ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದಿಂದ ಎಲ್ಲ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ವಲಯ ಮಟ್ಟದ ಸಮಾವೇಶಗಳ ಆಯೋಜನೆ


ಮಹಿಳೆಯರು ಮತ್ತು ಮಕ್ಕಳ ರಕ್ಷಣೆ, ಅಭಿವೃದ್ಧಿ ಮತ್ತು ಸಬಲೀಕರಣ ಹಾಗೂ ಅಪೌಷ್ಟಿಕತೆಯ ಆತಂಕ ನಿವಾರಿಸಲು ವಲಯ ಮಟ್ಟದ ಕಾರ್ಯತಂತ್ರದ ಮಧ್ಯಸ್ಥಿಕೆಗಳ ಮೂಲಕ ರಾಜ್ಯ ಸರ್ಕಾರಗಳು/ಕೇಂದ್ರಾಡಳಿತ ಪ್ರದೇಶಗಳ ಆಡಳಿತಗಳು ಮತ್ತು ಪಾಲುದಾರರನ್ನು ಸಂಪರ್ಕಿಸುವುದು

Posted On: 01 APR 2022 12:10PM by PIB Bengaluru

ದೇಶದ ಸುಸ್ಥಿರ ಮತ್ತು ಸಮಾನ ಅಭಿವೃದ್ಧಿಗೆ ಮತ್ತು ಪರಿವರ್ತನೆಯ ಆರ್ಥಿಕ ಮತ್ತು ಸಾಮಾಜಿಕ ಬದಲಾವಣೆಗಳನ್ನು ಸಾಧಿಸಲು ಭಾರತದ ಜನಸಂಖ್ಯೆಯ ಶೇ.67.7ರಷ್ಟಿರುವ ಮಹಿಳೆಯರು ಮತ್ತು ಮಕ್ಕಳ ಸಬಲೀಕರಣ ಮತ್ತು ರಕ್ಷಣೆ ಮತ್ತು ಸುರಕ್ಷತೆ ಹಾಗೂ ಸುಭದ್ರ ವಾತಾವರಣದಲ್ಲಿ ಅವರ ಸಮಗ್ರ ಅಭಿವೃದ್ಧಿಯನ್ನು ಖಾತ್ರಿಪಡಿಸಿಕೊಳ್ಳುವುದು ಅತ್ಯಂತ ನಿರ್ಣಾಯಕವಾಗಿದೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ಪ್ರಧಾನ ಉದ್ದೇಶವು, ಮಹಿಳೆಯರು ಮತ್ತು ಮಕ್ಕಳಿಗಾಗಿ ರಾಜ್ಯ ಕಾರ್ಯಕ್ರಮಗಳಲ್ಲಿನ ಅಂತರ ನಿವಾರಿಸುವುದು ಮತ್ತು ಲಿಂಗ ಸಮಾನ ಮತ್ತು ಮಕ್ಕಳ ಕೇಂದ್ರಿತ ಕಾನೂನು, ನೀತಿಗಳು ಮತ್ತು ಕಾರ್ಯಕ್ರಮಗಳನ್ನು ರೂಪಿಸುವುದು ಮತ್ತು ಮಹಿಳೆಯರಿಗೆ ಮತ್ತು ಒದಗಿಸಲು ಅಂತರ್ ಸಚಿವಾಲಯ ಮತ್ತು ಅಂತರ-ವಲಯಗಳ ಸಮನ್ವಯವನ್ನು ಉತ್ತೇಜಿಸುವುದು ಮತ್ತು ಮಹಿಳೆಯರು ಮತ್ತು ಮಕ್ಕಳಾಗಿ  ಸುಗಮವಾದ, ಕೈಗೆಟುಕುವ, ವಿಶ್ವಾಸಾರ್ಹ ಮತ್ತು ಎಲ್ಲಾ ರೀತಿಯ ತಾರತಮ್ಯ ಮತ್ತು ಹಿಂಸೆಯಿಂದ ಮುಕ್ತವಾಗಿರುವ ಪರಿಸರವನ್ನು ಒದಗಿಸುವುದು ಒಳಗೊಂಡಿದೆ. ಆ ನಿಟ್ಟಿನಲ್ಲಿ ಸಚಿವಾಲಯದ ಯೋಜನೆಗಳಡಿಯಲ್ಲಿರುವ ಉದ್ದೇಶಗಳನ್ನು ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಆಡಳಿತಗಳ ಬೆಂಬಲದೊಂದಿಗೆ ಸಾಧಿಸಲು ಪ್ರಯತ್ನ ನಡೆಸಲಾಗಿದೆ, ಆ ತಳಮಟ್ಟದಲ್ಲಿ ಯೋಜನೆಗಳ ಜಾರಿಯಲ್ಲಿರುವ ಅಯಾ ಆಡಳಿತಗಳೇ ಜವಾಬ್ದಾರಿಯಾಗಿವೆ. ಮೇಲಿನ ಉದ್ದೇಶಗಳನ್ನು ಸಾಧಿಸಲು, ಸಮರೋಪಾದಿಯಲ್ಲಿ ಜಾರಿಗೊಳಿಸಲು ಸಚಿವಾಲಯದ 3 ಪ್ರಮುಖ ಯೋಜನೆಗಳಿಗೆ ಸಚಿವ ಸಂಪುಟ ಅನುಮೋದನೆ ನೀಡಿದೆ. ಅವುಗಳೆಂದರೆ ಮಿಷನ್ ಪೋಷಣ್ 2.0, ಮಿಷನ್ ಶಕ್ತಿ ಮತ್ತು ಮಿಷನ್ ವಾತ್ಸಲ್ಯ. ಈ ಎಲ್ಲಾ 3 ಮಿಷನ್‌ಗಳನ್ನು 15 ನೇ ಹಣಕಾಸು ಆಯೋಗದ ಅವಧಿಯಲ್ಲಿ 2021-22 ರಿಂದ 2025-26 ರ ಅವಧಿಯಲ್ಲಿ ಜಾರಿಗೊಳಿಸಲಾಗುವುದು. 
ಸಚಿವಾಲಯವು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಜೊತೆಗೂಡಿ ಚಂಡೀಗಢ (ಏಪ್ರಿಲ್ 2), ಬೆಂಗಳೂರು (ಏಪ್ರಿಲ್ 4), ಗುವಾಹಟಿ (ಏಪ್ರಿಲ್ 10), ಮುಂಬೈ (ಏಪ್ರಿಲ್ 12) ಮತ್ತು ಭುವನೇಶ್ವರದಲ್ಲಿ (ಏಪ್ರಿಲ್ 13) ವಲಯ ಮಟ್ಟದ ಸಮ್ಮೇಳನಗಳನ್ನು ನಡೆಸಲಿದೆ. ಪರಿವರ್ತನೆಯ ಸಾಮಾಜಿಕ ಬದಲಾವಣೆಗಳನ್ನು ಖಚಿತಪಡಿಸಿಕೊಳ್ಳಲು ಸಹಕಾರಿ ಒಕ್ಕೂಟದ ನೈಜ ಸ್ಪೂರ್ತಿಯೊಂದಿಗೆ ಮುಂದಿನ 5 ವರ್ಷಗಳಲ್ಲಿ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ಅನುಕೂಲವಾಗುವಂತೆ ಸಚಿವಾಲಯದ 3 ಮಿಷನ್‌ಗಳ ಕುರಿತು ರಾಜ್ಯ ಸರ್ಕಾರಗಳು/ ಕೇಂದ್ರಾಡಳಿತ ಪ್ರದೇಶಗಳ ಆಡಳಿತಗಳನ್ನು ಸಂವೇದನಾಶೀಲಗೊಳಿಸುವುದು ವಲಯ ಸಮ್ಮೇಳನಗಳ ಪ್ರಮುಖ ಉದ್ದೇಶವಾಗಿದೆ. ದೇಶದ ಮಹಿಳೆಯರು ಮತ್ತು ಮಕ್ಕಳ ಅನುಕೂಲಕ್ಕಾಗಿ ಮಿಷನ್‌ಗಳ ಅಡಿಯಲ್ಲಿ ವಿಶೇಷ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ. 

ಮಿಷನ್ ಪೋಷಣ್ 2.0 ಒಂದು ಸಮಗ್ರ ಪೋಷಣೆ ಬೆಂಬಲಿಸುವ ಕಾರ್ಯಕ್ರಮವಾಗಿದೆ. ಇದು ಮಕ್ಕಳು, ಹದಿಹರೆಯದ ಬಾಲಕಿಯರು, ಗರ್ಭಿಣಿಯರು ಮತ್ತು ಬಾಣಂತಿ ತಾಯಂದಿರಲ್ಲಿ ಅಪೌಷ್ಟಿಕತೆಯ ಸವಾಲುಗಳನ್ನು ಎದುರಿಸಲು ಪೌಷ್ಠಿಕಾಂಶದ ವಿಷಯ ಮತ್ತು ಹೆರಿಗೆಯ ವಿಧಾನದಲ್ಲಿ ಬದಲಾವಣೆಯ ಮೂಲಕ ಮತ್ತು ಆರೋಗ್ಯ, ಕ್ಷೇಮ ಮತ್ತು ರೋಗ ನಿರೋಧಕ ಶಕ್ತಿಯನ್ನು ಬೆಳೆಸುವ ಅಭ್ಯಾಸಗಳನ್ನು ಅಭಿವೃದ್ಧಿಪಡಿಸಲು ಮತ್ತು ಉತ್ತೇಜಿಸಲು ಸಮನ್ವಯ ಪರಿಸರ ವ್ಯವಸ್ಥೆಯನ್ನು ರಚಿಸಲು ಪ್ರಯತ್ನಿಸಲಾಗುವುದು. ಪೋಷಣ್ 2.0 ಪೂರಕ ಪೌಷ್ಟಿಕಾಂಶ ಕಾರ್ಯಕ್ರಮದ ಅಡಿಯಲ್ಲಿ ಆಹಾರದ ಗುಣಮಟ್ಟ ಮತ್ತು ವಿತರಣೆಯನ್ನು ಅತ್ಯುತ್ತಮವಾಗಿಸಲು ಪ್ರಯತ್ನಿಸುತ್ತದೆ. ಪೋಷಣ್ 2.0 ತನ್ನ ವ್ಯಾಪ್ತಿಯ ಅಡಿಯಲ್ಲಿ 3 ಪ್ರಮುಖ ಕಾರ್ಯಕ್ರಮಗಳು/ ಯೋಜನೆ ಒಳಗೊಂಡಿವೆ, ಅವುಗಳೆಂದರೆ, ಅಂಗನವಾಡಿ ಸೇವೆಗಳು, ಹದಿಹರೆಯದ ಯುವತಿಯರ ಯೋಜನೆ ಮತ್ತು ಪೋಷಣ್ ಅಭಿಯಾನ.

 

 

ಮಿಷನ್ ಶಕ್ತಿ, ಯೋಜನೆಯು ಮಹಿಳೆಯರಿಗೆ ತಮ್ಮ ಜೀವನದ ವಿವಿಧ ಹಂತಗಳಲ್ಲಿ ಪ್ರಗತಿಗೆ ಎದುರಾಗುವ ಅಡೆತಡೆಗಳನ್ನು ನಿವಾರಿಸಲು ಸಮಗ್ರ ಆರೈಕೆ, ಸುರಕ್ಷತೆ, ರಕ್ಷಣೆ, ಪುನರ್ವಸತಿ ಮತ್ತು ಸಬಲೀಕರಣದ ಮೂಲಕ ಏಕರೂಪದ ಜನಸ್ನೇಹಿ ಜೀವನಚಕ್ರ ಬೆಂಬಲವನ್ನು ಕಲ್ಪಿಸುತ್ತದೆ. ಮಿಷನ್ ಶಕ್ತಿಯು ‘ಸಂಬಲ್’ ಮತ್ತು ‘ಸಾಮರ್ಥ್ಯ’ ಎಂಬ ಎರಡು ಉಪ ಯೋಜನೆಗಳನ್ನು ಹೊಂದಿದೆ. ‘ಸಂಬಾಲ್’ ಉಪ ಯೋಜನೆಯು ಮಹಿಳೆಯರ ಸುರಕ್ಷತೆ ಮತ್ತು ಭದ್ರತೆಗಾಗಿ ಇದ್ದರೆ, ‘ಸಾಮರ್ಥ್ಯ’ ಉಪ ಯೋಜನೆಯು ಮಹಿಳೆಯರ ಸಬಲೀಕರಣಕ್ಕೆ ಸಂಬಂಧಿಸಿದ್ದಾಗಿದೆ. 

 


ಮಿಷನ್ ವಾತ್ಸಲ್ಯದ ಉದ್ದೇಶವು ಭಾರತದ ಪ್ರತಿ ಮಗುವಿಗೆ ಆರೋಗ್ಯಕರ ಮತ್ತು ಸಂತೋಷದ ಬಾಲ್ಯವನ್ನು ಖಾತ್ರಿಪಡಿಸುವುದು; ಮಕ್ಕಳ ಅಭಿವೃದ್ಧಿಗಾಗಿ ಸೂಕ್ಷ್ಮ, ಬೆಂಬಲ ಮತ್ತು ಎಲ್ಲವನ್ನೂ ಒಳಗೊಂಡ ಸಮಗ್ರ ಪರಿಸರ ವ್ಯವಸ್ಥೆ ಪೋಷಿಸುವುದು; ಬಾಲಾಪರಾಧ ನ್ಯಾಯ ಕಾಯಿದೆ 2015 ರ ಆದೇಶ ಜಾರಿಗೆ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಸಹಾಯ ಮಾಡುವುದು; ಸುಸ್ಥಿರ ಅಭಿವೃದ್ಧಿ ಗುರಿ (ಎಸ್ ಡಿಜಿ) ಗುರಿಗಳನ್ನು ಸಾಧಿಸುವುದು ಒಳಗೊಂಡಿದೆ.  ಮಿಷನ್ ವಾತ್ಸಲ್ಯದ ಅಡಿಯಲ್ಲಿನ ಘಟಕಗಳು ಶಾಸನಬದ್ಧ ಸಂಸ್ಥೆಗಳನ್ನು ಒಳಗೊಂಡಿರುತ್ತದೆ; ಸೇವಾ ವಿತರಣಾ ವ್ಯವಸ್ಥೆಗಳು; ಸಾಂಸ್ಥಿಕ ಆರೈಕೆ/ಸೇವೆಗಳು; ಸಾಂಸ್ಥಿಕವಲ್ಲದ ಸಮುದಾಯ ಆಧಾರಿತ ಆರೈಕೆ; ತುರ್ತು ಸಂಪರ್ಕ ಸೇವೆಗಳು; ತರಬೇತಿ ಮತ್ತು ಸಾಮರ್ಥ್ಯ ನಿರ್ಮಾಣ ಉಪಕ್ರಮಗಳನ್ನು ಅದರಲ್ಲಿ ಸೇರಿವೆ. 

 

 


ಈ ಮಿಷನ್‌ಗಳಡಿಯಲ್ಲಿರುವ ಯೋಜನೆಗಳು ಕೇಂದ್ರ ಸರ್ಕಾರದ ಪ್ರಾಯೋಜಿತ ಯೋಜನೆಗಳಾಗಿದ್ದು, ಇವುಗಳನ್ನು ವೆಚ್ಚ ಹಂಚಿಕೆ ಮಾನದಂಡಗಳ ಪ್ರಕಾರ ವೆಚ್ಚ ಹಂಚಿಕೆ ಆಧಾರದ ಮೇಲೆ ರಾಜ್ಯ ಸರ್ಕಾರಗಳು/ಕೇಂದ್ರಾಡಳಿತ ಪ್ರದೇಶಗಳು ಜಾರಿಗೊಳಿಸುತ್ತವೆ. ಯೋಜನೆಯ ಮಾರ್ಗಸೂಚಿಗಳನ್ನು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳೊಂದಿಗೆ ಹಂಚಿಕೊಳ್ಳಲಾಗುವುದು. 
 
***



(Release ID: 1812304) Visitor Counter : 179