ಪ್ರಧಾನ ಮಂತ್ರಿಯವರ ಕಛೇರಿ
ಆಚಾರ್ಯ ಕೃಪಲಾನಿ ಅವರ ಜಯಂತಿಯಂದು ಅವರನ್ನು ಸ್ಮರಿಸಿದ ಪ್ರಧಾನಿ
प्रविष्टि तिथि:
11 NOV 2021 9:19AM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ನೀಡಿದ ಕೊಡುಗೆಗಾಗಿ ಆಚಾರ್ಯ ಕೃಪಲಾನಿ ಅವರನ್ನು ಸ್ಮರಿಸಿದ್ದಾರೆ. ಆಚಾರ್ಯ ಕೃಪಲಾನಿ ಅವರ ಜಯಂತಿ ಸಂದರ್ಭದಲ್ಲಿ, ಇಂದು ಪ್ರಧಾನಮಂತ್ರಿಯವರು ನಮ್ಮ ರಾಷ್ಟ್ರದ ಬಗ್ಗೆ ಕೃಪಲಾನಿ ಅವರಿಗಿದ್ದ ಮಹಾನ್ ದೃಷ್ಟಿಕೋನ, ಪರಿಸರ ಸಂರಕ್ಷಣೆ ಮತ್ತು ಸಾಮಾಜಿಕ ಸಬಲೀಕರಣಕ್ಕೆ ಅವರ ಕೊಡುಗೆಗಳನ್ನು ಶ್ಲಾಘಿಸಿದ್ದಾರೆ.
ಪ್ರಧಾನಮಂತ್ರಿಯವರು ಹೀಗೆ ಟ್ವೀಟ್ ಮಾಡಿದ್ದಾರೆ: "ಬಾಪು ಅವರ ನಾಯಕತ್ವದಲ್ಲಿ ಆಚಾರ್ಯ ಕೃಪಲಾನಿ ಅವರು ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಮುಂಚೂಣಿ ಪಾತ್ರ ವಹಿಸಿದರು. ಅವರು ನಮ್ಮ ರಾಷ್ಟ್ರದ ಬಗ್ಗೆ ಉತ್ತಮ ದೂರದೃಷ್ಟಿಯನ್ನು ಹೊಂದಿದ್ದರು ಮತ್ತು ಸಂಸದರಾಗಿ ಅದನ್ನು ಪೂರೈಸಲು ಕೆಲಸ ಮಾಡಿದರು. ಪರಿಸರ ಸಂರಕ್ಷಣೆ ಮತ್ತು ಸಾಮಾಜಿಕ ಸಬಲೀಕರಣಕ್ಕೆ ಅವರು ಅಪಾರ ಕೊಡುಗೆಗಳನ್ನು ನೀಡಿದ್ದಾರೆ. ಅವರ ಜಯಂತಿಯಂದು ಅವರನ್ನು ಸ್ಮರಿಸುತ್ತೇನೆ."
***
(रिलीज़ आईडी: 1770900)
आगंतुक पटल : 332
इस विज्ञप्ति को इन भाषाओं में पढ़ें:
English
,
Urdu
,
Marathi
,
हिन्दी
,
Bengali
,
Assamese
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam