ಪ್ರಧಾನ ಮಂತ್ರಿಯವರ ಕಛೇರಿ
ಯೋಗಾಭ್ಯಾಸಕ್ಕಾಗಿ ಹಲವು ರಾಷ್ಟ್ರಗಳ ಜನರನ್ನು ಒಟ್ಟುಗೂಡಿಸಿದ ಕತಾರ್ ರಾಜಧಾನಿ ದೋಹಾದಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಕಾರ್ಯ ಶ್ಲಾಘಿಸಿದ ಪ್ರಧಾನ ಮಂತ್ರಿ
Posted On:
26 MAR 2022 9:11AM by PIB Bengaluru
ಯೋಗಾಭ್ಯಾಸದ ಮಹತ್ವ ಕುರಿತು ಅರಿವು ಮೂಡಿಸಲು ಮತ್ತು ಯೋಗಭ್ಯಾಸ ನಡೆಸಲು ಹಲವಾರು ರಾಷ್ಟ್ರಗಳ ಜನರನ್ನು ಒಟ್ಟುಗೂಡಿಸಲು ಕತಾರ್ ರಾಜಧಾನಿ ದೋಹಾದಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಅಧಿಕಾರಿಗಳು ಮತ್ತು ಸಿಬ್ಬಂದಿ ನಡೆಸಿದ ಮಹತ್ತರ ಪ್ರಯತ್ನಗಳನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶ್ಲಾಘಿಸಿದ್ದಾರೆ. ಯೋಗವು ಸದೃಢ ಆರೋಗ್ಯ ಮತ್ತು ಸ್ವಾಸ್ಥ್ಯದ ಅನ್ವೇಷಣೆಯಲ್ಲಿ ಇಡೀ ವಿಶ್ವವನ್ನು ಒಂದುಗೂಡಿಸುತ್ತದೆ ಎಂದು ಅವರು ತಿಳಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನ ಮಂತ್ರಿ;
"ಯೋಗಾಸನವು ಉತ್ತಮಆರೋಗ್ಯ ಮತ್ತು ಸ್ವಾಸ್ಥ್ಯದ ಅನ್ವೇಷಣೆಯಲ್ಲಿ ಜಗತ್ತನ್ನು ಒಂದುಗೂಡಿಸುತ್ತಿದೆ. ಯೋಗಾಭ್ಯಾಸಕ್ಕಾಗಿ ಹಲವಾರು ರಾಷ್ಟ್ರಗಳ ಜನರನ್ನು ಒಟ್ಟುಗೂಡಿಸುವ ದೋಹಾ ಭಾರತೀಯ ರಾಯಭಾರಿ ಕಚೇರಿಯ ಕಾರ್ಯ ಒಂದು ಉತ್ತಮ ಪ್ರಯತ್ನ." ಎಂದಿದ್ದಾರೆ.
***
(Release ID: 1810038)
Visitor Counter : 210
Read this release in:
English
,
Urdu
,
Hindi
,
Marathi
,
Manipuri
,
Assamese
,
Bengali
,
Punjabi
,
Gujarati
,
Odia
,
Tamil
,
Telugu
,
Malayalam