ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಗುಜರಾತಿನ ಕಚ್ ಗುರುದ್ವಾರಾ ಲಾಖ್ಪತ್ ಸಾಹೀಬ್ ಕ್ಷೇತ್ರದಲ್ಲಿ ಗುರುಪುರಬ್ ಆಚರಣೆ ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿ ಅವರ ಭಾಷಣ

Posted On: 25 DEC 2021 2:52PM by PIB Bengaluru

ವಾಹೇ ಗುರೂ ಜೀ ಕಾ ಖಾಲ್ಸಾ, ವಾಹೆ ಗುರೂ ಜೀ ಕೀ ಫತೇಹ್!!!

ಗುರುಪುರಬ್ ಪವಿತ್ರ ಕಾರ್ಯಕ್ರಮದಲ್ಲಿ ನಮ್ಮೊಂದಿಗೆ ಸೇರ್ಪಡೆಗೊಂಡಿರುವ ಗುಜರಾತ್ ಮುಖ್ಯಮಂತ್ರಿ ಶ್ರೀ ಭೂಪೇಂದ್ರ ಭಾಯಿ ಪಟೇಲ್ ಜೀ, ಗುಜರಾತ್ ವಿಧಾನಸಭೆಯ ಸ್ಪೀಕರ್ ಸಹೋದರಿ ನೀಮಾ ಆಚಾರ್ಯ ಜೀರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಶ್ರೀ ಇಕ್ಬಾಲ್ ಸಿಂಗ್, ಸಂಸತ್ ಸದಸ್ಯರಾದ ಶ್ರೀ ವಿನೋದಭಾಯಿ ಚಾವ್ಡಾ ಜೀ, ಲಖ್ಪತ್ ಗುರುದ್ವಾರಾ ಆಡಳಿತ ಸಮಿತಿ ಅಧ್ಯಕ್ಷ ರಾಜುಭಾಯಿ, ಶ್ರೀ ಜಗತಾರ್ ಸಿಂಗ್ ಗಿಲ್ ಜೀ, ಅಲ್ಲಿ ಹಾಜರಿರುವ ಎಲ್ಲಾ ಗಣ್ಯರೇ, ಎಲ್ಲಾ ಜನಪ್ರತಿನಿಧಿಗಳೇ ಮತ್ತು ಎಲ್ಲಾ ಆಸ್ತಿಕ ಸ್ನೇಹಿತರೇ! ನಿಮಗೆಲ್ಲರಿಗೂ ಗುರುಪುರಬ್ ಶುಭಾಶಯಗಳು!

ಪವಿತ್ರ ದಿನದಂದು ನನಗೆ ಲಖ್ಪತ್ ಸಾಹೀಬ್ ಆಶೀರ್ವಾದ ಪಡೆಯುವಂತಹ ಅವಕಾಶ ದೊರಕಿರುವುದು ನನ್ನ ಸೌಭಾಗ್ಯ, ಅದೃಷ್ಟ. ಗುರು ನಾನಕ್ ದೇವ್ ಜೀ ಮತ್ತು ಎಲ್ಲಾ ಗುರುಗಳ ಆಶೀರ್ವಾದದ ದಯೆಗಾಗಿ ನಾನವರ ಪಾದಕ್ಕೆ ಶಿರಬಾಗಿ ನಮಿಸುತ್ತೇನೆ.

ಸ್ನೇಹಿತರೇ,

ಗುರುದ್ವಾರ ಲಖ್ಪತ್ ಸಾಹೀಬ್ ಕಾಲದ ಪ್ರತೀ ಚಲನೆಗೂ ಸಾಕ್ಷೀಭೂತವಾಗಿದೆ. ಪವಿತ್ರ ಸ್ಥಳದ ಜೊತೆ ನಾನು ಸಂಬಂಧ ಹೊಂದಿರುವಾಗ, ಹಿಂದೆ ಹಲವಾರು ಏರು ಪೇರುಗಳನ್ನು, ಚಂಡ ಮಾರುತಗಳನ್ನು  ಲಖ್ಪತ್ ಸಾಹೀಬ್ ಕಂಡಿರುವುದು ನನ್ನ ನೆನಪಿಗೆ ಬಂದಿತು. ಒಂದಾನೊಂದು ಕಾಲದಲ್ಲಿ ಸ್ಥಳವು ಇತರ ದೇಶಗಳಿಗೆ ವ್ಯಾಪಾರ ಮತ್ತು ಜನತೆಯ ಚಲನವಲನ ಅತ್ಯಂತ ಹೆಚ್ಚು ಇದ್ದಂತಹ ಕೇಂದ್ರಗಳಲ್ಲಿ ಒಂದಾಗಿತ್ತು. ಅದರಿಂದಾಗಿ ಗುರುನಾನಕ್ ದೇವ್ ಜೀ ಇಲ್ಲಿಗೆ ಬಂದರು. ತಮ್ಮ ನಾಲ್ಕನೇ ಪ್ರವಚನ ಪ್ರವಾಸದಲ್ಲಿ ಗುರು ನಾನಕ್ ದೇವ್ ಜೀ ಅವರು ಇಲ್ಲಿ ಕೆಲ ಕಾಲ ತಂಗಿದ್ದರು. ಆದರೆ ಕಾಲಾನುಕ್ರಮದಲ್ಲಿ ನಗರ ಮರುಭೂಮಿಯಂತಾಯಿತು. ಸಮುದ್ರ ಇಲ್ಲಿಂದ ಹಿಂದೆ ಸರಿಯಿತು. ಸಿಂಧ್ ನದಿ ಕೂಡಾ ಹಿನ್ನಡೆಯಿತು. 1998 ಚಂಡ ಮಾರುತದಲ್ಲಿ ಗುರುದ್ವಾರ ಲಖ್ಪತ್ ಸಾಹೀಬ್ ಕೂಡಾ ಹಾನಿಗೀಡಾಯಿತು. ಮತ್ತು 2001 ಭೂಕಂಪವನ್ನು  ಯಾರು ತಾನೇ ಮರೆಯಲು ಸಾಧ್ಯ ?.ಅದು 200 ವರ್ಷ ಹಳೆಯದಾದ ಗುರುದ್ವಾರಾ ಸಾಹೀಬ್ ಕಟ್ಟಡಕ್ಕೆ ಭಾರೀ ಹಾನಿಯನ್ನು ಉಂಟು ಮಾಡಿತು. ಆದರೂ, ನಮ್ಮ ಗುರುದ್ವಾರ ಲಖ್ಪತ್ ಸಾಹೀಬ್ ಅದೇ ವೈಭವದೊಂದಿಗೆ ಭವ್ಯವಾಗಿ  ನಿಂತಿದೆ

