ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ
5ನೇ ಆವೃತ್ತಿಯ ʻಪರೀಕ್ಷಾ ಪೆ ಚರ್ಚಾʼ-2022ರಲ್ಲಿ ಭಾಗವಹಿಸಲು ನೋಂದಣಿ ದಿನಾಂಕವನ್ನು ಫೆಬ್ರವರಿ 3, 2022ರವರೆಗೆ ವಿಸ್ತರಿಸಲಾಗಿದೆ
प्रविष्टि तिथि:
28 JAN 2022 12:53PM by PIB Bengaluru
`ಪರೀಕ್ಷಾ ಪೆ ಚರ್ಚಾ’ ಕಾರ್ಯಕ್ರಮದ 5ನೇ ಆವೃತ್ತಿಯಲ್ಲಿ ಭಾಗವಹಿಸುವ ಕೊನೆಯ ದಿನಾಂಖವನ್ನು ಫೆಬ್ರವರಿ 3, 2022 ರವರೆಗೆ ವಿಸ್ತರಿಸಲಾಗಿದೆ. ʻಪರಿಕ್ಷಾ ಪೇ ಚರ್ಚಾʼ - ಇದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಪರಿಕಲ್ಪನೆಯಲ್ಲಿ ಅರಳಿದ ವಿಶಿಷ್ಟ ಸಂವಾದಾತ್ಮಕ ಕಾರ್ಯಕ್ರಮ. ಇದರಲ್ಲಿ ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು ಪ್ರಧಾನಿ ಅವರೊಂದಿಗೆ ಸಂವಾದ ನಡೆಸುತ್ತಾರೆ. ವಿದೇಶಗಳಿಂದಲೂ ಮಕ್ಕಳು, ಪೋಷಕರು, ಶಿಕ್ಷಕರು ಇದರಲ್ಲಿ ಭಾಗವಹಿಸುತ್ತಾರೆ. ಜೀವನವನ್ನು ಉತ್ಸವವಾಗಿ ಆಚರಿಸುವ ಸಲುವಾಗಿ ಪರೀಕ್ಷೆಗಳ ಒತ್ತಡದಿಂದ ಹೊರಬರುವ ಮಾರ್ಗೋಪಾಯಗಳ ಬಗ್ಗೆ ಪ್ರಧಾನಿ ಮಕ್ಕಳೊಂದಿಗೆ ಚರ್ಚಿಸುತ್ತಾರೆ.
ಈ ಕಾರ್ಯಕ್ರಮದವನ್ನು 2021ರ ಮಾದರಿಯಲ್ಲೇ ಆನ್‌ಲೈನ್ ಸ್ವರೂಪದಲ್ಲಿ ನಡೆಸಲು ಪ್ರಸ್ತಾಪಿಸಲಾಗಿದೆ. 9 ರಿಂದ 12ನೇ ತರಗತಿಗಳ ಶಾಲಾ ವಿದ್ಯಾರ್ಥಿಗಳನ್ನು, ಶಿಕ್ಷಕರು ಮತ್ತು ಪೋಷಕರನ್ನು ಆನ್‌ಲೈನ್ ಸ್ಪರ್ಧೆಯ ಮೂಲಕ ಆಯ್ಕೆ ಮಾಡಲಾಗುವುದು. 2021ರ ಡಿಸೆಂಬರ್ 28 ರಿಂದ ಫೆಬ್ರವರಿ 3, 2022 ರವರೆಗೆ https://innovateindia.mygov.in/ppc-2022/ ಪೋರ್ಟಲ್‌ನಲ್ಲಿ ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ.
***
(रिलीज़ आईडी: 1793243)
आगंतुक पटल : 220
इस विज्ञप्ति को इन भाषाओं में पढ़ें:
Bengali
,
English
,
Urdu
,
हिन्दी
,
Marathi
,
Manipuri
,
Punjabi
,
Gujarati
,
Tamil
,
Telugu
,
Malayalam