದ ಅವರು ಯಶಸ್ವಿಯಾಗಬಹುದು ಮತ್ತು ತಾವೇ ಬೆಳೆಯಬಹುದು. ಅಂತಹ ವಾಣಿಜ್ಯೋದ್ಯಮಿಗಳು ದೇಶಾದ್ಯಂತ ಹರಡಿಕೊಂಡಿದ್ದಾರೆ ಮತ್ತು ತಮ್ಮನ್ನು ಹಾಗು ತಮ್ಮ ಕುಟುಂಬಗಳಿಗೆ ಕೊಡುಗೆ ನೀಡಲು ಹೊಸ ಆಲೋಚನೆಗಳಿಂದ ತುಂಬಿರುತ್ತಾರೆ. ಯೋಜನೆಯು ಎಸ್ಸಿ, ಎಸ್ಟಿ ಮತ್ತು ಮಹಿಳಾ ಉದ್ಯಮಿಗಳ ಸಾಮರ್ಥ್ಯ ಮತ್ತು ಉತ್ಸಾಹವನ್ನು ಬೆಂಬಲಿಸಲು ಹಾಗು ಅವರ ದಾರಿಯಲ್ಲಿ ಬರುವ ವಿವಿಧ ಅಡೆತಡೆಗಳನ್ನು ನಿವಾರಿಸುವ ಮೂಲಕ ಅವರ ಕನಸುಗಳನ್ನು ನನಸಾಗಿಸಲು ಉದ್ದೇಶಿಸಿದೆ.

ನಾವು ಸ್ಟ್ಯಾಂಡ್ ಅಪ್ ಇಂಡಿಯಾ ಯೋಜನೆಯ ಆರನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿರುವ ಸಂದರ್ಭದಲ್ಲಿ, ಯೋಜನೆಯ ವೈಶಿಷ್ಟ್ಯಗಳು ಮತ್ತು ಸಾಧನೆಗಳನ್ನು ನೋಡೋಣ.

ಸ್ಟ್ಯಾಂಡ್-ಅಪ್ ಇಂಡಿಯಾವು ಮಹಿಳೆಯರು ಮತ್ತು ಪರಿಶಿಷ್ಟ ಜಾತಿ (ಎಸ್ಸಿ) ಮತ್ತು ಪರಿಶಿಷ್ಟ ಪಂಗಡದ (ಎಸ್ಟಿ) ಸಮುದಾಯಗಳಿಗೆ ಸೇರಿದ ಜನರಲ್ಲಿ ಉದ್ಯಮಶೀಲತೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ. ಉತ್ಪಾದನೆ, ಸೇವೆ ಅಥವಾ ವ್ಯಾಪಾರ ಕ್ಷೇತ್ರದಲ್ಲಿ ಮತ್ತು ಕೃಷಿಗೆ ಸಂಬಂಧಿಸಿದ ಚಟುವಟಿಕೆಗಳಲ್ಲಿ ಗ್ರೀನ್ಫೀಲ್ಡ್ ಉದ್ಯಮಗಳನ್ನು ಪ್ರಾರಂಭಿಸಲು ಅನುವು ಮಾಡಿಕೊಡುತ್ತದೆ ಮತ್ತು ನೆರವು ನೀಡುತ್ತವೆ.

ಸ್ಟ್ಯಾಂಡ್-ಅಪ್ ಇಂಡಿಯಾದ ಉದ್ದೇಶವೆಂದರೆ:

  • ಮಹಿಳೆಯರು, ಎಸ್ಸಿ   & ಎಸ್ಟಿ  ವರ್ಗಗಳಲ್ಲಿ ಉದ್ಯಮಶೀಲತೆಯನ್ನು ಉತ್ತೇಜಿಸುವುದು;
  • ಉತ್ಪಾದನೆ, ಸೇವೆಗಳು ಅಥವಾ ವ್ಯಾಪಾರ ವಲಯ ಮತ್ತು ಕೃಷಿಗೆ ಸಂಬಂಧಿಸಿದ ಚಟುವಟಿಕೆಗಳಲ್ಲಿನ  ಗ್ರೀನ್ಫೀಲ್ಡ್ ಉದ್ಯಮಗಳಿಗೆ ಸಾಲಗಳನ್ನು ಒದಗಿಸುವುದು;
  • ಕನಿಷ್ಠ ಒಬ್ಬ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಸಾಲಗಾರರಿಗೆ ಮತ್ತು ಪರಿಶಿಷ್ಟ ವಾಣಿಜ್ಯ ಬ್ಯಾಂಕ್ಗಳ ಬ್ಯಾಂಕ್ ಶಾಖೆಗೆ ಕನಿಷ್ಠ ಒಬ್ಬ ಮಹಿಳಾ ಸಾಲಗಾರರಿಗೆ ರೂ.10 ಲಕ್ಷದಿಂದ ರೂ.1 ಕೋಟಿಯವರೆಗಿನ ಬ್ಯಾಂಕ್ ಸಾಲಗಳನ್ನು ಸುಗಮಗೊಳಿಸುವುದು.

