ರೈಲ್ವೇ ಸಚಿವಾಲಯ

ರೈಲಿನೊಳಗೆ ಲಿನಿನ್(ಹಾಸು ಬಟ್ಟೆಗಳು), ಹೊದಿಕೆಗಳು ಮತ್ತು ಪರದೆಗಳನ್ನು ಒದಗಿಸುವ ಮೇಲಿನ ನಿರ್ಬಂಧವನ್ನು ತಕ್ಷಣವೇ ಜಾರಿಗೆ ಬರುವಂತೆ ರೈಲ್ವೆ ಹಿಂತೆಗೆದುಕೊಂಡಿದೆ

Posted On: 10 MAR 2022 4:45PM by PIB Bengaluru

ಕೋವಿಡ್-19 ರ ಕಾರಣದಿಂದಾಗಿ ಸಾಂಕ್ರಾಮಿಕ ಮತ್ತು ಕೋವಿಡ್ ನಿಯಮಗಳನ್ನು  ಗಮನದಲ್ಲಿಟ್ಟುಕೊಂಡು, ರೈಲುಗಳಲ್ಲಿ ಪ್ರಯಾಣಿಕರ ಚಲನೆಗಾಗಿ ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೋಟೋಕಾಲ್ (ಎಸ್‌ಒಪಿ) ಅನ್ನು ಹೊರಡಿಸಲಾಗಿತ್ತು. ಇದು ರೈಲುಗಳ ಒಳಗೆ ಲಿನಿನ್, ಹೊದಿಕೆಗಳು ಮತ್ತು ಪರದೆಗಳ ಮೇಲೆ ನಿರ್ಬಂಧವನ್ನು ವಿಧಿಸಿತ್ತು.

ರೈಲಿನೊಳಗೆ ಲಿನಿನ್, ಹೊದಿಕೆಗಳು ಮತ್ತು ಪರದೆಗಳ ಪೂರೈಕೆಗೆ ಸಂಬಂಧಿಸಿದಂತೆ ಮೇಲಿನ ನಿರ್ಬಂಧವನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಿಂಪಡೆಯಲು ರೈಲ್ವೆ ಈಗ ನಿರ್ಧರಿಸಿದೆ ಮತ್ತು ಪೂರ್ವ ಕೋವಿಡ್ ಅವಧಿಯಲ್ಲಿ ಅನ್ವಯವಾಗುವಂತೆ ಅದನ್ನು ಒದಗಿಸಬಹುದಾಗಿದೆ.

***



(Release ID: 1804812) Visitor Counter : 275