ಪ್ರಧಾನ ಮಂತ್ರಿಯವರ ಕಛೇರಿ
ವಿಶ್ವ ಜಲ ದಿನದಂದು ಪ್ರತಿ ಹನಿ ನೀರನ್ನು ಉಳಿಸುವ ಸಂಕಲ್ಪ ಕೈಗೊಳ್ಳುವಂತೆ ಜನರಿಗೆ ಕರೆ ನೀಡಿದ ಪ್ರಧಾನಿ
Posted On:
22 MAR 2022 10:33AM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ವಿಶ್ವ ಜಲ ದಿನದಂದು ಪ್ರತಿ ಹನಿ ನೀರನ್ನು ಉಳಿಸುವ ಸಂಕಲ್ಪ ಕೈಗೊಳ್ಳುವಂತೆ ಜನರನ್ನು ಕೋರಿದ್ದಾರೆ. ಈ ಸಂದರ್ಭದಲ್ಲಿ, ನೀರನ್ನು ಉಳಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವ ಎಲ್ಲಾ ವ್ಯಕ್ತಿಗಳು ಮತ್ತು ಸಂಸ್ಥೆಗಳನ್ನು ಅವರು ಶ್ಲಾಘಿಸಿದ್ದಾರೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಪ್ರಧಾನಮಂತ್ರಿಯವರು,
"ಕಳೆದ ಕೆಲವು ವರ್ಷಗಳಲ್ಲಿ, ನೀರಿನ ಸಂರಕ್ಷಣೆಯು ಒಂದು ಜನಾಂದೋಲನವಾಗಿ ಮಾರ್ಪಟ್ಟಿರುವುದನ್ನು ನೋಡಿ ಹೃದಯ ತುಂಬಿ ಬಂದಿದೆ. ರಾಷ್ಟ್ರದ ಎಲ್ಲಾ ಭಾಗಗಳಲ್ಲಿ ನವೀನ ಪ್ರಯತ್ನಗಳು ನಡೆಯುತ್ತಿವೆ. ನೀರನ್ನು ಉಳಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವ ಎಲ್ಲಾ ವ್ಯಕ್ತಿಗಳು ಮತ್ತು ಸಂಸ್ಥೆಗಳನ್ನು ನಾನು ಶ್ಲಾಘಿಸಲು ಬಯಸುತ್ತೇನೆ.”
"अद्भिः सर्वाणि भूतानि जीवन्ति प्रभवन्ति च।।
“ವಿಶ್ವ ಜಲ ದಿನದಂದು, ಪ್ರತಿ ಹನಿ ನೀರನ್ನು ಉಳಿಸುವ ನಮ್ಮ ಪ್ರತಿಜ್ಞೆಯನ್ನು ಪುನರುಚ್ಚರಿಸೋಣ. ಜಲ ಸಂರಕ್ಷಣೆ ಮತ್ತು ನಮ್ಮ ನಾಗರಿಕರಿಗೆ ಶುದ್ಧ ಕುಡಿಯುವ ನೀರಿನ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ನಮ್ಮ ರಾಷ್ಟ್ರವು ʻಜಲ ಜೀವನ್ ಮಿಷನ್ʼನಂತಹ ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿದೆ.”
"ಜಲ ಜೀವನ್ ಮಿಷನ್ ಯೋಜನೆಯು ತಾಯಂದಿರು ಮತ್ತು ಸಹೋದರಿಯರ ಜೀವನವನ್ನು ಸುಲಭಗೊಳಿಸುವಲ್ಲಿ ಅತ್ಯಂತ ಪರಿಣಾಮಕಾರಿ ಎಂದು ಸಾಬೀತಾಗಿದೆ. ಜನರ ಪಾಲ್ಗೊಳ್ಳುವಿಕೆಯೊಂದಿಗೆ, ಮನೆಮನೆಗೆ ನಲ್ಲಿಯಿಂದ ನೀರನ್ನು ತಲುಪಿಸುವ ಸಂಕಲ್ಪವು ಈಡೇರುತ್ತಿದೆ."
"ನಾವೆಲ್ಲರೂ ಒಟ್ಟಾಗಿ ನೀರಿನ ಸಂರಕ್ಷಣೆಯನ್ನು ಮತ್ತಷ್ಟು ಹೆಚ್ಚಿಸೋಣ ಮತ್ತು ಸುಸ್ಥಿರ ಭೂಮಿಗೆ ಕೊಡುಗೆ ನೀಡೋಣ. ಉಳಿಸಲಾದ ಪ್ರತಿಯೊಂದು ಹನಿಯೂ ನಮ್ಮ ಜನರಿಗೆ ಸಹಾಯ ಮಾಡುತ್ತದೆ ಮತ್ತು ನಮ್ಮ ಪ್ರಗತಿಯನ್ನು ಹೆಚ್ಚಿಸುತ್ತದೆ,ʼʼ ಎಂದಿದ್ದಾರೆ.
***
(Release ID: 1808057)
Visitor Counter : 218
Read this release in:
Malayalam
,
English
,
Urdu
,
Marathi
,
Hindi
,
Manipuri
,
Bengali
,
Assamese
,
Punjabi
,
Gujarati
,
Odia
,
Tamil
,
Telugu