ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ

ಅಂತಾರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ, ಗೌರವಾನ್ವಿತ ರಾಷ್ಟ್ರಪತಿ ಅವರಿಂದ ನಾಳೆ 29 ಸಾಧಕ ಮಹಿಳೆಯರಿಗೆ 2020 ಮತ್ತು 2021ನೇ ಸಾಲಿನ ಪ್ರತಿಷ್ಠಿತ ‘ನಾರಿ ಶಕ್ತಿ ಪುರಸ್ಕಾರ’ ಪ್ರದಾನ

Posted On: 07 MAR 2022 11:01AM by PIB Bengaluru

‘ಆಜಾದಿ ಕಾ ಅಮೃತ ಮಹೋತ್ಸವ’ದ ಭಾಗವಾಗಿ, ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ವಾರಪೂರ್ತಿ ಕಾರ್ಯಕ್ರಮಗಳು 2022 ಮಾರ್ಚ್ 1ರಿಂದ ದೆಹಲಿಯಲ್ಲಿ ಆರಂಭವಾಗಿವೆ. 2022 ಮಾರ್ಚ್ 8ರಂದು ಅಂದರೆ ನಾಳೆ ರಾಷ್ಟ್ರಪತಿ ಭವನದಲ್ಲಿ ನಡೆಯಲಿರುವ ವಿಶೇಷ ಸಮಾರಂಭದಲ್ಲಿ ಗೌರವಾನ್ವಿತ ರಾಷ್ಟ್ರಪತಿ ಶ್ರೀ ರಾಮ್ ನಾಥ್ ಕೋವಿಂದ್ ಅವರು 2020 ಮತ್ತು 2021ನೇ ಸಾಲಿನ ‘ನಾರಿ ಶಕ್ತಿ ಪುರಸ್ಕಾರ’ ಪ್ರದಾನ ಮಾಡಲಿದ್ದಾರೆ. ಕೋವಿಡ್-19 ಸಾಂಕ್ರಾಮಿಕ ಸೋಂಕು ಸೃಷ್ಟಿಸಿರುವ ಪ್ರಸ್ತುತ ಪರಿಸ್ಥಿತಿಯಿಂದಾಗಿ 2020ನೇ ಸಾಲಿನ ಪ್ರಶಸ್ತಿ ಪ್ರದಾನ ಸಮಾರಂಭವನ್ನು 2021ರಲ್ಲಿ ನಡೆಸಲು ಸಾಧ್ಯವಾಗಲಿಲ್ಲ.

ಪ್ರಶಸ್ತಿ ಪುರಸ್ಕೃತರ ಪ್ರಯತ್ನಗಳು ಮತ್ತು ಸಾಧನೆಗಳನ್ನು ಶ್ಲಾಘಿಸಲು, ಮಹಿಳಾ ಸಬಲೀಕರಣಕ್ಕೆ ಸಂಬಂಧಿಸಿದ ಕ್ಷೇತ್ರಗಳಲ್ಲಿ ಮತ್ತಷ್ಟು ಕೆಲಸ ಮಾಡುವಂತೆ ಪ್ರೇರೇಪಿಸಲು ಮತ್ತು ಉತ್ತಮ ಸಾಧನೆ ಮಾಡುವಂತೆ ಜನಸಾಮಾನ್ಯರನ್ನು ಪ್ರೇರೇಪಿಸಲು ಗೌರವಾನ್ವಿತ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪ್ರಶಸ್ತಿ ಪುರಸ್ಕೃತರೊಂದಿಗೆ ಸಂವಾದ ನಡೆಸಲಿದ್ದಾರೆ.

ಒಟ್ಟಾರೆ, 28 ಪ್ರಶಸ್ತಿಗಳನ್ನು (2020 ಮತ್ತು 2021ನೇ ಸಾಲಿನಲ್ಲಿ ತಲಾ 14 ಪ್ರಶಸ್ತಿಗಳು) 29 ವ್ಯಕ್ತಿಗಳಿಗೆ, ವಿಶೇಷವಾಗಿ ದುರ್ಬಲ ಮತ್ತು ನಿರ್ಲಕ್ಷಿತ ಮಹಿಳೆಯರ ಸಬಲೀಕರಣಕ್ಕಾಗಿ ವಿಶಿಷ್ಟ ಸೇವೆ ಸಲ್ಲಿಸಿರುವ ಸಾಧಕರ ಅಸಾಧಾರಣ ಕೆಲಸ ಗುರುತಿಸಿ, ಈ ಪ್ರತಿಷ್ಠಿತ ಪ್ರಶಸ್ತಿ ನೀಡಲಾಗುತ್ತಿದೆ.

