ಹಣಕಾಸು ಸಚಿವಾಲಯ

​​​​​​​ಭಾರತ@75ನಿಂದ ಭಾರತ@100ಗೆ ಆರ್ಥಿಕತೆಯನ್ನು ಕೊಂಡೊಯ್ಯಲು ಭದ್ರ ಬುನಾದಿ ಹಾಗೂ ಪಥ ತೋರುವ ಬಜೆಟ್


ಮುಂದಿನ 25 ವರ್ಷಗಳ ಕಾಲ ಸಮಗ್ರ ಆರ್ಥಿಕತೆಗೆ ಒತ್ತು ಮತ್ತು ತಂತ್ರಜ್ಞಾನ ಆಧಾರಿತ ಅಭಿವೃದ್ಧಿ

ನಾಲ್ಕು ಆದ್ಯತೆಗಳೊಂದಿಗೆ ದೂರದೃಷ್ಟಿಯ ಮತ್ತು ಸಮಗ್ರ ಬಜೆಟ್

ಪ್ರಸ್ತಕ ವರ್ಷದ ಪ್ರಗತಿ ಶೇ.9.2ರಷ್ಟು ಅಂದಾಜು, ಇದು ಎಲ್ಲ ಆರ್ಥಿಕತೆಗಳಿಗಿಂತಲೂ ಅತಿ ಹೆಚ್ಚು

ದೊಡ್ಡ ಸಾರ್ವಜನಿಕ ಹೂಡಿಕೆಗಳ ಮಾರ್ಗದರ್ಶನ ನೀಡಲಿರುವ ಪಿಎಂ ಗತಿಶಕ್ತಿ

ಬಲಿಷ್ಠ ಪ್ರಗತಿಯತ್ತ ಸಬ್ ಕಾ ಪ್ರಯಾಸ್

Posted On: 01 FEB 2022 12:54PM by PIB Bengaluru

“ನಾವು ಆಜಾದಿ ಕಾ ಅಮೃತ ಮಹೋತ್ಸವ ಆಚರಿಸುತ್ತಿದ್ದೇವೆ ಮತ್ತು ನಾವು ಅಮೃತ ಕಾಲ ಅಂದರೆ ಭಾರತ ಸ್ವಾತಂತ್ರ್ಯಗಳಿಸಿ 100 ವರ್ಷ ಪೂರೈಸುವ ಮುಂದಿನ 25 ವರ್ಷಗಳಿಗೆ ಪ್ರವೇಶಿಸಿದ್ದೇವೆ” ಎಂದು ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಸಂಸತ್ತಿನಲ್ಲಿಂದು ಕೇಂದ್ರ ಬಜೆಟ್ 2022-23 ಮಂಡಿಸುತ್ತಾ ಹೇಳಿದರು. ಭಾರತ@75 ನಿಂದ ಭಾರತ @100ಗೆ ಮುನ್ನಡೆಯಲು ಮುಂದಿನ 25 ವರ್ಷಗಳ ಅಮೃತ ಕಾಲದಲ್ಲಿ ಆರ್ಥಿಕತೆ ಮುನ್ನಡೆಸಲು ಈ ಬಜೆಟ್ ಭದ್ರ ಬುನಾದಿ ಮತ್ತು ನೀಲನಕ್ಷೆ ನೀಡಲಿದೆ ಎಂದು ಅವರು ಹೇಳಿದರು.

Quote Covers_M2.jpg

 

ಅಮೃತ ಕಾಲದ ಮುನ್ನೋಟ

ಎಲ್ಲರ ಸಮಗ್ರ ಕಲ್ಯಾಣಕ್ಕೆ ಒತ್ತು ನೀಡಲಾಗುತ್ತಿದ್ದು, ಅದರಲ್ಲಿ  ಸೂಕ್ಷ್ಮ ಆರ್ಥಿಕ ಮಟ್ಟಕ್ಕೆ ಪೂರಕವಾಗಿ ಸೂಕ್ಷ್ಮ ಆರ್ಥಿಕ ಪ್ರಗತಿಗೆ ಕ್ರಮ ಕೈಗೊಳ್ಳಲಾಗುವುದು; ಡಿಜಿಟಲ್ ಆರ್ಥಿಕತೆ ಮತ್ತು ಫಿನ್ ಟೆಕ್(ಹಣಕಾಸು ತಂತ್ರಜ್ಞಾನ)ಗೆ ಉತ್ತೇಜನ; ತಂತ್ರಜ್ಞಾನ ಆಧಾರಿತ ಅಭಿವೃದ್ಧಿ; ಇಂಧನ ಪರಿವರ್ತನೆ ಮತ್ತು ಹವಾಮಾನ ವೈಪರೀತ್ಯ ಹಾಗೂ ಖಾಸಗಿ ಹೂಡಿಕೆಯೊಂದಿಗೆ ಸಾರ್ವಜನಿಕ ಬಂಡವಾಳ ಹೂಡಿಕೆಯನ್ನು ಆಕರ್ಷಿಸುವ ಜತೆಗೆ, ಖಾಸಗಿ ಹೂಡಿಕೆಯಲ್ಲಿ ಜನರನ್ನು ಸೆಳೆಯುವುದು, ಆ ಮೂಲಕ ಮುಂದಿನ 25 ವರ್ಷಗಳಲ್ಲಿ ಕೆಲವು ಗುರಿಗಳನ್ನು ಸಾಧಿಸುವ ಮೂಲಕ ನಮ್ಮ ಮುನ್ನೋಟವನ್ನು ತಲುಪುವುದಾಗಿದೆ ಎಂದು ಸಚಿವರು ಹೇಳಿದರು.  

ನಾಲ್ಕು ಆದ್ಯತೆಗಳು:

ಪಿಎಂ ಗತಿಶಕ್ತಿ; ಸಮಗ್ರ ಅಭಿವೃದ್ಧಿ; ಉತ್ಪಾದನೆ ವೃದ್ಧಿ ಮತ್ತು ಹೂಡಿಕೆ; ಸೌರಶಕ್ತಿಯ ಅವಕಾಶಗಳ ಬಳಕೆ; ಇಂಧನ ಪರಿವರ್ತನೆ ಮತ್ತು ಹವಾಮಾನ ವೈಪರೀತ್ಯ ಮತ್ತು ಹಣಕಾಸು ಹೂಡಿಕೆ ಈ ನಾಲ್ಕಕ್ಕೆ ಭವಿಷ್ಯದ ಮತ್ತು ಸಮಗ್ರ ಬಜೆಟ್ ಗೆ ಆದ್ಯತೆ ನೀಡಲಾಗಿದೆ ಎಂದು ಸಚಿವರು ಹೇಳಿದರು.

ಪ್ರಗತಿಗಾಗಿ ಬಜೆಟ್:

ಪ್ರಸಕ್ತ ಹಣಕಾಸು ವರ್ಷ ಶೇ.9.2ರಷ್ಟು ಪ್ರಗತಿ ಅಂದಾಜಿಸಲಾಗಿದೆ ಮತ್ತು ಎಲ್ಲಾ ಆರ್ಥಿಕತೆಗಳಿಗೆ ಹೋಲಿಸಿದರೆ ಭಾರತದ ಪ್ರಗತಿ ಅತಿ ಹೆಚ್ಚಿನದಾಗಿದೆ ಎಂದು ಹಣಕಾಸು ಸಚಿವರು ಪ್ರಮುಖವಾಗಿ ಪ್ರಸ್ತಾಪಿಸಿದರು. ಈ ದೂರದೃಷ್ಟಿಯ ಮತ್ತು ಸಮಗ್ರ ಬಜೆಟ್ ಪ್ರಗತಿಗೆ ಒತ್ತು ನೀಡುವುದನ್ನು ಮುಂದುವರಿಸಿದೆ. ಇದರಿಂದ ನಮ್ಮ ಯುವಜನತೆ, ಮಹಿಳೆಯರು, ರೈತರು, ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ನೇರ ಲಾಭ ಖಾತ್ರಿಯಾಗಿದೆ ಎಂದರು. ಪಿಎಂ ಗತಿಶಕ್ತಿ ಆಧುನಿಕ ಮೂಲಸೌಕರ್ಯಕ್ಕೆ ದೊಡ್ಡ ಸಾರ್ವಜನಿಕ ಹೂಡಿಕೆಗಳಿಗೆ ಮಾರ್ಗದರ್ಶಿಯಾಗಲಿದೆ. ಇದರಿಂದ ಬಹು ಮಾದರಿ ಆಯಾಮದ ಸಮನ್ವಯದೊಂದಿಗೆ ಹೆಚ್ಚಿನ ಅನುಕೂಲವಾಗಲಿದೆ. ದೇಶದ ಸದೃಢ ಸ್ಥಿತಿ ಸ್ಥಾಪಕತ್ವ ಆರ್ಥಿಕತೆಯ ಚೇತರಿಕೆ ಮತ್ತು ಕ್ಷಿಪ್ರ ಪುಟಿದೇಳುವುದರಿಂದ ಪ್ರತಿಫಲನಗೊಂಡಿದೆ ಎಂದು ಅವರು ಹೇಳಿದರು.

