ಪ್ರಧಾನ ಮಂತ್ರಿಯವರ ಕಛೇರಿ

ಕನ್ಯಾ ಶಿಕ್ಷಣ ಪ್ರವೇಶ ಉತ್ಸವ ಅಭಿಯಾನದ ಬಗ್ಗೆ ಪ್ರಧಾನಿ ಶ್ಲಾಘನೆ

Posted On: 08 MAR 2022 2:00PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 'ಕನ್ಯಾ ಶಿಕ್ಷಣ ಪ್ರವೇಶ ಉತ್ಸವ ಅಭಿಯಾನʼವನ್ನು "ಹೆಚ್ಚಿನ ಸಂಖ್ಯೆಯ ಹುಡುಗಿಯರಿಗೆ ಶಿಕ್ಷಣದ ಸಂತೋಷವನ್ನು ಖಾತರಿಪಡಿಸುವ ಒಂದು ಅನುಕರಣೀಯ ಪ್ರಯತ್ನವಾಗಿದೆ" ಎಂದು ಬಣ್ಣಿಸಿದ್ದಾರೆ. ಅಭಿಯಾನವನ್ನು ಯಶಸ್ವಿಗೊಳಿಸಲು ಪ್ರಯತ್ನ ಮಾಡುವಂತೆ ಅವರು ಕೋರಿದ್ದಾರೆ. ಪ್ರತಿಯೊಬ್ಬ ಯುವತಿಯೂ ಶಿಕ್ಷಣ ಮತ್ತು ಕೌಶಲ್ಯವನ್ನು ಪಡೆಯುವಂತೆ  ಖಚಿತಪಡಿಸಿಕೊಳ್ಳಲು ಈ ಅಭಿಯಾನದ ಧ್ಯೇಯವಾಗಿದೆ.
ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಜುಬಿನ್ ಇರಾನಿ ಅವರ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಪ್ರಧಾನಿಯವರು ಹೀಗೆ ಹೇಳಿದ್ದಾರೆ: 

"ಹೆಚ್ಚಿನ ಸಂಖ್ಯೆಯ ಹುಡುಗಿಯರು ಶಿಕ್ಷಣದ ಸಂತೋಷವನ್ನು ಪಡೆಯುವಂತೆ ಖಾತರಿಪಡಿಸುವ ಒಂದು ಅನುಕರಣೀಯ ಪ್ರಯತ್ನ ಇದಾಗಿದೆ! ಒಂದು ರಾಷ್ಟ್ರವಾಗಿ ನಾವೆಲ್ಲರೂ ಒಗ್ಗೂಡಿ ಈ ಆಂದೋಲನವನ್ನು ಯಶಸ್ವಿಗೊಳಿಸೋಣ."

 


***(Release ID: 1803963) Visitor Counter : 245