ಪ್ರಧಾನ ಮಂತ್ರಿಯವರ ಕಛೇರಿ
ಉತ್ತರ ಪ್ರದೇಶದ ಸದ್ಗುರು ಸದಾಫಲ್ದೇವ್ ವಿಹಂಗಮ್ ಯೋಗ ಸಂಸ್ಥಾನದ 98 ನೇ ವಾರ್ಷಿಕೋತ್ಸವದ ಸಮಾರಂಭದಲ್ಲಿ ಪ್ರಧಾನಮಂತ್ರಿಯವರ ಭಾಷಣ
Posted On:
14 DEC 2021 6:52PM by PIB Bengaluru
ಹರ ಹರ ಮಹಾದೇವ್!
ಶ್ರೀ ಸದ್ಗುರು ಚರಣ ಕಮಲಭ್ಯೋ ನಮಃ!
ವೇದಿಕೆಯಲ್ಲಿ ಇರುವ ಉತ್ತರ ಪ್ರದೇಶದ ರಾಜ್ಯಪಾಲರಾದ ಶ್ರೀಮತಿ.ಆನಂದಿಬೆನ್ ಪಟೇಲ್ ಜಿ, ಉತ್ತರ ಪ್ರದೇಶದ ಶಕ್ತಿಯುತ ಕರ್ಮಯೋಗಿ, ಮುಖ್ಯಮಂತ್ರಿ ಶ್ರೀ ಯೋಗಿ ಆದಿತ್ಯನಾಥ್ ಜಿ, ಸದ್ಗುರು ಆಚಾರ್ಯ ಶ್ರೀ ಸ್ವತಂತ್ರದೇವ್ ಜಿ ಮಹಾರಾಜ್, ಸಂತ ಪ್ರವರ್ ಶ್ರೀ ವಿಜ್ಞಾನದೇವೋ ಜಿ ಮಹಾರಾಜ್, ಮಂತ್ರಿ ಪರಿಷತ್ತಿನ ನನ್ನ ಸಹೋದ್ಯೋಗಿ ಮತ್ತು ಈ ಕ್ಷೇತ್ರದ ಸಂಸದರಾದ ಶ್ರೀ ಮಹೇಂದ್ರ ನಾಥ ಪಾಂಡೆ ಜೀ, ಇಲ್ಲಿನ ನಿಮ್ಮ ಪ್ರತಿನಿಧಿ ಮತ್ತು ಯೋಗಿಜಿಯವರ ಸರ್ಕಾರದಲ್ಲಿರುವ ಮಂತ್ರಿ ಶ್ರೀ ಅನಿಲ್ ರಾಜ್‌ಭರ್ ಜಿ, ದೇಶ ವಿದೇಶಗಳ ಎಲ್ಲಾ ಭಕ್ತರು, ಸಹೋದರ ಸಹೋದರಿಯರೇ, ಮತ್ತು ಸ್ನೇಹಿತರೇ!
ಕಾಶಿಯ ಶಕ್ತಿಯು ಅಖಂಡವಾಗಿರುವುದ ಮಾತ್ರವಲ್ಲ, ಹೊಸ ಆಯಾಮಗಳನ್ನು ಪಡೆಯುತ್ತಲೇ ಇದೆ. ನಿನ್ನೆ ಕಾಶಿ ಮಹಾದೇವನ ಪಾದಕ್ಕೆ ಭವ್ಯವಾದ 'ವಿಶ್ವನಾಥ ಧಾಮ'ವನ್ನು ಅರ್ಪಿಸಿದ್ದು, ಇಂದು 'ವಿಹಂಗಮ ಯೋಗ ಸಂಸ್ಥಾನ' ಈ ಅದ್ಭುತ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ. ಈ ದಿವ್ಯ ಭೂಮಿಯಲ್ಲಿ, ದೇವರು ತನ್ನ ಅನೇಕ ಆಸೆಗಳನ್ನು ಪೂರೈಸಲು ಸಂತರ ಮುಖಾಂತರ ಮಾಡುತ್ತಾನೆ ಮತ್ತು ಸಂತರ 'ಸಾಧನ' ಪುಣ್ಯವನ್ನು ಪಡೆದಾಗ, ಸಂತೋಷವೂ ಅನುಸರಿಸುತ್ತದೆ.
ಇಂದು ನಾವು ಅಖಿಲ ಭಾರತ ವಿಹಂಗಮ ಯೋಗ ಸಂಸ್ಥಾನದ 98 ನೇ ವಾರ್ಷಿಕೋತ್ಸವ, ಸ್ವಾತಂತ್ರ್ಯ ಚಳುವಳಿಯ ಸಮಯದಲ್ಲಿ ಸದ್ಗುರು ಸದಾಫಲ್ದಿಯೋ ಜಿ ಅವರ 100 ವರ್ಷಗಳ ಜೈಲುವಾಸ ಮತ್ತು ದೇಶದ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಒಟ್ಟಿಗೆ ನೋಡುತ್ತಿದ್ದೇವೆ. ಇಷ್ಟೆಲ್ಲ ಕಾಕತಾಳೀಯಗಳೊಂದಿಗೆ ಇಂದು ಗೀತಾ ಜಯಂತಿಯ ಶುಭ ಸಂದರ್ಭವೂ ಹೌದು. ಕುರುಕ್ಷೇತ್ರದ ಯುದ್ಧಭೂಮಿಯಲ್ಲಿ ಸೈನ್ಯಗಳು ಮುಖಾಮುಖಿಯಾದ ಈ ದಿನದಂದು, ಮಾನವೀಯತೆಯು ಯೋಗ, ಆಧ್ಯಾತ್ಮಿಕತೆ ಮತ್ತು ‘ಪರಮಾರ್ಥ’ (ಸಮ್ಮಮ್ ಬೋನಮ್) ಗಳ ಅಂತಿಮ ಜ್ಞಾನವನ್ನು ಪಡೆದುಕೊಂಡಿತು. ಶ್ರೀಕೃಷ್ಣನ ಪಾದಗಳಿಗೆ ನಮಸ್ಕರಿಸುತ್ತಾ, ಗೀತಾ ಜಯಂತಿಯ ಸಂದರ್ಭದಲ್ಲಿ ನಿಮಗೆಲ್ಲರಿಗೂ ಮತ್ತು ಎಲ್ಲಾ ದೇಶವಾಸಿಗಳಿಗೂ ಹೃತ್ಪೂರ್ವಕ ಶುಭಾಶಯಗಳನ್ನು ಸಲ್ಲಿಸುತ್ತೇನೆ.
ಸಹೋದರ ಸಹೋದರಿಯರೇ,
ಸದ್ಗುರು ಸದಾಫಲದಿಯೋ ಜಿಯವರು ಸಮಾಜದ ಜಾಗೃತಿಗಾಗಿ, ‘ವಿಹಂಗಮ ಯೋಗ’ವನ್ನು ಜನಸಮಾನ್ಯರೆಡೆಗೆ ಕೊಂಡೊಯ್ಯಲು ‘ಯಾಗ’ವನ್ನು ನಡೆಸಿದ್ದರು ಮತ್ತು ಇಂದು ಆ ಸಂಕಲ್ಪದ ಬೀಜವು ಅಂತಹ ಬೃಹತ್ ಆಲದ ಮರದ ರೂಪದಲ್ಲಿ ನಮ್ಮ ಮುಂದೆ ಇದೆ. 5101 ಯಜ್ಞಕುಂಡಗಳೊಂದಿಗೆ ವಿಶ್ವಶಾಂತಿ ವೈದಿಕ ಮಹಾಯಜ್ಞ ಎಂಬ ಸಹ ಯೋಗ ತರಬೇತಿ ಶಿಬಿರದ ರೂಪದಲ್ಲಿ ಆ ಸಂತರ ಸಂಕಲ್ಪದ ಸಾಧನೆಯನ್ನು ನಾವು ಇಂದು ಅನುಭವಿಸುತ್ತಿದ್ದೇವೆ.
ನಾನು ಸದ್ಗುರು ಸದಾಫಲ್ದಿಯೋ ಜೀ ಅವರಿಗೆ ನಮಸ್ಕರಿಸುತ್ತೇನೆ ಮತ್ತು ಅವರ ಆಧ್ಯಾತ್ಮಿಕ ಉಪಸ್ಥಿತಿಗೆ ನಮಸ್ಕರಿಸುತ್ತೇನೆ. ಈ ಸಂಪ್ರದಾಯವನ್ನು ಜೀವಂತವಾಗಿಟ್ಟುಕೊಂಡು ಹೊಸ ವಿಸ್ತರಣೆಯನ್ನು ನೀಡುತ್ತಿರುವ ಮತ್ತು ಇಂದು ಭವ್ಯವಾದ ಆಧ್ಯಾತ್ಮಿಕ ಭೂಮಿಯನ್ನು ನಿರ್ಮಿಸುತ್ತಿರುವ ಶ್ರೀ ಸ್ವತಂತ್ರದೇವ್ ಜಿ ಮಹಾರಾಜ್ ಮತ್ತು ಶ್ರೀ ವಿಜ್ಞಾನದೇವಜಿ ಮಹಾರಾಜ್ ಅವರಿಗೆ ನಾನು ನನ್ನ ಕೃತಜ್ಞತೆಯನ್ನು ಸಲ್ಲಿಸುತ್ತೇನೆ. ಅದನ್ನು ನೋಡುವ ಅವಕಾಶ ಸಿಕ್ಕಿತು. ಅದು ಪೂರ್ಣಗೊಂಡಾಗ ಕಾಶಿಗೆ ಮಾತ್ರವಲ್ಲ ಭಾರತಕ್ಕೂ ಬಹುದೊಡ್ಡ ಕೊಡುಗೆಯಾಗಲಿದೆ.
ಸ್ನೇಹಿತರೇ,
ನಮ್ಮ ದೇಶ ಎಷ್ಟು ಅದ್ಭುತವಾಗಿದೆ ಎಂದರೆ ಪ್ರತಿಕೂಲ ಪರಿಸ್ಥಿತಿಯನ್ನು ಬದಲಾಯಿಸಲು ಒಬ್ಬ ಸಂತ ಅಥವಾ ಶಕ್ತಿಯು ಇಲ್ಲಿಗೆ ಇಳಿಯುತ್ತದೆ. ಜಗತ್ತೇ ಮಹಾತ್ಮ ಎಂದು ಕರೆಯುವ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಾನ್ ವೀರ ಇದೇ ಭಾರತದವರು, ಸ್ವಾತಂತ್ರ್ಯದ ರಾಜಕೀಯ ಚಳುವಳಿಯಲ್ಲೂ ಆಧ್ಯಾತ್ಮಿಕ ಪ್ರಜ್ಞೆಯು ಹರಿಯುತ್ತಿದ್ದ ದೇಶ ಭಾರತವಾಗಿದೆ ಮತ್ತು ಯೋಗಿಗಳ ಸಂಘಟನೆಯು ತನ್ನ ವಾರ್ಷಿಕ ಹಬ್ಬವನ್ನು ಅಮೃತ ಮಹೋತ್ಸವ ಎಂದು ಆಚರಿಸುವುದು ಭಾರತದಲ್ಲಿಯೇ.
ಸ್ನೇಹಿತರೇ,
ಇಲ್ಲಿ ಇರುವ ಪ್ರತಿಯೊಬ್ಬ ಯೋಗಿಯೂ ತನ್ನ ಆಧ್ಯಾತ್ಮಿಕ ಗುರುಗಳು ಸ್ವಾತಂತ್ರ್ಯ ಹೋರಾಟಕ್ಕೆ ನಿರ್ದೇಶನವನ್ನು ನೀಡಿದ್ದಾರೆ ಮತ್ತು ಅಸಹಕಾರ ಚಳವಳಿಯ ಸಂದರ್ಭದಲ್ಲಿ ಜೈಲು ಶಿಕ್ಷೆಗೆ ಒಳಗಾದ ಮೊದಲ ವ್ಯಕ್ತಿಗಳಲ್ಲಿ ಸಂತ ಸದಾಫಲ್ ದೇವ ಜಿ ಕೂಡ ಒಬ್ಬರು ಎಂದು ಹೆಮ್ಮೆಪಡುತ್ತಾರೆ. ಜೈಲಿನಲ್ಲಿದ್ದಾಗ, ಅವರು 'ಸ್ವರವೇದ'ದ ಕಲ್ಪನೆಗಳನ್ನು ಮಂಥನ ಮಾಡಿದರು ಮತ್ತು ಬಿಡುಗಡೆಯಾದ ನಂತರ ಅದಕ್ಕೆ ಮೂರ್ತರೂಪವನ್ನು ನೀಡಿದರು.
ಸ್ನೇಹಿತರೇ,
ನೂರಾರು ವರ್ಷಗಳ ಇತಿಹಾಸದಲ್ಲಿ ನಮ್ಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ದೇಶವನ್ನು ಒಗ್ಗಟ್ಟಿನಿಂದ ಕಾಪಾಡಿದ ಇಂತಹ ಹಲವು ಅಂಶಗಳಿವೆ. ತಮ್ಮ ಆಧ್ಯಾತ್ಮಿಕ ಆಚರಣೆಗಳನ್ನು ಬಿಟ್ಟು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ ಅನೇಕ ಸಂತರು ಇದ್ದರು. ಆದರೆ ಅದು ಇತಿಹಾಸದಲ್ಲಿ ಇರಬೇಕಾದ ರೀತಿಯಲ್ಲಿ ದಾಖಲಾಗಿಲ್ಲ. ನಾವು ಅಮೃತ ಮಹೋತ್ಸವವನ್ನು ಆಚರಿಸುತ್ತಿರುವಾಗ, ಈ ಕೊಡುಗೆಯನ್ನು ಬೆಳಕಿಗೆ ತರುವುದು ನಮ್ಮ ಜವಾಬ್ದಾರಿಯಾಗಿದೆ. ಹಾಗಾಗಿ ಇಂದು ದೇಶವು ತನ್ನ ಸಂತರು ಮತ್ತು ಗುರುಗಳ ಕೊಡುಗೆಯನ್ನು ಸ್ಮರಿಸುತ್ತಿದೆ ಮತ್ತು ಅದನ್ನು ಯುವ ಪೀಳಿಗೆಗೆ ಪರಿಚಯಿಸುತ್ತಿದೆ. ವಿಹಂಗಮ ಯೋಗ ಸಂಸ್ಥಾನವೂ ಇದರಲ್ಲಿ ಸಕ್ರಿಯ ಪಾತ್ರ ವಹಿಸುತ್ತಿರುವುದು ನನಗೆ ಖುಷಿ ತಂದಿದೆ.
ಸ್ನೇಹಿತರೇ,
ಭವಿಷ್ಯದ ಭಾರತವನ್ನು ಬಲಪಡಿಸಲು ನಮ್ಮ ಸಂಪ್ರದಾಯಗಳು, ಜ್ಞಾನ ಮತ್ತು ತತ್ತ್ವಶಾಸ್ತ್ರವನ್ನು ವಿಸ್ತರಿಸುವುದು ಈಗಿನ ಅಗತ್ಯವಾಗಿದೆ. ಕಾಶಿಯಂತಹ ನಮ್ಮ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಕೇಂದ್ರಗಳು ಈ ಸಾಧನೆಗೆ ಪರಿಣಾಮಕಾರಿ ಮಾಧ್ಯಮವಾಗಬಹುದು. ನಮ್ಮ ನಾಗರಿಕತೆಯ ಈ ಪ್ರಾಚೀನ ನಗರಗಳು ಇಡೀ ಜಗತ್ತಿಗೆ ದಿಕ್ಕನ್ನು ತೋರಿಸಬಲ್ಲವು. ಬನಾರಸ್‌ನಂತಹ ನಗರಗಳು ಭಾರತದ ಗುರುತು, ಕಲೆ ಮತ್ತು ಉದ್ಯಮಶೀಲತೆಯ ಬೀಜಗಳನ್ನು ಅತ್ಯಂತ ಕಠಿಣ ಸಮಯದಲ್ಲೂ ಸಂರಕ್ಷಿಸಿವೆ. ಎಲ್ಲಿ ಬೀಜವಿದೆಯೋ ಅಲ್ಲಿಂದ ಮರವು ಹಿಗ್ಗಲು ಪ್ರಾರಂಭಿಸುತ್ತದೆ. ಮತ್ತು ಇಂದು ನಾವು ಬನಾರಸ್‌ನ ಅಭಿವೃದ್ಧಿಯ ಬಗ್ಗೆ ಮಾತನಾಡುವಾಗ, ಅದು ಇಡೀ ಭಾರತದ ಅಭಿವೃದ್ಧಿಯ ಮಾರ್ಗಸೂಚಿಯಾಗಿದೆ.
ಸಹೋದರ ಸಹೋದರಿಯರೇ,
ಇಂದು ಇಲ್ಲಿ ಲಕ್ಷಾಂತರ ಜನ ಸೇರಿದ್ದಾರೆ. ನೀವು ಬೇರೆ ಬೇರೆ ಸ್ಥಳಗಳಿಂದ ಮತ್ತು ರಾಜ್ಯಗಳಿಂದ ಬಂದಿದ್ದೀರಿ. ನಿಮ್ಮ ನಂಬಿಕೆ, ವಿಶ್ವಾಸ, ಶಕ್ತಿ ಮತ್ತು ಮಿತಿಯಿಲ್ಲದ ಸಾಧ್ಯತೆಗಳನ್ನು ನೀವು ಇಲ್ಲಿಗೆ ತಂದಿದ್ದೀರಿ. ನೀವು ಕಾಶಿಯಿಂದ ಹೊರಡುವಾಗ, ಇಲ್ಲಿಂದ ಹೊಸ ಆಲೋಚನೆಗಳು, ನಿರ್ಣಯಗಳು, ಆಶೀರ್ವಾದಗಳು ಮತ್ತು ಅನುಭವಗಳನ್ನು ನಿಮ್ಮೊಂದಿಗೆ ತೆಗೆದುಕೊಂಡು ಹೋಗುತ್ತೀರಿ. ಆದರೆ ನೀವು ಮೊದಲು ಇಲ್ಲಿಗೆ ಬರುತ್ತಿದ್ದ ದಿನಗಳನ್ನು ನೆನಪಿಸಿಕೊಳ್ಳಿ. ಈ ಪುಣ್ಯಕ್ಷೇತ್ರದ ದುಸ್ಥಿತಿ ಜನರಲ್ಲಿ ನಿರಾಸೆ ಮೂಡಿಸುತ್ತಿತ್ತು. ಆದರೆ ಇಂದು ಈ ಪರಿಸ್ಥಿತಿ ಬದಲಾಗುತ್ತಿದೆ.
ಇಂದು ದೇಶ-ವಿದೇಶಗಳಿಂದ ಜನ ಬಂದಾಗ ವಿಮಾನ ನಿಲ್ದಾಣದಿಂದ ಹೊರ ಬಂದ ಕೂಡಲೇ ಎಲ್ಲವೂ ಹೊಸದಾಗಿ ಬದಲಾವಣೆಯಾದ ಅನುಭವ ಹೊಂದುತ್ತಾರೆ. ವಿಮಾನ ನಿಲ್ದಾಣದಿಂದ ನಗರವನ್ನು ತಲುಪಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ. ಕಾಶಿಯು ರಿಂಗ್ ರೋಡ್ ಕಾಮಗಾರಿಯನ್ನೂ ದಾಖಲೆ ಸಮಯದಲ್ಲಿ ಪೂರ್ಣಗೊಳಿಸಿದೆ. ಭಾರಿ ವಾಹನಗಳು ಹಾಗೂ ಹೊರ ರಾಜ್ಯಗಳ ವಾಹನಗಳು ನಗರ ಪ್ರವೇಶಿಸುವುದಿಲ್ಲ. ಬನಾರಸ್‌ಗೆ ಹೋಗುವ ಹಲವು ರಸ್ತೆಗಳನ್ನೂ ಅಗಲಗೊಳಿಸಲಾಗಿದೆ. ಬನಾರಸ್‌ಗೆ ರಸ್ತೆ ಮಾರ್ಗವಾಗಿ ಬರುವವರಿಗೆ ಈ ಸೌಲಭ್ಯದಿಂದ ವ್ಯತ್ಯಾಸ ತಿಳಿಯುತ್ತದೆ.
ಬಾಬಾ ವಿಶ್ವನಾಥನ ದರ್ಶನವಾಗಲಿ ಅಥವಾ ಗಂಗಾ ಮಾತೆಯ ಘಾಟ್ಗಳಾಗಲಿ ನೀವು ಎಲ್ಲಿಗೆ ಹೋದರೂ ಕಾಶಿಯ ಹೊಳೆಯುವ ಸೆಳವು ಸ್ಪಷ್ಟವಾಗಿ ಗೋಚರಿಸುತ್ತದೆ. ಭೂಗತ ವಿದ್ಯುತ್ ತಂತಿ ಜಾಲದ ಕಾರ್ಯ ನಡೆಯುತ್ತಿದ್ದು, ಲಕ್ಷ ಲೀಟರ್ ಕೊಳಚೆ ನೀರು ಸಂಸ್ಕರಣೆಯಾಗುತ್ತಿದೆ. ನಂಬಿಕೆ ಮತ್ತು ಪ್ರವಾಸೋದ್ಯಮದ ಜೊತೆಗೆ ಕಲೆ ಮತ್ತು ಸಂಸ್ಕೃತಿಯೂ ಈ ಬೆಳವಣಿಗೆಯಿಂದ ಪ್ರಯೋಜನ ಪಡೆಯುತ್ತಿದೆ.
ಟ್ರೇಡ್ ಫೆಸಿಲಿಟೇಶನ್ ಸೆಂಟರ್ ಆಗಿರಲಿ, ರುದ್ರಾಕ್ಷಿ ಕನ್ವೆನ್ಷನ್ ಸೆಂಟರ್ ಆಗಿರಲಿ, ನೇಕಾರರು ಮತ್ತು ಕುಶಲಕರ್ಮಿಗಳಿಗಾಗಿ ನಡೆಸುತ್ತಿರುವ ಕಾರ್ಯಕ್ರಮಗಳೇ ಆಗಿರಲಿ, ಇಂದು ಕಾಶಿಯ ಕೌಶಲ್ಯಗಳು ಹೊಸ ಶಕ್ತಿ ಪಡೆಯುತ್ತಿವೆ. ಆರೋಗ್ಯ ಕ್ಷೇತ್ರದಲ್ಲೂ, ಬನಾರಸ್ ತನ್ನ ಆಧುನಿಕ ಸೌಲಭ್ಯಗಳು ಮತ್ತು ಮೂಲಸೌಕರ್ಯಗಳಿಂದಾಗಿ ದೊಡ್ಡ ವೈದ್ಯಕೀಯ ಕೇಂದ್ರವಾಗಿ ಹೊರಹೊಮ್ಮುತ್ತಿದೆ.
