ಹಣಕಾಸು ಸಚಿವಾಲಯ
azadi ka amrit mahotsav

ರಾಜ್ಯಗಳಿಗೆ ತೆರಿಗೆ ಹಂಚಿಕೆಯ ಮುಂಗಡ ಕಂತು 47,541 ಕೋಟಿ ರೂ. ಬಿಡುಗಡೆಗೆ ಒಪ್ಪಿಗೆ ನೀಡಿದ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್


2022ರ ಜನವರಿಯಲ್ಲಿ ಒಟ್ಟು 95,082 ಕೋಟಿ ರೂ. ಸ್ವೀಕರಿಸಲಿರುವ ರಾಜ್ಯಗಳು

2ನೇ ಮುಂಗಡ ಕಂತಿನ ಬಿಡುಗಡೆಯೊಂದಿಗೆ ತೆರಿಗೆ ಹಂಚಿಕೆಗಿಂತ ಅಧಿಕ ಮತ್ತು ಬಜೆಟ್ ಮಾಡಲಾಗಿದ್ದಕ್ಕಿಂತ ಹೆಚ್ಚುವರಿಯಾಗಿ 90,082 ಕೋಟಿ ರೂ. ಸ್ವೀಕರಿಸಲಿರುವ ರಾಜ್ಯಗಳು

प्रविष्टि तिथि: 20 JAN 2022 1:05PM by PIB Bengaluru

ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಇಂದು ರಾಜ್ಯ ಸರ್ಕಾರಗಳಿಗೆ ತೆರಿಗೆ ಹಂಚಿಕೆಯ ಮುಂಗಡ ಕಂತು 47,541 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲು ಒಪ್ಪಿಗೆ ನೀಡಿದ್ದಾರೆ. ಇದು 2022ರ ಜನವರಿ ತಿಂಗಳಿಗೆ ಮಾಮೂಲಿಯಂತೆ ಹಂಚಿಕೆಯಾಗುವ ತೆರಿಗೆಯ ಜತೆಗೆ ಹೆಚ್ಚುವರಿಯಾಗಿದ್ದು, ಅದನ್ನು ಇಂದು ಬಿಡುಗಡೆ ಮಾಡಲಾಗಿದೆ.

ಇದರಿಂದಾಗಿ ರಾಜ್ಯಗಳು 2022ರ ಜನವರಿ ತಿಂಗಳಲ್ಲಿ ಒಟ್ಟು 95,082 ಕೋಟಿ ಅಥವಾ ತಮಗೆ ಹಂಚಿಕೆಯಾಗಿರುವುದಕ್ಕಿಂತ ದುಪ್ಪಟ್ಟು ಹಣವನ್ನು ಸ್ವೀಕರಿಸಲಿವೆ. ಬಿಡುಗಡೆಯಾಗಲಿರುವ ರಾಜ್ಯವಾರು ಮೊತ್ತ ಹಾಗೂ ವಿವರಗಳನ್ನು ಕೆಳಗೆ ಲಗತ್ತಿಸಲಾಗಿದೆ.

ಭಾರತ ಸರ್ಕಾರ ರಾಜ್ಯಗಳ ತೆರಿಗೆ ಹಂಚಿಕೆಯ ಮೊದಲ ಮುಂಗಡ ಕಂತು 47,541 ಕೋಟಿ ರೂ.ಗಳನ್ನು 2021ರ ನವೆಂಬರ್ 22ರಂದೇ ಬಿಡುಗಡೆ ಮಾಡಿದ್ದನ್ನು ಇಲ್ಲಿ ಉಲ್ಲೇಖಿಸಬಹುದಾಗಿದೆ. ಇಂದು ಎರಡನೇ ಮುಂಗಡ ಕಂತು ಬಿಡುಗಡೆಯಾಗುವುದರೊಂದಿಗೆ ರಾಜ್ಯಗಳು ಒಟ್ಟು ತೆರಿಗೆ ಹಂಚಿಕೆಯಲ್ಲಿ ಹೆಚ್ಚುವರಿಯಾಗಿ 90,082 ಕೋಟಿ ರೂ.ಗಳನ್ನು ಸ್ವೀಕರಿಸಲಿವೆ ಮತ್ತು ಇದು ಜನವರಿ 2022ರ ವರೆಗೆ ಅಂದಾಜಿಸಿದ್ದಕ್ಕಿಂತ ಅಧಿಕ ಮೊತ್ತವಾಗಿದೆ.  

ಅಲ್ಲದೆ ಭಾರತ ಸರ್ಕಾರ 2021-22ನೇ ಹಣಕಾಸು ವರ್ಷದಲ್ಲಿ ರಾಜ್ಯಗಳಿಗೆ ಉಂಟಾಗುವ ಜಿಎಸ್ ಟಿ ಪರಿಹಾರದ ಕೊರತೆಯನ್ನು ನೀಗಿಸಲು 1.59 ಲಕ್ಷ ಕೋಟಿ ರೂ. ಮೊತ್ತದ ಸಾಲವನ್ನು ಆಗಾಗ್ಗೆ ನೀಡುತ್ತಿದ್ದು, ಅದು 2021ರ ಅಕ್ಟೋಬರ್ ಅಂತ್ಯಕ್ಕೆ ಪೂರ್ಣಗೊಂಡಿದೆ.

