ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಉತ್ತರ ಪ್ರದೇಶದ ಬಲರಾಂಪುರದಲ್ಲಿ ಸರಯೂ ಕಾಲುವೆ ರಾಷ್ಟ್ರೀಯ ಯೋಜನೆಯನ್ನು ಉದ್ಘಾಟಿಸಿದ ಪ್ರಧಾನಮಂತ್ರಿ


"ಜನರಲ್ ಬಿಪಿನ್ ರಾವತ್ ಅವರ ನಿಧನ ಪ್ರತಿಯೊಬ್ಬ ಭಾರತೀಯನಿಗೂ, ಪ್ರತಿಯೊಬ್ಬ ದೇಶಭಕ್ತನಿಗೂ ದೊಡ್ಡ ನಷ್ಟವಾಗಿದೆ"

"ನಾವು ಕಳೆದುಕೊಂಡ ವೀರರ ಕುಟುಂಬಗಳಿಗೆ ರಾಷ್ಟ್ರ ಬೆಂಬಲವಾಗಿ ನಿಂತಿದೆ"
" ಆಲೋಚನೆ ಪ್ರಾಮಾಣಿಕವಾಗಿದ್ದಾಗ, ಕೆಲಸವೂ ಸದೃಢವಾಗಿರುತ್ತದೆ ಎಂಬುದಕ್ಕೆ ಸರಯೂ ಕಾಲುವೆ ರಾಷ್ಟ್ರೀಯ ಯೋಜನೆಯನ್ನು ಪೂರ್ಣಗೊಳಿಸಿರುವುದೇ ಪುರಾವೆಯಾಗಿದೆ"

'5 ದಶಕಗಳಲ್ಲಿ ಮಾಡಿದ್ದಕ್ಕಿಂತ ಹೆಚ್ಚು ಕೆಲಸವನ್ನು ನಾವು ಸರಿಯು ಕಾಲುವೆ ಯೋಜನೆಯಲ್ಲಿ 5 ವರ್ಷಗಳಿಗಿಂತ ಕಡಿಮೆ ಅವಧಿಯಲ್ಲಿ ಮಾಡಿದ್ದೇವೆ. ಇದು ಡಬಲ್ ಎಂಜಿನ್ ಸರಕಾರ. ಡಬಲ್ ಎಂಜಿನ್, ಸರಕಾರದ ಕೆಲಸದ ವೇಗವೆಂದರ ಇದೇ"

