ಪ್ರಧಾನ ಮಂತ್ರಿಯವರ ಕಛೇರಿ
ದಕ್ಷಿಣ ಏಷ್ಯಾದ ಅತಿದೊಡ್ಡ ರಾಮ್ ಸರ್ ಸ್ಥಳದ ಜಾಲವನ್ನು ಭಾರತ ಹೊಂದಿರುವುದಕ್ಕೆ ಸಂತಸ ವ್ಯಕ್ತಪಡಿಸಿದ ಪ್ರಧಾನಿ
ಪ್ರಕಟಣಾ ದಿನಾಂಕ:
03 FEB 2022 10:30PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ರಾಮ್ ಸರ್ ಸ್ಥಳಗಳ ಪಟ್ಟಿಗೆ ಗುಜರಾತ್ ನ ಖಿಜಾದಿಯ ವನ್ಯಜೀವಿಧಾಮ ಮತ್ತು ಉತ್ತರ ಪ್ರದೇಶದ ಬಖೀರಾ ವನ್ಯಜೀವಿಧಾಮ ಎರಡು ತೇವದ ಪ್ರದೇಶಗಳು ಸೇರ್ಪಡೆಯಾಗಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ವೈಪರೀತ್ಯ ಸಚಿವ ಶ್ರೀ ಭೂಪೇಂದ್ರ ಯಾದವ್ ಅವರ ಟ್ವೀಟ್ ಗೆ ಪ್ರಧಾನಮಂತ್ರಿ ಟ್ವೀಟ್ ನಲ್ಲಿ ಪ್ರತಿಕ್ರಿಯಿಸಿ,
“ಅದ್ಭುತ ಸುದ್ದಿ! ಭಾರತ ದಕ್ಷಿಣ ಏಷ್ಯಾದಲ್ಲೇ ಅತಿದೊಡ್ಡ ರಾಮ್ ಸರ್ ಸ್ಥಳಗಳ ಜಾಲ ಹೊಂದಿರುವುದು ನಮ್ಮ ಜನರ ಸಸ್ಯ ಹಾಗೂ ಪ್ರಾಣಿ ಸಂಪತ್ತು ಸಂರಕ್ಷಣೆಯ ಬದ್ಧತೆಯನ್ನು ಮತ್ತು ಪ್ರಕೃತಿಯೊಂದಿಗೆ ಸಹಬಾಳ್ವೆ ನಡೆಸುತ್ತಿರುವುದರ ಸಂಕೇತವಾಗಿದೆ” ಎಂದು ಹೇಳಿದ್ದಾರೆ.
***
(ಪ್ರಕಟಣೆ ಐ.ಡಿ.: 1795934)
ವಿಸಿಟರ್ ಕೌಂಟರ್ : 216
ಪ್ರಕಟಣೆಯನ್ನು ಇದರಲ್ಲಿ ಓದಿ:
English
,
Urdu
,
Marathi
,
हिन्दी
,
Assamese
,
Bengali
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam