ಆಯುಷ್

ಪ್ರಧಾನಮಂತ್ರಿಗಳ ಯೋಗ ಪ್ರಶಸ್ತಿ 2022ಗೆ ನಾಮಾಂಕನ ಆಹ್ವಾನಿಸಿದ ಆಯುಷ್ ಸಚಿವಾಲಯ


ವಿಜೇತರನ್ನು ಅಂತಾರಾಷ್ಟ್ರೀಯ ಯೋಗ ದಿನ(21 ಜೂನ್ 2022)ದಂದು ಪ್ರಕಟ

Posted On: 30 MAR 2022 10:49AM by PIB Bengaluru

ಆಯುಷ್ ಸಚಿವಾಲಯವು 2022ರ ಪ್ರಧಾನಮಂತ್ರಿಗಳ ಯೋಗ ಪ್ರಶಸ್ತಿಗಳಿಗೆ ನಾಮ ನಿರ್ದೇಶನಗಳನ್ನು ಆಹ್ವಾನಿಸಿದೆ. ವಿಜೇತರನ್ನು ಅಂತಾರಾಷ್ಟ್ರೀಯ ಯೋಗ ದಿನ 2022ರ ಜೂನ್ 21ರಂದು ಘೋಷಿಸಲಾಗುವುದು. 

2022ನೇ ವರ್ಷದ ಪ್ರಶಸ್ತಿಯ ಅರ್ಜಿ ಪ್ರಕ್ರಿಯೆಯನ್ನು  ಸದ್ಯ MyGov ಪ್ಲಾಟ್‌ಫಾರ್ಮ್‌ ನಲ್ಲಿ (https://innovateindia.mygov.in/pm-yoga-awards-2022/) ನಲ್ಲಿ ಮಾಡಲಾಗುತ್ತಿದೆ. ಅರ್ಜಿಗಳು/ನಾಮನಿರ್ದೇಶನಗಳನ್ನು ಆನ್‌ ಲೈನ್ ಮಾದರಿ ಮೂಲಕ ಮಾತ್ರ ಸಲ್ಲಿಸಬಹುದು ಮತ್ತು ಯಾವುದೇ ಹಾರ್ಡ್ ಕಾಪಿ(ಮುದ್ರಣ ಪ್ರತಿ)ಯನ್ನು ಕಳುಹಿಸುವ ಅವಶ್ಯಕತೆ ಇಲ್ಲ. ಇದು ಭಾರತೀಯ ಮೂಲದ ಘಟಕಗಳಿಗೆ ಎರಡು ರಾಷ್ಟ್ರೀಯ ವಿಭಾಗಗಳನ್ನು ಮತ್ತು ವಿದೇಶಿ ಮೂಲದ ಘಟಕಗಳಿಗೆ ಎರಡು ಅಂತಾರಾಷ್ಟ್ರೀಯ ವರ್ಗಗಳನ್ನು ಒಳಗೊಂಡಿದೆ. ಈ ಪ್ರಶಸ್ತಿಗಳಿಗೆ ಅರ್ಜಿದಾರರು/ನಾಮನಿರ್ದೇಶಿತರು ಯೋಗಕ್ಕೆ ಅಸಾಧಾರಣ ಕೊಡುಗೆಗಳನ್ನು ನೀಡಿರಬೇಕು ಮತ್ತು ಯೋಗದ ಬಗ್ಗೆ ಆಳವಾದ ಜ್ಞಾನವನ್ನು ಹೊಂದಿರಬೇಕು.

ಆಸಕ್ತ ವ್ಯಕ್ತಿಗಳು ಮತ್ತು ಸಂಸ್ಥೆಗಳು ನಾಮನಿರ್ದೇಶನಗಳ ಪ್ರಕ್ರಿಯೆಯನ್ನು ಅರ್ಥಮಾಡಿಕೊಳ್ಳಲು ಮತ್ತು ಭಾಗವಹಿಸಲು ಪಿಎಂವೈಎ ಪುಟ https://innovateindia.mygov.in/pm-yoga-awards-2022/ ನಲ್ಲಿ ನೋಡಬಹುದು. ಈ ವರ್ಷದ ನಾಮ ನಿರ್ದೇಶನ ಪ್ರಕ್ರಿಯೆಯು 2022ರ  ಮಾರ್ಚ್ 28ರಂದು ಪ್ರಾರಂಭವಾಗಿದೆ ಮತ್ತು ನಮೂದುಗಳನ್ನು ಸಲ್ಲಿಸಲು 27 ಏಪ್ರಿಲ್ 2022  ಕೊನೆಯ ದಿನಾಂಕವಾಗಿದೆ. 