Posted On: 11 DEC 2021 3:29PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಉತ್ತರ ಪ್ರದೇಶದ ಬಲರಾಂಪುರದಲ್ಲಿ ಇಂದು ʻಸರಯೂ ಕಾಲುವೆ (ನಹರ್) ರಾಷ್ಟ್ರೀಯ ಯೋಜನೆʼಯನ್ನು ಉದ್ಘಾಟಿಸಿದರು. ಉತ್ತರ ಪ್ರದೇಶದ ರಾಜ್ಯಪಾಲರಾದ ಶ್ರೀಮತಿ ಆನಂದ್ ಬೆನ್ ಪಟೇಲ್, ಉತ್ತರ ಪ್ರದೇಶದ ಮುಖ್ಯಮಂತ್ರಿ ಶ್ರೀ ಯೋಗಿ ಆದಿತ್ಯನಾಥ್, ಕೇಂದ್ರ ಸಚಿವ ಶ್ರೀ ಗಜೇಂದ್ರ ಸಿಂಗ್ ಶೇಖಾವತ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದವರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಭಾರತದ ಮೊದಲ ಸಶಸ್ತ್ರಪಡೆಗಳ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರಿಗೆ ಗೌರವ ನಮನ ಸಲ್ಲಿಸಿದರು. ರಾವತ್‌ ಅವರ ನಿಧನವು ಪ್ರತಿಯೊಬ್ಬ ಭಾರತೀಯನಿಗೂ, ಪ್ರತಿಯೊಬ್ಬ ದೇಶಭಕ್ತನಿಗೂ ದೊಡ್ಡ ನಷ್ಟವಾಗಿದೆ ಎಂದು ಹೇಳಿದರು. "ಜನರಲ್ ಬಿಪಿನ್ ರಾವತ್ ಅವರು ದೇಶದ ಪಡೆಗಳನ್ನು ಸ್ವಾವಲಂಬಿಗಳನ್ನಾಗಿಸಲು ಪಟ್ಟ ಕಠಿಣ ಪರಿಶ್ರಮಕ್ಕೆ ಎಂಥದು ಎಂಬುದಕ್ಕೆ ಇಡೀ ದೇಶವೇ ಸಾಕ್ಷಿಯಾಗಿದೆ" ಎಂದು ಅವರು ಹೇಳಿದರು. ಭಾರತವು ದುಃಖದಲ್ಲಿದೆ ನಿಜ. “ಆದರೆ, ನೋವಿನ ಅನುಭವದ ನಂತರವೂ ನಾವು ನಮ್ಮ ವೇಗವನ್ನು ಅಥವಾ ಪ್ರಗತಿಯನ್ನು ನಿಲ್ಲಿಸುವುದಿಲ್ಲ. ಭಾರತ ಎಂದಿಗೂ ನಿಲ್ಲುವುದಿಲ್ಲ,” ಎಂದು ಪ್ರಧಾನಿ ಹೇಳಿದರು. ಮೂರು ಸೇನೆಗಳ ನಡುವಿನ ಸಮನ್ವಯವನ್ನು ಬಲಪಡಿಸಲು, ದೇಶದ ಸಶಸ್ತ್ರ ಪಡೆಗಳನ್ನು ಸ್ವಾವಲಂಬಿಯಾಗಿಸಲು ಪ್ರಯತ್ನಗಳು ಮುಂದುವರಿಯುತ್ತವೆ. ಜನರಲ್ ಬಿಪಿನ್ ರಾವತ್ ಅವರು ತಮ್ಮ ಭಾರತವು ಹೊಸ ನಿರ್ಣಯಗಳೊಂದಿಗೆ ಮುಂದುವರಿಯುವುದನ್ನು ಮುಂದಿನ ದಿನಗಳಲ್ಲಿ ನೋಡಲಿದ್ದಾರೆ. ದೇಶದ ಗಡಿಗಳ ಭದ್ರತೆಯನ್ನು ಸುಧಾರಿಸುವ ಕೆಲಸ, ಗಡಿ ಮೂಲಸೌಕರ್ಯವನ್ನು ಬಲಪಡಿಸುವ ಕೆಲಸ ಮುಂದುವರಿಯಲಿದೆ' ಎಂದೂ ಪ್ರಧಾನಿ ಹೇಳಿದರು. ದಿಯೋರಿಯಾ ನಿವಾಸಿ, ಉತ್ತರ ಪ್ರದೇಶದ ಮಗನಾದ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಅವರ ಜೀವಉಳಿಸಲು ವೈದ್ಯರು ಅವಿರತ ಶ್ರಮಿಸುತ್ತಿದ್ದಾರೆ ಎಂದು ಅವರು ಮಾಹಿತಿ ನೀಡಿದರು. "ಕ್ಯಾ. ವರುಣ್‌ ಸಿಂಗ್‌ ಅವರ ಜೀವವನ್ನು ಉಳಿಸುವಂತೆ ನಾನು ಮಾತೆ ಪಟೇಶ್ವರಿಯನ್ನು ಪ್ರಾರ್ಥಿಸುತ್ತೇನೆ. ರಾಷ್ಟ್ರವು ಇಂದು ವರುಣ್ ಸಿಂಗ್ ಅವರ ಕುಟುಂಬದೊಂದಿಗೆ ಮತ್ತು ನಾವು ಕಳೆದುಕೊಂಡ ವೀರರ ಕುಟುಂಬಗಳಿಗೆ ಬೆಂಬಲವಾಗಿ ನಿಂತಿದೆ,ʼʼ ಎಂದು ಪ್ರಧಾನಿ ಹೇಳಿದರು.