ಸ್ನೇಹಿತರೇ,
ನಾನು ಕಾಶಿಯಲ್ಲಿರಲಿ ಅಥವಾ ದೆಹಲಿಯಲ್ಲಿರಲಿ ಬನಾರಸ್‌ನಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕ್ಷಿಪ್ರಗೊಳಿಸುವುದು ನನ್ನ ಪ್ರಯತ್ನವಾಗಿದೆ. ನಿನ್ನೆ ರಾತ್ರಿ 12 ಗಂಟೆಯ ನಂತರ ಅವಕಾಶ ಸಿಕ್ಕ ತಕ್ಷಣ ಕಾಶಿಯಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳ ನಿಗಾ ವಹಿಸಲು ಮುಂದಾದೆ. ಗೌಡೋಲಿಯಾದಲ್ಲಿ ಸೌಂದರ್ಯೀಕರಣ ಕಾರ್ಯವು ನೋಡಬೇಕಾದದ್ದೆ. ಅಲ್ಲಿ ಹಲವಾರು ಜನರೊಂದಿಗೆ ಸಂವಾದ ನಡೆಸಿದ್ದೇನೆ. ನಾನು ಮಂಡುವಾಡಿಯಲ್ಲಿ ಬನಾರಸ್ ರೈಲು ನಿಲ್ದಾಣವನ್ನೂ ನೋಡಿದೆ. ಈ ನಿಲ್ದಾಣವನ್ನೂ ನವೀಕರಿಸಲಾಗಿದೆ. ಹಳೆಯದನ್ನು ಉಳಿಸಿಕೊಂಡು ಹೊಸತನವನ್ನು ಮೈಗೂಡಿಸಿಕೊಂಡಿರುವ ಬನಾರಸ್ ದೇಶಕ್ಕೆ ಹೊಸ ದಿಕ್ಕನ್ನು ನೀಡುತ್ತಿದೆ.
ಸ್ನೇಹಿತರೇ,
ಈ ಬೆಳವಣಿಗೆ ಬನಾರಸ್ ಹಾಗೂ ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತಿದೆ. ನಾವು 2019-20 ರ ಬಗ್ಗೆ ಮಾತನಾಡಿದರೆ, 2014-15 ಕ್ಕೆ ಹೋಲಿಸಿದರೆ ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ದ್ವಿಗುಣಗೊಂಡಿದೆ. 2019-20 ರಲ್ಲಿ, ಕೊರೊನಾ ಸಮಯಯಲ್ಲಿ, ಬಬತ್‌ಪುರ ವಿಮಾನ ನಿಲ್ದಾಣವು 30 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರನ್ನು ದಾಖಲಿಸಿದೆ. ಇಚ್ಛಾಶಕ್ತಿ ಇದ್ದರೆ ಬದಲಾವಣೆ ಸಾಧ್ಯ ಎಂಬುದನ್ನು ಈ ಬದಲಾವಣೆಯಿಂದ ಕಾಶಿ ತೋರಿಸಿಕೊಟ್ಟಿದೆ.
ನಮ್ಮ ಇತರ ಯಾತ್ರಾ ಸ್ಥಳಗಳಲ್ಲಿಯೂ ಅದೇ ಬದಲಾವಣೆಯು ಗೋಚರಿಸುತ್ತದೆ. ಈ ಹಿಂದೆ ಹಲವು ಸಮಸ್ಯೆಗಳಿದ್ದ ಕೇದಾರನಾಥಕ್ಕೆ ಈಗ ದಾಖಲೆ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದು, 2013ರ ವಿನಾಶದ ಘಟನೆಯ ನಂತರ ಕೆಲವೇ ಜನರು ಕೇದಾರನಾಥಕ್ಕೆ ಭೇಟಿ ನೀಡುತ್ತಿದ್ದರು. ಇದರಿಂದಾಗಿ ಹಲವು ಅಭಿವೃದ್ಧಿ, ಉದ್ಯೋಗಾವಕಾಶಗಳು ಸೃಷ್ಟಿಯಾಗ ತೊಡಗಿದ್ದು, ಯುವಕರ ಕನಸುಗಳು ನನಸಾಗಲು ಸಾಮರ್ಥ್ಯವನ್ನು ಹೊಂದುತ್ತಿವೆ. ಅಭಿವೃದ್ಧಿಯ ಹೊಸ ದಾಖಲೆಗಳನ್ನು ಸ್ಥಾಪಿಸುತ್ತಿರುವ ಇಡೀ ದೇಶದಲ್ಲಿ ಈ ನಂಬಿಕೆ ಗೋಚರಿಸುತ್ತದೆ.
ಸ್ನೇಹಿತರೇ,
ಸದ್ಗುರು ಸದಾಫಲ್ ಜಿ ಸ್ವರ ವೇದದಲ್ಲಿ ಹೀಗೆ ಹೇಳಿದ್ದಾರೆ:
ದಯಾ ಕರೇ ಸಬ ಜೀವ ಪರ, ನೀಚ ಊಂಚ ನಹೀಂ ಜಾನ್.
ದೇಖೇ ಅಂತರ ಆತ್ಮ, ತ್ಯಾಗ ದೇಹ ಅಭಿಮಾನ್॥
ಅಂದರೆ ಎಲ್ಲರಿಗೂ ಪ್ರೀತಿ, ಎಲ್ಲರಿಗೂ ಕರುಣೆ, ತಾರತಮ್ಯದಿಂದ ಮುಕ್ತಿ! ಇದು ಇಂದು ದೇಶದ ಸ್ಫೂರ್ತಿ! ಇಂದು ದೇಶದ ಮಂತ್ರ -- 'ಸಬ್ಕಾ ಸಾಥ್, ಸಬ್ಕಾ ವಿಕಾಸ್, ಸಬ್ಕಾ ವಿಶ್ವಾಸ'. ಸ್ವಾರ್ಥವನ್ನು ಮೀರಿ ದೇಶವು ‘ಸಬ್ಕಾ ಪ್ರಾಯಸ್’ ಎಂಬ ಸಂಕಲ್ಪದೊಂದಿಗೆ ಮುನ್ನಡೆಯುತ್ತಿದೆ.
ಸ್ನೇಹಿತರೇ,
ಸ್ವಾತಂತ್ರ್ಯ ಚಳವಳಿಯ ಸಂದರ್ಭದಲ್ಲಿ ಗುರುಗಳು ಸ್ವದೇಶಿ ಮಂತ್ರವನ್ನು ನೀಡಿದರು. ಅದೇ ಉತ್ಸಾಹದಲ್ಲಿ, ದೇಶವು ಆತ್ಮನಿರ್ಭರ್ ಭಾರತ್ ಮಿಷನ್ ಅನ್ನು ಪ್ರಾರಂಭಿಸಿದೆ. ಸ್ಥಳೀಯ ವ್ಯಾಪಾರ, ವ್ಯಾಪಾರ ಮತ್ತು ಉತ್ಪನ್ನಗಳನ್ನು ಬಲಪಡಿಸಲಾಗುತ್ತಿದೆ. ಲೋಕಲ್ ಅನ್ನು ಗ್ಲೋಬಲ್ ಗೊಳಿಸಲಾಗುತ್ತಿದೆ. ಗುರುದೇವರು ಸ್ವರವೇದದಲ್ಲಿ ಯೋಗದ ಮಾರ್ಗವನ್ನು, ವಿಹಂಗಮ ಯೋಗವನ್ನು ಸಹ ನಮಗೆ ತೋರಿಸಿದ್ದಾರೆ. ಯೋಗವು ಜನಸಾಮಾನ್ಯರನ್ನು ತಲುಪಬೇಕು ಮತ್ತು ಭಾರತದ ಯೋಗಶಕ್ತಿಯನ್ನು ಇಡೀ ವಿಶ್ವದಲ್ಲಿ ಸ್ಥಾಪಿಸಬೇಕು ಎಂಬುದು ಅವರ ಕನಸಾಗಿತ್ತು. ಇಂದು ಇಡೀ ವಿಶ್ವವೇ ಯೋಗ ದಿನವನ್ನು ಆಚರಿಸಿ ಯೋಗವನ್ನು ಅನುಸರಿಸುತ್ತಿರುವುದನ್ನು ನೋಡಿದಾಗ ಸದ್ಗುರುಗಳ ಆಶೀರ್ವಾದ ಫಲಪ್ರದವಾಗುತ್ತಿದೆ ಎಂದು ಅನಿಸುತ್ತದೆ.
ಸ್ನೇಹಿತರೇ,
ಇಂದು ಸೂರಜ್ (ಉತ್ತಮ ಆಡಳಿತ) ಸ್ವಾತಂತ್ರ್ಯದ ಈ ಪುಣ್ಯ ಕಾಲದಲ್ಲಿ ಭಾರತದಲ್ಲಿ ಸ್ವರಾಜ್ ಅಷ್ಟೇ ಮುಖ್ಯ. ಇವೆರಡಕ್ಕೂ ದಾರಿ ಭಾರತೀಯ ಜ್ಞಾನ-ವಿಜ್ಞಾನ, ಜೀವನಶೈಲಿ ಮತ್ತು ವಿಧಾನಗಳಿಂದ ಮಾತ್ರ ಹೊರಹೊಮ್ಮುತ್ತದೆ. ವಿಹಂಗಮ ಯೋಗ ಸಂಸ್ಥೆಯು ಈ ಕಲ್ಪನೆಯನ್ನು ವರ್ಷಗಳಿಂದ ಮುಂದಿಡುತ್ತಿದೆ. ನಿಮ್ಮ ಧ್ಯೇಯವಾಕ್ಯವೆಂದರೆ- “ಗಾವೋ ವಿಶ್ವಸ್ಯ ಮಾತರಃ” (ಗೋವು ಜಗತ್ತಿನ ತಾಯಿ). ಪವಿತ್ರ ಗೋವಿನೊಂದಿಗಿನ ಈ ಸಂಬಂಧವನ್ನು ಬಲಪಡಿಸುವ ಸಲುವಾಗಿ, ನಮ್ಮ ಗ್ರಾಮೀಣ ಆರ್ಥಿಕತೆಯ ಆಧಾರ ಸ್ತಂಭವನ್ನಾಗಿ 'ಗೋ-ಧನ'ವನ್ನು ಮಾಡಲು ದೇಶದಲ್ಲಿ ಅನೇಕ ಪ್ರಯತ್ನಗಳನ್ನು ಮಾಡಲಾಗುತ್ತಿದೆ.
