ಹಣಕಾಸು ಸಚಿವಾಲಯ
2021-22ರ ಪರಿಷ್ಕೃತ ಅಂದಾಜಿನಲ್ಲಿ ಬಂಡವಾಳ ಹೂಡಿಕೆಗಾಗಿ ರಾಜ್ಯಗಳಿಗೆ ಹಣಕಾಸು ನೆರವು ನೀಡುವ ಯೋಜನೆಗೆ 15,000 ಕೋಟಿ ರೂ. ಹಂಚಿಕೆ
2022-23 ರ ಸಾಲಿನಲ್ಲಿ ಒಟ್ಟಾರೆ ಹೂಡಿಕೆಗಳನ್ನು ವೇಗಗೊಳಿಸಲು ರಾಜ್ಯಗಳಿಗೆ ಸಹಾಯ ಮಾಡಲು 1 ಲಕ್ಷ ಕೋಟಿ ತೆಗೆದಿರಿಸಲಾಗಿದೆ
ರಾಜ್ಯಗಳಿಗೆ ಜಿಎಸ್.ಡಿ.ಪಿ.ಯ ಶೇ.4ರಷ್ಟು ವಿತ್ತೀಯ ಕೊರತೆಗೆ ಅನುಮತಿ
Posted On:
01 FEB 2022 1:03PM by PIB Bengaluru
ಬಂಡವಾಳ ಹೂಡಿಕೆಗಾಗಿ ರಾಜ್ಯಗಳಿಗೆ ಹಣಕಾಸು ನೆರವು ಯೋಜನೆಯ ಬಜೆಟ್ ಹಂಚಿಕೆಯನ್ನು 2021-22 ರಲ್ಲಿ 10,000 ಕೋಟಿ ರೂ.ಗಳಿಗೆ ಮತ್ತು ಪರಿಷ್ಕೃತ ಅಂದಾಜು 2021-22 ರಲ್ಲಿ 15,000 ಕೋಟಿ ರೂ.ಗೆ ನಿಗದಿ ಮಾಡಲಾಗಿದೆ ಎಂದು ಕೇಂದ್ರ ಹಣಕಾಸು ಮತ್ತು ಸಾಂಸ್ಥಿಕ ವ್ಯವಹಾರಗಳ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಇಂದು ಸಂಸತ್ತಿನಲ್ಲಿ 2022-23ನೇ ಸಾಲಿನ ಕೇಂದ್ರ ಬಜೆಟ್ ಮಂಡಿಸುವಾಗ ತಿಳಿಸಿದ್ದಾರೆ.
ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು 2022-23ನೇ ಸಾಲಿನ ಆರ್ಥಿಕತೆಯಲ್ಲಿ ಒಟ್ಟಾರೆ ಹೂಡಿಕೆಗಳನ್ನು ವೇಗಗೊಳಿಸಲು ರಾಜ್ಯಗಳಿಗೆ ನೆರವಾಗಲು 1 ಲಕ್ಷ ಕೋಟಿ ಪ್ರಸ್ತಾಪಿಸಿದ್ದಾರೆ. ಈ ಐವತ್ತು ವರ್ಷಗಳ ಬಡ್ಡಿ ರಹಿತ ಸಾಲಗಳು ರಾಜ್ಯಗಳಿಗೆ ಅನುಮತಿಸಲಾದ ಸಾಮಾನ್ಯ ಸಾಲಗಳಿಗಿಂತ ಹೆಚ್ಚಿನದಾಗಿವೆ ಎಂದು ಅವರು ಹೇಳಿದರು. ಈ ಹಂಚಿಕೆಯನ್ನು ಪ್ರಧಾನಮಂತ್ರಿ ಗತಿ ಶಕ್ತಿಗೆ ಸಂಬಂಧಿಸಿದ ಮತ್ತು ರಾಜ್ಯಗಳ ಇತರ ಉತ್ಪಾದನಾ ಬಂಡವಾಳ ಹೂಡಿಕೆಗೆ ಈ ಕೆಳಗಿನ ಅಂಶಗಳನ್ನು ಒಳಗೊಂಡಂತೆ ಬಳಸಲಾಗುತ್ತದೆ:
- ರಾಜ್ಯಗಳ ಪಾಲು ಬೆಂಬಲ ಸೇರಿದಂತೆ ಪ್ರಧಾನಮಂತ್ರಿ ಗ್ರಾಮೀಣ ರಸ್ತೆ ಯೋಜನೆಯ ಆದ್ಯತೆಯ ವಿಭಾಗಗಳಿಗೆ ಪೂರಕ ನಿಧಿ,
- ಡಿಜಿಟಲ್ ಪಾವತಿಗಳು ಮತ್ತು ಓಎಫ್ಸಿ ನೆಟ್ ವರ್ಕ್ ನ ಪೂರ್ಣಗೊಳಿಸುವಿಕೆ ಸೇರಿದಂತೆ ಆರ್ಥಿಕತೆಯ ಡಿಜಿಟಲೀಕರಣ, ಮತ್ತು
- ಕಟ್ಟಡ ಬೈಲಾಗಳು, ನಗರ ಯೋಜನೆಗಳು, ಸಾರಿಗೆ-ಆಧಾರಿತ ಅಭಿವೃದ್ಧಿ ಮತ್ತು ವರ್ಗಾವಣೆ ಮಾಡಬಹುದಾದ ಅಭಿವೃದ್ಧಿ ಹಕ್ಕುಗಳಿಗೆ ಸಂಬಂಧಿಸಿದ ಸುಧಾರಣೆಗಳು.
2022-23ರಲ್ಲಿ, 15ನೇ ಹಣಕಾಸು ಆಯೋಗದ ಶಿಫಾರಸುಗಳಿಗೆ ಅನುಗುಣವಾಗಿ, ರಾಜ್ಯಗಳಿಗೆ ಜಿ.ಎಸ್.ಡಿ.ಪಿ.ಯ ಶೇ.4ರಷ್ಟು ವಿತ್ತೀಯ ಕೊರತೆಯನ್ನು ಅನುಮತಿಸಲಾಗುವುದು, ಅದರಲ್ಲಿ ಶೇ.0.5ರಷ್ಟು ವಿದ್ಯುತ್ ವಲಯದ ಸುಧಾರಣೆಗಳಿಗೆ ಸಂಬಂಧಿಸಿದ್ದಾಗಿದೆ ಎಂದು ಹಣಕಾಸು ಸಚಿವರು ಘೋಷಿಸಿದರು. ಈ ಸಂಬಂಧ ಈಗಾಗಲೇ 2021-22 ರಲ್ಲಿ ಇದನ್ನು ತಿಳಿಸಲಾಗಿದೆ.
ಉತ್ಪಾದನಾ ಸ್ವತ್ತುಗಳನ್ನು ಸೃಷ್ಟಿಸಲು ಮತ್ತು ಲಾಭದಾಯಕ ಉದ್ಯೋಗವನ್ನು ಸೃಷ್ಟಿಸಲು ತಮ್ಮ ಬಂಡವಾಳ ಹೂಡಿಕೆಯನ್ನು ಹೆಚ್ಚಿಸುವಲ್ಲಿ ರಾಜ್ಯಗಳ ಕೈ ಬಲಪಡಿಸಲು ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದೂ ಅವರು ಹೇಳಿದರು.
***
(Release ID: 1794702)
Visitor Counter : 301