ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (ಸಿಸಿಇಎ)
14ನೇ ಹಣಕಾಸು ಆಯೋಗದಿಂದ ಮುಂದಿನ ಹಣಕಾಸು ಆಯೋಗದ ಆವರ್ತನದವರೆಗೆ (2021-2026) ವರೆಗೆ "ವಾತಾವರಣ' ಮತ್ತು ಹವಾಮಾನ ಸಂಶೋಧನೆ-ಮಾಡೆಲಿಂಗ್ ವೀಕ್ಷಣಾ ವ್ಯವಸ್ಥೆಗಳು ಮತ್ತು ಸೇವೆಗಳು ("ಅಕ್ರಾಸ್")" ಏಕಛತ್ರಿ ಯೋಜನೆಯ ಮುಂದುವರಿಕೆಗೆ ಸಂಪುಟದ ಅನುಮೋದನೆ
ಎ.ಸಿ.ಆರ್.ಓ.ಎಸ್.ಎಸ್. ಮತ್ತು ಅದರ ಎಂಟು ಉಪ ಯೋಜನೆಗಳ ಜೊತೆಗೆ ಮುಂದಿನ ಐದು ಹಣಕಾಸು ಆವರ್ತನಗಳಿಗೆ ವೆಚ್ಚವಾಗಲಿರುವ 2,135 ಕೋಟಿ ರೂ.
Posted On:
24 NOV 2021 3:41PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಆರ್ಥಿಕ ವ್ಯವಹಾರಗಳ ಕುರಿತ ಸಂಪುಟ ಸಮಿತಿ ಸಭೆ "ವಾತಾವರಣ ಮತ್ತು ಹವಾಮಾನ ಸಂಶೋಧನೆ-ಮಾಡೆಲಿಂಗ್ ನಿಗಾ ವ್ಯವಸ್ಥೆ ಮತ್ತು ಸೇವೆಗಳು ("ಅಕ್ರಾಸ್"- ACROSS) ಏಕ ಛತ್ರಿ ಯೋಜನೆಯನ್ನು ಅದರ ಎಂಟು ಉಪ ಯೋಜನೆಗಳೊಂದಿಗೆ ಮುಂದಿನ ಐದು ವರ್ಷಗಳ ಹಣಕಾಸು ಆವರ್ತನದವರೆಗೆ ಮುಂದುವರಿಸಲು ತನ್ನ ಅನುಮೋದನೆಯನ್ನು ನೀಡಿದೆ. ಐದು ವರ್ಷಗಳ ಆವರ್ತನ ಅಂದರೆ 2021-2026ಆಗಿದ್ದು, ಇದರ ಅಂದಾಜು ವೆಚ್ಚ 2,135 ಕೋಟಿ ರೂ. ಆಗಿರುತ್ತದೆ. ಈ ಯೋಜನೆಯನ್ನು ಭೂ ವಿಜ್ಞಾನ ಸಚಿವಾಲಯ (ಎಂ.ಓ.ಇ.ಎಸ್.) ತನ್ನ ಘಟಕಗಳಾದ ಭಾರತ ಹವಾಮಾನ ಇಲಾಖೆ (ಐಎಂಡಿ), ಮಧ್ಯಮ ಶ್ರೇಣಿಯ ಹವಾಮಾನ ಮುನ್ಸೂಚನೆಯ ರಾಷ್ಟ್ರೀಯ ಕೇಂದ್ರ (ಎನ್.ಸಿ.ಎಂ.ಆರ್.ಡಬ್ಲ್ಯು.ಎಫ್.); ಭಾರತೀಯ ಉಷ್ಣವಲಯ ಹವಾಮಾನ ಶಾಸ್ತ್ರ ಸಂಸ್ಥೆ (ಐಐಟಿಎಂ) ಮತ್ತು ಭಾರತೀಯ ರಾಷ್ಟ್ರೀಯ ಸಾಗರ ಮಾಹಿತಿ ಸೇವೆಗಳ ಕೇಂದ್ರ (ಐ.ಎನ್.ಸಿ.ಓ.ಐ.ಎಸ್.) ಮೂಲಕ ಕಾರ್ಯಗತಗೊಳಿಸುತ್ತಿದೆ.
