ಹಣಕಾಸು ಸಚಿವಾಲಯ

ಆರೋಗ್ಯ ಬಜೆಟ್‌ನಲ್ಲಿ ತಂತ್ರಜ್ಞಾನವು ಮಹತ್ವದ ಸ್ಥಾನವನ್ನು ಪಡೆಯಿತು


ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್‌ನ ಭಾಗವಾಗಿ 'ರಾಷ್ಟ್ರೀಯ ಡಿಜಿಟಲ್ ಆರೋಗ್ಯ ಪರಿಸರ ವ್ಯವಸ್ಥೆ'ಗಾಗಿ ಹೊಸ ಮುಕ್ತ ವೇದಿಕೆಯನ್ನು ಘೋಷಿಸಲಾಗಿದೆ, "ಡಿಜಿಟಲ್ ಇಂಡಿಯಾ" ಕಡೆಗೆ ಮತ್ತೊಂದು ಪ್ರಮುಖ ಹೆಜ್ಜೆ

ರಾಷ್ಟ್ರೀಯ ಟೆಲಿ-ಮೆಂಟಲ್ ಆರೋಗ್ಯ ಕಾರ್ಯಕ್ರಮ ಎನ್ನುವ 23 ಟೆಲಿ-ಮೆಂಟಲ್ ಆರೋಗ್ಯ ಉತ್ಕೃಷ್ಟ ಕೇಂದ್ರಗಳ  ಜಾಲವನ್ನು ಪ್ರಾರಂಭಿಸಲಾಗುವುದು

Posted On: 01 FEB 2022 1:07PM by PIB Bengaluru

ಕೇಂದ್ರ ಹಣಕಾಸು ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಸಂಸತ್ತಿನಲ್ಲಿ ಮಂಡಿಸಿದ ಸಾಮಾನ್ಯ ಬಜೆಟ್‌ನಲ್ಲಿ ಆರೋಗ್ಯ ಕ್ಷೇತ್ರದಲ್ಲಿ  ತಂತ್ರಜ್ಞಾನವು ಮಹತ್ವದ ಸ್ಥಾನವನ್ನು  ಪಡೆದುಕೊಂಡಿದೆ. ದೇಶಾದ್ಯಂತ ಆರೋಗ್ಯ ಮತ್ತು ವೈದ್ಯಕೀಯ ಆರೈಕೆಯ ಸಿಗುವಿಕೆಯನ್ನು  ವಿಸ್ತರಿಸುವಲ್ಲಿ ಡಿಜಿಟಲ್ ತಂತ್ರಜ್ಞಾನವು ವಹಿಸುತ್ತಿರುವ ಪ್ರಮುಖ ಪಾತ್ರವನ್ನು ಸೂಚಿಸುವ ಎರಡು ಹೊಸ ಡಿಜಿಟಲ್ ಆಧಾರಿತ ಯೋಜನೆಗಳನ್ನು ಘೋಷಿಸಲಾಗಿದೆ.

ಕೋವಿಡ್-19 ಸಾಂಕ್ರಾಮಿಕದ ಛಾಯೆಯು ಇಂದು ಮಾಡಿದ ಪ್ರಕಟಣೆಗಳಲ್ಲಿ ಪ್ರತಿಫಲಿಸುತ್ತದೆ. ಆರಂಭದಲ್ಲಿ ಕೇಂದ್ರ ಹಣಕಾಸು ಸಚಿವರು, ಸಾಂಕ್ರಾಮಿಕ ರೋಗದಿಂದ ಆರೋಗ್ಯ ಮತ್ತು ಆರ್ಥಿಕ ಪರಿಣಾಮಗಳನ್ನು ಎದುರಿಸಬೇಕಾದವರಿಗೆ ಸಹಾನುಭೂತಿ ವ್ಯಕ್ತಪಡಿಸಿದರು. ಕಳೆದ ಎರಡು ವರ್ಷಗಳಲ್ಲಿ ಆರೋಗ್ಯ ಮೂಲಸೌಕರ್ಯಗಳ ವೇಗವರ್ಧಿತ ಸುಧಾರಣೆಯಿಂದಾಗಿ ದೇಶವು ಸವಾಲುಗಳನ್ನು ಎದುರಿಸುವ ಪ್ರಬಲ ಸ್ಥಾನದಲ್ಲಿದೆ ಎಂದು ಅವರು ಒತ್ತಿ ಹೇಳಿದರು. ತಮ್ಮ ಬಜೆಟ್ ಭಾಷಣದಲ್ಲಿ, ನಮ್ಮ ವ್ಯಾಕ್ಸಿನೇಷನ್ ಅಭಿಯಾನದ ವೇಗ ಮತ್ತು ವ್ಯಾಪ್ತಿಯು ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಹೆಚ್ಚು ಸಹಾಯ ಮಾಡಿದೆ ಎಂದು ಅವರು ಹೇಳಿದರು. "ಸಬ್ಕಾ ಪ್ರಯಾಸ್‌ನೊಂದಿಗೆ ನಾವು ನಮ್ಮ ಬಲವಾದ ಬೆಳವಣಿಗೆಯ ಪ್ರಯಾಣವನ್ನು ಮುಂದುವರಿಸುತ್ತೇವೆ ಎಂದು ನನಗೆ ವಿಶ್ವಾಸವಿದೆ" ಎಂದು ಹಣಕಾಸು ಸಚಿವರು ಹೇಳಿದರು.

ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಕಳೆದ ವರ್ಷದ ಬಜೆಟ್‌ನ ಉಪಕ್ರಮಗಳು ಗಮನಾರ್ಹ ಪ್ರಗತಿಯನ್ನು ಕಂಡಿವೆ ಮತ್ತು ಬಜೆಟ್‌ನಲ್ಲಿಯೂ ಸಾಕಷ್ಟು ಹಂಚಿಕೆಗಳನ್ನು ಒದಗಿಸಲಾಗಿದೆ. ಆರೋಗ್ಯ ಮೂಲಸೌಕರ್ಯಗಳ ಬಲವರ್ಧನೆ, ಲಸಿಕೆ ಕಾರ್ಯಕ್ರಮದ ತ್ವರಿತ ಅನುಷ್ಠಾನ ಮತ್ತು ಸಾಂಕ್ರಾಮಿಕ ರೋಗದ ಪ್ರಸ್ತುತ ಅಲೆಗೆ ರಾಷ್ಟ್ರವ್ಯಾಪಿ ಚೇತರಿಸಿಕೊಳ್ಳುವ ಪ್ರತಿಕ್ರಿಯೆಯು ಎಲ್ಲರಿಗೂ ಸ್ಪಷ್ಟವಾಗಿದೆ ಎಂದು ಅವರು ತಿಳಿಸಿದರು.

ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್

ರಾಷ್ಟ್ರೀಯ ಡಿಜಿಟಲ್ ಆರೋಗ್ಯ ಪರಿಸರ ವ್ಯವಸ್ಥೆಗಾಗಿ ಹೊಸ ಮುಕ್ತ ವೇದಿಕೆಯನ್ನು ಹೊರತರಲಾಗುವುದು. ಇದು ಆರೋಗ್ಯ ಪೂರೈಕೆದಾರರು ಮತ್ತು ಆರೋಗ್ಯ ಸೌಲಭ್ಯಗಳ ಡಿಜಿಟಲ್ ದಾಖಲಾತಿಗಳನ್ನು ಸಮಗ್ರವಾಗಿ ಒಳಗೊಂಡಿರುತ್ತದೆ, ಅನನ್ಯ ಆರೋಗ್ಯ ಗುರುತು, ಒಪ್ಪಿಗೆ ಚೌಕಟ್ಟು ಮತ್ತು ಆರೋಗ್ಯ ಸೌಲಭ್ಯಗಳಿಗೆ ಸಾರ್ವತ್ರಿಕ ಪ್ರವೇಶವನ್ನು ಒದಗಿಸುತ್ತದೆ.

ರಾಷ್ಟ್ರೀಯ ಟೆಲಿ-ಮೆಂಟಲ್ ಆರೋಗ್ಯ ಕಾರ್ಯಕ್ರಮ

ಸಾಂಕ್ರಾಮಿಕ ರೋಗವು ಎಲ್ಲಾ ವಯಸ್ಸಿನ ಜನರಲ್ಲಿ ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಹೆಚ್ಚಿಸಿದೆ ಎಂದು ಕೇಂದ್ರ ಹಣಕಾಸು ಸಚಿವರು ಹೇಳಿದರು. ಗುಣಮಟ್ಟದ ಮಾನಸಿಕ ಆರೋಗ್ಯ ಸಮಾಲೋಚನೆ ಮತ್ತು ಆರೈಕೆ ಸೇವೆಗಳಿಗೆ ಉತ್ತಮ ಪ್ರವೇಶವನ್ನು ಒದಗಿಸುವ ಸಲುವಾಗಿ, ಇಂದು 'ರಾಷ್ಟ್ರೀಯ ಟೆಲಿ ಮೆಂಟಲ್ ಹೆಲ್ತ್ ಪ್ರೋಗ್ರಾಂ' ಅನ್ನು ಘೋಷಿಸಲಾಗಿದೆ. ಇದು 23 ಟೆಲಿ-ಮೆಂಟಲ್ ಆರೋಗ್ಯ ಉತ್ಕೃಷ್ಟ ಕೇಂದ್ರಗಳ  ಜಾಲವನ್ನು ಒಳಗೊಂಡಿರುತ್ತದೆ, ನಿಮ್ಹಾನ್ಸ್ ಇದಕ್ಕೆ ನೋಡಲ್ ಕೇಂದ್ರವಾಗಿದೆ. ಇಂಟರ್‌ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಇನ್ಫಾರ್ಮೇಷನ್ ಟೆಕ್ನಾಲಜಿ-ಬೆಂಗಳೂರು (IIITB) ತಾಂತ್ರಿಕ  ಬೆಂಬಲವನ್ನು ಒದಗಿಸುತ್ತದೆ.

***(Release ID: 1794420) Visitor Counter : 280