ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ

ಭಾರತದ ರಾಷ್ಟ್ರಪತಿ ಶ್ರೀ ರಾಮ್ ನಾಥ್ ಕೋವಿಂದ್ ಅವರು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ 2020 ಮತ್ತು 2021 ನೇ ಸಾಲಿನ 'ನಾರಿ ಶಕ್ತಿ ಪುರಸ್ಕಾರ’ ಪ್ರದಾನ ಮಾಡಿದರು.


ಇಪ್ಪತ್ತೆಂಟು ಪ್ರಶಸ್ತಿಗಳು - 2020 ಮತ್ತು 2021 ಕ್ಕೆ ತಲಾ 14 ರಂತೆ, ಮಹಿಳಾ ಸಬಲೀಕರಣದ ಕಡೆಗೆ ಅಸಾಧಾರಣ ಕಾರ್ಯವನ್ನು ಗುರುತಿಸಿ 29 ಮಹಿಳೆಯರಿಗೆ ಪ್ರದಾನ ಮಾಡಲಾಯಿತು.

Posted On: 08 MAR 2022 11:48AM by PIB Bengaluru

ಇಂದು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ನಡೆದ ವಿಶೇಷ ಸಮಾರಂಭದಲ್ಲಿ ಭಾರತದ ರಾಷ್ಟ್ರಪತಿ ಶ್ರೀ ರಾಮ್ ನಾಥ್ ಕೋವಿಂದ್ ಅವರು  2020 ಮತ್ತು 2021 ಸಾಲಿನ ' ನಾರಿ ಶಕ್ತಿ ಪುರಸ್ಕಾರ'  ಪ್ರದಾನ ಮಾಡಿದರು. ಹಾಗೆಯೇ 2020 ಮತ್ತು 2021 ನೇ ಸಾಲಿನಲ್ಲಿ 29 ಅತ್ಯುತ್ತಮ ಮತ್ತು ಅಸಾಧಾರಣ ಮಹಿಳಾ ಸಾಧಕರಿಗೆ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.

 

ಇಪ್ಪತ್ತೆಂಟು ಪ್ರಶಸ್ತಿಗಳು - (2020 ಮತ್ತು 2021 ವರ್ಷಕ್ಕೆ ತಲಾ 14 ರಂತೆ)- ಮಹಿಳೆಯರ ಸಬಲೀಕರಣಕ್ಕಾಗಿ ವಿಶೇಷವಾಗಿ ದುರ್ಬಲ ಮತ್ತು ಸಮಾಜದ ಅಂಚಿನಲ್ಲಿರುವವರ ಅಸಾಧಾರಣ ಕೆಲಸವನ್ನು ಗುರುತಿಸಿ 29 ಮಹಿಳೆಯರಿಗೆ ಪ್ರಶಸ್ತಿ ನೀಡಲಾಯಿತು.

ಮಹಿಳೆಯರ ಸಾಧನೆಗಳನ್ನು ಅಂಗೀಕರಿಸಲು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ಮಹಿಳೆಯರು ಮತ್ತು ಸಂಸ್ಥೆಗಳಿಗೆ ನಾರಿ ಶಕ್ತಿ ಪುರಸ್ಕಾರವನ್ನು ನೀಡಲಾಗುತ್ತದೆ. ಮಹಿಳಾ ಸಬಲೀಕರಣ ಮತ್ತು ಸಾಮಾಜಿಕ ಕಲ್ಯಾಣದ ಉದ್ದೇಶಕ್ಕಾಗಿ ಅವರ ಅವಿರತ ಸೇವೆಯನ್ನು ಗುರುತಿಸಿ ಮತ್ತು ಸಮಾಜದಲ್ಲಿ ಮಹಿಳೆಯರನ್ನು ಗೇಮ್ ಚೇಂಜರ್ ಮತ್ತು ಧನಾತ್ಮಕ ಬದಲಾವಣೆಯ ವೇಗವರ್ಧಕವಾಗಿ ಬಳಸಲಾಗುತ್ತದೆ.

COVID-19 ಸಾಂಕ್ರಾಮಿಕ ರೋಗವು ಪ್ರಚಲಿತದಲ್ಲಿದ್ದ ಕಾರಣ 2020 ರ ಪ್ರಶಸ್ತಿ ಪ್ರದಾನ ಸಮಾರಂಭವನ್ನು 2021 ರಲ್ಲಿ ನಡೆಸಲು ಸಾಧ್ಯವಾಗಲಿಲ್ಲ.

‘ನಾರಿ ಶಕ್ತಿ ಪುರಸ್ಕಾರ’ ಪುರಸ್ಕೃತರ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

***

 

 



(Release ID: 1803902) Visitor Counter : 224