ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಕೇಂದ್ರ ಬಜೆಟ್ ಘೋಷಣೆಗಳ ಅನುಷ್ಠಾನಕ್ಕೆ ಪ್ರಧಾನಮಂತ್ರಿ ಅವರಿಂದ 11 ವೆಬಿನಾರ್‌ಗಳ ಮೂಲಕ ಪರಿಹಾರಾತ್ಮಕ ಕ್ರಮಗಳ ಸಮಾಲೋಚನೆ ಮತ್ತು ಚರ್ಚೆ


ಬಜೆಟ್ ಸಂಬಂಧಿತ 11 ವೆಬಿನಾರ್‌ಗಳಲ್ಲಿ ಪ್ರಧಾನಮಂತ್ರಿ ಭಾಗಿ

ಈ ವೆಬಿನಾರ್ ಗಳಲ್ಲಿ 40 ಸಾವಿರ ಪಾಲುದಾರರು ಭಾಗಿ

ವಾಣಿಜ್ಯೋದ್ಯಮಿಗಳು, ಎಂಎಸ್‌ಎಂಇಗಳು, ರಫ್ತುದಾರರು, ಜಾಗತಿಕ ಹೂಡಿಕೆದಾರರು, ನವೋದ್ಯಮಗಳು ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪ್ರತಿನಿಧಿಗಳು ವೆಬಿನಾರ್‌ಗಳಲ್ಲಿ ಭಾಗಿ

ಬಜೆಟ್‌ನ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಅತ್ಯಂತ ಫಲಪ್ರದ ಸಲಹೆ, ಸೂಚನೆ ಸಲಹೆ ಸ್ವೀಕರಿಸಿದ ಕೇಂದ್ರ ಸರ್ಕಾರ

ಬಜೆಟ್ ಪಾಲುದಾರರಲ್ಲಿ ಮಾಲೀಕತ್ವ ಪ್ರಜ್ಞೆ ಸೃಷ್ಟಿಸಲು ಮತ್ತು ಕಾಲಮಿತಿಯಲ್ಲಿ ಬಜೆಟ್ ಪ್ರಸ್ತಾವನೆಗಳನ್ನು ಅನುಷ್ಠಾನಗೊಳಿಸಲು ವೆಬಿನಾರ್ ಗಳು ಸಹಾಯಕ

Posted On: 09 MAR 2022 6:57PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಹೂಡಿಕೆ ಮತ್ತು ಸಾರ್ವಜನಿಕ ಸ್ವತ್ತು ನಿರ್ವಹಣೆ ಇಲಾಖೆಯ (ಡಿಐಪಿಎಎಂ) ಬಜೆಟ್ ಸಂಬಂಧಿತ ಪ್ರಸ್ತಾವನೆಗಳನ್ನು ಚರ್ಚಿಸಲು ವೆಬಿನಾರ್ ಉದ್ದೇಶಿಸಿ ಮಾತನಾಡಿದರು. ಪ್ರಧಾನ ಮಂತ್ರಿ ಅವರು ಮಾತನಾಡಿದ 11ನೇ ವೆಬಿನಾರ್ ಇದಾಗಿದೆ. ಇದರೊಂದಿಗೆ ಬಜೆಟ್ ಸಂಬಂಧಿತ ವೆಬಿನಾರ್‌ಗಳ ಸರಣಿ ಮುಕ್ತಾಯವಾಗಿದೆ. ಉನ್ನತ ಶಿಕ್ಷಣ, ಗ್ರಾಮೀಣಾಭಿವೃದ್ಧಿ, ಕೃಷಿ, ರಕ್ಷಣೆ, ಆರೋಗ್ಯ, ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಉತ್ತೇಜನಾ ಇಲಾಖೆ(ಡಿಪಿಐಐಟಿ), ಸಾರ್ವಜನಿಕ ಸೇವಾ ಪ್ರಕಟಣೆ(ಪಿಎಸ್ಎ), ಮನ್ರೇಗಾ, ಔಷಧ ಜಾರಿ ಆಡಳಿತ(ಡಿಇಎ) ಮತ್ತು ಹೂಡಿಕೆ ಮತ್ತು ಸಾರ್ವಜನಿಕ ಸ್ವತ್ತು ನಿರ್ವಹಣೆ ಇಲಾಖೆಯ (ಡಿಐಪಿಎಎಂ) ಸಚಿವಾಲಯಗಳು ಮತ್ತು ಇಲಾಖೆಗಳಿಗೆ ಸಂಬಂಧಿಸಿದ ಬಜೆಟ್ ವೆಬಿನಾರ್‌ ಗಳಲ್ಲಿ ಪ್ರಧಾನಮಂತ್ರಿ ಅವರು ಭಾಗವಹಿಸಿದ್ದರು. ಕೇಂದ್ರ ಬಜೆಟ್-2022 ದೇಶದ ಆರ್ಥಿಕ ಬೆಳವಣಿಗೆಗೆ ಮತ್ತು ನಮ್ಮ ಜನರ ಯೋಗಕ್ಷೇಮವನ್ನು ಹೆಚ್ಚಿಸಲು ಹಲವಾರು ಘೋಷಣೆಗಳನ್ನು ಮಾಡಿದೆ. ಈ ವೆಬಿನಾರ್‌ಗಳು ಬಜೆಟ್‌ನ ಆವೇಗ ಉಳಿಸಿಕೊಳ್ಳುವ ಉದ್ದೇಶದಿಂದ ನಡೆಸಲಾಗಿದೆ. ಬಜೆಟ್ ಪ್ರಸ್ತಾವನೆಗಳ ಅನುಷ್ಠಾನದಲ್ಲಿ ಎಲ್ಲಾ ಪಾಲುದಾರರ ಮಾಲೀಕತ್ವ ಪ್ರಜ್ಞೆಯನ್ನು ಸೃಷ್ಟಿಸಲು ಒತ್ತು ನೀಡಲಾಗಿದೆ. ಈ ವೆಬಿನಾರ್‌ಗಳು ಸ್ಮಾರ್ಟ್ ಕೃಷಿ, ಪಿಎಂ ಗತಿಶಕ್ತಿ, ರಕ್ಷಣೆ, ಡಿಜಿಟಲ್ ಶಿಕ್ಷಣ ಮತ್ತು ಆತ್ಮನಿರ್ಭರ್ ನಂತಹ ವೈವಿಧ್ಯಮಯ ವಿಷಯಗಳ ಜತೆಗೆ, ಕ್ರಿಯಾತ್ಮಕ ಕೌಶಲ್ಯ, ಎಲ್ಲರನ್ನೂ ಒಳಗೊಂಡ ಪ್ರಗತಿ ಮತ್ತು ಸಮಾನ ಆರೋಗ್ಯ ಸಂರಕ್ಷಣಾ ಸೇವೆ ವಿತರಣೆ, ಮೇಕ್ ಇನ್ ಇಂಡಿಯಾ ಮತ್ತು ಮಹತ್ವಾಕಾಂಕ್ಷೆಯ ಆರ್ಥಿಕತೆಗೆ ಹಣಕಾಸು ಒದಗಿಸುವ ಕ್ರಮಗಳ ವ್ಯಾಪ್ತಿಯನ್ನು ಒಳಗೊಂಡಿವೆ.

