ಹಣಕಾಸು ಸಚಿವಾಲಯ

ತೆರಿಗೆದಾರರು ಪರಿಷ್ಕರಿಸಿದ ಆದಾಯ ತೆರಿಗೆ ವಿವರವನ್ನು 2 ವರ್ಷಗಳ ಒಳಗೆ ಸಲ್ಲಿಸಲು ಅನುಮತಿ


ವಿಶೇಷಚೇತನ ಜನರಿಗೆ ತೆರಿಗೆ ಪರಿಹಾರ ಪ್ರಕಟ

ರಾಜ್ಯ ಸರ್ಕಾರಿ ಉದ್ಯೋಗಿಗಳ ಎನ್ ಪಿ ಎಸ್ ಖಾತೆಗೆ ಉದ್ಯೋಗದಾತರ ಕೊಡುಗೆ ಮೇಲಿನ ತೆರಿಗೆ ಕಡಿತದ ಮಿತಿ 10%ನಿಂದ 14%ಗೆ ಹೆಚ್ಚಳ

ವರ್ಚುವಲ್ ಡಿಜಿಟಲ್ ಸ್ವತ್ತುಗಳ ವಹಿವಾಟಿನಿ ಬರುವ ಆದಾಯಕ್ಕೆ 30% ತೆರಿಗೆ

ತೆರಿಗೆದಾರರ ವ್ಯಾಜ್ಯಗಳ ಪುನರಾವರ್ತನೆ ತಪ್ಪಿಸಲು ಹೊಸ ಕ್ರಮಗಳು

Posted On: 01 FEB 2022 12:56PM by PIB Bengaluru

ಸಂಬಂಧಿತ ತೆರಿಗೆ ಮೌಲ್ಯಮಾಪನ ವರ್ಷದ ಅಂತ್ಯದಿಂದ 2 ವರ್ಷಗಳ ಒಳಗೆ ಹೆಚ್ಚುವರಿ ತೆರಿಗೆ ಪಾವತಿಯ ಪರಿಷ್ಕರಿಸಿದ ಆದಾಯ ತೆರಿಗೆ ವಿವರ ಸಲ್ಲಿಸಲು ತೆರಿಗೆದಾರರಿಗೆ ಅನುಮತಿ ನೀಡಲಾಗಿದೆ ಎಂದು ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವ ಶ್ರೀಮತಿ ತಿಳಿಸಿದ್ದಾರೆ. ಸಂಸತ್ತಿನಲ್ಲಿಂದು 2022-23ನೇ ಸಾಲಿನ ಕೇಂದ್ರ ಬಜೆಟ್ ಮಂಡಿಸಿ ಮಾತನಾಡಿದ ಅವರು, ತೆರಿಗೆ ಪಾವತಿಸುವ ಸಲುವಾಗಿ ತಮ್ಮ ಆದಾಯವನ್ನು ನಿಖರವಾಗಿ ಅಂದಾಜು ಮಾಡುವಾಗ ಯಾವುದೇ ಲೋಪ ದೋಷ ಅಥವಾ ತಪ್ಪುಗಳನ್ನು ಸರಿಪಡಿಸಲು ಇದು ತೆರಿಗೆದಾರರಿಗೆ ಅವಕಾಶ ಕಲ್ಪಿಸುತ್ತದೆ ಎಂದರು. ಪ್ರಸ್ತುತ, ಮೌಲ್ಯಮಾಪಕರಿಂದ ಕೆಲವು ಆದಾಯ  ತಪ್ಪಿಹೋಗಿದೆ ಎಂದು ಇಲಾಖೆ ಕಂಡುಕೊಂಡರೆ, ಅದು ಸುದೀರ್ಘ ತೀರ್ಪು ಪ್ರಕ್ರಿಯೆಯ ಮೂಲಕ ಹೋಗುತ್ತದೆ. ಆದರೆ ಹೊಸ ಪ್ರಸ್ತಾವನೆಯು ತೆರಿಗೆದಾರರ ಮೇಲಿನ ನಂಬಿಕೆಯನ್ನು ಮರುಸ್ಥಾಪಿಸುತ್ತದೆ. "ಇದು ಸ್ವಯಂಪ್ರೇರಿತ ತೆರಿಗೆ ಅನುಸರಣೆಯ ದಿಕ್ಕಿನಲ್ಲಿ ಒಂದು ದೃಢವಾದ ಹೆಜ್ಜೆ" ಎಂದು ಅವರು ಹೇಳಿದರು.

