ಪ್ರಧಾನ ಮಂತ್ರಿಯವರ ಕಛೇರಿ
ಮಹಾತ್ಮಾ ಗಾಂಧಿ ಮತ್ತು ದಂಡಿಯವರೆಗೆ ಪಾದಯಾತ್ರೆ ಕೈಗೊಂಡ ಎಲ್ಲ ಮಹಾನ್ ವ್ಯಕ್ತಿಗಳಿಗೆ ಪ್ರಧಾನಮಂತ್ರಿಯವರಿಂದ ಗೌರವ ನಮನ
प्रविष्टि तिथि:
12 MAR 2022 10:39AM by PIB Bengaluru
ಅನ್ಯಾಯವನ್ನು ಪ್ರತಿಭಟಿಸಲು ಮತ್ತು ನಮ್ಮ ರಾಷ್ಟ್ರದ ಸ್ವಾಭಿಮಾನವನ್ನು ರಕ್ಷಿಸುವ ಸಲುವಾಗಿ ದಂಡಿಗೆ ಪಾದಯಾತ್ರೆ ಕೈಗೊಂಡ ಮಹಾತ್ಮಾ ಗಾಂಧಿ ಮತ್ತು ಎಲ್ಲ ಗಣ್ಯ ವ್ಯಕ್ತಿಗಳಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಗೌರವ ನಮನ ಸಲ್ಲಿಸಿದ್ದಾರೆ.
2019ರಲ್ಲಿ ರಾಷ್ಟ್ರೀಯ ಉಪ್ಪಿನ ಸತ್ಯಾಗ್ರಹ ಸ್ಮಾರಕವನ್ನು ದೇಶಕ್ಕೆ ಸಮರ್ಪಿಸಿದ ಸಂದರ್ಭದ ಭಾಷಣವನ್ನು ಪ್ರಧಾನಮಂತ್ರಿಯವರು ಹಂಚಿಕೊಂಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಿ,
"ಅನ್ಯಾಯವನ್ನು ಪ್ರತಿಭಟಿಸಲು ಮತ್ತು ನಮ್ಮ ರಾಷ್ಟ್ರದ ಸ್ವಾಭಿಮಾನವನ್ನು ರಕ್ಷಿಸಲು ದಂಡಿಗೆ ಪಾದಯಾತ್ರೆ ಕೈಗೊಂಡ ಎಲ್ಲ ಮಹಾನ್ ವ್ಯಕ್ತಿಗಳಿಗೆ ಮತ್ತು ಗಾಂಧಿ ಜೀ ಅವರಿಗೆ ಗೌರವ ನಮನಗಳು.
2019ರಲ್ಲಿ ದಂಡಿಯಲ್ಲಿ ರಾಷ್ಟ್ರೀಯ ಉಪ್ಪಿನ ಸತ್ಯಾಗ್ರಹ ಸ್ಮಾರಕವನ್ನು ದೇಶಕ್ಕೆ ಸಮರ್ಪಿಸಿದಾಗ ಮಾಡಿದ ನನ್ನ ಭಾಷಣವನ್ನು ಹಂಚಿಕೊಳ್ಳುತ್ತಿದ್ದೇನೆ,” ಎಂದಿದ್ದಾರೆ.
***
(रिलीज़ आईडी: 1805404)
आगंतुक पटल : 281
इस विज्ञप्ति को इन भाषाओं में पढ़ें:
English
,
Urdu
,
हिन्दी
,
Marathi
,
Manipuri
,
Bengali
,
Assamese
,
Punjabi
,
Gujarati
,
Odia
,
Tamil
,
Telugu
,
Malayalam