ಗುರುದ್ವಾರಾಕ್ಕೆ ಸಂಬಂಧಿಸಿ ನನ್ನಲ್ಲಿ ಹಲವು ಬಹಳ ಅಮೂಲ್ಯವಾದಂತಹ  ಸ್ಮರಣೆಗಳಿವೆ. 2001 ಭೂಕಂಪದ ಬಳಿಕ, ಪವಿತ್ರ ಸ್ಥಳಕ್ಕೆ ಸೇವೆ ಸಲ್ಲಿಸುವ ಅವಕಾಶ ನನಗೆ ಒದಗಿ ಬಂದಿತು. ನಾನು ದೇಶದ ವಿವಿಧೆಡೆಯಿಂದ ಬಂದು ಸ್ಥಳದ ಮೂಲ ವೈಭವವನ್ನು ಮರುಸ್ಥಾಪಿಸಿದ ಕರಕುಶಲಗಾರರನ್ನು ಮತ್ತು ಕಲಾವಿದರನ್ನು ನೆನಪಿಸಿಕೊಳ್ಳುತ್ತೇನೆ. ಸಿಖ್ ಗುರುಗಳ ಸಂಯೋಜನೆಗಳಾದ  ಗುರ್ಬಾನಿಗಳನ್ನು ಇಲ್ಲಿಯ ಗೋಡೆಗಳ ಮೇಲೆ ಪ್ರಾಚೀನ ಶೈಲಿಯಲ್ಲಿ ಬರೆಯಲಾಗಿದೆ. ಯೋಜನೆಗೆ ಯುನೆಸ್ಕೋ ಮನ್ನಣೆ ಕೂಡಾ ಸಂದಿದೆ.

ಸ್ನೇಹಿತರೇ,

ಗುಜರಾತಿನಿಂದ ದಿಲ್ಲಿಗೆ ಹೋದ ಬಳಿಕವೂ ನನ್ನ ಗುರುಗಳಿಗೆ ನಿರಂತರ ಸೇವೆ ಸಲ್ಲಿಸುವ ಅವಕಾಶ ನನಗೆ ಲಭಿಸುತ್ತಿದೆ. 2016-17 ಗುರು ಗೋವಿಂದ ಸಿಂಗ್ ಜೀ ಅವರ 350ನೇ ವರ್ಷಾಚರಣೆಯ ಪ್ರಕಾಶ ಉತ್ಸವದ ಪವಿತ್ರ ಸಂದರ್ಭ. ನಾವದನ್ನು ದೇಶದಲ್ಲಿ ಮತ್ತು ವಿದೇಶಗಳಲ್ಲಿ ಪೂರ್ಣ ಭಕ್ತಿಯಿಂದ ಆಚರಿಸಿದೆವು.ಭಾರತ ಸರಕಾರವು 2019 ರಲ್ಲಿ ಗುರು ನಾನಕ್ ದೇವ್ ಜೀ ಅವರ ಪ್ರಕಾಶ ಪರ್ವದ 550ನೇ ವರ್ಷಪೂರ್ತಿಯ ಅಂಗವಾಗಿ ಅನೇಕ ಕಾರ್ಯಕ್ರಮಗಳನ್ನು ಉತ್ಸಾಹದಿಂದ ಸಂಘಟಿಸಿತು. ಗುರು ನಾನಕ್ ದೇವ್ ಜೀ ಅವರ ಸಂದೇಶಗಳನ್ನು ಇಡೀ ವಿಶ್ವಕ್ಕೆ ಹೊಸ ಉತ್ಸಾಹದೊಂದಿಗೆ ಪ್ರಸಾರಿಸಲು ಪ್ರತೀ ಹಂತದಲ್ಲಿಯೂ ಪ್ರಯತ್ನಗಳನ್ನು ಮಾಡಲಾಯಿತು. 2019ರಲ್ಲಿ ನಮ್ಮ ಸರಕಾರ ದಶಕಗಳಿಂದ ಪೂರ್ಣಗೊಳ್ಳದೆ ಬಾಕಿಯಾಗಿದ್ದ ಕರ್ತಾರ್ಪುರ ಸಾಹೀಬ್ ಕಾರಿಡಾರ್ ನಿರ್ಮಾಣವನ್ನು ಪೂರ್ಣಗೊಳಿಸಿತು. ಮತ್ತು ಈಗ 2021ರಲ್ಲಿ ನಾವು ಗುರು ತೇಜ್ ಬಹಾದ್ದೂರ್ ಜೀ ಅವರ 400 ನೇ ವರ್ಷದ ಪ್ರಕಾಶ ಉತ್ಸವವನ್ನು ಆಚರಿಸುತ್ತಿದ್ದೇವೆ.

ಇತ್ತೀಚೆಗೆ ನಾವು ಅಪಘಾನಿಸ್ಥಾನದಿಂದ ಗುರು ಗ್ರಂಥ ಸಾಹೀಬ್ ಪ್ರತಿಗಳನ್ನು ಭಾರತಕ್ಕೆ ತರಲು ಯಶಸ್ವಿಯಾಗಿರುವುದು ನಿಮಗೆ ತಿಳಿದಿರಬಹುದು. ಗುರುವಿನ ಕೃಪೆಯ ಶ್ರೇಷ್ಟ ಅನುಭವ ಇದಕ್ಕಿಂತ ಬೇರೆ ಯಾವುದಿದ್ದೀತು?. ಭಾರತದಿಂದ ಹಿಂದೆ ಕಳವು ಮಾಡಲಾಗಿದ್ದ  ಸುಮಾರು 150ಕ್ಕೂ ಅಧಿಕ ವಸ್ತುಗಳನ್ನು ಕೆಲವು ತಿಂಗಳ ಹಿಂದೆ ನಾನು ಅಮೆರಿಕಾಕ್ಕೆ ಹೋಗಿದ್ದಾಗ ಮರಳಿ ತರಲು ಸಮರ್ಥರಾಗಿದ್ದೇವೆ. ಇದರಲ್ಲಿ ಗುರು ಹರ್ ಗೋವಿಂದ ಸಿಂಗ್ ಅವರ ಹೆಸರನ್ನು ಪರ್ಸಿಯನ್ ಭಾಷೆಯಲ್ಲಿ ಬರೆದಿರುವ ಬಾಕು ಕೂಡಾ ಸೇರಿದೆ. ಇದನ್ನು ಹಿಂದೆ ತರುವ ಅದೃಷ್ಟ ನಮ್ಮ ಸರಕಾರಕ್ಕೆ ಲಭಿಸಿತು.

