ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಹೈದರಾಬಾದಿನ ಭೋಯಿಗುಡದ ಬೆಂಕಿ ದುರಂತದಲ್ಲಿ ಸಂಭವಿಸಿದ ಪ್ರಾಣಹಾನಿಗೆ ಪ್ರಧಾನಮಂತ್ರಿ ಸಂತಾಪ; ಸಂತ್ರಸ್ತರಿಗೆ ಪ್ರಧಾನ ಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿಯಿಂದ ಸಹಾಯಧನ.

Posted On: 23 MAR 2022 11:30AM by PIB Bengaluru

ಹೈದರಾಬಾದ್ ನ ಭೋಯಿಗುಡದ ಬೆಂಕಿ ದುರಂತದಲ್ಲಿ ಸಂಭವಿಸಿದ ಜೀವಹಾನಿಯ ಬಗ್ಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ.

ಪ್ರಧಾನಮಂತ್ರಿಗಳು ಅನುಕಂಪದ ಅನುದಾನ ಅನುಮೋದಿಸಿದ್ದಾರೆ. ಪ್ರಧಾನಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿ(ಪಿ.ಎಂ.ಎನ್.ಆರ್.ಎಫ್.)ಯಿಂದ ತಲಾ  2 ಲಕ್ಷ ರೂಪಾಯಿಗಳನ್ನು ಮೃತರ ವಾರಸುದಾರ ಸಂಬಂಧಿಕರಿಗೆ ನೀಡಲಾಗುತ್ತದೆ.

ಟ್ವೀಟ್ ಗಳ ಸರಣಿ ಸಂದೇಶದಲ್ಲಿ, ಪ್ರಧಾನಮಂತ್ರಿ ಕಚೇರಿ ಹೀಗೆ ಹೇಳಿದೆ;

"ಹೈದರಾಬಾದ್ ನ ಭೋಯಿಗುಡದಲ್ಲಿ ಸಂಭವಿಸಿದ ಬೆಂಕಿ ದುರಂತದಲ್ಲಾಗಿರುವ ಪ್ರಾಣಹಾನಿಯಿಂದ ಬಹಳ ನೋವಾಗಿದೆ. ದುಃಖದ ಈ ಸಮಯದಲ್ಲಿ ನನ್ನ ಆಲೋಚನೆಗಳು ದುಃಖತಪ್ತ ಕುಟುಂಬಗಳೊಂದಿಗೆ ಇವೆ. ಪ್ರಧಾನಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿಯಿಂದ ತಲಾ ರೂ. 2 ಲಕ್ಷ ರೂಪಾಯಿಗಳ ಪರಿಹಾರವನ್ನು ಮೃತರ ವಾರಸುದಾರ ಸಂಬಂಧಿಕರಿಗೆ ನೀಡಲಾಗುತ್ತದೆ. : ಪ್ರಧಾನಮಂತ್ರಿ@narendramodi"

"హైదరాబాద్‌లోని భోయిగూడలో జరిగిన ఘోర అగ్నిప్రమాదంలో ప్రాణ నష్టం జరగడం బాధాకరం. ఈ దుఃఖ సమయంలో మృతుల కుటుంబాలకు నా సానుభూతి తెలియజేస్తున్నాను.  PMNRF నుండి ఒక్కొక్కరికి 2 లక్షలు ఎక్స్ గ్రేషియా మరణించిన వారి కుటుంబాలకు ఇవ్వబడుతుంది: PM @narendramodi"

***


(Release ID: 1808623) Visitor Counter : 151