ಹಣಕಾಸು ಸಚಿವಾಲಯ
ಸುಗಮ ಜೀವನದ ಮುಂದಿನ ಹಂತವನ್ನು ಅಮೃತ್ ಕಾಲದಲ್ಲಿ ಪ್ರಾರಂಭ: 2022-23 ರ ಬಜೆಟ್ ನಲ್ಲಿ ಘೋಷಣೆ
ಆಧುನಿಕ ಎಂಬೆಡೆಡ್ ಚಿಪ್ ಮತ್ತು ಭವಿಷ್ಯದ ತಂತ್ರಜ್ಞಾನದ ಮೂಲಕ ಇ ಪಾಸ್ ಪೋರ್ಟ್ ಗಳ ವಿತರಣೆಯನ್ನು 2022-23 ರಲ್ಲಿ ಆರಂಭಿಸಲು ಕ್ರಮ
ಉತ್ತಮ ನಗರ ಯೋಜನೆಯನ್ನು ಉತ್ತೇಜಿಸಲು ಕಟ್ಟಡ ಬೈಲಾ, ನಗರ ಯೋಜನೆ ಕಾರ್ಯಕ್ರಮಗಳ ಆಧುನೀಕರಣ ಮತ್ತು ಸಾರಿಗೆ ಆಧಾರಿತ ಅಭಿವೃದ್ಧಿಗೆ ಕ್ರಮ
ಭಾರತೀಯ ನಿರ್ದಿಷ್ಟ ಜ್ಞಾನಾಧಾರಿ ನಗರ ಯೋಜನೆ ಮತ್ತು ವಿನ್ಯಾಸಗಳನ್ನು ಉತ್ಕೃಷ್ಟತಾ ಕೇಂದ್ರಗಳ ಮೂಲಕ ಒದಗಿಸಲು ಪ್ರಸ್ತಾವನೆ
ವಿದ್ಯುನ್ಮಾನ ವಾಹನಗಳ ಪರಿಸರ ವ್ಯವಸ್ಥೆಗಾಗಿ ಬ್ಯಾಟರಿ ವಿನಿಮಯ ನೀತಿ ಮತ್ತು ಅಂತರ್ ಕಾರ್ಯಾಚರಣೆಗಳ ಗುಣಮಟ್ಟದ ವ್ಯವಸ್ಥೆ ರೂಪಿಸಲು ಕ್ರಮ
Posted On:
01 FEB 2022 1:10PM by PIB Bengaluru
“ಈ ಬಜೆಟ್ ಅಡಿಪಾಯ ಹಾಕಲು ಮತ್ತು ಮುಂದಿನ 25 ವರ್ಷಗಳ ಅಮೃತ ಕಾಲದ ಮೇಲೆ ಆರ್ಥಿಕತೆಯನ್ನು ಮುನ್ನಡೆಸಲು ನೀಲ ನಕ್ಷೆ ನೀಡಲು ಪ್ರಯತ್ನಿಸುತ್ತದೆ – ಭಾರತ 75 ರಿಂದ ಭಾರತ 100”. ಹೀಗೆ ಕೇಂದ್ರ ಬಜೆಟ್ 2022-23 ಅನ್ನು ಮಂಡಿಸುವಾಗ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಮ್ಮ ದೃಷ್ಟಿಕೋನವನ್ನು ಅನಾವರಣಗೊಳಿಸಿದರು. ಅಮೃತ್ ಕಾಲದಲ್ಲಿ ಸುಗಮ ಜೀವನವನ್ನು ಅವರು ಪ್ರಕಟಿಸಿದರು.
ಸುಗಮ ಜೀವನದ ಹೊಸ ಹಂತವು ಈ ಕೆಳಕಂಡಂತೆ ಒಳಗೊಂಡಿದ್ದು, ಇದು ಒಂದು ವಿಧಾನದಿಂದ ಮಾರ್ಗದರ್ಶಿಸಲ್ಪಡುತ್ತದೆ ಎಂದು ಕೇಂದ್ರ ಸಚಿವರು ವಿವರಿಸಿದರು.