ದೇಶದ ನದಿಗಳ ನೀರನ್ನು ಸರಿಯಾಗಿ ಬಳಸಿಕೊಳ್ಳುವುದು ಮತ್ತು ರೈತರ ಹೊಲಗಳಿಗೆ ಸಾಕಷ್ಟು ನೀರು ತಲುಪುವುದು ಸರಕಾರದ ಪ್ರಮುಖ ಆದ್ಯತೆಗಳಲ್ಲಿ ಒಂದಾಗಿದೆ. ಚಿಂತನೆ ಪ್ರಾಮಾಣಿಕವಾಗಿದ್ದಾಗ ಕಾಮಗಾರಿಯೂ ಸದೃಢವಾಗಿರಲಿದೆ ಎಂಬುದಕ್ಕೆ ಸರಯೂ ಕಾಲುವೆ ರಾಷ್ಟ್ರೀಯ ಯೋಜನೆ ಪೂರ್ಣಗೊಂಡಿರುವುದು ಸಾಕ್ಷಿಯಾಗಿದೆ ಎಂದು ಪ್ರಧಾನಿ ಹೇಳಿದರು.

ಈ ಯೋಜನೆಯ ಕಾಮಗಾರಿ ಪ್ರಾರಂಭವಾದಾಗ ಅದರ ವೆಚ್ಚ 100 ಕೋಟಿ ರೂ.ಗಿಂತ ಕಡಿಮೆ ಇತ್ತು. ಇಂದು ಇಂದು ಸುಮಾರು 10 ಸಾವಿರ ಕೋಟಿ ಖರ್ಚು ಮಾಡಿ ಕಾಮಗಾರಿ ಪೂರ್ಣಗೊಳಿಸಲಾಗಿದೆ ಎಂದು ಪ್ರಧಾನಿ ಹೇಳಿದರು. ಹಿಂದಿನ ಸರಕಾರಗಳ ನಿರ್ಲಕ್ಷ್ಯಕ್ಕಾಗಿ ದೇಶವು ಈಗಾಗಲೇ 100 ಪಟ್ಟು ಹೆಚ್ಚು ಪಾವತಿಸಿದೆ. "ಅದು ಸರಕಾರದ ಹಣವಾಗಿದ್ದರೆ, ನಾನು ಏಕೆ ಕಾಳಜಿ ವಹಿಸಬೇಕು? ಈ ಚಿಂತನೆಯು ದೇಶದ ಸಮತೋಲಿತ ಮತ್ತು ಸರ್ವತೋಮುಖ ಅಭಿವೃದ್ಧಿಯಲ್ಲಿ ದೊಡ್ಡ ಅಡಚಣೆಯಾಗಿ ಪರಿಣಮಿಸಿತ್ತು. ಈ ಚಿಂತನೆಯಿಂದಾಗಿ ಸರಯೂ ಕಾಲುವೆ ಯೋಜನೆಯೂ ತೂಗುಯ್ಯಾಲೆಯಲ್ಲಿತ್ತು,” ಎಂದರು. 5 ದಶಕಗಳಲ್ಲಿ ಮಾಡಿದ್ದಕ್ಕಿಂತ ಹೆಚ್ಚಿನ ಕೆಲಸವನ್ನು ನಾವು ಸರಯೂ ಕಾಲುವೆ ಯೋಜನೆಯಲ್ಲಿ 5 ವರ್ಷಗಳಿಗಿಂತ ಕಡಿಮೆ ಅವಧಿಯಲ್ಲಿ ಮಾಡಿದ್ದೇವೆ. ಇದು ಡಬಲ್ ಎಂಜಿನ್ ಸರಕಾರ. ಇದು ಡಬಲ್ ಎಂಜಿನ್ ಸರಕಾರದ ಕೆಲಸದ ವೇಗವೇಂದರೆ ಇದೇ. ಯೋಜನೆಯನ್ನು ಸಮಯಕ್ಕೆ ಸರಿಯಾಗಿ ಮುಗಿಸುವುದು ನಮ್ಮ ಆದ್ಯತೆಯಾಗಿದೆ,ʼʼ ಎಂದು ಮೋದಿ ಹೇಳಿದರು.