ಎರಡು ವರ್ಷಗಳ ಹಿಂದೆ ಜಾಮ್ ನಗರದಲ್ಲಿ ನಿರ್ಮಾಣ ಮಾಡಲಾದ 700 ಹಾಸಿಗೆಗಳ ಆಧುನಿಕ ಆಸ್ಪತ್ರೆಗೆ ಗುರು ಗೋವಿಂದ ಸಿಂಗ್ ಜೀ ಅವರ ಹೆಸರಿಟ್ಟಿರುವುದು ನನ್ನ ನೆನಪಿನಲ್ಲಿದೆ. ಮತ್ತು ನಮ್ಮ ಮುಖ್ಯಮಂತ್ರಿ ಭೂಪೇಂದ್ರ ಭಾಯಿ ಅವರು ಅದನ್ನು ವಿವರವಾಗಿ ಹೇಳಿದ್ದಾರೆ. ಖಾಲ್ಸಾ ಪಂಥವನ್ನು ಸ್ಥಾಪಿಸುವಲ್ಲಿ ಪ್ರಮುಖ ಪಾತ್ರವಹಿಸಿದ  “ಪಾಂಜ್ ಪ್ಯಾರೇಗಳಲ್ಲಿ ನಾಲ್ಕನೇ ಗುರು ಸಿಖ್ ಭಾಯಿ ಮೋಹಕಾಂ ಸಿಂಗ್ ಜೀ ಅವರು ಗುಜರಾತಿನವರು ಎಂಬುದು ನಮಗೆ ಸದಾ ಹೆಮ್ಮೆಯ ಸಂಗತಿ. ಅವರ ನೆನಪಿನಲ್ಲಿ ದೇವಭೂಮಿ ದ್ವಾರಕಾದಲ್ಲಿ ಗುರುದ್ವಾರಾ ಬೆಟ್ ದ್ವಾರಕಾ ಭಾಯಿ ಮೋಹಕಾಂ ಸಿಂಗ್ ಗುರುದ್ವಾರವನ್ನು ನಿರ್ಮಾಣ ಮಾಡಲಾಗಿದೆ. ಗುಜರಾತ್ ಸರಕಾರ ಲಾಖ್ಪತ್ ಸಾಹೀಬ್ ಗುರುದ್ವಾರಾ ಮತ್ತು ಗುರುದ್ವಾರಾ ಬೆಟ್ ದ್ವಾರಕಾಗಳ ಅಭಿವೃದ್ಧಿ ಕಾರ್ಯಕ್ಕೆ  ಹಣಕಾಸು ನೆರವು ಒದಗಿಸುತ್ತಿದೆ ಎಂಬುದಾಗಿ ನನಗೆ ತಿಳಿಸಲಾಗಿದೆ.

ಸ್ನೇಹಿತರೇ

ಗುರು ನಾನಕ್ ದೇವ್ ಜೀ ಹೆಳೀದ್ದರು-

गुर परसादि रतनु हरि लाभै,

मिटे अगिआन होई उजिआरा॥

ಅಂದರೆ ಗುರುವಿನ ಆರಾಧನೆಯಿಂದ ದೈವ ಸಾಕ್ಷಾತ್ಕಾರ ಸಾಧ್ಯವಾಗುತ್ತದೆ ಮತ್ತು ಅಹಂಕಾರ ಅಳಿದಾಗ ಬೆಳಕು ಪಸರಿಸುತ್ತದೆ. ನಮ್ಮ ಸಿಖ್ ಗುರುಗಳು ಸದಾ ಭಾರತೀಯ ಸಮಾಜಕ್ಕೆ ಬೆಳಕನ್ನು ನೀಡುವ ಮೂಲಕ ಶಕ್ತಿ ತುಂಬುವ ನಿಟ್ಟಿನಲ್ಲಿ ಕಾರ್ಯವನ್ನು ನಿರ್ವಹಿಸಿದರು. ಗುರುನಾನಕ್ ಜೀ ಅವರು ನಮ್ಮ ದೇಶದಲ್ಲಿ ಅವತರಿಸಿದಾಗ ನಮ್ಮ ಸಮಾಜದಲ್ಲಿ ಕಾಲದಲ್ಲಿ ಪರಿಸ್ಥಿತಿ ಹೇಗಿತ್ತು? ಎಂಬುದನ್ನು ಕಲ್ಪಿಸಿಕೊಳ್ಳಿಎಲ್ಲಾ ವ್ಯಂಗ್ಯ ಮತ್ತು ಪಡಿಯಚ್ಚುಗಳ ಜೊತೆ ಹೋರಾಡುವಂತಹ ಸ್ಥಿತಿ ಅದು. ಬಾಹ್ಯ ಆಕ್ರಮಣಗಳು ಮತ್ತು ದೌರ್ಜನ್ಯಗಳು ಕಾಲದಲ್ಲಿ ಭಾರತದ ನೈತಿಕ ಸ್ಥೈರ್ಯವನ್ನು ಕುಗ್ಗಿಸುತ್ತಿದ್ದವು. ವಿಶ್ವಕ್ಕೆ ಭೌತಿಕವಾದ ಮತ್ತು ಆಧ್ಯಾತ್ಮಿಕವಾದ ಮಾರ್ಗದರ್ಶನವನ್ನು ನೀಡುತ್ತಿದ್ದ ಭಾರತವು ತಾನೇ ಸಮಸ್ಯೆಗಳಲ್ಲಿತ್ತು. ಪರಿಸ್ಥಿತಿಯ ಹಿನ್ನೆಲೆಯಲ್ಲಿ, ಕಾಲಘಟ್ಟದಲ್ಲಿ ಗುರು ನಾನಕ್ ದೇವ್ ಜೀ ಅವರು ತಮ್ಮ ಪ್ರಭೆಯನ್ನು ಪ್ರಸಾರಿಸಿರದಿದ್ದರೆ ಏನಾಗುತ್ತಿತ್ತು?. ಮತ್ತು ಗುರು ನಾನಕ್ ಜೀ ಹಾಗು ಅವರ ಬಳಿಕದ ಗುರುಗಳು ಭಾರತದ ಆತ್ಮಸಾಕ್ಷಿಯನ್ನು ಉದ್ದೀಪಿಸಿದ್ದು ಮಾತ್ರವಲ್ಲ ಭಾರತವನ್ನು ಸುರಕ್ಷಿತವಾಗಿರಿಸುವ ಹಾದಿಯನ್ನೂ ರೂಪಿಸಿದರು. ದೇಶವು ಜಾತಿ ಮತ್ತು ಪಂಥಗಳ ವಿಷಯದಾಧಾರದಲ್ಲಿ ದುರ್ಬಲಗೊಳ್ಳುತ್ತಿರುವಾಗ, ಗುರು ನಾನಕ್ ದೇವ್ ಜೀ ಹೇಳಿದರು-