- ರಾಜ್ಯಗಳ ಸಕ್ರಿಯ ಪಾಲ್ಗೊಳ್ಳುವಿಕೆ
- ಡಿಜಿಟಲ್ ಕೈಪಿಡಿ ಪ್ರಕ್ರಿಯೆ ಮತ್ತು ಮಧ್ಯಸ್ಥಿಕೆ
- ಕೇಂದ್ರ ಮತ್ತು ರಾಜ್ಯಗಳ ನಡುವೆ ಸಮಗ್ರ ಐಟಿ ಸಂಪರ್ಕ ನಿರ್ಮಾಣ
ಇದು ಎಲ್ಲಾ ನಾಗರಿಕ ಕೇಂದ್ರಿತ ಸೇವೆಗಳಿಗೆ ಒಂದೇ ಪ್ರವೇಶ ಕೇಂದ್ರವನ್ನು ನಿರ್ಮಿಸಲು ಸಹಾಯ ಮಾಡುತ್ತದೆ ಮತ್ತು ಪ್ರಮಾಣೀಕರಣ ತರುತ್ತವೆ ಹಾಗೂ ಅತಿಕ್ರಮಣದ ಅನುಸರಣೆಗಳನ್ನು ತೊಡೆದುಹಾಕುತ್ತದೆ.
ಚಿಪ್ ಎಂಬೆಡೆಡ್ ಇ – ಪಾಸ್ ಪೋರ್ಟ್ ಗಳ ವಿತರಣೆ
ಆಧುನಿಕ ಎಂಬೆಡೆಡ್ ಚಿಪ್ ಮತ್ತು ಭವಿಷ್ಯದ ತಂತ್ರಜ್ಞಾನದ ಮೂಲಕ ಇ ಪಾಸ್ ಪೋರ್ಟ್ ಗಳ ವಿತರಣೆಯನ್ನು 2022-23 ರಲ್ಲಿ ಆರಂಭಿಸಲು ಕ್ರಮ ಕೈಗೊಳ್ಳುವುದಾಗಿ ಕೇಂದ್ರ ಹಣಕಾಸು ಸಚಿವರು ಪ್ರಕಟಿಸಿದ್ದಾರೆ. ಇದು ನಾಗರಿಕರಿಗೆ ಅವರ ಸಾಗರೋತ್ತರ ಪ್ರಯಾಣದ ಅನುಕೂಲವನ್ನು ಇನ್ನಷ್ಟು ಹೆಚ್ಚಿಸುತ್ತದೆ ಎಂದಿದ್ದಾರೆ.
ಕಟ್ಟಡಗಳ ಬೈಲಾದಲ್ಲಿ ಆಧುನೀಕರಣ ಮತ್ತು ಪಟ್ಟಣ/ನಗರ ಯೋಜನೆ
ಕಟ್ಟಡಗಳ ಬೈಲಾದಲ್ಲಿ ಆಧುನೀಕರಣ, ಪಟ್ಟಣ ಯೋಜನೆ ಕಾರ್ಯಕ್ರಮಗಳು [ಟಿಪಿಎಸ್] ಮತ್ತು ಸಾರಿಗೆ ಆಧಾರಿತ ಅಭಿವೃದ್ಧಿ [ಟಿಒಡಿ] ಕಾರ್ಯಕ್ರಮಗಳನ್ನು ಹಣಕಾಸು ಸಚಿವರು ಪ್ರಸ್ತಾಪಿಸಿದ್ದು, ಈ ಮೂಲಕ ನಗರ ಯೋಜನಾ ವಲಯದಲ್ಲಿ ಸುಧಾರಣೆಗಳನ್ನು ತರುವುದಾಗಿ ಹೇಳಿದ್ದಾರೆ. ಇದು ಜನತೆ ಸಮೂಹ ಸಾರಿಗೆ ವ್ಯವಸ್ಥೆಗಳ ಸನಿಹದಲ್ಲಿ ವಾಸಿಸಲು ಮತ್ತು ಕೆಲಸ ಮಾಡಲು ಸುಧಾರಣೆಗಳನ್ನು ಸುಗಮಗೊಳಿಸುತ್ತದೆ.
