ಪ್ರಧಾನ ಮಂತ್ರಿಯವರ ಕಛೇರಿ

ಬಿಹಾರದ ಕಾರ್ಖಾನೆಯಲ್ಲಿ ಬಾಯ್ಲರ್ ಸ್ಫೋಟದಿಂದ ಸಂಭವಿಸಿದ ಜೀವ ಹಾನಿಗೆ ಪ್ರಧಾನಮಂತ್ರಿ ಸಂತಾಪ


ಪಿ.ಎಂ.ಎನ್.ಆರ್.ಎಫ್.ನಿಂದ ಸಂತ್ರಸ್ತರಿಗೆ ಪರಿಹಾರದ ಅನುಮೋದನೆ

Posted On: 26 DEC 2021 9:52PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಬಿಹಾರದ ಮುಜಾಫರ್ಪುರದ ಕಾರ್ಖಾನೆಯ ಬಾಯ್ಲರ್ ಸ್ಪೋಟದಿಂದಾಗಿ ಸಂಭವಿಸಿದ ಜೀವ ಹಾನಿಗೆ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.

ಟ್ವೀಟ್ ನಲ್ಲಿ ಪ್ರಧಾನಮಂತ್ರಿಯವರು;

"ಬಿಹಾರದ ಮುಜಾಫರ್ಪುರದ ಒಂದು ಕಾರ್ಖಾನೆಯಲ್ಲಿ ಸಂಭವಿಸಿದ ಅವಗಢ ಅತ್ಯಂತ ದುಃಖಕರವಾದ್ದಾಗಿದೆ. ಮೃತರ ಕುಟುಂಬಗಳಿಗೆ ನಾನು ಸಂತಾಪ ವ್ಯಕ್ತಪಡಿಸುತ್ತೇನೆ. ಗಾಯಗೊಂಡವರು ಶೀಘ್ರ ಗುಣಮುಖರಾಗಲಿ ಎಂದು ಹಾರೈಸುತ್ತೇನೆ'' ಎಂದು ತಿಳಿಸಿದ್ದಾರೆ.

ಜೊತೆಗೆ ಬಿಹಾರದ ಮುಜಾಫರ್ಪುರ ಕಾರ್ಖಾನೆಯ ಬಾಯ್ಲರ್ ಸ್ಫೋಟದ ಸಂತ್ರಸ್ತರಿಗೆ ಪ್ರಧಾನಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿ (ಪಿ.ಎಂ.ಎನ್.ಆರ್.ಎಫ್.)ಯಿಂದ  ಪರಿಹಾರ ಧನಕ್ಕೂ ಪ್ರಧಾನಮಂತ್ರಿ ಅನುಮೋದನೆ ನೀಡಿದ್ದಾರೆ.

ಪ್ರಧಾನಮಂತ್ರಿಯವರ ಕಾರ್ಯಾಲಯದ ಟ್ವೀಟ್ ;

"ಪ್ರಧಾನಮಂತ್ರಿಯವರು ಮುಜಾಫರ್ಪುರದ ಕಾರ್ಖಾನೆಯ ಅವಗಢದಲ್ಲಿ ಮೃತಪಟ್ಟವರ ಹತ್ತಿರದ ಬಂಧುಗಳಿಗೆ ತಲಾ 2 ಲಕ್ಷ ರೂಪಾಯಿಗಳ ಪರಿಹಾರವನ್ನು ಪಿ.ಎಂ.ಎನ್.ಆರ್.ಎಫ್.ನಿಂದ ಪ್ರಧಾನಮಂತ್ರಿಯವರು ಅನುಮೋದಿಸಿದ್ದಾರೆ. ಗಾಯಾಳುಗಳಿಗೆ ತಲಾ 50 ಸಾವಿರ ರೂಪಾಯಿ ನೀಡಲಾಗುವುದು." ಎಂದು ತಿಳಿಸಿದೆ.

***



(Release ID: 1785466) Visitor Counter : 151