''जाणहु जोति पूछहु जाती, आगे जात हे''

ಅಂದರೆ ದೇವರ ಬೆಳಕನ್ನು ಪ್ರತಿಯೊಬ್ಬರಲ್ಲೂ ನೋಡು ಮತ್ತು ಅದನ್ನು ಗುರುತಿಸು. ಯಾರೊಬ್ಬರ ಜಾತಿಯನ್ನು ಕೇಳಬೇಡ. ಜೀವನದ ಬಳಿಕದ ಪ್ರಯಾಣದಲ್ಲಿ ಯಾರೊಬ್ಬರೂ ಜಾತಿಯಿಂದ ಗುರುತಿಸಲ್ಪಡುವುದಿಲ್ಲ ಮತ್ತು ಅಲ್ಲಿ ಯಾರೊಬ್ಬರಿಗೂ ಜಾತಿ ಇರುವುದಿಲ್ಲ. ಅದೇ ರೀತಿ ಗುರು ಅರ್ಜುನ ದೇವ ಜೀ ಸಂತರ ಉತ್ತಮ ವಾಣಿಗಳನ್ನು ಪೋಣಿಸಿ  ಇಡೀ ದೇಶವನ್ನು ಏಕತೆಯ ದಾರದಿಂದ ಜೋಡಿಸಿದರು. ಗುರು ಹರ್ ಕ್ರಿಷನ್ ಜೀ ಅವರು ನಂಬಿಕೆಯನ್ನು ನಿಷ್ಟೆಯನ್ನು ಭಾರತದ ಗುರುತಿಸುವಿಕೆಯ ಜೊತೆ ಪೋಣಿಸಿದರು. ದಿಲ್ಲಿಯ ಗುರುದ್ವಾರ ಬಾಂಗ್ಲಾ ಸಾಹೀಬ್ ನಲ್ಲಿ ಖಾಯಿಲೆ ಪೀಡಿತರನ್ನು ಗುಣಪಡಿಸುವ ಮೂಲಕ ಅವರು ತೋರಿದ ಮಾನವತೆಯ ಹಾದಿ ಪ್ರತಿಯೊಬ್ಬ ಸಿಖ್ಖರಿಗೂ ಮತ್ತು ಪ್ರತಿಯೊಬ್ಬ ಭಾರತೀಯರಿಗೂ ಪ್ರೇರಣೆ ನೀಡುವಂತಹದಾಗಿದೆ. ನಮ್ಮ ಗುರುದ್ವಾರಗಳು ಕೊರೊನಾದಂತಹ ಕಷ್ಟದ ಸಮಯದಲ್ಲಿ ಸೇವೆಯ ಜವಾಬ್ದಾರಿಯನ್ನು ಹೊತ್ತುಕೊಂಡ ರೀತಿ ಗುರು ಸಾಹೀಬ್ ಅವರ ಕೃಪೆ ಮತ್ತು ಆದರ್ಶಗಳ ಸಂಕೇತ. ರೀತಿಯಲ್ಲಿ ಪ್ರತೀ ಗುರು ತಮ್ಮ ಕಾಲಾವಧಿಯಲ್ಲಿ ದೇಶವನ್ನು ಅದರ ಅವಶ್ಯಕತೆಗೆ ಅನುಗುಣವಾಗಿ ಮುನ್ನಡೆಸಿದರು ಮತ್ತು ನಮ್ಮ ತಲೆಮಾರುಗಳಿಗೆ ಮಾರ್ಗದರ್ಶನ ನೀಡಿದರು.

ಸ್ನೇಹಿತರೇ,

ಗುರುಗಳ ಕೊಡುಗೆ ಆಧ್ಯಾತ್ಮಕ್ಕೆ ಮತ್ತು ಸಮಾಜಕ್ಕೆ ಮಾತ್ರ ಸೀಮಿತವಾದುದಲ್ಲ, ಇಂದು ನಮ್ಮ ದೇಶ, ನಂಬಿಕೆ, ನಿಷ್ಟೆ ಮತ್ತು ನಮ್ಮ ದೇಶದ ಸಮಗ್ರತೆ ಸುರಕ್ಷಿತವಾಗಿದ್ದರೆ, ಆಗ ಅದರ ಕೇಂದ್ರ ಬಿಂದುವಿನಲ್ಲಿ ಸಿಖ್ ಗುರುಗಳ ಶ್ರೇಷ್ಟ ತಪಸ್ಸು ಇದೆ. ವಿದೇಶೀ ನುಸುಳುಕೋರರು ಖಡ್ಗಗಳನ್ನು ಝಳಪಿಸುತ್ತ ಅಧಿಕಾರವನ್ನು ಕಬಳಿಸಲು ಪ್ರಯತ್ನಗಳನ್ನು ಆರಂಭ ಮಾಡಿದಾಗ, ಸಂಪತ್ತನ್ನು ದೋಚಲು ಹೊರಟಾಗ, ಗುರು ನಾನಕ್ ದೇವ್ ಜೀ ಅವರು ಹೇಳಿದರು-

 पाप की जंझ लै काबलहु धाइआ, जोरी मंगै दानु वे लालो।

ಅಂದರೆ ಬಾಬರ್ ಕಾಬೂಲಿನಿಂದ ಪಾಪದ ಖಡ್ಗದ ಜೊತೆ ದಬ್ಬಾಳಿಕೆಯಿಂದ ಮುಂದೊತ್ತಿ ಬಂದಿದ್ದಾನೆ, ಮತ್ತು ಭಾರತದ ಆಡಳಿತದ ಹೆಣ್ಣು ಮಗುವನ್ನು ದಬ್ಬಾಳಿಕೆಯಿಂದ ಕೇಳುತ್ತಿದ್ದಾನೆ. ಇದು ಗುರು ನಾನಕ್ ದೇವ್ ಜೀ ಅವರ ಸ್ಪಷ್ಟತೆ ಮತ್ತು ಚಿಂತನೆಯ ಕ್ರಮ. ಅವರು ಹೀಗೂ ಹೇಳಿದ್ದಾರೆ-

खुरासान खसमाना कीआ हिंदुसतान डराइआ

ಖೋರಾಸನ್ ವಶಪಡಿಸಿಕೊಂಡ ಬಳಿಕ, ಬಾಬರ್ ಭಾರತದಲ್ಲಿ ಭಯಭೀತಿ ಬಿತ್ತುತ್ತಿದ್ದ. ಅಗ ಅವರು ಮುಂದುವರೆದು ಹೇಳಿದರು:

एती मार पई करलाणे तैं की दरदु आइआ।

ಕಾಲದಲ್ಲಿ ಇಷ್ಟೊಂದು ದೌರ್ಜನ್ಯಗಳು ನಡೆಯುತ್ತಿದ್ದವು ಮತ್ತು ಜನರ ಆಕ್ರಂದನ ಮುಗಿಲು ಮುಟ್ಟುತ್ತಿತ್ತು. ಆಗ ನಮ್ಮ ಸಿಖ್ ಗುರುಗಳು ಗುರು ನಾನಕ್ ದೇವ್ ಜೀ ಅವರನ್ನು ಅನುಸರಿಸಿ ದೇಶಕ್ಕಾಗಿ ಮತ್ತು ಧರ್ಮಕ್ಕಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡಲು ಹಿಂದೆ ಸರಿಯಲಿಲ್ಲ. ಪ್ರಸ್ತುತ, ದೇಶವು ಗುರು ತೇಜ್ ಬಹಾದ್ದೂರ್ ಜೀ ಅವರ 400ನೇ ಪ್ರಕಾಶ್ ಉತ್ಸವವನ್ನು ಆಚರಿಸುತ್ತಿದೆ. ಅವರ ಇಡೀ ಜೀವನ  “ದೇಶ ಮೊದಲುಎಂಬ ದೃಢ ನಿರ್ಧಾರಕ್ಕೆ ಒಂದು ನಿದರ್ಶನ. ಗುರು ತೇಜ್ ಬಹಾದ್ದೂರ್ ಜೀ ಅವರು ಮಾನವತೆಯ ಪರ ದೃಢ ನಿಲುವು ತಳೆದಿದ್ದರು ಎಂಬುದು ಭಾರತದ ಆತ್ಮದ ಒಂದು ನೋಟವನ್ನು ನಮಗೆ ಒದಗಿಸುತ್ತದೆ. ದೇಶವು ಅವರಿಗೆಹಿಂದ್ ಕಿ ಚಾದರ್ಎಂಬ ಹೆಸರು, ಬಿರುದು ನೀಡಿರುವ ರೀತಿ ಪ್ರತಿಯೊಬ್ಬ ಭಾರತೀಯರೂ ಸಿಖ್ ಸಂಪ್ರದಾಯದ ಬಗ್ಗೆ ಹೊಂದಿರುವ ಬಾಂಧವ್ಯವನ್ನು ತೋರಿಸುತ್ತದೆ. ಗುರು ತೇಜ್ ಬಹಾದ್ದೂರ್ ಅವರು ಔರಂಗಜೇಬ್ ವಿರುದ್ಧ ತೋರಿದ  ಶೌರ್ಯ ಮತ್ತು ತ್ಯಾಗ ದೇಶವು ಭಯೋತ್ಪಾದನೆ ಮತ್ತು ಧಾರ್ಮಿಕ ಮೂಲಭೂತವಾದ, ಮತಾಂಧತೆ ವಿರುದ್ಧ ಹೇಗೆ ಹೋರಾಟ ಮಾಡಿತು ಎಂಬುದನ್ನು ಹೇಳುತ್ತದೆ.

ಅದೇ ರೀತಿ, ಹತ್ತನೇ ಗುರು, ಗುರು ಗೋವಿಂದ ಸಿಂಗ್ ಸಾಹೀಬ್ ಅವರು ಕೂಡಾ ದೃಢತೆ ಮತ್ತು ತ್ಯಾಗಕ್ಕೆ ಜೀವಂತ ಉದಾಹರಣೆಯಾಗಿದ್ದಾರೆ. ಹತ್ತನೇ ಗುರು ರಾಷ್ಟ್ರಕ್ಕಾಗಿ ಮತ್ತು ರಾಷ್ಟ್ರದ ಮೂಲ ಚಿಂತನೆಗಾಗಿ  ಪ್ರತಿಯೊಂದನ್ನೂ ತ್ಯಾಗ ಮಾಡಿದರು. ಅವರ ಇಬ್ಬರು ಮಕ್ಕಳು, ಝೋರಾವರ್ ಸಿಂಗ್ ಮತ್ತು ಫತೇ ಸಿಂಗ್ ಅವರನ್ನು ಅತಿಕ್ರಮಣಕೋರರು ಇಟ್ಟಿಗೆ ಗೋಡೆಯೊಳಗೆ ಜೀವಂತ ಸಮಾಧಿ ಮಾಡಿದರು. ಆದರೆ ಗುರು ಗೋವಿಂದ ಸಿಂಗ್ ಜೀ ಅವರು ದೇಶದ ಹೆಮ್ಮೆ ಮತ್ತು ಘನತೆಯ ಜೊತೆ ಯಾವುದೇ ರಾಜಿ ಮಾಡಿಕೊಳ್ಳಲಿಲ್ಲ. ನಾವು ಅವರ ನಾಲ್ಕು ಮಕ್ಕಳ ತ್ಯಾಗದ ಸಂಕೇತವಾಗಿ ಹುತಾತ್ಮ ವಾರವನ್ನು ಈಗಲೂ ಆಚರಿಸುತ್ತಿದ್ದೇವೆ, ಅದೀಗ ಚಾಲ್ತಿಯಲ್ಲಿದೆ.

ಸ್ನೇಹಿತರೇ,

ಹತ್ತನೇ ಗುರುವಿನ ಬಳಿಕವೂ, ತ್ಯಾಗದ ಪರಂಪರೆ ಸಿಖ್ ಸಮುದಾಯದಲ್ಲಿ ಮುಂದುವರೆಯಿತು. ವೀರ ಬಾಬಾ ಬಂಡಾ ಸಿಂಗ್ ಬಹಾದ್ದೂರ್ ಕಾಲದ ಅತ್ಯಂತ ಬಲಿಷ್ಟ, ಶಕ್ತಿಶಾಲಿ  ಸಾಮ್ರಾಜ್ಯದ ಬೇರುಗಳನ್ನು ಅಲುಗಾಡಿಸಿದರು. ನಾದಿರ್ ಶಾ ಮತ್ತು ಅಹ್ಮದ್ ಶಾ ಅಬ್ದಾಲಿ ಅವರ ಅತಿಕ್ರಮಣವನ್ನು ತಡೆಯಲು ಸಾವಿರಾರು ಸಿಖ್ ವೀರರು ಪ್ರಾಣಾರ್ಪಣೆ ಮಾಡಿದರು. ಬ್ರಿಟಿಷ್ ಆಡಳಿತದಲ್ಲಿಯೂ ಸಿಖ್ ಸಹೋದರರು ಮತ್ತು ಸಹೋದರಿಯರು ದೇಶದ ಸ್ವಾತಂತ್ರ್ಯಕ್ಕಾಗಿ ತೋರಿದ ಶೌರ್ಯ, ನಮ್ಮ ಸ್ವಾತಂತ್ರ್ಯ ಹೋರಾಟ, ಜಲಿಯನ್ ವಾಲಾ ಬಾಗ್ ಭೂಮಿ ತ್ಯಾಗಕ್ಕೆ ಇಂದಿಗೂ ಸಾಕ್ಷಿಯಾಗಿ ನಿಂತಿದೆ. ಶತಮಾನಗಳ ಹಿಂದೆ ಗುರುಗಳು ಇಂತಹ ಸಂಪ್ರದಾಯದಲ್ಲಿ ಬದುಕಿದ್ದರು ಮತ್ತು ಪರಂಪರೆ  ಈಗಲೂ ಆತ್ಮಸಾಕ್ಷಿಯನ್ನು ಜಾಗೃತಗೊಳಿಸುತ್ತಿದೆ.

ಸ್ನೇಹಿತರೇ,

ಇದು ಸ್ವಾತಂತ್ರ್ಯದ ಅಮೃತ ಮಹೋತ್ಸವದ ಕಾಲಘಟ್ಟ. ಇಂದು ದೇಶವು ತನ್ನ ಇತಿಹಾಸದಿಂದ, ಅದರ ಸ್ವಾತಂತ್ರ್ಯ ಹೋರಾಟದಿಂದ, ನಮ್ಮ ಗುರುಗಳ ಆದರ್ಶದಿಂದ  ಪ್ರೇರಣೆ ಪಡೆಯುತ್ತಿರುವುದು ನಮಗೆ ಬಹಳ ಮುಖ್ಯ. ದೇಶವು ಶತಮಾನಗಳಿಂದ ಕಾಣುತ್ತಿದ್ದ ಕನಸುಗಳನ್ನು ಈಡೇರಿಸುವ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯುತ್ತಿವೆ ಮತ್ತು ಕುರಿತಂತೆ ನಿರ್ಧಾರಗಳನ್ನು ಕೈಗೊಳ್ಳಲಾಗುತ್ತಿದೆ. ಗುರು ನಾನಕ್ ದೇವ್  ಜೀ ಅವರು ನಮಗೆ ಮಾನವತೆಯ ಪಾಠಗಳನ್ನು ಕಲಿಸಿದ ಮಾದರಿಯಲ್ಲಿಯೇ ದೇಶವುಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಮತ್ತು ಸಬ್ ಕಾ ವಿಶ್ವಾಸ್ಮಂತ್ರದೊಂದಿಗೆ ಮುನ್ನಡೆಯುತ್ತಿದೆ. ಮಂತ್ರದೊಂದಿಗೆ ಇಂದು ದೇಶವುಸಬ್ ಕಾ ಪ್ರಯಾಸ್ನ್ನು ಕೂಡಾ ತನ್ನ ಶಕ್ತಿಯನ್ನಾಗಿಸುತ್ತಿದೆ. ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಮತ್ತು ಕಛ್ ನಿಂದ ಕೊಹಿಮಾದವರೆಗೆ ಇಡೀ ದೇಶ ಒಗ್ಗೂಡಿ ಅವುಗಳ ಈಡೇರಿಕೆಗೆ ಮುಂದಾಗಿದೆ. ಇಂದು ದೇಶದ ಮಂತ್ರ ಎಂದರೆ-“ಏಕ ಭಾರತ್, ಶ್ರೇಷ್ಟ ಭಾರತ್”.

ಇಂದು ದೇಶದ ಗುರಿ-ನವ ಸಾಮರ್ಥ್ಯದ ಭಾರತದ ಪುನಶ್ಚೇತನ. ಇಂದು ದೇಶದ ನೀತಿ ಎಂದರೆ-ಪ್ರತೀ ಬಡವರಿಗೆ ಸೇವೆ, ಅವಕಾಶ ವಂಚಿತರಿಗೆ ಆದ್ಯತೆ. ಕೊರೊನಾದ ಕಠಿಣ ಪರಿಸ್ಥಿತಿಯಲ್ಲೂ ದೇಶವು ಯಾರೊಬ್ಬ ಬಡವರೂ ಹಸಿವೆಯಿಂದ ಮಲಗಬಾರದು ಎಂದು ನಿಟ್ಟಿನಲ್ಲಿ ಪ್ರಯತ್ನಿಸಿತು. ಪ್ರತಿಯೊಂದು ಪ್ರಯತ್ನಗಳ ಪ್ರಯೋಜನ ಇಂದು ದೇಶದ ಪ್ರತೀ ಭಾಗಕ್ಕೂ ಲಭಿಸುತ್ತಿದೆ. ಪ್ರತೀ ಯೋಜನೆ, ಸಮಾನವಾದ ಪ್ರಯೋಜನಗಳನ್ನು ಒದಗಿಸುತ್ತಿದೆ. ಪ್ರಯತ್ನಗಳ ಸಾಧನೆ ಭಾರತವನ್ನು ಬಲಿಷ್ಟಗೊಳಿಸುತ್ತದೆ ಮತ್ತು ಗುರು ನಾನಕ್ ದೇವ್ ಜೀ ಅವರ ಬೋಧನೆಗಳನ್ನು ಈಡೇರಿಸುತ್ತದೆ.

ಆದುದರಿಂದ, ನಮ್ಮ ಕನಸುಗಳಿಗೆ ಮತ್ತು ನಮ್ಮ ದೇಶದ ಏಕತೆಗೆ ಇಂತಹ ನಿರ್ಣಾಯಕ ಸಮಯದಲ್ಲಿ ಯಾರೊಬ್ಬರೂ ಹಾನಿ ಮಾಡದಂತೆ ನೋಡಿಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿ. ನಾವೆಲ್ಲ ಒಗ್ಗೂಡಿ ನಮ್ಮ ಗುರುಗಳು ಬದುಕಿ ತೋರಿದಂತಹ ಕನಸುಗಳನ್ನು ಈಡೇರಿಸಲು, ಅವರ ಜೀವನದಲ್ಲಿ ಕಂಡರಸಿದ ಕನಸುಗಳನ್ನು ಈಡೇರಿಸಲು ಪ್ರಯತ್ನಿಸೋಣ. ನಮ್ಮಲ್ಲಿ ಏಕತೆ ಬಹಳ ಮುಖ್ಯ. ನಮ್ಮ ಗುರುಗಳು ನಮಗೆ ಯಾವೆಲ್ಲ ಅಪಾಯಗಳ ಬಗ್ಗೆ ಎಚ್ಚರಿಕೆ ನೀಡಿದ್ದರೋ ಅವೆಲ್ಲಾ ಈಗಲೂ ಇವೆ. ಆದುದರಿಂದ ನಾವು ಎಚ್ಚರಿಕೆಯಿಂದ ಇರಬೇಕು ಮತ್ತು ದೇಶವನ್ನು ರಕ್ಷಿಸಿಕೊಳ್ಳಬೇಕು.

ಗುರು ನಾನಕ್ ದೇವ್ ಜೀ ಅವರ ಆಶೀರ್ವಾದಗಳಲ್ಲಿ ನನಗೆ ಪೂರ್ಣ ನಂಬಿಕೆ ಇದೆ. ನಾವು ನಮ್ಮ ಆಶೋತ್ತರಗಳನ್ನು ಈಡೇರಿಸಿಕೊಳ್ಳುತ್ತೇವೆ ಮತ್ತು ದೇಶವು ಹೊಸ ಎತ್ತರಕ್ಕೆ ಏರುತ್ತದೆ ಎಂಬ ಬಗ್ಗೆ ನನಗೆ ವಿಶ್ವಾಸವಿದೆ. ಕೊನೆಯದಾಗಿ, ಲಾಖ್ಪತ್ ಸಾಹೀಬ್ ಗೆ ಭೇಟಿ ನೀಡುವ ಭಕ್ತಾದಿಗಳಲ್ಲಿ ನಾನು ವಿನಂತಿ ಮಾಡಿಕೊಳ್ಳಲು ಇಚ್ಛಿಸುತ್ತೇನೆ. ಪ್ರಸ್ತುತ, ರಣ್ ಉತ್ಸವ ಕಛ್ ನಲ್ಲಿ ನಡೆಯುತ್ತಿದೆ. ನೀವು ಸಮಯಾವಕಾಶ ಮಾಡಿಕೊಂಡು ರಣ್ ಉತ್ಸವಕ್ಕೆ ಹೋಗಬೇಕು

ಕಛ್ ಮತ್ತು ಕಛ್ ಜನರು ನನ್ನ ಹೃದಯದಲ್ಲಿ ನೆಲೆಸಿದ್ದಾರೆ.

ಕಛಿ ಸಹೋದರರೇ ಮತ್ತು ಸಹೋದರಿಯರೇ, ನೀವು ಹೇಗಿದ್ದೀರಿ?. ದಿಲ್ಲಿಯಂತೆ ಮತ್ತು ಪಂಜಾಬಿನಂತೆ ಈಗ ಕಛ್ ಚಳಿಗಾಲವನ್ನು ಅನುಭವಿಸುತ್ತಿದೆಹೌದಲ್ಲವೇ?. ಒಳ್ಳೆಯದು, ಚಳಿಗಾಲದಲ್ಲಿ ನಿಮ್ಮ ಬಗ್ಗೆ ಮತ್ತು ನಿಮ್ಮ ಕುಟುಂಬದ ಬಗ್ಗೆ ಕಾಳಜಿ ವಹಿಸಿ. ಆದರೆ ಕಛ್ ಮತ್ತು ಕಛ್ ಜನರು ನನ್ನ ಹೃದಯದಲ್ಲಿದ್ದಾರೆ, ಆದುದರಿಂದ ನಾನು ಎಲ್ಲೆಲ್ಲಿ ಹೋಗುತ್ತೇನೋ, ಅಲ್ಲೆಲ್ಲ ನಾನು ಕಛ್ ನೆನಪಿಸಿಕೊಳ್ಳದೆ ಇರಲಾರೆ, ಅದು ನಿಮ್ಮ ಪ್ರೀತಿ. ಒಳ್ಳೆಯದು, ನಾನು ಕಛ್ ಗೆ ಬಂದಾಗೆಲ್ಲ ನಿಮ್ಮನ್ನು ಭೇಟಿಯಾಗುತ್ತೇನೆ. ನಿಮ್ಮೆಲ್ಲರಿಗೂ ನನ್ನ ಶುಭಾಶಯಗಳು, ರಾಂ ರಾಂ, ಸುರಕ್ಷಿತವಾಗಿರಿ.

