ವಾರ್ತಾ ಮತ್ತು ಪ್ರಸಾರ ಸಚಿವಾಲಯ

ಆಕಾಶವಾಣಿಯಿಂದ ʻ#AIRNxtʼಗೆ ಚಾಲನೆ


ಆಜಾ಼ದಿ ಕಾ ಅಮೃತಮಹೋತ್ಸವವನ್ನು ಆಚರಿಸಲು ಯುವಜನರ, ಯುವಜನರಿಂದ ಮತ್ತು ಯುವಜನರಿಗಾಗಿ ಕಾರ್ಯಕ್ರಮಗಳು

Posted On: 29 NOV 2021 11:49AM by PIB Bengaluru

ಆಕಾಶವಾಣಿ ಅಭೂತಪೂರ್ವ ಹೆಜ್ಜೆಯಲ್ಲಿ ನವೆಂಬರ್ 28, 2021ರಿಂದ ತನ್ನ ಸ್ಟುಡಿಯೋಗಳನ್ನು ಯುವ ಭಾರತವನ್ನು ಪ್ರತಿನಿಧಿಸುವ ಧ್ವನಿಗಳಿಗಾಗಿ ತೆರೆದಿದೆ. ಮುಂದಿನ 52 ವಾರಗಳವರೆಗೆ, ಭಾರತದಾದ್ಯಂತ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿನ ಬಾನುಲಿ ಕೇಂದ್ರಗಳು ವಿವಿಧ ಸ್ಥಳೀಯ ಕಾಲೇಜುಗಳು, ವಿಶ್ವವಿದ್ಯಾಲಯಗಳ ಯುವಕರಿಗೆ ಆಕಾಶವಾಣಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಿವೆಇದು ಯುವ ಕೇಂದ್ರಿತ ಕಾರ್ಯಕ್ರಮಗಳ ಬಗ್ಗೆ ಚರ್ಚಿಸಲು ಮತ್ತು ಆರಿಸಲು ಮಾಡಲು ಅವಕಾಶ ನೀಡುತ್ತದೆ. ಜೊತೆಗೆ ಕಾರ್ಯಕ್ರಮಗಳು ಕಳೆದ 75 ವರ್ಷಗಳ ಸ್ವಾತಂತ್ರ್ಯದ ಅವಧಿಯಲ್ಲಿ ದೇಶದ ಸಾಧನೆಗಳ ಬಗ್ಗೆ ಮಾತನಾಡಲು ಮತ್ತು ದೇಶವು ವಿವಿಧ ಕ್ಷೇತ್ರಗಳಲ್ಲಿ ಏರಬೇಕಿರುವ ಎತ್ತರಗಳ ಬಗ್ಗೆ ನಿರೀಕ್ಷೆಗಳನ್ನು ಮುಂದಿಡಲು  ಯುವಕರನ್ನು ಉತ್ತೇಜಿಸುತ್ತದೆ. ಮೂಲಕ ಯುವಕರು ತಮ್ಮ ದೊಡ್ಡ ಕನಸುಗಳನ್ನು ಹಂಚಿಕೊಳಳಬಹುದು ಮತ್ತು ಭಾರತದ ಭವಿಷ್ಯವನ್ನು ವ್ಯಾಖ್ಯಾನಿಸಬಹುದು.

ಭಾರತದ ಮೂಲೆ ಮೂಲೆಯಿಂದ 1000 ಶಿಕ್ಷಣ ಸಂಸ್ಥೆಗಳ ಸುಮಾರು 20,000 ಯುವಕರು ಮುಂದಿನ ಒಂದು ವರ್ಷದಲ್ಲಿ 167 ಆಕಾಶವಾಣಿ ಕೇಂದ್ರಗಳ ಮೂಲಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.

ಆಕಾಶವಾಣಿಯಲ್ಲಿ ಹಿಂದೆಂದೂ ಕೇಳಿರದಂತಹ ಧ್ವನಿಗಳು ಇವಾಗಿರಲಿವೆ ಮತ್ತು ಪ್ರಸ್ತುತ ಆಚರಿಸಲಾಗುತ್ತಿರುವ ʻಆಜಾದಿ ಕಾ ಅಮೃತ್ ಮಹೋತ್ಸವʼ ಅಂಗವಾಗಿ ಹೊಸ ಕಾರ್ಯಕ್ರಮದ #AIRNxt ಮೂಲಕ ಆಲ್‌ ಇಂಡಿಯಾ ರೇಡಿಯೋದಲ್ಲಿ ಮೊದಲ ಬಾರಿಗೆ ಪ್ರಸ್ತುತಪಡಿಸಲಾಗುತ್ತಿದೆ.

ಇದು ದೇಶಾದ್ಯಂತ ಸಾವಿರಾರು ಯುವಕರು ಮತ್ತು ನೂರಾರು ಶಿಕ್ಷಣ ಸಂಸ್ಥೆಗಳನ್ನು ಒಳಗೊಂಡ ʻಆಕಾಶವಾಣಿʼ ಅತಿದೊಡ್ಡ ʻಥೀಮ್ ಶೋʼ ಆಗಿದೆ. ಪ್ರತಿಭಾ ಶೋಧ ಕಾರ್ಯಕ್ರಮ #AIRNxt  ಎಲ್ಲಾ ಪ್ರಮುಖ ಭಾರತೀಯ ಭಾಷೆಗಳು ಮತ್ತು ಉಪಭಾಷೆಗಳಲ್ಲಿ ಪ್ರಸಾರವಾಗಲಿದೆ.

***



(Release ID: 1776111) Visitor Counter : 222