ಇಂಧನ ಸಚಿವಾಲಯ
azadi ka amrit mahotsav

ಇಂಧನ ಸಂರಕ್ಷಣೆ ಕುರಿತು ಬಿಇಇ ನಿಂದ ರಾಷ್ಟ್ರ ಮಟ್ಟದ ಚಿತ್ರ ಕಲಾ ಸ್ಪರ್ಧೆ ಆಯೋಜನೆ

ಸ್ಪರ್ಧೆಗೆ 200 ಕ್ಕೂ ಹೆಚ್ಚಿನ ಪ್ರದೇಶಗಳಿಂದ 45,000 ಕ್ಕೂ ಹೆಚ್ಚು ನೋಂದಣಿ

ರಾಷ್ಟ್ರೀಯ ಇಂಧನ ಸಂರಕ್ಷಣಾ ದಿನದಂದು 9 ಲಕ್ಷ ರೂಪಾಯಿಗೂ ಹೆಚ್ಚಿನ ಮೊತ್ತದ ಬಹುಮಾನ

Posted On: 04 DEC 2021 1:39PM by PIB Bengaluru

ಇಂಧನ ಮಿತವ್ಯಯ ಸಂಸ್ಥೆ ಬ್ಯೂರೋ ಆಫ್ ಎನರ್ಜಿ‌ ಎಫಿಶಿಯನ್ಸಿ 2005 ರಿಂದ ಇಂಧನ ಮಿತವ್ಯಯ ಕುರಿತು ರಾಷ್ಟ್ರ ಮಟ್ಟದ ಚಿತ್ರಕಲಾ ಸ್ಪರ್ಧೆ ಆಯೋಜಿಸುತ್ತಾ ಬಂದಿದೆ. ಚಿತ್ರಕಲಾ ಸ್ಪರ್ಧೆಗೆ ಈ ವರ್ಷದ ಘೋಷವಾಕ್ಯ "ಆಜಾದಿ ಕಾ ಅಮೃತ ಮಹೋತ್ಸವ; ಭಾರತದಲ್ಲಿ ಇಂಧನ ಮಿತವ್ಯಯ ಮತ್ತು ಆಜಾದಿ ಕಾ ಅಮೃತ ಮಹೋತ್ಸವ : ಸ್ವಚ್ಛ ಭೂಮಿ " ಎಂಬುದಾಗಿದೆ. 2021 ರ ಡಿಸೆಂಬರ್ 1 ರಿಂದ 10ರ ವರೆಗೆ 36 ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಲ್ಲಿ ರಾಜ್ಯಮಟ್ಟದ ಚಿತ್ರಕಲಾ ಸ್ಪರ್ಧೆ ನಡೆಯಲಿದೆ. 2021 ರ ಡಿಸೆಂಬರ್ 12 ರಂದು ರಾಷ್ಟ್ರೀಯ ಮಟ್ಟದ ಸ್ಪರ್ಧೆ ನವದೆಹಲಿಯಲ್ಲಿ ಆಯೋಜನೆಗೊಂಡಿದೆ. ರಾಷ್ಟ್ರ ಮಟ್ಟದಲ್ಲಿ ವಿಜೇತರಾದವರಿಗೆ 2021, ಡಿಸೆಂಬರ್ 14 ರಂದು ನಡೆಯಲಿರುವ ರಾಷ್ಟ್ರೀಯ ಇಂಧನ ಸಂರಕ್ಷಣಾ ದಿನದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ.

ಇಂಧನ ಸಚಿವಾಲಯ ತನ್ನ ಆಡಳಿತಾತ್ಮಕ ನಿಯಂತ್ರಣ ಹೊಂದಿರುವ ಸಾರ್ವಜನಿಕ ಸ್ವಾಮ್ಯದ (ಪಿ.ಎಸ್.ಯು) ಬ್ಯೂರೋ ಆಫ್ ಎನರ್ಜಿ ಎಫಿಶಿಯನ್ಸಿಗೆ ಸಕ್ರಿಯವಾಗಿ ಬೆಂಬಲ ನೀಡುತ್ತಿದ್ದು, ಈ ಸಂಸ್ಥೆ ಸ್ಪರ್ಧೆ ಆಯೋಜಿಸಿದೆ. ಸಾರ್ವಜನಿಕ ಸ್ವಾಮ್ಯದ ಉದ್ದಿಮೆ ಆಯೋಜಿಸಿರುವ ಸ್ಪರ್ಧೆಯ ವಿವರಗಳು ಕೋಷ್ಟಕ 1 ರಲ್ಲಿದೆ.

ದೇಶದ ಯುವ ಮನಸ್ಸುಗಳಲ್ಲಿ ಇಂಧನ ಮಿತವ್ಯಯ ಚಟುವಟಿಕೆಗಳನ್ನು ಉತ್ತೇಜಿಸುವ ಉದ್ದೇಶವನ್ನು ಇದು ಹೊಂದಿದೆ. ಚಿತ್ರಕಲಾ ಸ್ಪರ್ಧೆ ಇಂಧನ ಮಿತವ್ಯಯ ಕುರಿತು ಅರಿವು ಮೂಡಿಸುವುದಷ್ಟೇ ಅಲ್ಲದೇ ಈ ವಿಚಾರದಲ್ಲಿ ಸೂಕ್ಷ್ಮತೆ ಹೊಂದುವ ಹಾಗೂ ಈ ಉದ್ದೇಶವನ್ನು ತಮ್ಮ ಚಿತ್ರಕಲೆಯಲ್ಲಿ ಪ್ರತಿಬಿಂಬಿಸುವ ಆಶಯದಿಂದ ಸ್ಪರ್ಧೆ ಆಯೋಜಿಸಿದೆ. ಯುವ ಮಕ್ಕಳು ಇಂಧನ ಮಿತವ್ಯಯ ಕುರಿತು ಅಭ್ಯಾಸವನ್ನು ರೂಢಿಸಿಕೊಳ್ಳುವ ಜತೆಗೆ ತಮ್ಮ ವರ್ತನೆಯಲ್ಲಿ ಬದಲಾವಣೆ ತಂದುಕೊಳ್ಳಬೇಕು ಎಂಬ‌ ಕಾರಣದಿಂದ ಸ್ಪರ್ಧೆ ಏರ್ಪಡಿಸಲಾಗಿದೆ.

ಶಾಲೆಗಳು ಮತ್ತು ವ್ಯಕ್ತಿಗಳು ಸ್ಪರ್ಧೆಗೆ ಬ್ಯೂರೋ ಪೋರ್ಟಲ್ ನಲ್ಲಿ (www.bee-studentsawards.in) ಆನ್ ಲೈನ್ ಮೂಲಕ ನೋಂದಾಯಿಸಿಕೊಂಡಿದ್ದಾರೆ 2021 ರ ನವೆಂಬರ್ 1 ರಿಂದ 30 ರ ವರೆಗೆ ನೋಡಲ್ ಸಂಸ್ಥೆಗಳು 45,000 ಕ್ಕೂ ಹೆಚ್ಚು ವ್ಯಕ್ತಿಗಳಿಂದ ಹಾಲಿ ನಡೆಯಲಿರುವ ಸ್ಪರ್ಧೆಗೆ ನೋಂದಣಿಯನ್ನು ಸ್ವೀಕರಿಸಿವೆ. ರಾಜ್ಯ ಮಟ್ಟದ ಚಿತ್ರಕಲಾ ಸ್ಪರ್ಧೆಗೆ ನೋಡೆಲ್ ಸಂಸ್ಥೆಗಳು 200 ಕ್ಕೂ ಹೆಚ್ಚು ಸ್ಥಳಗಳನ್ನು ಅಂತಿಮಗೊಳಿಸಿವೆ. ರಾಜ್ಯ ಮಟ್ಟದ ಸ್ಪರ್ಧೆಗೆ ಗುರುತಿಸಲಾದ ಸ್ಥಳಗಳು ಹಾಗೂ ಉದ್ದೇಶಿತ ಮಾಹಿತಿಗಳು ಕೋಷ್ಟಕ 2 ರಲ್ಲಿದೆ.

ಬ್ಯೂರೋ ಆಫ್ ಎನರ್ಜಿ ಎಫಿಶಿಯನ್ಸಿ ತನ್ನ ಪ್ರಯತ್ನಗಳ ಫಲವಾಗಿ ಹೆಚ್ಚಿನ ಸ್ಪರ್ಧಿಗಳು ಪಾಲ್ಗೊಳ್ಳುವುದನ್ನು ಖಚಿಪಡಿಸಿದೆ ಮತ್ತು ಹೆಚ್ಚಿನ ಜನ ಪಾಲ್ಗೊಳ್ಳುವಂತೆ ಮಾಡಿದೆ. ನೋಡೆಲ್ ಪಿ.ಎಸ್.ಯುಗಳು [ಕೋಷ್ಟಕ 1 ರಲ್ಲಿನ ಪಟ್ಟಿಯ ಪ್ರಕಾರ] ತಮ್ಮ ರಾಜ್ಯಗಳಲ್ಲಿ ಎಫ್.ಎಂ. ರೆಡಿಯೋ/ಆಕಾಶವಾಣಿ/ದೃಷ್ಯ ಚಿತ್ರಗಳು, ಜಾಹೀರಾತು ಮತ್ತು ಇತರೆ ಸಾಮಾಜಿಕ ಮಾಧ್ಯಮಗಳ ಮೂಲಕವೂ ಪ್ರಚಾರ ಕೈಗೊಂಡಿತ್ತು.

ಕೋವಿಡ್ ಸಾಂಕ್ರಾಮಿಕ ಪರಿಸ್ಥಿತಿ ಇರುವ ಹಿನ್ನೆಲೆಯಲ್ಲಿ ನೋಡೆಲ್ ಸಂಸ್ಥೆಗಳು ಸಂಬಂಧಪಟ್ಟ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಲ್ಲಿ ಸ್ಥಳೀಯ ಪ್ರಾಧಿಕಾರಗಳು ಹೊರಡಿಸಿರುವ ಶಿಷ್ಟಾಚಾರವನ್ನು ಪರಿಪಾಲಿಸಬೇಕು ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಆದ್ಯತೆ ನೀಡಬೇಕು. ಮುಖಗವಸು ಧರಿಸಬೇಕು, ಗುಣಮಟ್ಟದ ಕರಶುಚಿಗೊಳಿಸುವ ದ್ರಾವಕಗಳನ್ನು ಬಳಸಬೇಕು, ಚಿತ್ರಕಲಾ ಸ್ಪರ್ಧೆ ನಡೆಯುವ ಆಸುಪಾಸಿನಲ್ಲಿ ಶುಚಿತ್ವಕ್ಕೆ ಒತ್ತು ನೀಡಬೇಕು. ಗುಂಪುಗೂಡುವುದನ್ನು, ವ್ಯಕ್ತಿಗಳು ಒಂದೆಡೆ ಸೇರುವುದನ್ನು ತಪ್ಪಿಸಬೇಕು.  ಸಂಬಂಧಪಟ್ಟ ಸಾರ್ವಜನಿಕ ಉದ್ದಿಮೆಗಳಿಗೆ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳು ಸೂಕ್ತ ರೀತಿಯಲ್ಲಿ ಸಹಕಾರ ನೀಡಬೇಕು ಎಂದು ಸಹ ಕೋರಲಾಗಿದೆ.

ಸ್ಪರ್ಧಿಗಳು ರಚಿಸಿದ ಚಿತ್ರಕಲೆಯನ್ನು ರಾಜ್ಯಮಟ್ಟದ ತಜ್ಞರು/ತೀರ್ಪುಗಾರರು ಎರಡು ಗುಂಪುಗಳಿಗೆ ಪ್ರತ್ಯೇಕವಾಗಿ ಮೌಲ್ಯ ಮಾಪನ ಮಾಡಲಿದೆ. ಗುಂಪು ಎ [5 ರಿಂದ 7 ನೇ ತರಗತಿ], ಗುಂಪು ಬಿ [8 ರಿಂದ 10 ನೇ ತರಗತಿ], ಎರಡೂ ಗುಂಪುಗಳು ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನದ ಚಿತ್ರಗಳನ್ನು ರಾಷ್ಟ್ರ ಮಟ್ಟದ ಸ್ಪರ್ಧೆಗೆ ಸ್ಕ್ಯಾನ್ ಮಾಡಿದ ಪ್ರತಿಯ ಮೂಲಕ ರವಾನಿಸಲಿದೆ, 2021 ರ ಡಿಸೆಂಬರ್ 12 ರಂದು ರಾಜ್ಯ/ ಕೇಂದ್ರಾಡಳಿತ ಪ್ರದೇಶಗಳಿಂದ ಪಡೆದ ಚಿತ್ರಕಲೆಗಳನ್ನು ರಾಷ್ಟ್ರೀಯ ಮಟ್ಟದ ಪ್ರಶಸ್ತಿಗಳಿಗಾಗಿ ಮೌಲ್ಯಮಾಪನ ಮಾಡಲು ಬಿಇಇ 8 ಮಂದಿ ಪ್ರಸಿದ್ಧ ವ್ಯಕ್ತಿಗಳನ್ನು ಒಳಗೊಂಡ ರಾಷ್ಟ್ರೀಯ ಮಟ್ಟದ ತೀರ್ಪುಗಾರರ ಸಮಿತಿಯನ್ನು ರಚಿಸಿದೆ.  ರಾಷ್ಟ್ರಮಟ್ಟದ ಪ್ರಶಸ್ತಿಗಳನ್ನು 2021 ರ ಡಿಸೆಂಬರ್ 14 ರಂದು ಪ್ರಕಟಿಸಲಾಗುತ್ತದೆ.

ಕ್ರಮ ಸಂಖ್ಯೆ

ಎ ಮತ್ತು ಬಿ ಗುಂಪಿಗೆ ಬಹುಮಾನದ ಹಣ

ಮೊತ್ತ [ರೂ]

i

ಮೊದಲ

50,000/-

ii

ಎರಡನೆ

30,000/-

iii

ಮೂರನೇ

20,000/-

 

 

 

iv

ಸಮಾಧಾನಕರ ಬಹುಮಾನ [ 10 ಮಂದಿಗೆ ]

7,500/-

ರಾಷ್ಟ್ರಮಟ್ಟದ ಸ್ಪರ್ಧೆಗೆ ನಗದು ಬಹುಮಾನ;

ಕ್ರಮ ಸಂಖ್ಯೆ

ಎ ಮತ್ತು ಬಿ ಗುಂಪಿಗೆ ಬಹುಮಾನದ ಹಣ

ಮೊತ್ತ [ರೂ]

I

ಮೊದಲ

1,00,000/-

II

ಎರಡನೇ

50,000/-

III

ಮೂರನೇ

30,000/-

IV

ಸಮಾಧಾನಕರ ಬಹುಮಾನ [ 10 ಮಂದಿಗೆ ]

15,000/-

***(Release ID: 1778063) Visitor Counter : 131