ಹಣಕಾಸು ಸಚಿವಾಲಯ
azadi ka amrit mahotsav

ಹಣಕಾಸಿನ ಕೊರತೆಯು 2022-23 ರಲ್ಲಿ ನಿವ್ವಳ ದೇಶೀಯ ಉತ್ಪನ್ನ (ಜಿಡಿಪಿ)ದ 6.4% ಎಂದು ಅಂದಾಜಿಸಲಾಗಿದೆ


4.5% ಕ್ಕಿಂತ ಕಡಿಮೆ ಹಣಕಾಸಿನ ಕೊರತೆಯ ಮಟ್ಟವನ್ನು ತಲುಪಲು ಹಣಕಾಸಿನ ಬಲವರ್ಧನೆಯ ವಿಶಾಲ ಮಾರ್ಗವನ್ನು ನಿರ್ವಹಿಸಲಾಗಿದೆ

ಬಂಡವಾಳ ವೆಚ್ಚವು 2021-22ರ ರೂ.5.54 ಲಕ್ಷ ಕೋಟಿಯಿಂದ  2022-23 ರಲ್ಲಿ 35.4%ರಷ್ಟು, ರೂ.7.50 ಲಕ್ಷ ಕೋಟಿ  ಹೆಚ್ಚಾಗಲಿದೆ

2022-23 ರಲ್ಲಿ ಬಂಡವಾಳ ವೆಚ್ಚವು ಜಿಡಿಪಿಯ 2.9% ಆಗಿರುತ್ತದೆ

2022-23ರ ಸರ್ಕಾರದ ಒಟ್ಟು ಮಾರುಕಟ್ಟೆ ಸಾಲಗಳು ರೂ. 11, 58,719 ಕೋಟಿಯಾಗುವುದು

Posted On: 01 FEB 2022 12:58PM by PIB Bengaluru

"2022-23 ರಲ್ಲಿನ ವಿತ್ತೀಯ ಕೊರತೆಯು ನಿವ್ವಳ ದೇಶೀಯ ಉತ್ಪನ್ನ (ಜಿಡಿಪಿ) ಶೇಕಡಾ 6.4 ರಷ್ಟಿದೆ ಎಂದು ಅಂದಾಜಿಸಲಾಗಿದೆ, ಇದು 2025-26 ವೇಳೆಗೆ ವಿತ್ತೀಯ ಕೊರತೆಯ ಮಟ್ಟವನ್ನು ಶೇಕಡಾ 4.5 ಕ್ಕಿಂತ ಕಡಿಮೆ ತಲುಪಲು ಕಳೆದ ವರ್ಷ ನಾನು ಘೋಷಿಸಿದ ವಿತ್ತೀಯ ಬಲವರ್ಧನೆಯ ವಿಶಾಲ ಮಾರ್ಗದೊಂದಿಗೆ ಸ್ಥಿರವಾಗಿದೆ" ಎಂದು ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಇಂದು ಸಂಸತ್ತಿನಲ್ಲಿ ಕೇಂದ್ರ ಬಜೆಟ್ 2022-23 ಅನ್ನು ಮಂಡಿಸುವಾಗ ಘೋಷಿಸಿದರು. ಇದಲ್ಲದೆ, ಪ್ರಸಕ್ತ ವರ್ಷದಲ್ಲಿ ಪರಿಷ್ಕೃತ ವಿತ್ತೀಯ ಕೊರತೆಯು ಬಜೆಟ್ ಅಂದಾಜುಗಳಲ್ಲಿ ಯೋಜಿತವಾಗಿರುವ ಶೇಕಡಾ 6.8 ಬದಲು ಜಿಡಿಪಿ ಶೇಕಡಾ 6.9 ರಷ್ಟಿದೆ ಎಂದು ಅಂದಾಜಿಸಲಾಗಿದೆ.

Trends-in-Deficit-English.jpg

ವಿತ್ತೀಯ ಕೊರತೆ

2022-23ರಲ್ಲಿ ವಿತ್ತೀಯ ಕೊರತೆಯ ಮಟ್ಟವನ್ನು ನಿಗದಿಪಡಿಸುವಾಗ, ಸಾರ್ವಜನಿಕ ಹೂಡಿಕೆಯ ಮೂಲಕ ಬೆಳವಣಿಗೆಯನ್ನು ಪೋಷಿಸುವ ಅಗತ್ಯತೆಯ ಬಗ್ಗೆ ಅವರು ಜಾಗೃತರಾಗಿದ್ದರು ಎಂದು ಹಣಕಾಸು ಸಚಿವರು ಹೇಳಿದರು. 2022-23 ಸರ್ಕಾರದ ವಿತ್ತೀಯ ಕೊರತೆಯು ರೂ. 16, 61,196 ಕೋಟಿ ಎಂದು ಅಂದಾಜು ಮಾಡಲಾಗಿತ್ತು. 2021-22 ಪರಿಷ್ಕೃತ ಅಂದಾಜುಗಳು ವಿತ್ತೀಯ ಕೊರತೆ ರೂ. 15, 91,089 ಕೋಟಿ ಎಂದು ತೋರಿಸಿದ್ದು ಬಜೆಟ್ ಅಂದಾಜು ರೂ. 15, 06,812 ಕೋಟಿ ಆಗಿತ್ತು.