‘ನಾರಿ ಶಕ್ತಿ ಪುರಸ್ಕಾರ’ವು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ಉಪಕ್ರಮವಾಗಿದೆ. ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ತರಲು, ಸಾಮಾಜಿಕ ವ್ಯವಸ್ಥೆಯನ್ನು ಸನ್ಮಾರ್ಗಕ್ಕೆ ಕೊಂಡೊಯ್ಯಲು ಅಸಾಧಾರಣ ಕೊಡುಗೆ ನೀಡುವ ಅಸಾಮಾನ್ಯ ಮಹಿಳೆಯರು ಮತ್ತು ಸಂಸ್ಥೆಗಳನ್ನು ಗುರುತಿಸಿ, ಅವರನ್ನು ಪ್ರೋತ್ಸಾಹಿಸಲು ಈ ಪ್ರಶಸ್ತಿ ನೀಡಲಾಗುತ್ತದೆ.

ಕನಸುಗಳನ್ನು ನನಸಾಗಿಸಲು ವಯಸ್ಸು, ಭೌಗೋಳಿಕ ಅಡೆತಡೆಗಳು ಅಥವಾ ಸಂಪನ್ಮೂಲಗಳು ಈ ಸಾಧಕರಿಗೆ ಅಡ್ಡಿಯಾಗಿಲ್ಲ. ಅವರ ಅದಮ್ಯ ಮನೋಭಾವವು ಸಮಾಜವನ್ನು ಮತ್ತು ವಿಶೇಷವಾಗಿ ಯುವ ಭಾರತೀಯ ಮನಸ್ಸುಗಳನ್ನು ಲಿಂಗ ಅಸಮಾನತೆ ಮತ್ತು ತಾರತಮ್ಯದ ವಿರುದ್ಧ ನಿಲ್ಲಲು ಪ್ರೇರೇಪಿಸುತ್ತಿದೆ. ಈ ಪ್ರಶಸ್ತಿಗಳು ಸಮಾಜದ ಪ್ರಗತಿಯಲ್ಲಿ ಮಹಿಳೆಯರನ್ನು ಸಮಾನ ಪಾಲುದಾರರನ್ನಾಗಿ ಗುರುತಿಸುವ ಪ್ರಾಮಾಣಿಕ ಪ್ರಯತ್ನವಾಗಿದೆ.

2020ನೇ ಸಾಲಿನ ನಾರಿ ಶಕ್ತಿ ಪುರಸ್ಕಾರದ ವಿಜೇತರನ್ನು ಉದ್ಯಮಶೀಲತೆ, ಕೃಷಿ, ನಾವೀನ್ಯತೆ, ಸಾಮಾಜಿಕ ಕಾರ್ಯ, ಕಲೆ ಮತ್ತು ಕರಕುಶಲ, ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ಗಣಿತಶಾಸ್ತ್ರ(STEMM) ಮತ್ತು ವನ್ಯಜೀವಿ ಸಂರಕ್ಷಣೆ ಮುಂತಾದ ವೈವಿಧ್ಯಮಯ ಕ್ಷೇತ್ರಗಳಿಂದ ಆಯ್ಕೆ ಮಾಡಲಾಗಿದೆ. ಅಂತೆಯೇ, 2021ನೇ ಸಾಲಿನ ನಾರಿ ಶಕ್ತಿ ಪುರಸ್ಕಾರ ವಿಜೇತರನ್ನು ಭಾಷಾಶಾಸ್ತ್ರ, ಉದ್ಯಮಶೀಲತೆ, ಕೃಷಿ, ಸಮಾಜಕಾರ್ಯ, ಕಲೆ ಮತ್ತು ಕರಕುಶಲ, ಮರ್ಚೆಂಟ್ ನೇವಿ, ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ಗಣಿತಶಾಸ್ತ್ರ(STEMM), ಶಿಕ್ಷಣ ಮತ್ತು ಸಾಹಿತ್ಯ, ಅಂಗವೈಕಲ್ಯ ಹಕ್ಕುಗಳು ಮತ್ತಿತರ ಕ್ಷೇತ್ರಗಳಿಂದ ಆಯ್ಕೆ ಮಾಡಲಾಗಿದೆ.

 

ಪ್ರಶಸ್ತಿ ಪುರಸ್ಕೃತರ ಪಟ್ಟಿ ಕೆಳಕಂಡಂತಿದೆ.