ವಿಶೇಷಚೇತನರಿಗೆ ತೆರಿಗೆ ಪರಿಹಾರ

ವಿಶೇಷಚೇತನ ವ್ಯಕ್ತಿಗಳಿಗೆ ಪೋಷಕರು ಅಥವಾ ಪಾಲಕರು ವಿಮಾ ಯೋಜನೆ ಮಾಡಿಸಿದರೆ, ಪ್ರಸ್ತುತ ಕಾನೂನು ಪೋಷಕರು ಮತ್ತು ಪಾಲಕರಿಗೆ ತೆರಿಗೆ ಕಡಿತ ಒದಗಿಸುತ್ತದೆ. ವಿಶೇಷಚೇತನರ ಪೋಷಕರು ಅಥವಾ ಚಂದಾದಾರರು ಒಂದು ವೇಳೆ ಮೃತಪಟ್ಟಲ್ಲಿ ವಿಮಾ ಯೋಜನೆಯ ಒಟ್ಟು ಮೊತ್ತ ಅಥವಾ ವರ್ಷಾಸನ ವಿಶೇಷಚೇತನರಿಗೆ ಸಿಗುತ್ತದೆ ಎನ್ನುವುದಾದರೆ ಮಾತ್ರ ಪಾಲಕರಿಗೆ ತೆರಿಗೆ ಕಡಿತ ಸೌಲಭ್ಯ ಸಿಗುತ್ತದೆ. ವಿಶೇಷಚೇತನರ ಅವಲಂಬಿತರು ತಮ್ಮ ಜೀವಿತಾವಧಿಯಲ್ಲಿ ವಿಮಾ ಯೋಜನೆಯ ಪೂರ್ಣ ಹಣ ಅಥವಾ ವರ್ಷಾಸನದ ಹಣ ಪಡೆಯುವ ಅವಶ್ಯಕತೆ ಬೀಳಬಹುದು. ಆದ್ದರಿಂದ ನಾವಿಂದು ಪ್ರಸ್ತಾಪಿಸುತ್ತಿರುವ ವಿಚಾರವೇನೆಂದರೆ, ವಿಶೇಷಚೇತನ ಅವಲಂಬಿತರಿಗೆ 60 ವರ್ಷ ತುಂಬಿದಾಗ ತಮ್ಮ ಅಗತ್ಯಗಳಿಗೆ ವಿಮಾ ಹಣ ಪಡೆಯಲು ಅರ್ಹರಾಗಿರುತ್ತಾರೆ.