ಸ್ನೇಹಿತರೇ,
ನಮ್ಮ 'ಗೋ-ಧನ' ನಮ್ಮ ರೈತರಿಗೆ ಹಾಲಿನ ಮೂಲವೊಂದೇ ಅಲ್ಲದೆ, ಗೋವುಗಳು ಪ್ರಗತಿಯ ಇತರ ಆಯಾಮಗಳಲ್ಲಿ ಸಹಾಯಕವಾಗಬೇಕು ಎನ್ನುವುದು ನಮ್ಮ ಪ್ರಯತ್ನವಾಗಿದೆ. ಇಂದು ಜಗತ್ತು ಆರೋಗ್ಯದ ಬಗ್ಗೆ ಜಾಗೃತವಾಗುತ್ತಿದೆ, ರಾಸಾಯನಿಕಗಳನ್ನು ತ್ಯಜಿಸಿ ಸಾವಯವ ಕೃಷಿಯತ್ತ ಮರಳುತ್ತಿದೆ. ಒಂದು ಕಾಲದಲ್ಲಿ ಹಸುವಿನ ಸಗಣಿ ನಮ್ಮ ದೇಶದಲ್ಲಿ ಸಾವಯವ ಕೃಷಿಗೆ ಒಂದು ದೊಡ್ಡ ಆಧಾರವಾಗಿತ್ತು ಮತ್ತು ನಮ್ಮ ಇಂಧನದ ಅಗತ್ಯಗಳನ್ನು ಪೂರೈಸುತ್ತಿತ್ತು. ಇಂದು ದೇಶವು ಗೋಬರ್-ಧನ್ ಯೋಜನೆಯ ಮೂಲಕ ಜೈವಿಕ ಇಂಧನವನ್ನು ಉತ್ತೇಜಿಸುತ್ತಿದೆ ಮತ್ತು ಸಾವಯವ ಕೃಷಿಯನ್ನು ಉತ್ತೇಜಿಸುತ್ತಿದೆ. ಮತ್ತು ಎಲ್ಲಕ್ಕಿಂತ ಹೆಚ್ಚಾಗಿ, ಪರಿಸರವನ್ನು ಸಹ ರಕ್ಷಿಸಲಾಗುತ್ತಿದೆ.
ಇನ್ನೆರಡು ದಿನ ಅಂದರೆ ಇದೇ 16ರಂದು ‘ಶೂನ್ಯ ಬಜೆಟ್-ನೈಸರ್ಗಿಕ ಕೃಷಿ’ ಕುರಿತು ಮೆಗಾ ರಾಷ್ಟ್ರೀಯ ಕಾರ್ಯಕ್ರಮವೂ ನಡೆಯಲಿದೆ. ದೇಶಾದ್ಯಂತ ರೈತರು ಇದರಲ್ಲಿ ಭಾಗಿಯಾಗಲಿದ್ದಾರೆ. ನೀವೆಲ್ಲರೂ ಡಿಸೆಂಬರ್ 16 ರಂದು ನೈಸರ್ಗಿಕ ಕೃಷಿಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆದುಕೊಂಡು ನಂತರ ರೈತರನ್ನು ಭೇಟಿ ಮಾಡಿ ಅದರ ಬಗ್ಗೆ ತಿಳಿಸಬೇಕೆಂದು ನಾನು ಬಯಸುತ್ತೇನೆ. ಈ ಧ್ಯೇಯವು ಸಾಮೂಹಿಕ ಆಂದೋಲನವಾಗಬೇಕು ಮತ್ತು ನೀವೆಲ್ಲರೂ ಇದರಲ್ಲಿ ಪ್ರಮುಖ ಪಾತ್ರ ವಹಿಸಬಹುದು.
ಸ್ನೇಹಿತರೇ,
ಸ್ವಾತಂತ್ರ್ಯದ ಅಮೃತ ಮಹೋತ್ಸವದಲ್ಲಿ ದೇಶ ಹಲವು ಸಂಕಲ್ಪಗಳ ಮೇಲೆ ಕೆಲಸ ಮಾಡುತ್ತಿದೆ. ವಿಹಂಗಮ ಯೋಗ ಸಂಸ್ಥಾನವು ಸದ್ಗುರು ಸದಾಫಲ್ ದೇವ್ ಜಿ ಅವರ ಸೂಚನೆಗಳನ್ನು ಅನುಸರಿಸಿ, ದೀರ್ಘಕಾಲದವರೆಗೆ ಅನೇಕ ಸಮಾಜ ಕಲ್ಯಾಣ ಅಭಿಯಾನಗಳನ್ನು ನಡೆಸುತ್ತಿದೆ. ಇಂದಿನಿಂದ ಎರಡು ವರ್ಷಗಳ ನಂತರ, 100 ನೇ ಸಮಾವೇಶಕ್ಕಾಗಿ ನೀವು ಎಲ್ಲಾ ಸಂತರು ಇಲ್ಲಿ ಸೇರುತ್ತಾರೆ. ಇದು 2 ವರ್ಷಗಳ ಈ ಅವಧಿ ಬಹಳ ಉತ್ತಮ ಸಮಯವಾಗಿರುತ್ತದೆ.
ಇದನ್ನು ಗಮನದಲ್ಲಿಟ್ಟುಕೊಂಡು, ಇಂದು ನಾನು ನಿಮ್ಮೆಲ್ಲರನ್ನು ಕೆಲವು ನಿರ್ಣಯಗಳನ್ನು ತೆಗೆದುಕೊಳ್ಳುವಂತೆ ಒತ್ತಾಯಿಸಲು ಬಯಸುತ್ತೇನೆ. ಈ ಸಂಕಲ್ಪಗಳು ಸದ್ಗುರುಗಳ ಸಂಕಲ್ಪಗಳನ್ನು ಪೂರೈಸುವಂತಿರಬೇಕು ಮತ್ತು ದೇಶದ ಆಶಯಗಳನ್ನು ಒಳಗೊಂಡಿರಬೇಕು. ಇವು ಮುಂದಿನ ಎರಡು ವರ್ಷಗಳಲ್ಲಿ ಚಲನೆಗತಿಯನ್ನು ನೀಡಬೇಕಾದ ನಿರ್ಣಯಗಳಾಗಿರಬಹುದು ಮತ್ತು ಒಟ್ಟಿಗೆ ಪೂರೈಸಬೇಕಾದ ನಿರ್ಣಯಗಳಾಗಿರಬಹುದು.
ಅಂತಹ ಒಂದು ನಿರ್ಣಯವೆಂದರೆ ನಾವು ನಮ್ಮ ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡಬೇಕು ಮತ್ತು ನಮ್ಮ ಹೆಣ್ಣು ಮಕ್ಕಳನ್ನು ಕೌಶಲ್ಯ ಅಭಿವೃದ್ಧಿಗೆ ಸಿದ್ಧಪಡಿಸಬೇಕು. ಅವರ ಕುಟುಂಬದೊಂದಿಗೆ, ಆರ್ಥಿಕ ಸಾಮರ್ಥ್ಯವಿರುವ ಜನರು ಒಬ್ಬ ಅಥವಾ ಇಬ್ಬರು ಬಡ ಹೆಣ್ಣುಮಕ್ಕಳ ಕೌಶಲ್ಯ ಅಭಿವೃದ್ಧಿಯ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು.
ನೀರನ್ನು ಉಳಿಸುವುದು ಮತ್ತೊಂದು ನಿರ್ಣಯವಾಗಿದೆ. ನಾವು ನಮ್ಮ ನದಿಗಳು, ಗಂಗಾ ಜಿ ಮತ್ತು ಎಲ್ಲಾ ನೀರಿನ ಮೂಲಗಳನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಈ ನಿಟ್ಟಿನಲ್ಲಿ, ನಿಮ್ಮ ಸಂಸ್ಥೆಯಿಂದ ಹೊಸ ಅಭಿಯಾನಗಳನ್ನು ಪ್ರಾರಂಭಿಸಬಹುದು. ನಾನು ಮೊದಲೇ ಹೇಳಿದಂತೆ, ದೇಶವು ನೈಸರ್ಗಿಕ ಕೃಷಿಗೆ ಒತ್ತು ನೀಡುತ್ತಿದೆ. ಲಕ್ಷಗಟ್ಟಲೆ ರೈತ ಸಹೋದರ ಸಹೋದರಿಯರನ್ನು ಪ್ರೇರೇಪಿಸುವಲ್ಲಿ ನೀವೆಲ್ಲರೂ ಸಾಕಷ್ಟು ಸಹಾಯ ಮಾಡಬಹುದು.
ನಮ್ಮ ಸುತ್ತಮುತ್ತಲಿನ ಸ್ವಚ್ಛತೆ ಮತ್ತು ನೈರ್ಮಲ್ಯದ ಬಗ್ಗೆಯೂ ನಾವು ವಿಶೇಷ ಗಮನ ಹರಿಸಬೇಕು. ಯಾವುದೇ ಸಾರ್ವಜನಿಕ ಸ್ಥಳದಲ್ಲಿ ಕೊಳಕು ಹರಡದಂತೆ ಎಚ್ಚರಿಕೆ ವಹಿಸಬೇಕು. ದೇವರ ಹೆಸರಿನಲ್ಲಿ, ನೀವು ಖಂಡಿತವಾಗಿಯೂ ಯಾವುದೇ ರೀತಿಯ ಸೇವೆಯನ್ನು ಮಾಡಬೇಕು, ಅದು ಇಡೀ ಸಮಾಜಕ್ಕೆ ಪ್ರಯೋಜನವನ್ನು ನೀಡುತ್ತದೆ.
ಈ ಪವಿತ್ರ ಸಂದರ್ಭದಲ್ಲಿ ಮತ್ತು ಸಂತರ ಆಶೀರ್ವಾದದೊಂದಿಗೆ, ಈ ನಿರ್ಣಯಗಳು ಖಂಡಿತವಾಗಿಯೂ ಈಡೇರುತ್ತವೆ ಮತ್ತು ನವ ಭಾರತದ ಕನಸುಗಳನ್ನು ಈಡೇರಿಸಲು ಸಹಾಯ ಮಾಡುತ್ತದೆ ಎಂದು ನಾನು ನಂಬುತ್ತೇನೆ.
ಈ ನಂಬಿಕೆಯೊಂದಿಗೆ, ಎಲ್ಲರಿಗೂ ತುಂಬಾ ಧನ್ಯವಾದಗಳು.
ಈ ಮಹತ್ವದ ಪುಣ್ಯ ಸಂಧರ್ಭದಲ್ಲಿ ನಿಮ್ಮೆಲ್ಲರ ನಡುವೆ ಬಂದು ಈ ಪುಣ್ಯ ಕ್ಷೇತ್ರವನ್ನು ಸಂದರ್ಶಿಸುವ ಅವಕಾಶ ನನಗೂ ಸಿಕ್ಕಿದ್ದಕ್ಕಾಗಿ ಪೂಜ್ಯ ಸ್ವಾಮೀಜಿಯವರಿಗೆ ನಾನು ಕೃತಜ್ಞನಾಗಿದ್ದೇನೆ. ಮತ್ತೊಮ್ಮೆ ಎಲ್ಲರಿಗೂ ನನ್ನ ಕೃತಜ್ಞತೆಯನ್ನು ಸಲ್ಲಿಸುತ್ತೇನೆ.
ಹರ ಹರ ಮಹಾದೇವ್!
ಬಹಳ ಧನ್ಯವಾದಗಳು!
ಸೂಚನೆ: ಇದು ಪ್ರಧಾನಮಂತ್ರಿಯವರ ಭಾಷಣದ ಅಂದಾಜು ಅನುವಾದವಾಗಿದೆ. ಮೂಲ ಭಾಷಣವನ್ನು ಹಿಂದಿಯಲ್ಲಿ ಮಾಡಲಾಯಿತು.
***
(Release ID: 1782553)
Visitor Counter : 244
Read this release in:
English
,
Urdu
,
Hindi
,
Marathi
,
Bengali
,
Assamese
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam