ಪ್ರಧಾನ ಮಂತ್ರಿಯವರ ಕಛೇರಿ
ಸಿಡ್ನಿ ಸಂವಾದಯಲ್ಲಿ ಪ್ರಧಾನ ಭಾಷಣ ಮಾಡಲಿರುವ ಪ್ರಧಾನಮಂತ್ರಿ
प्रविष्टि तिथि:
17 NOV 2021 7:25PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2021ರ ನವೆಂಬರ್ 18ರಂದು ಬೆಳಗ್ಗೆ ಭಾರತೀಯ ಕಾಲಮಾನ 9 ಗಂಟೆಗೆ ಸಿಡ್ನಿ ಸಂವಾದದ ವೇಳೆ ಪ್ರಧಾನ ಭಾಷಣ ಮಾಡಲಿದ್ದಾರೆ. ಭಾರತದ ತಂತ್ರಜ್ಞಾನ ವಿಕಸನ ಮತ್ತು ಕ್ರಾಂತಿ ವಿಷಯ ಕುರಿತು ಮಾತನಾಡಲಿದ್ದಾರೆ, ಆಸ್ಟ್ರೇಲಿಯಾದ ಪ್ರಧಾನಮಂತ್ರಿಯವರು ಭಾಷಣಕ್ಕೆ ಮುನ್ನ ಪ್ರಾಸ್ತಾವಿಕವಾಗಿ ಮಾತನಾಡಲಿದ್ದಾರೆ.
ಸಿಡ್ನಿ ಸಂವಾದ 17-19 ನವೆಂಬರ್ 2021ರ ನಡುವೆ ನಡೆಯುತ್ತಿದೆ. ಇದು ಆಸ್ಟ್ರೇಲಿಯಾದ ವ್ಯೂಹಾತ್ಮಕ ನೀತಿ ಸಂಸ್ಥೆಯ ಉಪಕ್ರಮವಾಗಿದೆ. ಇದು ರಾಜಕೀಯ, ವ್ಯಾಪಾರ ಮತ್ತು ಸರ್ಕಾರದ ನಾಯಕರನ್ನು ಒಂದೆಡೆ ಸೇರಿಸಿ, ಚರ್ಚಿಸಲು, ಹೊಸ ಆಲೋಚನೆಗಳನ್ನು ಸೃಷ್ಟಿಸಲು ಮತ್ತು ಉದಯೋನ್ಮುಖ ಮತ್ತು ವಿಮರ್ಶಾತ್ಮಕ ತಂತ್ರಜ್ಞಾನಗಳಿಂದ ಉಂಟಾಗುವ ಅವಕಾಶಗಳು ಮತ್ತು ಸವಾಲುಗಳ ಸಾಮಾನ್ಯ ತಿಳಿವಳಿಕೆ ಮೂಡಿಸುವ ಕಾರ್ಯ ಮಾಡುತ್ತದೆ. ಈ ಕಾರ್ಯಕ್ರಮವು ಆಸ್ಟ್ರೇಲಿಯಾದ ಪ್ರಧಾನಮಂತ್ರಿ ಶ್ರೀ ಸ್ಕಾಟ್ ಮಾರಿಸನ್ ಮತ್ತು ಜಪಾನ್‌ನ ಮಾಜಿ ಪ್ರಧಾನಮಂತ್ರಿ ಶ್ರೀ ಶಿಂಜೊ ಅಬೆ ಅವರ ಪ್ರಧಾನ ಭಾಷಣಕ್ಕೂ ಸಾಕ್ಷಿಯಾಗಲಿದೆ.
***
(रिलीज़ आईडी: 1772972)
आगंतुक पटल : 217
इस विज्ञप्ति को इन भाषाओं में पढ़ें:
English
,
Urdu
,
हिन्दी
,
Marathi
,
Manipuri
,
Bengali
,
Punjabi
,
Gujarati
,
Odia
,
Tamil
,
Telugu
,
Malayalam