ಸ್ನೇಹಿತರೇ,

ಕಳೆದ ಒಂದೂವರೆ ತಿಂಗಳಲ್ಲಿ ಕಛ್ ಪ್ರದೇಶ ಮನೋಹರ ದೃಶ್ಯಗಳನ್ನು ಸವಿಯಲು ಮತ್ತು ತೆರೆದ ಆಕಾಶವನ್ನು ನೋಡಲು ಒಂದು ಲಕ್ಷಕ್ಕೂ ಅಧಿಕ ಪ್ರವಾಸಿಗರು ರಣ್ ಉತ್ಸವಕ್ಕೆ ಆಗಮಿಸಿದ್ದಾರೆ. ಎಲ್ಲಿ ಇಚ್ಛಾಶಕ್ತಿ ಇರುತ್ತದ್ದೋ ಮತ್ತು ಜನರ ಪ್ರಯತ್ನಗಳು ಅದರ ಜೊತೆಗಿರುತ್ತವೋ, ಆಗ ಭೂಮಿ, ನೆಲ ಹೇಗೆ ಪರಿವರ್ತನೆ ಆಗುತ್ತದೆ ಎಂಬುದಕ್ಕೆ ಕಛ್ ನನ್ನ ಕಠಿಣ ಪರಿಶ್ರಮಿ ಜನರು ಉದಾಹರಣೆ. ಕಛ್ ಜನರು ಜೀವನೋಪಾಯಕ್ಕಾಗಿ ಜಗತ್ತಿನ ವಿವಿಧೆಡೆಗಳಿಗೆ ಹೋಗುತ್ತಿದ್ದರು. ಇಂದು ಜಗತ್ತಿನ ಎಲ್ಲೆಡೆಯಿಂದ ಜನರು ಕಛ್ ಪ್ರದೇಶದತ್ತ ಆಕರ್ಷಿತರಾಗುತ್ತಿದ್ದಾರೆ. ಇತ್ತೀಚೆಗೆ ಧೋಲಾವಿರವನ್ನು ಯುನೆಸ್ಕೋ ವಿಶ್ವ ಪರಿಸರ ತಾಣ ಎಂದು ಘೋಷಿಸಲಾಗಿದೆ. ಇದರ ಪರಿಣಾಮವಾಗಿ ಅಲ್ಲಿ ಪ್ರವಾಸೋದ್ಯಮಕ್ಕೆ ಹೆಚ್ಚಿನ ಉತ್ತೇಜನ ದೊರೆಯಲಿದೆ. ಗುಜರಾತ್ ಸರಕಾರ ಅಲ್ಲಿ ಈಗ ಬಹಳ ದೊಡ್ಡ ವೈಭವದ ಟೆಂಟ್ ನಗರವನ್ನು ಅಭಿವೃದ್ಧಿ ಮಾಡಿದೆ. ಇದು ಪ್ರವಾಸಿಗರ ಅನುಕೂಲತೆಗಳನ್ನು ಹೆಚ್ಚಿಸಲಿದೆ. ಧೋರ್ಡೋದಿಂದ ಧೋಲವಿರಾದವರೆಗೆ ರಣ್ ಮಧ್ಯಭಾಗದಲ್ಲಿ ಹೊಸ ರಸ್ತೆ ನಿರ್ಮಾಣ ತ್ವರಿತಗತಿಯಲ್ಲಿ ಸಾಗುತ್ತಿದೆ. ಇದರಿಂದ ಭುಜ್ ಮತ್ತು ಪಶ್ಚಿಮ ಕಛ್ ಅಲ್ಲಿಂದ ಖಾದಿರ್ ಮತ್ತು ದೋಲಾವಿರಾ ನಡುವೆ ಪ್ರಯಾಣ ಸುಲಭ ಸಾಧ್ಯವಾಗಲಿದೆ. ಇದರಿಂದ ಕಛ್ ಜನತೆಗೆ, ಉದ್ಯಮಿಗಳಿಗೆ ಮತ್ತು ಪ್ರವಾಸಿಗರಿಗೆ ಪ್ರಯೋಜನಗಳಾಗಲಿವೆ. ಖಾವಡಾದಲ್ಲಿ ಪುನರ್ನವೀಕೃತ ಇಂಧನ ಪಾರ್ಕ್ ನಿರ್ಮಾಣ ಕೂಡಾ ತ್ವರಿತಗತಿಯಿಂದ ಸಾಗುತ್ತಿದೆ. ಮೊದಲು ಪಶ್ಚಿಮ ಕಛ್ ನಿಂದ ಮತ್ತು ಭುಜ್ ನಿಂದ ಧೋಲಾವಿರಾ ತಲುಪಲು ಭಚ್ಚಾವೋ-ರಾಪಾರ್ ಮೂಲಕ ಹೋಗಬೇಕಿತ್ತು. ಈಗ ನೀವು ಖಾವಡಾದಿಂದ ಧೋಲಾವಿರಾಕ್ಕೆ ನೇರವಾಗಿ ಹೋಗಬಹುದು. ಹೊಸ ಮಾರ್ಗದ ಮೂಲಕ ನಾರಾಯಣ ಸರೋವರ, ಕೋಟೇಶ್ವರ, ಮಾತಾ ನೋ ಮಧ್, ಹಾಜಿ ಪೀರ್, ಧೋರ್ಡೋ ಟೆಂಟ್ ಸಿಟಿ ಮತ್ತು ದೋಲಾವಿರಾಗಳನ್ನು ತಲುಪಲು ಸುಲಭವಾಗಲಿದೆ.

ಸ್ನೇಹಿತರೇ,

ಇಂದು ಪೂಜ್ಯ ಅಟಲ್ ಜೀ ಅವರ ಜನ್ಮ ದಿನ ಕೂಡಾ. ಅಟಲ್ ಜೀ ಅವರು ಕಛ್ ಬಗ್ಗೆ ಹೆಚ್ಚಿನ ಆಸ್ಥೆ, ಒಲವು ಇಟ್ಟುಕೊಂಡಿದ್ದರು. ಭೂಕಂಪದ ಬಳಿಕ ಇಲ್ಲಿ ಮಾಡಲಾದ ಅಭಿವೃದ್ಧಿ ಕಾರ್ಯಗಳಿಗೆ ಅಟಲ್ ಜೀ ಅವರ ಸರಕಾರ ಗುಜರಾತಿನ ಜೊತೆ ಹೆಗಲಿಗೆ ಹೆಗಲು ಕೊಟ್ಟು ನಿಂತಿತ್ತು. ಇಂದು ಕಛ್ ಪ್ರಗತಿಯ ಹಾದಿಯಿಂದಾಗಿ ಅಟಲ್ ಜೀ ಅವರು ಬಹಳ ಸಂತುಷ್ಟರಾಗಿರಬಹುದು ಮತ್ತು ತೃಪ್ತಿ ಅನುಭವಿಸುತ್ತಿರಬಹುದು. ಎಲ್ಲಾ ನಮ ಗೌರವಾನ್ವಿತರ ಮತ್ತು ಪೂಜ್ಯರ ಆಶೀರ್ವಾದಗಳು ಕಛ್ ಜೊತೆಗಿರುತ್ತವೆ ಎಂಬುದಾಗಿ ನನಗೆ ಖಚಿತ ವಿಶ್ವಾಸವಿದೆ. ಮತ್ತೊಮ್ಮೆ ನಿಮ್ಮೆಲ್ಲರಿಗೂ ಗುರುಪುರಬ್ ಶುಭಾಶಯಗಳು ಮತ್ತು ಬಹಳ ಬಹಳ ಶುಭ ಹಾರೈಕೆಗಳು!

ಬಹಳ ಧನ್ಯವಾದಗಳು!

ಘೋಷಣೆ: ಇದು ಪ್ರಧಾನ  ಮಂತ್ರಿ ಅವರ ಭಾಷಣದ ಸರಿಸುಮಾರಾದ ಭಾಷಾಂತರ. ಮೂಲ ಭಾಷಣವನ್ನು ಹಿಂದಿಯಲ್ಲಿ ಮಾಡಲಾಗಿದೆ.

***


(Release ID: 1786481) Visitor Counter : 246