ಬಜೆಟ್‌ನ ಪ್ರಮುಖ ಪಾಲುದಾರರಲ್ಲಿ ಮಾಲೀಕತ್ವ ಪ್ರಜ್ಞೆಯನ್ನು ಅಭಿವೃದ್ಧಿಪಡಿಸುವುದು ಈ ವೆಬಿನಾರ್‌ಗಳ ಆಯೋಜನೆಯ ಪ್ರಮುಖ ಉದ್ದೇಶವಾಗಿದೆ. ವಿವಿಧ ಸಚಿವಾಲಯಗಳು ಮತ್ತು ಇಲಾಖೆಗಳಿಗೆ ಹೊಸ ಆರ್ಥಿಕ ವರ್ಷ ಪ್ರಾರಂಭವಾದ ತಕ್ಷಣ ಬಜೆಟ್ ಪ್ರಸ್ತಾವನೆಗಳನ್ನು ಜಾರಿ ಮಾಡಲು ಸಹಾಯ ಮಾಡುತ್ತದೆ. ಕಾಲಮಿತಿಯಲ್ಲಿ ಕಾರ್ಯಕ್ರಮಗಳ ಅನುಷ್ಠಾನವನ್ನು ಖಚಿತಪಡಿಸುತ್ತದೆ. ವಿವಿಧ ಪಾಲುದಾರರೊಂದಿಗಿನ ಸಮಾಲೋಚನೆಯು ಅವರ ಪ್ರಾಯೋಗಿಕ, ಜಾಗತಿಕ ಪರಿಣತಿ ಮತ್ತು ಅನುಭವವನ್ನು ತರಲು ಮತ್ತು ಕೊರತೆಯನ್ನು ಗುರುತಿಸಲು ಸಹಾಯ ಮಾಡುತ್ತದೆ. ಬಜೆಟ್ ಅನ್ನು ಫೆಬ್ರವರಿ 1ಕ್ಕೆ ಬದಲಾಯಿಸಿರುವುದು ಮತ್ತು ವೆಬಿನಾರ್‌ ಸಂವಾದಗಳು ರಾಜ್ಯ ಸರ್ಕಾರಗಳಿಗೆ ಆದ್ಯತೆಗಳನ್ನು ಆಯ್ಕೆ ಮಾಡಿಕೊಳ್ಳಲು, ಬಜೆಟ್ ಪ್ರಸ್ತಾವನೆಗಳನ್ನು ಉತ್ತಮವಾಗಿ ಜಾರಿ ಮಾಡಲು ಅನುವು ಮಾಡಿಕೊಡುತ್ತದೆ.

ವೆಬಿನಾರ್‌ಗಳಲ್ಲಿ ಉದ್ಯಮಿಗಳು, ಎಂಎಸ್‌ಎಂಇಗಳು, ರಫ್ತುದಾರರು, ಜಾಗತಿಕ ಹೂಡಿಕೆದಾರರು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪ್ರತಿನಿಧಿಗಳು, ನವೋದ್ಯಮ ವಲಯದ ಯುವ ಉದ್ಯಮಶೀಲರು ಸೇರಿದಂತೆ ಸುಮಾರು 40 ಸಾವಿರ ಪಾಲುದಾರರು ಭಾಗವಹಿಸಿದ್ದರು. ಪ್ರತಿ ವೆಬಿನಾರ್ ನಲ್ಲೂ ಸಮಗ್ರ ಗುಂಪು ಚರ್ಚೆಗಳು ಮತ್ತು ವಿಷಯಾಧರಿತ ಸಂವಾದಗಳನ್ನು ಆಯೋಜಿಸಲಾಗಿತ್ತು. ಈ ವೆಬಿನಾರ್‌ಗಳಲ್ಲಿ ಸರ್ಕಾರವು  ಮೌಲ್ಯಯುತ ಸಲಹೆಗಳನ್ನು ಸ್ವೀಕರಿಸಿದೆ.  ಇದು ಬಜೆಟ್ ಪ್ರಕಟಣೆಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಮತ್ತಷ್ಟು ಸಹಾಯ ಮಾಡುತ್ತದೆ.

 

***


(Release ID: 1804732) Visitor Counter : 193