ನಾರಿ ಶಕ್ತಿ ಪುರಸ್ಕಾರ 2020

ಕ್ರಮಸಂಖ್ಯೆ

ಹೆಸರು

ರಾಜ್ಯ-ಕೇಂದ್ರಾಡಳಿತ ಪ್ರದೇಶ

ಕ್ಷೇತ್ರ

  1.  

ಅನಿತಾ ಗುಪ್ತ

ಬಿಹಾರ

ಸಾಮಾಜಿಕ ಉದ್ಯಮಶೀಲತೆ

  1.  

ಉಷಾ ಬೆನ್ ದಿನೇಶ್ ಭಾಯಿ ವಾಸವ

ಗುಜರಾತ್

ಸಾವಯವ ಕೃಷಿಕರು ಮತ್ತು ಬುಡಕಟ್ಟು ಕಾರ್ಯಕರ್ತೆ

  1.  

ನಸಿರಾ ಅಖ್ತರ್

ಜಮ್ಮು-ಕಾಶ್ಮೀರ

ಅನುಶೋಧಕಿ – ಪರಿಸರ ಸಂರಕ್ಷಣೆ

  1.  

ಸಂಧ್ಯಾ ಧಾರ್

ಜಮ್ಮು-ಕಾಶ್ಮೀರ

ಸಾಮಾಜಿಕ ಕಾರ್ಯಕರ್ತೆ

  1.  

ನಿವೃತಿ ರಾಯ್

ಕರ್ನಾಟಕ

ಕಂಟ್ರಿ ಹೆಡ್, ಇಂಟೆಲ್ ಇಂಡಿಯಾ

  1.  

ಟಿಫಾನಿ ಬ್ರಾರ್

ಕೇರಳ

ಸಾಮಾಜಿಕ ಕಾರ್ಯಕರ್ತ – ಅಂಧರಿಗೆ ಸೇವಾ ಕಾರ್ಯ

  1.  

ಪದ್ಮ ಯಂಗ್ ಚನ್

ಲಡಖ್

ಲೇಹ್ ಪ್ರದೇಶದಲ್ಲಿ ನಶಿಸಿದ ಪಾಕಪದ್ಧತಿ ಮತ್ತು ವಸ್ತ್ರಗಳ ಪುನರುಜ್ಜೀವನ ಕಾರ್ಯ

  1.  

ಜೊಧೈಯ ಬಾಯ್ ಬೈಗಾ

ಮಧ್ಯಪ್ರದೇಶ

ಬುಡಕಟ್ಟು ಬೈಗಾ ಕಲೆಯ ವರ್ಣ ಚಿತ್ರ ಕಲಾವಿದ

  1.  

ಸೇಲಿ ನಂದ್ ಕಿಶಓರ್ ಅಗವಾನೆ

ಮಹಾರಾಷ್ಟ್ರ

ಅನುವಂಶಿಕ ಅಸ್ವಸ್ಥತೆಯಿಂದ ಬಾಧಿತ ಕಥಕ್ ನೃತ್ಯಪಟು

  1.  

ವನಿತಾ ಜಗ್ ದೇವ್ ಬೊರಾಡೆ

ಮಹಾರಾಷ್ಟ್ರ

ಹಾವುಗಳ ರಕ್ಷಣೆಯ ಮೊದಲ ಮಹಿಳೆ

  1.  

ಮೀರಾ ಥಾಕೂರ್

ಪಂಜಾಬ್

ಸಿಕ್ಕಿ ಹುಲ್ಲಿನಿಂದ ಕಲಾಕೃತಿ ತಯಾರಿಸುವ ಕಲಾವಿದೆ

  1.  

ಜಯ ಮುತ್ತು, ತೇಜಮ್ಮ(ಇಬ್ಬರಿಗೂ ಸೇರಿ 1 ಪ್ರಶಸ್ತಿ)

ತಮಿಳುನಾಡು

ಕುಶಲಕರ್ಮಿಗಳು - ಟೋಡಾ ಕಸೂತಿ ಕಲೆ

  1.  

ಎಲಾ ಲೋಢ್ (ಮರಣೋತ್ತರವಾಗಿ)

ತ್ರಿಪುರ

ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರು

  1.  

ಆರ್ತಿ ರಾಣಾ

ಉತ್ತರ ಪ್ರದೇಶ

ಕೈಮಗ್ಗ ನೇಕಾರರು ಮತ್ತು ಶಿಕ್ಷಕಿ

 

ನಾರಿ ಶಕ್ತಿ ಪುರಸ್ಕಾರ - 2021

 

  1.  