ಅವಳಿ ಎಂಜಿನ್ ಸರಕಾರದ ಅಡಿಯಲ್ಲಿ ಪೂರ್ಣಗೊಂಡ ಬಾನ್ ಸಾಗರ್ ಯೋಜನೆ, ಅರ್ಜುನ್ ಸಹಾಯಕ್‌ ನೀರಾವರಿ ಯೋಜನೆ, ಗೋರಖ್‌ಪುರದ ಏಮ್ಸ್ ಮತ್ತು ರಸಗೊಬ್ಬರ ಸ್ಥಾವರದಂತಹ ದೀರ್ಘಕಾಲದಿಂದ ಬಾಕಿ ಉಳಿದಿರುವ ಯೋಜನೆಗಳನ್ನು ಪ್ರಧಾನಮಂತ್ರಿಯವರು ಪಟ್ಟಿಮಾಡಿದರು. ಕೆನ್-ಬೆಟ್ವಾ ಲಿಂಕ್ ಯೋಜನೆಯನ್ನು ಅವರು ಈ ಸರಕಾರದ ಬದ್ಧತೆಗೆ ಉದಾಹರಣೆಯಾಗಿ ಉಲ್ಲೇಖಿಸಿದರು. ಕಳೆದ ಸಂಪುಟ ಸಭೆಯಲ್ಲಿ 45,000 ಕೋಟಿ ರೂ.ಗಳ ಯೋಜನೆಗೆ ಅನುಮೋದನೆ ನೀಡಲಾಗಿದೆ. ಬಂದೇಲ್‌ಖಂಡ್ ಪ್ರದೇಶವನ್ನು ನೀರಿನ ಸಮಸ್ಯೆಯಿಂದ ಮುಕ್ತಗೊಳಿಸುವಲ್ಲಿ ಈ ಯೋಜನೆ ಪ್ರಮುಖ ಪಾತ್ರ ವಹಿಸಲಿದೆ. ಸಣ್ಣ ರೈತರನ್ನು ಮೊದಲ ಬಾರಿಗೆ ಸರಕಾರದ ಯೋಜನೆಗಳೊಂದಿಗೆ ಸಂಪರ್ಕಿಸಲಾಗುತ್ತಿದೆ ಎಂದು ಪ್ರಧಾನಿ ತಿಳಿಸಿದರು. ʻಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿʼ, ಮೀನುಗಾರಿಕೆ ಮತ್ತು ಡೈರಿಯಲ್ಲಿ ಪರ್ಯಾಯ ಆದಾಯ ಹರಿವು ಮತ್ತು ಜೇನುನೊಣ ಸಾಕಣೆ ಮತ್ತು ಎಥೆನಾಲ್‌ನಲ್ಲಿ ಅವಕಾಶಗಳು ಇವು ಸರಕಾರ ಕೈಗೊಳ್ಳುತ್ತಿರುವ ಕ್ರಮಗಳಲ್ಲಿ ಹಲವೆನಿಸಿವೆ. ಕಳೆದ ನಾಲ್ಕೂವರೆ ವರ್ಷಗಳಲ್ಲಿ ಉತ್ತರ ಪ್ರದೇಶದಿಂದಲೇ 12000 ಕೋಟಿ ಮೌಲ್ಯದ ಎಥೆನಾಲ್ ಖರೀದಿಸಲಾಗಿದೆ ಎಂದು ಪ್ರಧಾನಿ ಹೇಳಿದರು. ನೈಸರ್ಗಿಕ ಕೃಷಿ ಮತ್ತು ಶೂನ್ಯ ಬಜೆಟ್ ಕೃಷಿಯ ಬಗ್ಗೆ ಡಿ.16ರಂದು ಆಯೋಜಿಸಲಾಗುತ್ತಿರುವ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಪ್ರಧಾನಮಂತ್ರಿಯವರು ದೇಶದ ರೈತರಿಗೆ ಆಹ್ವಾನ ನೀಡಿದರು. ರಾಜ್ಯದ 30 ಲಕ್ಷಕ್ಕೂ ಹೆಚ್ಚು ಕುಟುಂಬಗಳು ಪ್ರಧಾನ ಮಂತ್ರಿ ಆವಾಸ್‌ ಯೋಜನೆ (ಪಿಎಂಎವೈ) ಅಡಿಯಲ್ಲಿ ಸದೃಢ ಮನೆಗಳನ್ನು ಪಡೆದಿವೆ, ಅವುಗಳಲ್ಲಿ ಹೆಚ್ಚಿನವು ಆಯಾ ಕುಟುಂಬಗಳ ಮಹಿಳೆಯರ ಹೆಸರಿನಲ್ಲಿವೆ ಎಂದು ಅವರು ಮಾಹಿತಿ ನೀಡಿದರು. ಸ್ವಾಮಿತ್ವ ಯೋಜನೆಯ ಪ್ರಯೋಜನಗಳ ಬಗ್ಗೆಯೂ ಅವರು ಮಾತನಾಡಿದರು.

ಕೊರೊನಾ ಸಾಂಕ್ರಾಮಿಕದ ಅವಧಿಯಲ್ಲಿ ಯಾವುದೇ ಬಡವರು ಹಸಿವಿನಿಂದ ಮಲಗದಂತೆ ಸರಕಾರದ ವತಿಯಿಂದ ಪ್ರಾಮಾಣಿಕ ಪ್ರಯತ್ನಗಳನ್ನು ಮಾಡಲಾಗಿದೆ. ಇದೀಗ, ಪಿಎಂ ಗರೀಬ್ ಕಲ್ಯಾಣ್ ಅನ್ನ ಯೋಜನೆಯಡಿ ಉಚಿತ ಪಡಿತರ ಒದಗಿಸುವ ಅಭಿಯಾನವನ್ನು ಹೋಳಿ ಹಬ್ಬದ ಆಚೆಗೂ ವಿಸ್ತರಿಸಲಾಗಿದೆ ಎಂದು ಪ್ರಧಾನಿ ಹೇಳಿದರು.

ಹಿಂದಿನ ಕಾಲದಲ್ಲಿ ಮಾಫಿಯಾಗಳು ಸರಕಾರದಿಂದ ರಕ್ಷಣೆ ಪಡೆಯುತ್ತಿದ್ದವು. ಆದರೆ ಇಂದು ಇದಕ್ಕೆ ತದ್ವಿರುದ್ಧವಾಗಿ ಮಾಫಿಯಾಗಳನ್ನು ಸ್ವಚ್ಛಗೊಳಿಸಲಾಗುತ್ತಿದೆ. ಈ ವ್ಯತ್ಯಾಸವು ಸ್ಪಷ್ಟವಾಗಿ ಗೋಚರಿಸುತ್ತಿದೆ ಎಂದು ಪ್ರಧಾನಿ ತಿಳಿಸಿದರು. ಇದಕ್ಕೂ ಮುನ್ನ ಬಲಾಢ್ಯರನ್ನೇ ಸಮಾಜದಲ್ಲಿ ಮತ್ತಷ್ಟು ಶಕ್ತಿಶಾಲಿಗಳನ್ನಾಗಿ ಮಾಡಲಾಗುತ್ತಿತ್ತು. ಇಂದು, ಯೋಗಿ ಅವರ ಸರಕಾರವು ಬಡವರು, ಶೋಷಿತರು, ಹಿಂದುಳಿದವರು ಮತ್ತು ಬುಡಕಟ್ಟು ಜನರನ್ನು ಸಬಲೀಕರಣಗೊಳಿಸುವಲ್ಲಿ ತೊಡಗಿದೆ. ಅದಕ್ಕಾಗಿಯೇ ಉತ್ತರ ಪ್ರದೇಶ ಜನರು ʼವ್ಯತ್ಯಾಸವು ಗೋಚರಿಸುತ್ತಿದೆʼ ಎಂದು ಹೇಳುತ್ತಾರೆ. ಈ ಹಿಂದೆ ಮಾಫಿಯಾಗಳು ಭೂಮಿಯನ್ನು ಕಾನೂನುಬಾಹಿರವಾಗಿ ಆಕ್ರಮಿಸಿಕೊಳ್ಳುವುದು ಸಾಮಾನ್ಯವಾಗಿತ್ತು. ಆದರೆ ಇಂದು ಯೋಗಿ ಅವರು ಅಂತಹ ಅತಿಕ್ರಮಣಗಳ ಮೇಲೆ ಬುಲ್ಡೋಜರ್ ಪ್ರಯೋಗಿಸುತ್ತಿದ್ದಾರೆ. ಅದಕ್ಕಾಗಿಯೇ ಉತ್ತರ ಪ್ರದೇಶ ಜನರು ʻವ್ಯತ್ಯಾಸವು ಗೋಚರಿಸುತ್ತಿದೆʼ ಎಂದು ಹೇಳುತ್ತಾರೆ ಎಂದು ಪ್ರಧಾನಿ ಒತ್ತಿ ಹೇಳಿದರು.

***


(Release ID: 1780582) Visitor Counter : 232