ಸ್ಟ್ಯಾಂಡ್-ಅಪ್ ಇಂಡಿಯಾ ಏಕೆ?

ಸ್ಟ್ಯಾಂಡ್-ಅಪ್ ಇಂಡಿಯಾ ಯೋಜನೆಯು ಎಸ್ಸಿ, ಎಸ್ಟಿ ಮತ್ತು ಮಹಿಳಾ ಉದ್ಯಮಿಗಳು ಉದ್ಯಮಗಳನ್ನು ಸ್ಥಾಪಿಸುವಲ್ಲಿ ಎದುರಿಸುತ್ತಿರುವ ಸವಾಲುಗಳನ್ನು ಗುರುತಿಸುವುದು, ವ್ಯಾಪಾರದಲ್ಲಿ ಯಶಸ್ವಿಯಾಗಲು ಕಾಲಕಾಲಕ್ಕೆ ಅಗತ್ಯವಿರುವ ಸಾಲಗಳು ಮತ್ತು ಇತರ ಬೆಂಬಲವನ್ನು ಆಧರಿಸಿದೆ. ಆದ್ದರಿಂದ ಯೋಜನೆಯು ಪರಿಸರ ವ್ಯವಸ್ಥೆಯನ್ನು ರೂಪಿಸಲು ಪ್ರಯತ್ನಿಸುತ್ತದೆ, ಇದು ವ್ಯಾಪಾರ ಮಾಡಲು ಪೂರಕ ವಾತಾವರಣವನ್ನು ಒದಗಿಸುತ್ತದೆ.  ಬ್ಯಾಂಕ್ ಶಾಖೆಗಳಿಂದ ಸಾಲ ಪಡೆಯಲು ಉದ್ಯಮಗಳನ್ನು ಸ್ಥಾಪಿಸಲು ಸಾಲ ಪಡೆಯಲು ಸಿದ್ಧರಿರುವ ವ್ಯಕ್ತಿಗಳಿಗೆ ಯೋಜನೆಯು ನೆರವಾಗುತ್ತದೆ. ಯೋಜನೆಯ ಸೌಲಭ್ಯವು ನಿಗದಿತ ವಾಣಿಜ್ಯ ಬ್ಯಾಂಕ್ಗಳ ಎಲ್ಲಾ ಶಾಖೆಗಳಲ್ಲಿ ಲಭ್ಯವಿದೆ. ಯೋಜನೆಯ ಪ್ರಯೋಜನವನ್ನು ಕೆಳಗಿನ ಮೂರು ಸಂಭವನೀಯ ವಿಧಾನಗಳಲ್ಲಿ ಪಡೆಯಬಹುದು:

  • ನೇರವಾಗಿ ಶಾಖೆಗೆ ಭೇಟಿ ನೀಡುವ ಮೂಲಕ ಅಥವಾ,
  • ಸ್ಟ್ಯಾಂಡ್-ಅಪ್ ಇಂಡಿಯಾ ಪೋರ್ಟಲ್ (www.standupmitra.in) ಮೂಲಕ ಅಥವಾ,
  • ಲೀಡ್‌  ಜಿಲ್ಲಾ ವ್ಯವಸ್ಥಾಪಕರ (ಎಲ್‌ಡಿಎಮ್‌) ಮೂಲಕ.

 

ಯಾರೆಲ್ಲಾ ಸಾಲಕ್ಕೆ ಅರ್ಹರು?

  • 18 ವರ್ಷಕ್ಕಿಂತ ಮೇಲ್ಪಟ್ಟ ಎಸ್ಸಿ / ಎಸ್ಟಿ ಮತ್ತು/ಅಥವಾ ಮಹಿಳಾ ಉದ್ಯಮಿಗಳು;
  • ಯೋಜನೆಯಡಿಯಲ್ಲಿ ಸಾಲಗಳು ಗ್ರೀನ್‌ ಫೀಲ್ಡ್ ಯೋಜನೆಗಳಿಗೆ ಮಾತ್ರ ಲಭ್ಯವಿದೆ. ಸಂದರ್ಭದಲ್ಲಿ ಗ್ರೀನ್‌ ಫೀಲ್ಡ್ ಎಂದರೆ  ಉತ್ಪಾದನೆ, ಸೇವೆಗಳು ಅಥವಾ ವ್ಯಾಪಾರ ವಲಯ ಮತ್ತು ಕೃಷಿಗೆ ಸಂಬಂಧಿಸಿದ ಚಟುವಟಿಕೆಗಳಲ್ಲಿ ಫಲಾನುಭವಿಯ ಮೊದಲ ಉದ್ಯಮವನ್ನು‌  ಸೂಚಿಸುತ್ತದೆ;
  • ವೈಯಕ್ತಿಕವಲ್ಲದ ಉದ್ಯಮಗಳ ಸಂದರ್ಭದಲ್ಲಿ, ಶೇ.51ರಷ್ಟು ಷೇರುದಾರರ ಮತ್ತು ನಿಯಂತ್ರಣ ಪಾಲನ್ನು ಎಸ್ಸಿ / ಎಸ್ಟಿ ಮತ್ತು/ಅಥವಾ ಮಹಿಳಾ ಉದ್ಯಮಿಗಳು ಹೊಂದಿರಬೇಕು;
  • ಸಾಲಗಾರರು ಯಾವುದೇ ಬ್ಯಾಂಕ್/ಹಣಕಾಸು ಸಂಸ್ಥೆಯಲ್ಲಿ ಸಾಲವನ್ನು ಪಾವತಿಸದಿದ್ದಕ್ಕಾಗಿ ತಪ್ಪಿತಸ್ಥನಾಗಿರಬಾರದು;
  • ಅರ್ಹ ಕೇಂದ್ರ / ರಾಜ್ಯ ಯೋಜನೆಗಳೊಂದಿಗೆ ಒದಗಿಸಬಹುದಾದ 'ಶೇ.15 ವರೆಗೆ' ಮಾರ್ಜಿನ್ ಹಣವನ್ನು ಯೋಜನೆಯು ಕಲ್ಪಿಸುತ್ತದೆ. ಸ್ವೀಕಾರಾರ್ಹ ಸಬ್ಸಿಡಿಗಳನ್ನು ಪಡೆಯಲು ಅಥವಾ ಮಾರ್ಜಿನ್ ಹಣದ ಅವಶ್ಯಕತೆಗಳನ್ನು ಪೂರೈಸಲು ಅಂತಹ ಯೋಜನೆಗಳನ್ನು ತೆಗೆದುಕೊಳ್ಳಬಹುದಾದರೂ, ಎಲ್ಲಾ ಸಂದರ್ಭಗಳಲ್ಲಿ, ಸಾಲಗಾರರು ಯೋಜನಾ ವೆಚ್ಚದ ಕನಿಷ್ಠ ಶೇ.10ರಷ್ಟನ್ನು ಸ್ವಂತ  ಬಂಡವಾಳವಾಗಿ ನೀಡಬೇಕಾಗುತ್ತದೆ.

ಬೆಂಬಲ ಮತ್ತು ಮಾರ್ಗದರ್ಶನ :

ಆನ್‌ಲೈನ್ ಪೋರ್ಟಲ್ www.standupmitra.in ಅನ್ನು ಸ್ಮಾಲ್ ಇಂಡಸ್ಟ್ರೀಸ್ ಡೆವಲಪ್‌ಮೆಂಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಐಡಿಬಿಐ) ಸ್ಟ್ಯಾಂಡ್ ಅಪ್ ಇಂಡಿಯಾ ಯೋಜನೆಗಾಗಿ ಅಭಿವೃದ್ಧಿಪಡಿಸಿದೆ, ಜೊತೆಗೆ ಸಾಲಗಾರರನ್ನು ಬ್ಯಾಂಕುಗಳೊಂದಿಗೆ ಸಂಪರ್ಕಿಸುತ್ತದೆ, ಭಾವಿ ಉದ್ಯಮಿಗಳು ವ್ಯಾಪಾರ ಉದ್ಯಮಗಳನ್ನು ಸ್ಥಾಪಿಸುವ ಕಾರ್ಯದಲ್ಲಿ ಮಾರ್ಗದರ್ಶನ ನೀಡತ್ತದೆ.  ಬ್ಯಾಂಕ್ ಅವಶ್ಯಕತೆಗಳಿಗೆ ಅನುಗುಣವಾಗಿ ಸಾಲದ ಅರ್ಜಿಗಳನ್ನು ಭರ್ತಿ ಮಾಡಲು ತರಬೇತಿ. 8,000ಕ್ಕೂ ಹೆಚ್ಚು ಹ್ಯಾಂಡ್ ಹೋಲ್ಡಿಂಗ್ ಏಜೆನ್ಸಿಗಳ (ಬೆಂಬಲ ಮತ್ತು ಮಾರ್ಗದರ್ಶನ) ಜಾಲದ ಮೂಲಕ, ಪೋರ್ಟಲ್ ನಿರೀಕ್ಷಿತ ಸಾಲಗಾರರನ್ನು ನಿರ್ದಿಷ್ಟ ಪರಿಣತಿಯನ್ನು ಹೊಂದಿರುವ ವಿವಿಧ ಏಜೆನ್ಸಿಗಳಿಗೆ ಸಂಪರ್ಕಿಸಲು ಹಂತ ಹಂತದ ಮಾರ್ಗದರ್ಶನವನ್ನು ಅಂದರೆ ಕೌಶಲ್ಯ ಕೇಂದ್ರಗಳು, ಮಾರ್ಗದರ್ಶನ ಬೆಂಬಲ, ಉದ್ಯಮಶೀಲತೆ ಅಭಿವೃದ್ಧಿ ಕಾರ್ಯಕ್ರಮ ಕೇಂದ್ರಗಳು, ಜಿಲ್ಲಾ ಕೈಗಾರಿಕಾ ಕೇಂದ್ರ, ಜೊತೆಗೆ ವಿಳಾಸಗಳು ಮತ್ತು ಸಂಪರ್ಕ ಸಂಖ್ಯೆಗಳನ್ನು ಒದಗಿಸುತ್ತದೆ.

ಸ್ಟ್ಯಾಂಡ್ ಅಪ್ ಇಂಡಿಯಾ ಯೋಜನೆಯಲ್ಲಿ ಬದಲಾವಣೆಗಳು

2021-22 ಹಣಕಾಸು ವರ್ಷದ  ಬಜೆಟ್ ಭಾಷಣದಲ್ಲಿ ಕೇಂದ್ರ ಹಣಕಾಸು ಸಚಿವರ ಪ್ರಕಟಣೆಯ ಪ್ರಕಾರ, ಸ್ಟ್ಯಾಂಡ್ ಅಪ್ ಇಂಡಿಯಾ ಯೋಜನೆಯಲ್ಲಿ ಕೆಳಗಿನ ಬದಲಾವಣೆಗಳನ್ನು ಮಾಡಲಾಗಿದೆ:-

  • ಸಾಲಗಾರರು  ತರಬೇಕಾದ ಮಾರ್ಜಿನ್ ಹಣದ ಪ್ರಮಾಣವನ್ನು ಯೋಜನಾ ವೆಚ್ಚದ 'ಶೇ.25ವರೆಗೆ' ಬದಲು 'ಶೇ.15 ವರೆಗೆ' ಎಂದುಕಡಿಮೆ ಮಾಡಲಾಗಿದೆ. ಆದಾಗ್ಯೂ, ಸಾಲಗಾರರು ಯೋಜನಾ ವೆಚ್ಚದ ಕನಿಷ್ಠ 10% ಅನ್ನು ಸ್ವಂತ ಹಣವನ್ನು ನೀಡುವುದನ್ನು ಮುಂದುವರಿಸುತ್ತಾರೆ;
  • ಕೃಷಿಗೆ ಸಂಬಂಧಿಸಿದ ಚಟುವಟಿಕೆಗಳಲ್ಲಿಉದ್ಯಮಗಳಿಗೆ ಸಾಲಗಳು ಉದಾ. ಮೀನುಗಾರಿಕೆ, ಜೇನುಸಾಕಣೆ, ಕೋಳಿ, ಜಾನುವಾರು, ಪಾಲನೆ, ಶ್ರೇಣೀಕರಣ, ವಿಂಗಡಣೆ, ಒಟ್ಟುಗೂಡಿಸುವಿಕೆ ಕೃಷಿ ಕೈಗಾರಿಕೆಗಳು, ಡೈರಿ, ಮೀನುಗಾರಿಕೆ, ಕೃಷಿ ಮತ್ತು ಕೃಷಿ ಉದ್ಯಮ ಕೇಂದ್ರಗಳು, ಆಹಾರ ಮತ್ತು ಕೃಷಿ-ಸಂಸ್ಕರಣೆ, ಇತ್ಯಾದಿ. (ಬೆಳೆ ಸಾಲಗಳನ್ನು ಹೊರತುಪಡಿಸಿ, ಕಾಲುವೆಗಳು, ಬಾವಿಗಳಂತಹ ಭೂ ಸುಧಾರಣೆ, ಬಾವಿಗಳು) ಮತ್ತು ಇವುಗಳನ್ನು ಬೆಂಬಲಿಸುವ ಸೇವೆಗಳು, ಯೋಜನೆಯ ಅಡಿಯಲ್ಲಿ ವ್ಯಾಪ್ತಿಗೆ ಅರ್ಹವಾಗಿರುತ್ತವೆ.