ಲಸಿಕೀಕರಣ ಅಭಿಯಾನದ ವೇಗ ಮತ್ತು ವ್ಯಾಪ್ತಿ:

ಲಸಿಕೀಕರಣ ಅಭಿಯಾನದ ವ್ಯಾಪ್ತಿ ಮತ್ತು ವೇಗದ ಕುರಿತಂತೆ ಸಚಿವರು ವಿಶ್ವಾಸ ವ್ಯಕ್ತಪಡಿಸಿದರು ಮತ್ತು ಆರೋಗ್ಯ ಮೂಲಸೌಕರ್ಯದಲ್ಲಿ ಕಳೆದ ಎರಡು ವರ್ಷಗಳಲ್ಲಿ ಕೈಗೊಂಡ ವೇಗದ ಪ್ರಗತಿ ನಾವು ಸವಾಲುಗಳನ್ನು ಎದುರಿಸಲು ಸಹಕಾರಿಯಾಯಿತು ಎಂದರು. ನಾವು ಒಮಿಕ್ರಾನ್ ಅಲೆಯ ನಡುವೆ ಇದ್ದೇವೆ. ಅದರಿಂದ ಪ್ರಕರಣಗಳು ಹೆಚ್ಚುತ್ತಿವೆ. ಆದರೆ ಸೌಮ್ಯ ಲಕ್ಷಣಗಳು ಕಂಡುಬರುತ್ತಿವೆ ಮತ್ತು ಸದೃಢ ಪ್ರಗತಿಯ ಪಯಣ ಮುಂದುವರಿಕೆಗೆ ‘ಸಬ್ ಕಾ ಪ್ರಯಾಸ್’ ಭಾರತಕ್ಕೆ ಸಹಕಾರಿಯಾಗಲಿದೆ ಎಂದರು. ಬಡವರು ಎಲ್ಲ ಅವಕಾಶಗಳನ್ನು ಬಳಸಿಕೊಳ್ಳುವಂತೆ ಉತ್ತೇಜಿಸುವ ಬಲಿಷ್ಠ ಬದ್ಧತೆಯನ್ನು ವ್ಯಕ್ತಪಡಿಸಿದ ಸಚಿವರು, ನಾನಾ ವರ್ಗದ ಆದಾಯ ಮಿತಿಗೆ ಒಳಪಡುವ ಅತಿದೊಡ್ಡ ಜನಸಂಖ್ಯೆ ಆಗಿರುವ ಮಧ್ಯಮ ವರ್ಗದವರಿಗೆ ಪೂರಕ ಆರ್ಥಿಕ ವ್ಯವಸ್ಥೆ ಹಾಗೂ ಅಗತ್ಯ ನೆರವು ಒದಗಿಸಲಾಗುವುದು ಎಂದು ಸಚಿವರು ಹೇಳಿದರು.

***



(Release ID: 1794232) Visitor Counter : 310