ಬಂಡವಾಳ ವೆಚ್ಚ

ಕೇಂದ್ರ ಬಜೆಟ್‌ನಲ್ಲಿ ಬಂಡವಾಳ ವೆಚ್ಚದ ವೆಚ್ಚವನ್ನು ಪ್ರಸಕ್ತ ವರ್ಷದಲ್ಲಿ 5.54 ಲಕ್ಷ ಕೋಟಿ ರೂಪಾಯಿಗಳಿಂದ 2022-23ರಲ್ಲಿ 7.50 ಲಕ್ಷ ಕೋಟಿ ರೂಪಾಯಿಗಳಿಗೆ ಮತ್ತೊಮ್ಮೆ ಶೇಕಡಾ 35.4 ರಷ್ಟು ತೀವ್ರವಾಗಿ ಹೆಚ್ಚಿಸಲಾಗುತ್ತಿದೆ ಎಂದು ಹಣಕಾಸು ಸಚಿವರು ಹೇಳಿದರು. ಇದು 2019-20 ವೆಚ್ಚಕ್ಕಿಂತ 2.2 ಪಟ್ಟು ಹೆಚ್ಚಾಗಿದೆ. 2022-23 ರಲ್ಲಿ ವೆಚ್ಚವು ಜಿಡಿಪಿ ಶೇಕಡಾ 2.9 ಆಗಿರುತ್ತದೆ.

ಬಂಡವಾಳ ವೆಚ್ಚವನ್ನು ಒಟ್ಟುಗೂಡಿಸಿ ರಾಜ್ಯಗಳಿಗೆ ಅನುದಾನದ ಮೂಲಕ ಬಂಡವಾಳ ಸ್ವತ್ತುಗಳ ರಚನೆಗೆ ಮಾಡಲಾದ ನಿಬಂಧನೆಯೊಂದಿಗೆ, ಕೇಂದ್ರ ಸರ್ಕಾರದ 'ಪರಿಣಾಮಕಾರಿ ಬಂಡವಾಳ ವೆಚ್ಚ' 2022-23 ರಲ್ಲಿ ರೂ. 10.68 ಲಕ್ಷ ಕೋಟಿಯಾಗಿದ್ದು, ಇದು ಜಿಡಿಪಿಯ 4.1% ಆಗಿರುತ್ತದೆ ಎಂದು ಸಚಿವರು ಮಾಹಿತಿ ನೀಡಿದರು.

2022-23 ರಲ್ಲಿ ಒಟ್ಟು ವೆಚ್ಚ ರೂ. 39.45 ಲಕ್ಷ ಕೋಟಿ ಆಗಿದ್ದು, ಸಾಲವನ್ನು ಹೊರತುಪಡಿಸಿ ಒಟ್ಟು ಸ್ವೀಕೃತಿಗಳು ರೂ. 22.84 ಲಕ್ಷ ಕೋಟಿಗಳು ಎಂದು ಅಂದಾಜಿಸಲಾಗಿದೆ2021-22 ಬಜೆಟ್ ಅಂದಾಜುಗಳಲ್ಲಿ ಯೋಜಿತವಾದ ವೆಚ್ಚವು ರೂ.34.83 ಲಕ್ಷ ಕೋಟಿಗಳಾಗಿತ್ತು, ಪರಿಷ್ಕೃತ ಅಂದಾಜು ರೂ. 37.70 ಲಕ್ಷ ಕೋಟಿಯಾಗಿದೆ ಎಂದು ತಿಳಿಸಿದರು.

ಮಾರುಕಟ್ಟೆ ಸಾಲಗಳು

2022-23ರಲ್ಲಿ ಸರ್ಕಾರದ ಒಟ್ಟು ಮಾರುಕಟ್ಟೆ ಸಾಲಗಳು ರೂ. 11,58,719 ಕೋಟಿಯಾಗಿದ್ದು. 2021-22 ಪರಿಷ್ಕೃತ ಅಂದಾಜು ರೂ.8,75,771 ಕೋಟಿಗಳಾಗಿದ್ದು ಬಜೆಟ್ ಅಂದಾಜು ರೂ.9,67,708 ಕೋಟಿಗಳಾಗಿದ್ದವು.

Deficit-Financing-English.jpg

***


(Release ID: 1794426) Visitor Counter : 514