Tax Proposals.jpg

ಕೇಂದ್ರ ಮತ್ತು ರಾಜ್ಯ ಸರ್ಕಾರಿ ನೌಕರರಿಗೆ ಸಮಾನ ಸವಲತ್ತು

ರಾಜ್ಯ ಸರ್ಕಾರಿ ನೌಕರರ ಸಾಮಾಜಿಕ ಭದ್ರತಾ ಸೌಲಭ್ಯಗಳನ್ನು ಹೆಚ್ಚಿಸಲು ಮತ್ತು ಕೇಂದ್ರ ಸರ್ಕಾರಿ ನೌಕರರಿಗೆ ಸರಿಸಮನಾಗಿ ರಾಜ್ಯ ಸರ್ಕಾರಿ ನೌಕರರನ್ನು ತರಲು ಸರ್ಕಾರ ಉದ್ದೇಶಿಸಿದೆ. ನಿಟ್ಟಿನಲ್ಲಿ ರಾಜ್ಯ ಸರ್ಕಾರದ ಉದ್ಯೋಗಿಗಳ ಎನ್ ಪಿ ಎಸ್ ಖಾತೆಗೆ ಉದ್ಯೋಗದಾತರ ಕೊಡುಗೆಯ ಮೇಲಿನ ತೆರಿಗೆ ಕಡಿತ ಮಿತಿಯನ್ನು 10%ನಿಂದ 14%ಗೆ ಹೆಚ್ಚಿಸಲು ನಿರ್ಧರಿಸಲಾಗಿದೆ ಎಂದು ಸಚಿವರು ಹೇಳಿದರು.

ವರ್ಚುವಲ್ ಡಿಜಿಟಲ್ ಸ್ವತ್ತುಗಳ ವಹಿವಾಟಿಗೆ ಹೊಸ ತೆರಿಗೆ ವ್ಯವಸ್ಥೆ

ವರ್ಚುವಲ್ ಡಿಜಿಟಲ್ ಸ್ವತ್ತುಗಳ ವಹಿವಾಟು ಪ್ರಮಾಣ ಇತ್ತೀಚೆಗೆ  ಅಸಾಧಾರಣವಾಗಿ ಹೆಚ್ಚಾಗುತ್ತಿದೆ. ನಿಟ್ಟಿನಲ್ಲಿ "ಯಾವುದೇ ವರ್ಚುವಲ್ ಡಿಜಿಟಲ್ ಆಸ್ತಿಯ ವರ್ಗಾವಣೆಯಿಂದ ಬರುವ ಯಾವುದೇ ಆದಾಯಕ್ಕೆ 30% ತೆರಿಗೆ ವಿಧಿಸಲಾಗುವುದು" ಎಂದು ನಿರ್ಮಲಾ ಸೀತಾರಾಮನ್ ಪ್ರಕಟಿಸಿದರು. ಸ್ವಾಧೀನದ ವೆಚ್ಚ ಹೊರತುಪಡಿಸಿ, ಅಂತಹ ಆದಾಯ ಲೆಕ್ಕಾಚಾರ ಮಾಡುವಾಗ ಯಾವುದೇ ಖರ್ಚು ಅಥವಾ ಭತ್ಯೆಗೆ ತೆರಿಗೆ ಕಡಿತ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು. ಇದಲ್ಲದೆ, ವರ್ಚುವಲ್ ಡಿಜಿಟಲ್ ಆಸ್ತಿ ವರ್ಗಾವಣೆಯಿಂದ ಎದುರಿಸುವ ನಷ್ಟವನ್ನು ಬೇರೆ ಯಾವುದೇ ಆದಾಯಕ್ಕೆ  ಹೊಂದಿಸಲು ಅವಕಾಶವಿಲ್ಲ ಎಂದರು. ವಹಿವಾಟಿನ ವಿವರಗಳನ್ನು ಸೆರೆಹಿಡಿಯುವ ಉದ್ದೇಶದಿಂದ ವರ್ಚುವಲ್ ಡಿಜಿಟಲ್ ಆಸ್ತಿಯ ವರ್ಗಾವಣೆಗೆ ಸಂಬಂಧಿಸಿದಂತೆ ಮಾಡಿದ ಪಾವತಿಗೆ 1% ಟಿಡಿಎಸ್(ಮೂಲದಲ್ಲೇ ತೆರಿಗೆ ಕಡಿತ) ಮಾಡಲಾಗುವುದು ಎಂದು ಸಚಿವರು ಹೇಳಿದರು. ವರ್ಚುವಲ್ ಡಿಜಿಟಲ್ ಆಸ್ತಿಯ ಉಡುಗೊರೆ ಸ್ವೀಕರಿಸುವವರಿಗೂ ತೆರಿಗೆ ವಿಧಿಸಲು ಪ್ರಸ್ತಾಪಿಸಲಾಗಿದೆ ಎಂದು ಸಚಿವರು ಹೇಳಿದರು.

ತೆರಿಗೆ ವ್ಯಾಜ್ಯಗಳ ನಿರ್ವಹಣೆ

"ಒಂದೇ ರೀತಿಯ ತೆರಿಗೆ ಸಮಸ್ಯೆಗಳನ್ನು ಒಳಗೊಂಡಿರುವ ಮೇಲ್ಮನವಿಗಳನ್ನು ಸಲ್ಲಿಸಲು ಸಾಕಷ್ಟು ಸಮಯ ಮತ್ತು ಸಂಪನ್ಮೂಲ ವ್ಯರ್ಥವಾಗುತ್ತಿದೆ." ನಿಟ್ಟಿನಲ್ಲಿ ಸರ್ಕಾರವು ಸಮರ್ಪಕ ವ್ಯಾಜ್ಯ ನಿರ್ವಹಣೆಯ ನೀತಿಯನ್ನು ಮುಂದುವರಿಸಲು, ತೆರಿಗೆದಾರರು ಮತ್ತು ಇಲಾಖೆಯ ನಡುವಿನ ಪುನರಾವರ್ತಿತ ವ್ಯಾಜ್ಯಗಳ ಸಂಖ್ಯೆಯನ್ನು ಕಡಿಮೆ ಮಾಡಲು ಉದ್ದೇಶಿಸಿದೆ. ತೆರಿಗೆದಾರನ ಕಾನೂನಿನ ಪ್ರಶ್ನೆಯು ಬಾಕಿ ಇರುವ ಕಾನೂನಿನ ಪ್ರಶ್ನೆಗೆ ಸಮಾನವಾಗಿದ್ದರೆ ಸರ್ಕಾರವು ಒಂದು ನಿಬಂಧನೆ ರೂಪಿಸುತ್ತಿದೆ. ಅದೇನೆಂದರೆ, ಯಾವುದೇ ಪ್ರಕರಣಕ್ಕೆ ಸಂಬಂಧಿಸಿ ಉಚ್ಚ ನ್ಯಾಯಾಲಯ ಅಥವಾ ಸರ್ವೋಚ್ಚ ನ್ಯಾಯಾಲಯದ ಮುಂದೆ ಮೇಲ್ಮನವಿ ಇದ್ದರೆ ತೆರಿಗೆದಾರನ ಪ್ರಕರಣಕ್ಕೆ ಸಂಬಂಧಿಸಿದ ಕಾನೂನು ವಿಚಾರಣೆ ಪೂರ್ಣವಾಗುವ ತನಕ ಆದಾಯ ತೆರಿಗೆ ಇಲಾಖೆಯು ಹೆಚ್ಚಿನ ಮೇಲ್ಮನವಿ ಸಲ್ಲಿಸುವುದನ್ನು ಮುಂದೂಡಲಾಗುವುದು ಎಂದು ಸಚಿವರು ತಿಳಿಸಿದರು.

Tax Proposals 2.jpg

ಸಕಾಲದಲ್ಲಿ ತೆರಿಗೆ ಪಾವತಿಸಿ, ಅಪಾರ ಕೊಡುಗೆ ನೀಡುತ್ತಿರುವ ಮತ್ತು ಸರ್ಕಾರದ ಕೈಗಳನ್ನು ಬಲಪಡಿಸುತ್ತಿರುವ ಪ್ರಾಮಾಣಿಕ ತೆರಿಗೆದಾರ ನಾಗರಿಕರಿಗೆ ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಇದೇ ಸಂದರ್ಭದಲ್ಲಿ ಧನ್ಯವಾದ ಅರ್ಪಿಸಿದರು.

***

 (Release ID: 1794439) Visitor Counter : 449