ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ
ನಾವು ಭಾರತದ ಯುವಕರಿಗೆ ಕೌಶಲ್ಯ ನೀಡುತ್ತಿದ್ದು, ಅವರನ್ನು ಜಾಗತಿಕ ಮಾರುಕಟ್ಟೆಗೆ ಅನುಗುಣವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುವಂತೆ ಸಜ್ಜುಗೊಳಿಸುತ್ತಿದ್ದೇವೆ: ಶ್ರೀ ಅನುರಾಗ್ ಠಾಕೂರ್
ಕೇಂದ್ರ ಸಚಿವ ಶ್ರೀ ಅನುರಾಗ್ ಠಾಕೂರ್ ಅವರು, ಎನ್‌ವೈಕೆಎಸ್ ಯುವ ಸ್ವಯಂಸೇವಕರ ಆನ್‌ಲೈನ್ ತರಬೇತಿಯ ಪೈಲಟ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು
Posted On:
06 JAN 2022 2:06PM by PIB Bengaluru
ಪ್ರಮುಖ ಮುಖ್ಯಾಂಶಗಳು:
- ಹೊಸ ಉಪಕ್ರಮದಿಂದ 1.4 ರಿಂದ 2 ದಶಲಕ್ಷ ಯುವಕರಿಗೆ ಅಗತ್ಯ ಜೀವನ ಕೌಶಲ್ಯ ಮತ್ತು ವ್ಯಕ್ತಿತ್ವ ಅಭಿವೃದ್ಧಿ, ರಾಷ್ಟ್ರ ನಿರ್ಮಾಣ, ನಾಗರಿಕ ಆಡಳಿತದಲ್ಲಿತೊಡಗಿಸಿಕೊಳ್ಳುವಿಕೆ, ಸಮುದಾಯ ಸಜ್ಜುಗೊಳಿಸುವಿಕೆ, ಸಮುದಾಯ ಸೇವೆ ಮತ್ತು ಸಬಲೀಕರಣದ ಸಾಧನಗಳಲ್ಲಿಬೃಹತ್ ಪ್ರಮಾಣದಲ್ಲಿತರಬೇತಿ ನೀಡುವ ಗುರಿಯನ್ನು ಹೊಂದಿದೆ.
- ಪೈಲಟ್ ತರಬೇತಿಯ ಭಾಗವಾಗಿರುವ 100 ಸ್ವಯಂಸೇವಕರು ಶೀಘ್ರದಲ್ಲೇ ಒಂದು ಮಿಲಿಯನ್ ಯುವಕರಿಗೆ ತರಬೇತಿ ನೀಡಲು ಅಡಿಪಾಯ ಹಾಕುತ್ತಾರೆ:ಶ್ರೀ ಅನುರಾಗ್ ಠಾಕೂರ್
ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವರಾದ ಶ್ರೀ ಅನುರಾಗ್ ಠಾಕೂರ್ ಅವರು, ಇಂದು ಎನ್‌ವೈಕೆಎಸ್ ಯುವ ಸ್ವಯಂಸೇವಕರ ಆನ್‌ಲೈನ್ ತರಬೇತಿಯ ಪೈಲಟ್ ಕಾರ್ಯಕ್ರಮವನ್ನು ಪ್ರಾರಂಭಿಸಿದರು. ಯುವ ವ್ಯವಹಾರಗಳ ಇಲಾಖೆಯ ಕಾರ್ಯದರ್ಶಿ ಶ್ರೀಮತಿ. ಉಷಾ ಶರ್ಮಾ, ಸಾಮರ್ಥ್ಯ ನಿರ್ಮಾಣ ಆಯೋಗದ ಸದಸ್ಯ ಶ್ರೀ ಪ್ರವೀಣ್ ಪರದೇಶಿ, ಯುವ ವ್ಯವಹಾರಗಳ ಇಲಾಖೆಯ ಜಂಟಿ ಕಾರ್ಯದರ್ಶಿ ಶ್ರೀ ನಿತೇಶ್ ಕುಮಾರ್ ಮಿಶ್ರಾ ಮತ್ತು ಸಚಿವಾಲಯದ ಇತರ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ (ಎಂವೈಎಎಸ್), ವಿಶ್ವ ಸಂಸ್ಥೆ ತರಬೇತಿ ಮತ್ತು ಸಂಶೋಧಾನಾ ಸಂಸ್ಥೆ (ಯುಎನ್‌ಐಟಿಎಆರ್) , ವಿಶ್ವ ಸಂಸ್ಥೆಯ ಮಕ್ಕಳ ನಿಧಿ (ಯುಎನ್‌ಐಸಿಇಎಫ್) ಮತ್ತು ನೆಹರು ಯುವ ಕೇಂದ್ರ ಸಂಘಟನೆ (ಎನ್‌ವೈಕೆಎಸ್) ಮತ್ತು ಭಾರತ ಸರ್ಕಾರದ ಸಾಮರ್ಥ್ಯ ನಿರ್ಮಾಣ ಆಯೋಗದ ಒಟ್ಟಾರೆ ಸಮನ್ವಯತೆಯೊಂದಿಗೆ ಈ ತರಬೇತಿಯನ್ನು ಆಯೋಜಿಸಲಾಗಿದೆ.