ವಿವರಗಳು:
"ಅಕ್ರಾಸ್" ಯೋಜನೆಯು ಭೂ ವಿಜ್ಞಾನ ಸಚಿವಾಲಯದ (ಎಂ.ಓ.ಇ.ಎಸ್.) ವಾಯುಮಂಡಲದ ವಿಜ್ಞಾನ ಕಾರ್ಯಕ್ರಮಗಳಿಗೆ ಸಂಬಂಧಿಸಿದ್ದು, ಹವಾಮಾನ ಮತ್ತು ಹವಾಮಾನ ಸೇವೆಗಳ ವಿವಿಧ ಅಂಶಗಳನ್ನು ತಿಳಿಸುತ್ತದೆ. ಈ ಪ್ರತಿಯೊಂದು ಅಂಶಗಳನ್ನು "ಅಕ್ರಾಸ್" ಎಂಬ ಏಕಛತ್ರಿ ಯೋಜನೆ ಅಡಿಯಲ್ಲಿ ಎಂಟು ಉಪ-ಯೋಜನೆಗಳಾಗಿ ಸಂಯೋಜಿಸಲಾಗಿದೆ ಮತ್ತು ಮೇಲೆ ಹೇಳಿದ ನಾಲ್ಕು ಸಂಸ್ಥೆಗಳ ಮೂಲಕ ಸಮಗ್ರ ರೀತಿಯಲ್ಲಿ ಕಾರ್ಯಗತಗೊಳಿಸಲಾಗುತ್ತದೆ.
ಅನುಷ್ಠಾನ ಕಾರ್ಯತಂತ್ರ ಮತ್ತು ಗುರಿ:
ಅಕ್ರಾಸ್ ಯೋಜನೆಯ ಅಡಿಯಲ್ಲಿರುವ ಎಂಟು ಉಪ-ಯೋಜನೆಗಳು ಬಹು ಶಿಸ್ತಿನ ಸ್ವಭಾವವನ್ನು ಹೊಂದಿದ್ದು ಹವಾಮಾನ ಮತ್ತು ಹವಾಮಾನದ ಎಲ್ಲಾ ಅಂಶಗಳನ್ನು ಒಳಗೊಳ್ಳಲು ಐಎಂಡಿ, ಐಐಟಿಎಂ, ಎನ್.ಸಿ.ಎಂ.ಆರ್.ಡಬ್ಲ್ಯು.ಎಫ್. ಮತ್ತು ಐ.ಎನ್.ಸಿ.ಓ.ಐ.ಎಸ್. ಮೂಲಕ ಸಮಗ್ರ ರೀತಿಯಲ್ಲಿ ಕಾರ್ಯಗತಗೊಳಿಸಲಾಗುತ್ತದೆ. ಕೆಳಗಿನ ಎಂಟು ಯೋಜನೆಗಳ ಮೂಲಕ ಮೇಲಿನ ಕಾರ್ಯಗಳನ್ನು ಸಾಧಿಸಲು ಪ್ರತಿಯೊಂದು ಸಂಸ್ಥೆಯೂ ಗೊತ್ತುಪಡಿಸಿದ ಪಾತ್ರವನ್ನು ಹೊಂದಿರುತ್ತವೆ:
- ಪೋಲಾರ್ ಮೆಟ್ರಿಕ್ ಡಾಪ್ಲರ್ ವೆದರ್ ರಾಡಾರ್ ಗಳ ಸ್ಥಾಪನೆ (ಡಿಡಬ್ಲ್ಯುಆರ್ ಗಳು)-ಐಎಂಡಿ
- ಅರಣ್ಯ ವ್ಯವಸ್ಥೆಯ ಮೇಲ್ದರ್ಜೀಕರಣ – ಐ.ಎಂ.ಡಿ.
- ಹವಾಮಾನ ಮತ್ತು ಹವಾಮಾನ ಸೇವೆಗಳು – ಐಎಂಡಿ
- ವಾತಾವರಣದ ನಿಗಾ ಜಾಲ –ಐಎಂಡಿ
- ಹವಾಮಾನ ಮತ್ತು ದೀರ್ಘಸಮಯದ ಹವಾಮಾನದ ನ್ಯೂಮರಿಕಲ್ ಮಾಡಲಿಂಗ್ – ಎನ್.ಸಿ.ಎಂ.ಆರ್.ಡಬ್ಲ್ಯು.ಎಫ್.
- ಮುಂಗಾರು ಅಭಿಯಾನ III- ಐಐಟಿಎಂ /ಎನ್.ಸಿ.ಎಂ.ಆರ್.ಡಬ್ಲ್ಯುಎಫ್/ಐಎನ್ಸಿಓಐಎಸ್. /ಐಎಂಡಿ
- ಮುಂಗಾರು ಸಂವಹನ, ಮೋಡಗಳು ಮತ್ತು ಹವಾಮಾನ ಬದಲಾವಣೆ (ಎಂ.ಸಿ4)- ಐಐಟಿಎಂ/ಎನ್.ಸಿ.ಎಂ.ಆರ್.ಡಬ್ಲ್ಯು.ಎಫ್/ಐಎಂಡಿ.
- viii. ಉನ್ನತ ಸಾಮರ್ಥ್ಯದ ಕಂಪ್ಯೂಟಿಂಗ್ ಸಿಸ್ಟಮ್ (ಎಚ್.ಪಿ.ಸಿ.ಎಸ್.)-ಐಐಟಿಎಂ/ಎನ್.ಸಿ.ಎಂ.ಆರ್.ಡಬ್ಲ್ಯು.ಎಫ್.
- ಉದ್ಯೋಗ ಸೃಷ್ಟಿ ಸಾಮರ್ಥ್ಯ ಸೇರಿದಂತೆ ಪ್ರಮುಖ ಪರಿಣಾಮ
ಈ ಯೋಜನೆಯು ಸುಧಾರಿತ ಹವಾಮಾನ, ದೀರ್ಘ ಸಮಯದ ಹವಾಮಾನ, ಸಾಗರ ಮುನ್ಸೂಚನೆ ಮತ್ತು ಸೇವೆಗಳು ಮತ್ತು ಇತರ ಅಪಾಯ ಸಂಬಂಧಿತ ಸೇವೆಗಳನ್ನು ಒದಗಿಸುತ್ತದೆ ಮತ್ತು ಆ ಮೂಲಕ ಅಂತಿಮ ಬಳಕೆದಾರರಿಗೆ ಸಾರ್ವಜನಿಕ ಹವಾಮಾನ ಸೇವೆ, ಕೃಷಿ-ಹವಾಮಾನ ಸೇವೆಗಳು, ವಾಯುಯಾನ ಸೇವೆಗಳು, ಪರಿಸರ ಮೇಲ್ವಿಚಾರಣಾ ಸೇವೆ, ಜಲ-ಹವಾಮಾನ ಸೇವೆಗಳು, ಹವಾಮಾನ ಸೇವೆಗಳು, ಪ್ರವಾಸೋದ್ಯಮ, ತೀರ್ಥಯಾತ್ರೆ, ವಿದ್ಯುತ್ ಉತ್ಪಾದನೆ, ನೀರು ನಿರ್ವಹಣೆ, ಕ್ರೀಡೆ ಮತ್ತು ಸಾಹಸ ಇತ್ಯಾದಿ ವಿವಿಧ ಸೇವೆಗಳಿಗೆ ಅನುಗುಣವಾದ ಪ್ರಯೋಜನಗಳ ವರ್ಗಾವಣೆಯನ್ನು ಖಾತ್ರಿಪಡಿಸುತ್ತದೆ. ಮುನ್ಸೂಚನೆಯಿಂದ ಅದರ ವಿತರಣೆಯವರೆಗಿನ ಸಂಪೂರ್ಣ ಪ್ರಕ್ರಿಯೆಯು ಪ್ರತಿ ಹಂತದಲ್ಲೂ ಗಣನೀಯ ಮಾನವಶಕ್ತಿಯ ಅಗತ್ಯವಿರುತ್ತದೆ, ಇದರಿಂದಾಗಿ ಅನೇಕ ಜನರಿಗೆ ಉದ್ಯೋಗಾವಕಾಶಗಳನ್ನೂ ಸೃಷ್ಟಿಸುತ್ತದೆ.
ಹಿನ್ನೆಲೆ:
ಹವಾಮಾನ, ದೀರ್ಘ ಸಮಯದ ಹವಾಮಾನ ಮತ್ತು ಸಾಗರ ನಿಯತಾಂಕಗಳನ್ನು ಗಮನಿಸುವುದು ಮತ್ತು ಹವಾಮಾನ, ದೀರ್ಘಸಮಯದ ಹವಾಮಾನ ಮತ್ತು ಅಪಾಯ ಸಂಬಂಧಿತ ವಿದ್ಯಮಾನಗಳನ್ನು ಮುನ್ಸೂಚನೆ ನೀಡುವ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸಲು ಮತ್ತು ಸುಧಾರಿಸಲು ಸಂಶೋಧನೆ ಮತ್ತು ಅಭಿವೃದ್ಧಿ ಚಟುವಟಿಕೆಗಳನ್ನು ಕೈಗೊಳ್ಳುವುದು ಹವಾಮಾನದ ವಿಜ್ಞಾನವನ್ನು ತಿಳಿಸುವುದು ಸೇರಿದಂತೆ ಸಾಮಾಜಿಕ, ಆರ್ಥಿಕ ಮತ್ತು ಪರಿಸರ ಪ್ರಯೋಜನಗಳಿಗಾಗಿ. ಹವಾಮಾನ ಸೇವೆಗಳ ಬದಲಾವಣೆ ಮತ್ತು ಅಭಿವೃದ್ಧಿ ಭೂ ವಿಜ್ಞಾನ ಸಚಿವಾಲಯದ ರೀತ್ಯ ಕಡ್ಡಾಯವಾಗಿದೆ. ಜಾಗತಿಕ ಹವಾಮಾನ ಬದಲಾವಣೆ ಮತ್ತು ವಿಪರೀತ ಹವಾಮಾನಕ್ಕೆ ಸಂಬಂಧಿಸಿದ ಅಪಾಯದ ಕಾರಣದಿಂದಾಗಿ ಹವಾಮಾನ ವೈಪರೀತ್ಯ ಘಟನೆಗಳ ಹೆಚ್ಚಳ ಅನೇಕ ಗುರಿ ಆಧಾರಿತ ಕಾರ್ಯಕ್ರಮಗಳನ್ನು ರೂಪಿಸಲು ಎ.ಓ.ಇ.ಎಸ್. ಅನ್ನು ಪ್ರೇರೇಪಿಸಿದೆ, ಇದನ್ನು ಐ.ಎಂ.ಡಿ., ಐಐಟಿಎಂ, ಎನ್.ಸಿ.ಎಂ.ಆರ್.ಡಬ್ಲ್ಯು.ಎಫ್. ಮತ್ತು ಐ.ಎನ್.ಸಿ.ಓ.ಐ.ಎಸ್. ಮೂಲಕ ಸಮಗ್ರ ರೀತಿಯಲ್ಲಿ ಕೈಗೊಳ್ಳಲಾಗುತ್ತದೆ. ಪರಿಣಾಮವಾಗಿ, ಈ ಚಟುವಟಿಕೆಗಳನ್ನು "ಅಕ್ರಾಸ್" ಎಂಬ ಏಕಛತ್ರಿ ಯೋಜನೆಯಡಿಯಲ್ಲಿ ಒಟ್ಟುಗೂಡಿಸಲಾಗುತ್ತದೆ.
***
(Release ID: 1774652)
Visitor Counter : 310
Read this release in:
Marathi
,
Tamil
,
Telugu
,
English
,
Urdu
,
Hindi
,
Manipuri
,
Bengali
,
Punjabi
,
Gujarati
,
Odia
,
Malayalam