ಮೇಲಾಧಾರ ಮುಕ್ತ  (ಕೊಲಾಟರ್ಲ್‌ ಫ್ರೀ) ವ್ಯಾಪ್ತಿಯನ್ನು ವಿಸ್ತರಿಸಲು, ಭಾರತ ಸರ್ಕಾರವು ಸ್ಟ್ಯಾಂಡ್ ಅಪ್ ಇಂಡಿಯಾ ಫಾರ್‌ ಕ್ರೆಡಿಟ್ ಗ್ಯಾರಂಟಿ ಫಂಡ್(ಸಿಜಿಎಫ್‌ಎಸ್‌ಐ) ಅನ್ನು ಸ್ಥಾಪಿಸಿದೆ. ಸಾಲದ ಸೌಲಭ್ಯವನ್ನು ಒದಗಿಸುವುದರ ಹೊರತಾಗಿ, ಸ್ಟ್ಯಾಂಡ್ ಅಪ್ ಇಂಡಿಯಾ ಯೋಜನೆಯು ಭಾವಿ ಸಾಲಗಾರರಿಗೆ ಮಾರ್ಗದರ್ಶನದ (ಹ್ಯಾಂಡ್ಹೋಲ್ಡಿಂಗ್) ಬೆಂಬಲವನ್ನು ವಿಸ್ತರಿಸುವುದನ್ನು ಸಹ ಕಲ್ಪಿಸುತ್ತದೆ. ಕೇಂದ್ರ / ರಾಜ್ಯ ಸರ್ಕಾರದ ಯೋಜನೆಗಳೊಂದಿಗೆ ಸಮನ್ವಯತೆಗಾಗಿ ಸಹ ಅವಕಾಶವಿದೆ. ಯೋಜನೆಯಡಿ ಅರ್ಜಿಗಳನ್ನು ಆನ್ಲೈನ್ನಲ್ಲಿ (www.standupmitra.in) ಪೋರ್ಟಲ್ನಲ್ಲಿಯೂ  ಸಲ್ಲಿಸಬಹುದು.

 

21.03.2022 ರಂತೆ ಈ ಯೋಜನೆಯ ಸಾಧನೆಗಳು

  • ಯೋಜನೆಯ ಪ್ರಾರಂಭದಿಂದ, 2022 ರ ಮಾರ್ಚ್ 21 ರವರೆಗೆ ಸ್ಟ್ಯಾಂಡ್ ಅಪ್ ಇಂಡಿಯಾ ಯೋಜನೆಯಡಿಯಲ್ಲಿ 1,33,995 ಖಾತೆಗಳಲ್ಲಿ 30,160 ಕೋಟಿ ರೂಪಾಯಿಗಳನ್ನು ಮಂಜೂರು ಮಾಡಲಾಗಿದೆ.
  • 21.03.2022 ರಂತೆ ಸ್ಟ್ಯಾಂಡ್ ಅಪ್ ಇಂಡಿಯಾ ಯೋಜನೆಯಡಿಯಲ್ಲಿ ಒಟ್ಟು ಎಸ್ಸಿ/ಎಸ್ಟಿ ಮತ್ತು ಮಹಿಳಾ ಸಾಲಗಾರರು ಈ ಕೆಳಗಿನಂತೆ ಪ್ರಯೋಜನ ಪಡೆದಿದ್ದಾರೆ:

                                                                                                                                                 (ಮೊತ್ತ: ಕೋಟಿಯಲ್ಲಿ)

ಎಸ್ಸಿ

ಎಸ್ಟಿ

ಮಹಿಳೆಯರು

ಒಟ್ಟು

ಖಾತೆಗಳ ಸಂಖ್ಯೆ

ಮಂಜೂರು ಮಾಡಲಾದ ಮೊತ್ತ

ಖಾತೆಗಳ ಸಂಖ್ಯೆ

ಮಂಜೂರು ಮಾಡಲಾದ ಮೊತ್ತ

ಖಾತೆಗಳ ಸಂಖ್ಯೆ

ಮಂಜೂರು ಮಾಡಲಾದ ಮೊತ್ತ

ಖಾತೆಗಳ ಸಂಖ್ಯೆ

ಮಂಜೂರು ಮಾಡಲಾದ ಮೊತ್ತ

19310

3976.84

6435

1373.71

108250

24809.89

133995

30160.45

 

****



(Release ID: 1813795) Visitor Counter : 255