ಈ ಸಂದರ್ಭದಲ್ಲಿಮಾತನಾಡಿದ ಶ್ರೀ ಅನುರಾಗ್ ಠಾಕೂರ್, ನರೇಂದ್ರ ಮೋದಿ ಸರ್ಕಾರವು ಭಾರತದ ಯುವಜನರಿಗೆ ಕೌಶಲ್ಯವನ್ನು ನೀಡುತ್ತಿದೆ ಮತ್ತು ಜಾಗತಿಕ ಮಾರುಕಟ್ಟೆಯ ಅವಶ್ಯಕತೆಗಳಿಗೆ ಅನುಗುಣವಾಗಿ ಉದ್ಯೋಗವನ್ನು ಸಿದ್ಧಪಡಿಸುತ್ತಿದೆ. ಜಾಗತಿಕ ಪೂರೈಕೆ ಸರಪಳಿ, ಸೇವಾ ವಲಯ ಮತ್ತು ಒಟ್ಟಾರೆಯಾಗಿ ಆರ್ಥಿಕತೆಯು ಯುವ, ವಿದ್ಯಾವಂತ, ನುರಿತ ಮಾನವ ಶಕ್ತಿಯನ್ನು ನೇಮಿಸಿಕೊಳ್ಳಲು ಅಪಾರ ಸಾಮರ್ಥ್ಯವನ್ನು ಹೊಂದಿದೆ ಮತ್ತು ಈ ಬೇಡಿಕೆಯನ್ನು ಪೂರೈಸಲು ಭಾರತವು ಕೌಶಲ್ಯಪೂರ್ಣ ಮಾನವಶಕ್ತಿಯ ಬೃಹತ್ ಸಂಪನ್ಮೂಲವನ್ನು ಅಭಿವೃದ್ಧಿಪಡಿಸುತ್ತಿದೆ. ಅಷ್ಟೇ ಅಲ್ಲದೆ, ಸ್ಟಾರ್ಟ್ ಅಪ್‌ಗಳನ್ನು ಪೋಷಿಸುವ ಮತ್ತು ನಮ್ಮ ಯುವಜನರಲ್ಲಿ ಉದ್ಯಮಶೀಲತೆಯ ಮನೋಭಾವವನ್ನು ಉತ್ತೇಜಿಸುವ ದೃಢವಾದ ಪರಿಸರ ವ್ಯವಸ್ಥೆಯನ್ನು ನಾವು ನಿರ್ಮಿಸಿದ್ದೇವೆ ಎಂದರು.
“ಭಾರತದ ಪ್ರಸ್ತುತ ಯುವ ಜನಸಂಖ್ಯೆಯು ಸರಿಸುಮಾರು 230 ಮಿಲಿಯನ್ ಆಗಿದೆ. ಈ ಪ್ರಮಾಣದ ಜನಸಂಖ್ಯಾ ಲಾಭಾಂಶವು ರಾಷ್ಟ್ರವನ್ನು ಉನ್ನತೀಕರಿಸುವ ಮತ್ತು ಎಲ್ಲರಿಗೂ ಜೀವನ ಮಟ್ಟವನ್ನು ಹೆಚ್ಚಿಸುವ ಸಾಮರ್ಥ್ಯವನ್ನು ಹೊಂದಿದೆ. ದೇಶದ ಸಾಮಾಜಿಕ ಮತ್ತು ಆರ್ಥಿಕ ಪ್ರಗತಿಯನ್ನು ಮುನ್ನಡೆಸಲು ಯುವಜನರಿಗೆ ಅಪಾರ ಸಾಮರ್ಥ್ಯವಿದೆ. 21ನೇ ಶತಮಾನದಲ್ಲಿ ಭಾರತವು ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ಆ ಮೂಲಕ ಇಡೀ ಜಗತ್ತು ನಮ್ಮತ್ತ ನೋಡುತ್ತಿದೆ ಮತ್ತು ಯುವಕರು ಇದರಲ್ಲಿ ಪ್ರಮುಖ ಪಾತ್ರ ವಹಿಸಬಹುದು,” ಎಂದು ಶ್ರೀ ಠಾಕೂರ್ ಹೇಳಿದ್ದಾರೆ.
“ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಯುವ ಸ್ವಯಂಸೇವಕರು ಅಮೂಲ್ಯವಾದ ಸೇವೆ ಸಲ್ಲಿಸಿದ್ದಾರೆ ಮತ್ತು ವೀರರ ಕರ್ತವ್ಯಗಳನ್ನು ಪ್ರದರ್ಶಿಸಿದ್ದಾರೆ ಎಂದು ಕೇಂದ್ರ ಸಚಿವರು ಹೇಳಿದರು. ತರಬೇತಿ ಕಾರ್ಯಕ್ರಮವು ಸ್ವಯಂಸೇವಕರಾಗಿ ರಾಷ್ಟ್ರಕ್ಕೆ ಅತ್ಯಂತ ಬದ್ಧತೆಯಿಂದ ಸೇವೆ ಸಲ್ಲಿಸಲು ಸಾಧ್ಯವಾಗುವಂತೆ ಅವರ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುತ್ತದೆ ಎಂದು ಅವರು ತಿಳಿಸಿದರು. ಅಷ್ಟೇ ಅಲ್ಲದೆ, ವ್ಯಕ್ತಿಗಳಾಗಿ ಅಭಿವೃದ್ಧಿ ಹೊಂದಲು ಮತ್ತು ನಾಳಿನ ನಾಯಕರಾಗಲು ಪ್ರಯಾಣವನ್ನು ಪ್ರಾರಂಭಿಸಲು ಇದು ಸಹಾಯ ಮಾಡುತ್ತದೆ,” ಎಂದು ಸಚಿವರು ಹೇಳಿದರು.
ಶ್ರೀ ಅನುರಾಗ್ ಠಾಕೂರ್ ಅವರು, “ಹಲವಾರು ಸಂದರ್ಭಗಳಲ್ಲಿಪ್ರಧಾನ ಮಂತ್ರಿಯವರು ಪುನರುಚ್ಚರಿಸಿದಂತೆ, ಯುವಕರು ತಮ್ಮ ಕರ್ತವ್ಯಗಳ ಬಗ್ಗೆ ಜಾಗೃತರಾಗಿರಬೇಕು ಮತ್ತು ಭಾರತಕ್ಕೆ ಸ್ವಾತಂತ್ರ್ಯದ 75 ವರ್ಷಗಳನ್ನು ಆಚರಿಸಲು ಆಜಾದಿ ಕಾ ಅಮೃತ್ ಮಹೋತ್ಸವದ ಗೌರವಾರ್ಥವಾಗಿ ರಾಷ್ಟ್ರ ನಿರ್ಮಾಣಕ್ಕೆ ಕೊಡುಗೆ ನೀಡಬೇಕು,” ಎಂದು ಹೇಳಿದರು.