ಕೋವಿಡ್-19 ಸಾಂಕ್ರಾಮಿಕದ  ಹಾನಿಕಾರಕ ಪರಿಣಾಮಗಳನ್ನು ನಿವಾರಿಸಲು ಮತ್ತು ಬಂಡವಾಳ ಹಾಗೂ ಅಭಿವೃದ್ಧಿ ವೆಚ್ಚವನ್ನು ವೇಗಗೊಳಿಸಲು ರಾಜ್ಯಗಳ ಶಕ್ತಿವರ್ಧನೆಗೆ ಭಾರತ ಸರ್ಕಾರ ಬದ್ಧವಾಗಿದ್ದು, ಅದಕ್ಕೆ ಅನುಗುಣವಾಗಿ ಈ ಕ್ರಮ ಕೈಗೊಳ್ಳಲಾಗಿದೆ.

2022ರ ಜನವರಿಯಲ್ಲಿ ರಾಜ್ಯವಾರು ಹಂಚಿಕೆ ಮಾಡಲಾಗಿರುವ ಕೇಂದ್ರದ ತೆರಿಗೆಗಳು ಮತ್ತು ಸುಂಕಗಳ ಅಂಕಿ-ಅಂಶ

 
 

ಕ್ರ.ಸಂ

ರಾಜ್ಯ

2022ರ ಜನವರಿಯ ಮಾಮೂಲಿ ತಿಂಗಳ ಕಂತು

2022ರ ಜನವರಿಗೆ ಮುಂಗಡ ಕಂತು

2022ರ ಜನವರಿಯಲ್ಲಿ ಒಟ್ಟು ಬಿಡುಗಡೆ

 
 
 
 

1

ಆಂಧ್ರಪ್ರದೇಶ

1,923.98

1,923.98

3,847.96

 

2

ಅರುಣಾಚಲಪ್ರದೇಶ

835.29

835.29

1,670.58

 

3

ಅಸ್ಸಾಂ

1,487.08

1,487.08

2,974.16

 

4

ಬಿಹಾರ

4,781.65

4,781.65

9,563.30

 

5

ಛತ್ತೀಸ್ ಗಢ

1,619.77

1,619.77

3,239.54

 

6

ಗೋವಾ

183.51

183.51

367.02

 

7

ಗುಜರಾತ್

1,653.47

1,653.47

3,306.94

 

8

ಹರಿಯಾಣ

519.62

519.62

1,039.24

 

9

ಹಿಮಾಚಲಪ್ರದೇಶ

394.58

394.58

789.16

 

10

ಜಾರ್ಖಂಡ್

1,572.17

1,572.17

3,144.34

 

11

ಕರ್ನಾಟಕ

1,733.81

1,733.81

3,467.62

 

12

ಕೇರಳ

915.19

915.19

1,830.38

 

13

ಮಧ್ಯಪ್ರದೇಶ

3,731.96

3,731.96

7,463.92

 

14

ಮಹಾರಾಷ್ಟ್ರ

3,003.15

3,003.15

6,006.30

 

15

ಮಣಿಪುರ

340.40

340.40

680.80

 

16

ಮೇಘಾಲಯ

364.64

364.64

729.28

 

17

ಮಿಜೋರಾಂ

237.71

237.71

475.42

 

18

ನಾಗಾಲ್ಯಾಂಡ್

270.51

270.51

541.02

 

19

ಒಡಿಶಾ

2,152.66

2,152.66

4,305.32

 

20

ಪಂಜಾಬ್

859.08

859.08

1,718.16

 

21

ರಾಜಸ್ಥಾನ

2,864.82

2,864.82

5,729.64

 

22

ಸಿಕ್ಕಿಂ

184.47

184.47

368.94

 

23

ತಮಿಳುನಾಡು

1,939.19

1,939.19

3,878.38

 

24

ತೆಲಂಗಾಣ

999.31

999.31

1,998.62

 

25

ತ್ರಿಪುರಾ

336.66

336.66

673.32

 

26

ಉತ್ತರ ಪ್ರದೇಶ

8,528.33

8,528.33

17,056.66

 

27

ಉತ್ತರಾಖಂಡ

531.51

531.51

1,063.02

 

28

ಪಶ್ಚಿಮಬಂಗಾಳ

3,576.48

3,576.48

7,152.96

 

 

ಒಟ್ಟು

47,541.00

47,541.00

95,082.00

 

***


(रिलीज़ आईडी: 1791244) आगंतुक पटल : 274
इस विज्ञप्ति को इन भाषाओं में पढ़ें: English , Urdu , Marathi , हिन्दी , Bengali , Manipuri , Punjabi , Tamil , Telugu , Malayalam