ಅರ್ಜಿದಾರರು ನೇರವಾಗಿ ಅರ್ಜಿ ಸಲ್ಲಿಸಬಹುದು ಅಥವಾ ಈ ಪ್ರಶಸ್ತಿ ಪ್ರಕ್ರಿಯೆಯ ಅಡಿಯಲ್ಲಿ ಪರಿಗಣಿಸಲು ಯೋಗ ಕ್ಷೇತ್ರದಲ್ಲಿ ಕೆಲಸ ಮಾಡುವ ಪ್ರಮುಖ ವ್ಯಕ್ತಿ ಅಥವಾ ಸಂಸ್ಥೆಯಿಂದ ಅವರನ್ನು ನಾಮ ನಿರ್ದೇಶನ ಮಾಡಬಹುದು. ಅರ್ಜಿದಾರರು ಕೇವಲ ಒಂದು ಪ್ರಶಸ್ತಿ ವರ್ಗಕ್ಕೆ ಅಂದರೆ ನಿರ್ದಿಷ್ಟ ವರ್ಷದಲ್ಲಿ ರಾಷ್ಟ್ರೀಯ ಪ್ರಶಸ್ತಿ ಅಥವಾ ಅಂತಾರಾಷ್ಟ್ರೀಯ ಪ್ರಶಸ್ತಿಗೆ ನಾಮ ನಿರ್ದೇಶನ ಮಾಡಬಹುದು/ನಾಮನಿರ್ದೇಶನ ಮಾಡಬೇಕು. 

ಆಯ್ಕೆ ಪ್ರಕ್ರಿಯೆಯು ಉತ್ತಮರೀತಿಯಲ್ಲಿ ರೂಪಿಸಿರುವ ವಿಧಾನವಾಗಿದ್ದು, ಅದಕ್ಕಾಗಿ ಭಾರತ ಸರ್ಕಾರದ ಆಯುಷ್ ಸಚಿವಾಲಯ (ಎಂಎಎ), ಎರಡು ಸಮಿತಿಗಳನ್ನು ಅವುಗಳೆಂದರೆ ಪರಿಶೀಲನಾ ಸಮಿತಿ ಮತ್ತು ಮೌಲ್ಯಮಾಪನ ಸಮಿತಿ (ಜ್ಯೂರಿ) ಮೂಲಕ ರಚಿಸಲಾಗಿದ್ದು, ಇದು ಆಯ್ಕೆ ಮತ್ತು ಮೌಲ್ಯಮಾಪನವನ್ನು ಹಾಗೂ ಪ್ರಶಸ್ತಿಗಳನ್ನು ಸ್ವೀಕರಿಸುವವರನ್ನು ಅಂತಿಮಗೊಳಿಸುವ ಮಾನದಂಡಗಳನ್ನು ನಿರ್ಧರಿಸುತ್ತದೆ. ಮೌಲ್ಯಮಾಪನ ಸಮಿತಿಯು (ಜ್ಯೂರಿ) ಸಂಪುಟ ಕಾರ್ಯದರ್ಶಿಯವರಯ ಅಧ್ಯಕ್ಷತೆಯಲ್ಲಿರುತ್ತದೆ.  

ಮನುಕುಲದ ದೈಹಿಕ ಮತ್ತು ಮಾನಸಿಕ ಯೋಗಕ್ಷೇಮವನ್ನು ಉತ್ತೇಜಿಸುವ ಯೋಗದ ಸಂದೇಶವು ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ ಹೆಚ್ಚು ಪ್ರಸ್ತುತವೆಂಬುದು ದೃಢಪಟ್ಟಿದೆ. ಜಗತ್ತಿನಾದ್ಯಂತ   ಸಮುದಾಯಗಳು ಆರೋಗ್ಯವಾಗಿರಲು ಮತ್ತು ತಮ್ಮನ್ನು ಪುನರ್ಯೌವನಗೊಳಿಸಿಕೊಳ್ಳಲು ಯೋಗವನ್ನು ಅಳವಡಿಸಿಕೊಂಡಿವೆ. ವಿಶ್ವಸಂಸ್ಥೆಯು 2014 ರಲ್ಲಿ 69/131 ರ ನಿರ್ಣಯದ ಮೂಲಕ ಜೂನ್ 21 ಅನ್ನು ಅಂತಾರಾಷ್ಟ್ರೀಯ ಯೋಗ ದಿನವೆಂದು ಘೋಷಿಸಿದ ನಂತರ ಯೋಗದ ಅಂತಾರಾಷ್ಟ್ರೀಯ ಮಾನ್ಯತೆ ಮತ್ತು ಅಳವಡಿಕೆ ಹೆಚ್ಚಿನ ಪ್ರಮಾಣದಲ್ಲಿ ಸಕ್ರಿಯವಾಗಿದೆ.  

ಈ ವರ್ಷ, ಅಂತಾರಾಷ್ಟ್ರೀಯ ಯೋಗ ದಿನ 2022ಗೆ ಕ್ಷಣಗಣನೆ ಆರಂಭವಾಗಿದ್ದು, ಆ ಅಭಿಯಾನವು 2022ರ ಮಾರ್ಚ್ 13ರಂದು ಪ್ರಾರಂಭವಾಗಿದೆ. 100 ದಿನಗಳ ಕ್ಷಣಗಣನೆ 100 ಸಂಸ್ಥೆಗಳನ್ನು ಒಳಗೊಂಡಿರುವ 100 ನಗರಗಳನ್ನು ಒಳಗೊಂಡಂತೆ  21 ಜೂನ್ 2022 ರವರೆಗೆ ಒತ್ತು ನೀಡಲಾಗುವುದು. ಆಜಾದಿ ಕಾ ಅಮೃತ್ ಮಹೋತ್ಸವವನ್ನು ಆಚರಿಸಲು 21 ಜೂನ್ 2022 ರಂದು 75 ಪಾರಂಪರಿಕ/ಸಾಂಸ್ಕೃತಿಕ ತಾಣಗಳಲ್ಲಿ ಯೋಗ ಪ್ರದರ್ಶನ ನಡೆಸಲಾಗುವುದು. 

ಕ್ಷಣಗಣನೆ ಸಮಯದಲ್ಲಿ ನಡೆಯಲಿರುವ ಯೋಗ ಪ್ರದರ್ಶನಗಳು, ಕಾರ್ಯಾಗಾರಗಳು ಮತ್ತು ವಿಚಾರ ಸಂಕಿರಣ ಇತರ ಕಾರ್ಯಕ್ರಮಗಳನ್ನು ಒಳಗೊಂಡಿವೆ. WHO mYoga ಅಪ್ಲಿಕೇಶನ್, ನಮಸ್ತೆ ಆ್ಯಪ್, ವೈ-ಬ್ರೇಕ್ ಅಪ್ಲಿಕೇಶನ್ ಮತ್ತು ವಿವಿಧ ಜನ ಸ್ನೇಹಿ ಚಟುವಟಿಕೆಗಳು ಮತ್ತು ಕಾರ್ಯಕ್ರಮಗಳನ್ನು ಬಳಸಿಕೊಂಡು ಸಚಿವಾಲಯವು ಯೋಗದ ಪ್ರಯೋಜನಗಳನ್ನು ಪ್ರಚುರ ಪಡಿಸುತ್ತದೆ. ಜೊತೆಗೆ ಫೋಟೋ ಸ್ಪರ್ಧೆ, ರಸಪ್ರಶ್ನೆ, ಚರ್ಚೆ, ಪ್ರತಿಜ್ಞೆ ಸ್ವೀಕಾರ, ಸಮೀಕ್ಷೆ, ಜಿಂಗಲ್ಸ್  ಇತ್ಯಾದಿಗಳನ್ನು ಒಳಗೊಂಡಂತೆ MyGov ಪ್ಲಾಟ್‌ಫಾರ್ಮ್‌ನಲ್ಲಿ ಅನೇಕ ಚಟುವಟಿಕೆಗಳನ್ನು ಆರಂಭಿಸಲಾಗುವುದು. 

*******



(Release ID: 1811627) Visitor Counter : 219