ಶ್ರೀ ಠಾಕೂರ್ ಅವರು, “ಯುಎನ್‌ಐಟಿಎಆರ್ ಮತ್ತು ಸಚಿವಾಲಯದ ಸಹಭಾಗಿತ್ವವು ಭಾಗವಹಿಸುವವ ಯುವಕರ ವ್ಯಕ್ತಿತ್ವ ಅಭಿವೃದ್ಧಿ ಮತ್ತು ಜೀವನೋಪಾಯದ ಮೇಲೆ ಶಾಶ್ವತವಾದ ಪರಿಣಾಮವನ್ನು ಬೀರುತ್ತದೆ. ಜೊತೆಗೆ ರಾಷ್ಟ್ರ ನಿರ್ಮಾಣ ಮತ್ತು ಸಮೃದ್ಧಿಯನ್ನು ಉತ್ತೇಜಿಸುತ್ತದೆ. ಭಾರತದ ಯುವಕರನ್ನು ಸಬಲೀಕರಣಗೊಳಿಸುವ ಮತ್ತು ಸಮಾನ ಮನಸ್ಕ, ಪ್ರೇರಿತ ವ್ಯಕ್ತಿಗಳ ಜಾಲವನ್ನು ರಚಿಸುವ ನಿಟ್ಟಿನಲ್ಲಿಇದು ಒಂದು ಪ್ರಮುಖ ಹೆಜ್ಜೆಯಾಗಿದೆ. ಭಾರತದ ಯುವಕರು ಅದರ ಭವಿಷ್ಯ, ಮತ್ತು ನಾವು ಅವರಲ್ಲಿಹೂಡಿಕೆ ಮಾಡಬೇಕು ಎಂದು ಕೇಂದ್ರ ಸಚಿವರು ಹೇಳಿದರು. ಶ್ರೀ ಅನುರಾಗ್ ಠಾಕೂರ್ ಅವರು ಪೈಲಟ್ ತರಬೇತಿಯ ವಿಷಯವನ್ನು ಎಚ್ಚರಿಕೆಯಿಂದ ಆಯ್ಕೆ ಮಾಡಲಾಗಿದೆ ಮತ್ತು ವರ್ಚುವಲ್ ರಿಯಾಲಿಟಿಯಂತಹ ಇತ್ತೀಚಿನ ತಂತ್ರಜ್ಞಾನವನ್ನು ನಿಯೋಜಿಸಲಾಗುವುದು,” ಎಂದು ಹೇಳಿದರು. ಪೈಲಟ್‌ನ ಭಾಗವಾಗಿರುವ 100 ಸ್ವಯಂಸೇವಕರು ಶೀಘ್ರದಲ್ಲೇ ಒಂದು ಮಿಲಿಯನ್ ಯುವಕರಿಗೆ ತರಬೇತಿ ನೀಡಲು ಅಡಿಪಾಯ ಹಾಕುತ್ತಾರೆ.
“ಬಲವಾದ ವಿಮರ್ಶಾತ್ಮಕ ಚಿಂತನೆಯ ಸಾಮರ್ಥ್ಯಗಳು, ಪರಸ್ಪರ ಕೌಶಲ್ಯಗಳು ಮತ್ತು ನಾಯಕತ್ವದ ಸಾಮರ್ಥ್ಯಗಳು ವೈಯಕ್ತಿಕ ಪ್ರಗತಿ ಮತ್ತು ಗುಂಪಿನ ಸಂದರ್ಭಗಳಲ್ಲಿಯಶಸ್ಸಿನಲ್ಲಿಮುಂಚೂಣಿಯಲ್ಲಿವೆ. ತರಬೇತಿಯು ಈ ಕೌಶಲ್ಯಗಳನ್ನು ಬೆಳೆಸುವುದರ ಮೇಲೆ ಕೇಂದ್ರೀಕರಿಸುತ್ತದೆ,” ಎಂದು ಶ್ರೀ ಠಾಕೂರ್ ತಿಳಿಸಿದರು.
ಯುವ ವ್ಯವಹಾರಗಳ ಇಲಾಖೆಯ ಕಾರ್ಯದರ್ಶಿ ಶ್ರೀಮತಿ ಉಷಾ ಶರ್ಮಾ, 12-15 ದಿನಗಳ ಸ್ವಯಂ-ಗತಿಯ, ಆನ್‌ಲೈನ್ ತರಬೇತಿಯ ಮೂಲಕ ತರಬೇತಿಯನ್ನು ನಡೆಸಲಾಗುವುದು ಎಂದು ಮಾಹಿತಿ ನೀಡಿದರು; ಸಂವಾದಾತ್ಮಕ, ನವೀನ ಪರಿಕರಗಳನ್ನು ಬಳಸುವುದು ಮತ್ತು ಭಾರತದ ಯುವಕರ ವ್ಯಾಪಕ ಶ್ರೇಣಿಯ ಹಿನ್ನೆಲೆ ಮತ್ತು ಕೌಶಲ್ಯಗಳಿಗೆ ಹೊಂದಿಕೊಳ್ಳುವ ವಿಷಯವನ್ನು ಬಳಸುವುದು. ಇದು ಪ್ರಾರಂಭವಾದಗ ಇಂಗ್ಲಿಷ್ ಮತ್ತು ಹಿಂದಿಯಲ್ಲಿಲಭ್ಯವಿರುತ್ತದೆ. ನಂತರ ಪ್ರಾದೇಶಿಕ ಭಾಷೆಗಳಲ್ಲಿತರಬೇತಿ ನೀಡಲಾಗುವುದು.
***
(Release ID: 1788012)
Visitor Counter : 392