ಈ ನಿಟ್ಟಿನಲ್ಲಿ ಕೇಂದ್ರ ಹಣಕಾಸು ಸಚಿವರು “ಸಮೂಹ ಸಾರಿಗೆ ಯೋಜನೆಗಳಿಗೆ ಕೇಂದ್ರ ಸರ್ಕಾರ ಹಣಕಾಸು ಬೆಂಬಲ ನೀಡಲಿದೆ ಮತ್ತು ಅಮೃತ್ ಯೋಜನೆಯು ಕ್ರಿಯಾ ಯೋಜನೆ ರೂಪಿಸಲು ಮತ್ತು ರಾಜ್ಯಗಳಿಂದ ಟಿಒಡಿ ಮತ್ತು ಟಿಪಿಎಸ್ ಅನ್ನು ಸುಗಮಗೊಳಿಸಿ ಅವುಗಳನ್ನು ಅನುಷ್ಠಾನಗೊಳಿಸಲು ಆದ್ಯತೆ ನೀಡುತ್ತದೆ ಎಂದು ಹೇಳಿದ್ದಾರೆ.
ನಗರ ಯೋಜನೆಗಾಗಿ ಉತ್ಕೃಷ್ಟತಾ ಕೇಂದ್ರ ಸ್ಥಾಪನೆ
ನಗರದ ಯೋಜನೆ ಮತ್ತು ವಿನ್ಯಾಸದಲ್ಲಿ ಭಾರತದ ನಿರ್ದಿಷ್ಟ ಜ್ಞಾನವನ್ನು ಅಭಿವೃದ್ಧಿಪಡಿಸಲು ಮತ್ತು ಈ ಪ್ರದೇಶದಲ್ಲಿ ಪ್ರಮಾಣೀಕೃತ ತರಬೇತಿ ನೀಡಲು ವಿವಿಧ ಪ್ರದೇಶಗಳಲ್ಲಿ ಐದು ಅಸ್ಥಿತ್ವದಲ್ಲಿರುವ ಶೈಕ್ಷಣಿಕ ಸಂಸ್ಥೆಗಳನ್ನು ಉತ್ಕೃಷ್ಟತಾ ಕೇಂದ್ರಗಳನ್ನಾಗಿ ಅಭಿವೃದ್ಧಿಪಡಿಸಲು ಪ್ರಸ್ತಾಪಿಸಲಾಗಿದೆ. ಈ ಕೇಂದ್ರಗಳಿಗೆ 250 ಕೋಟಿ ರೂಪಾಯಿ ದತ್ತಿ ನಿಧಿ ನೀಡಲಾಗುವುದು ಎಂದು ಶ್ರೀಮತಿ ನಿರ್ಮಲಾ ಸೀತಾರಾಮನ್ ಹೇಳಿದರು.
ಬ್ಯಾಟರಿ ವಿನಿಯಮ ನೀತಿ
ನಗರ ಪ್ರದೇಶಗಳಲ್ಲಿ ಬ್ಯಾಟರಿ ಚಾರ್ಜಿಂಗ್ ಕೇಂದ್ರಗಳ ಸ್ಥಾಪನೆಗಾಗಿ ತಲೆದೋರಿರುವ ನಿರ್ಬಂಧಗಳ ಕುರಿತು ಮಾಹಿತಿ ನೀಡಿದ ಹಣಕಾಸು ಸಚಿವರು, ಇದಕ್ಕಾಗಿ ಬ್ಯಾಟರಿ ವಿನಿಮಯ ನೀತಿಯನ್ನು ಹೊರ ತರುವುದಾಗಿ ಪ್ರಕಟಿಸಿದರು ಮತ್ತು ಅಂತರ್ ಕಾರ್ಯಾಚರಣೆ ಮಾನದಂಡಗಳು, “ಬ್ಯಾಟರಿ ಅಥವಾ ಇಂಧನ ಒಂದು ಸೇವೆಯಾಗಿ” ಸುಸ್ಥಿರ ಮತ್ತು ಹೊಸ ವ್ಯವಹಾರ ಮಾದರಿಗಳನ್ನು ಅಭಿವೃದ್ಧಿಪಡಿಸಲು ಖಾಸಗಿ ವಲಯವನ್ನು ಪ್ರೋತ್ಸಾಹಿಸಲಾಗುವುದು: ಎಂದು ಸಚಿವರು ಹೇಳಿದರು.
***
(Release ID: 1794356)
Visitor Counter : 340