ಹಣಕಾಸು ಸಚಿವಾಲಯ

ವಿಶೇಷ ಆರ್ಥಿಕ ವಲಯಗಳ ಕಾಯಿದೆಯ ಬದಲು ಹೊಸ ಕಾಯ್ದೆ


ಗಿಫ್ಟ್ ಸಿಟಿಯಲ್ಲಿರುವ ವಿಶ್ವದರ್ಜೆಯ ವಿದೇಶಿ ವಿಶ್ವವಿದ್ಯಾನಿಲಯಗಳು ಕೋರ್ಸ್‌ಗಳನ್ನು ನೀಡಲು, ದೇಶೀಯ ನಿಯಮಗಳಿಂದ ಬಹುತೇಕ ಮುಕ್ತಗೊಳಿಸಲಾಗುವುದು

ಗಿಫ್ಟ್ ಸಿಟಿಯಲ್ಲಿ ಅಂತಾರಾಷ್ಟ್ರೀಯ ಮಧ್ಯಸ್ಥಿಕೆ ಕೇಂದ್ರದ ಸ್ಥಾಪನೆ

ಗಿಫ್ಟ್ ಸಿಟಿಯು ದೇಶದಲ್ಲಿ ಸುಸ್ಥಿರ ಮತ್ತು ಹವಾಮಾನ ಹಣಕಾಸಿನ ಜಾಗತಿಕ ಬಂಡವಾಳಕ್ಕಾಗಿ ಸೇವೆಗಳನ್ನು ಸುಗಮಗೊಳಿಸಲಿದೆ

Posted On: 01 FEB 2022 1:00PM by PIB Bengaluru

"ವಿಶೇಷ ಆರ್ಥಿಕ ವಲಯಗಳ ಕಾಯಿದೆಯನ್ನು ಹೊಸ ಕಾಯ್ದೆಯ ಮೂಲಕ ಬದಲಾಯಿಸಲಾಗುವುದು. ಅದು ರಾಜ್ಯಗಳು ಉದ್ಯಮ ಮತ್ತು ಸೇವಾ ಕೇಂದ್ರಗಳ ಅಭಿವೃದ್ಧಿಯಲ್ಲಿ ಪಾಲುದಾರರಾಗಲು ಅನುವು ಮಾಡಿಕೊಡುತ್ತದೆ" ಎಂದು ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಇಂದು ಸಂಸತ್ತಿನಲ್ಲಿ ಮಂಡಿಸಿದ 2022-23ನೇ ಸಾಲಿನ ಕೇಂದ್ರ ಬಜೆಟ್ ನಲ್ಲಿ ಹೇಳಿದ್ದಾರೆ. ಲಭ್ಯವಿರುವ ಮೂಲಸೌಕರ್ಯಗಳನ್ನು ಅತ್ಯುತ್ತಮವಾಗಿ ಬಳಸಿಕೊಳ್ಳಲು ಮತ್ತು ರಫ್ತುಗಳ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸಲು ಇದು ಅಸ್ತಿತ್ವದಲ್ಲಿರುವ ಮತ್ತು ಹೊಸ ಎಲ್ಲಾ ದೊಡ್ಡ ಕೈಗಾರಿಕಾ ಎನ್‌ಕ್ಲೇವ್‌ಗಳನ್ನು ಒಳಗೊಳ್ಳುತ್ತದೆ ಎಂದು ಅವರು ಹೇಳಿದರು.

ಗಿಫ್ಟ್ ಸಿಟಿಯನ್ನು ಹೆಚ್ಚು ಆಕರ್ಷಕವಾಗಿಸಲು ಅವರು ವಿವಿಧ ಉಪಕ್ರಮಗಳನ್ನು ಪ್ರಸ್ತಾಪಿಸಿದರು.

ಗಿಫ್ಟ್-ಐ ಎಫ್ ಎಸ್ ಸಿ

ಹಣಕಾಸು ಸೇವೆಗಳು ಮತ್ತು ತಂತ್ರಜ್ಞಾನಕ್ಕಾಗಿ ಮಾನವ ಸಂಪನ್ಮೂಲಗಳ ಐಎಫ್‌ಎಸ್‌ಸಿಎ ಹೊರತುಪಡಿಸಿ ವಿಶ್ವ ದರ್ಜೆಯ ವಿದೇಶಿ ವಿಶ್ವವಿದ್ಯಾನಿಲಯಗಳು ಮತ್ತು ಸಂಸ್ಥೆಗಳು ಗಿಫ್ಟ್ ಸಿಟಿಯಲ್ಲಿ ಹಣಕಾಸು ನಿರ್ವಹಣೆ, ಫಿನ್‌ಟೆಕ್, ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ಗಣಿತದ ಕೋರ್ಸ್‌ಗಳನ್ನು ನೀಡಲು ಉನ್ನತ ಮಟ್ಟದ ಲಭ್ಯತೆಯನ್ನು ಸುಲಭಗೊಳಿಸಲು ದೇಶೀಯ ನಿಯಮಗಳಿಂದ ಮುಕ್ತಗೊಳಿಸಲಾಗುವುದು ಎಂದು ಹಣಕಾಸು ಸಚಿವರು ತಿಳಿಸಿದರು.

ಅಂತರರಾಷ್ಟ್ರೀಯ ಮಧ್ಯಸ್ಥಿಕೆ ಮಂಡಳಿಯ ಅಡಿಯಲ್ಲಿ ವಿವಾದಗಳನ್ನು ಸಕಾಲಿಕವಾಗಿ ಇತ್ಯರ್ಥಪಡಿಸಲು ಗಿಫ್ಟ್ ಸಿಟಿಯಲ್ಲಿ ಅಂತರರಾಷ್ಟ್ರೀಯ ಮಧ್ಯಸ್ಥಿಕೆ ಕೇಂದ್ರವನ್ನು ಸ್ಥಾಪಿಸುವುದಾಗಿ ಶ್ರೀಮತಿ ಸೀತಾರಾಮನ್ ಪ್ರಸ್ತಾಪಿಸಿದರು. ಇದಲ್ಲದೆ, ದೇಶದಲ್ಲಿ ಸುಸ್ಥಿರ ಮತ್ತು ಹವಾಮಾನ ಹಣಕಾಸಿಗಾಗಿ ಜಾಗತಿಕ ಬಂಡವಾಳದ ಸೇವೆಗಳನ್ನು ಗಿಫ್ಟ್ ಸಿಟಿಯಲ್ಲಿ ಪ್ರೋತ್ಸಾಹಿಸಲಾಗುವುದು ಎಂದು ಅವರು ಹೇಳಿದರು.

***



(Release ID: 1794229) Visitor Counter : 233