ಸತುಪತಿ ಪ್ರಸನ್ನ ಶ್ರೀ

ಆಂಧ್ರ ಪ್ರದೇಶ

ಭಾಷಾಶಾಸ್ತ್ರಜ್ಞ - ಅಲ್ಪಸಂಖ್ಯಾತ ಬುಡಕಟ್ಟು ಭಾಷೆಗಳ ಸಂರಕ್ಷಕ

  1.  

ತಗೆ ರೀಟಾ ಟಖೆ

ಅರುಣಾಚಲ ಪ್ರದೇಶ

ಉದ್ಯಮಶೀಲ

  1.  

ಮಧುಲಿಕಾ ರಾಮ್ ಟೇಕೆ

ಛತ್ತೀಸ್ ಗಢ

ಸಾಮಾಜಿಕ ಕಾರ್ಯಕರ್ತ

  1.  

ನಿರಂಜನ್ ಬೆನ್ ಮುಕುಲ್ ಭಾಯ್ ಕಲಾರ್ತಿ

ಗುಜರಾತ್

ಲೇಖಕ ಮತ್ತು ಶಿಕ್ಷಣ ತಜ್ಞ.

  1.  

ಪೂಜಾ ಶರ್ಮ

ಹರ್ಯಾಣ

ಕೃಷಿಕ ಮತ್ತು ಉದ್ಯಮಶೀಲ

  1.  

ಅನ್ಶುಲ್ ಮಲ್ಹೋತ್ರ

ಹಿಮಾಚಲ ಪ್ರದೇಶ

ನೇಕಾರ - ನೇಯ್ಗೆ

  1.  

ಶೋಭಾ ಗಸ್ತಿ

ಕರ್ನಾಟಕ

ಸಾಮಾಜಿಕ ಕಾರ್ಯಕರ್ತೆ - ದೇವದಾಸಿ ಪದ್ಧತಿ ಕೊನೆಗಾಣಿಸಲು ಶ್ರಮಿಸುತ್ತಿದ್ದಾರೆ

  1.  

ರಾಧಿಕಾ ಮೆನನ್

ಕೇರಳ

ಕ್ಯಾಪ್ಟನ್ ಮರ್ಚೆಂಟ್ ನೇವಿ – ಸಾಗರ ಭಾಗದಲ್ಲಿ ಅಸಾಧಾರಣ ಶೌರ್ಯ ತೋರಿದ ಮೊದಲ ಮಹಿಳೆ ಪ್ರಶಸ್ತಿ ಸ್ವೀಕರಿಸಲಿದ್ದಾರೆ. ಸಾಧನೆ ಗುರುತಿಸಿದ ಅಂತಾರಾಷ್ಟ್ರೀಯ ಸಾಗರ ಸಂಘಟನೆ.

  1.  

ಕಮಲ್ ಕುಂಬಾರ್

ಮಹಾರಾಷ್ಟ್ರ

ಸಾಮಾಜಿಕ ಉದ್ಯಮಶೀಲ

  1.  

ಶೃತಿ ಮೊಹಾಪಾತ್ರ

ಒಡಿಶಾ

ಅಂಗವೈಕಲ್ಯ ಹಕ್ಕುಗಳ ಕಾರ್ಯಕರ್ತೆ

  1.  

ಬತೂಲ್ ಬೇಗಂ

ರಾಜಸ್ಥಾನ

ಮಾಂದ್ ಮತ್ತು ಭಜನ್ ಜಾನಪದ ಗಾಯಕರು

  1.  

ತಾರಾ ರಂಗಸ್ವಾಮಿ

ತಮಿಳುನಾಡು

ಮನೋವೈದ್ಯ ಮತ್ತು ಸಂಶೋಧಕ

  1.  

ನೀರ್ಜಾ ಮಾಧವ್

ಉತ್ತರಪ್ರದೇಶ

ಹಿಂದಿ ಲೇಖಕರು – ತೃತೀಯಲಿಂಗಿಗಳು ಮತ್ತು ಟಿಬೆಟಿಯನ್ ನಿರಾಶ್ರಿತರ  ಹಕ್ಕುಗಳ ಸಂರಕ್ಷಣೆಗಾಗಿ ಕೆಲಸ ಮಾಡುತ್ತಿದ್ದಾರೆ

  1.  

ನೀನಾ ಗುಪ್ತ

ಪಶ್ಚಿಮ ಬಂಗಾಳ

ಗಣಿತ ಶಾಸ್ತ್ರಜ್ಞ

 

*****



(Release ID: 1803540) Visitor Counter : 675