ಪ್ರಧಾನ ಮಂತ್ರಿಯವರ ಕಛೇರಿ

ತಮಿಳುನಾಡಿನ ಕೆಲವು ಭಾಗಗಳಲ್ಲಿ ಭಾರೀ ಮಳೆಯ ಕುರಿತಂತೆ ಮುಖ್ಯಮಂತ್ರಿಯೊಂದಿಗೆ ಮಾತನಾಡಿದ ಪ್ರಧಾನಮಂತ್ರಿ

Posted On: 07 NOV 2021 9:42PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತಮಿಳುನಾಡಿನ ಮುಖ್ಯಮಂತ್ರಿ ತಿರು ಎಂ.ಕೆ. ಸ್ಟ್ಯಾಲಿನ್ ಅರೊಂದಿಗೆ ಮಾತನಾಡಿ, ರಾಜ್ಯದ ಕೆಲವು ಭಾಗಗಳಲ್ಲಿ ಭಾರೀ ಮಳೆಯಿಂದ ಉಂಟಾಗಿರುವ ಪರಿಸ್ಥಿತಿಯ ಕುರಿತಂತೆ ಚರ್ಚಿಸಿದರು. ಶ್ರೀ ಮೋದಿ ರಕ್ಷಣೆ ಮತ್ತು ಪರಿಹಾರ ಕಾಮಗಾರಿಗಳಿಗಾಗಿ ಕೇಂದ್ರದಿಂದ ಎಲ್ಲ ಅಗತ್ಯ ನೆರವಿನ ಭರವಸೆ ನೀಡಿದರು.

ಟ್ವೀಟ್ ನಲ್ಲಿ ಪ್ರಧಾನಮಂತ್ರಿಯವರು, "ತಮಿಳುನಾಡು ಮುಖ್ಯಮಂತ್ರಿ ತಿರು@ mkstalin ರೊಂದಿಗೆ ಮಾತನಾಡಿ, ರಾಜ್ಯದ ಕೆಲವು ಭಾಗಗಳಲ್ಲಿ ಭಾರೀ ಮಳೆಯಿಂದ ಉಂಟಾಗಿರುವ ಪರಿಸ್ಥಿತಿಯ ಬಗ್ಗೆ ಚರ್ಚಿಸಿದ್ದೇನೆ. ಕೇಂದ್ರದಿಂದ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗೆ ಎಲ್ಲ ಅಗತ್ಯ ನೆರವಿನ ಭರವಸೆ ನೀಡಿದ್ದೇನೆ. ನಾನು ಪ್ರತಿಯೊಬ್ಬರ ಕ್ಷೇಮ ಮತ್ತು ಸುರಕ್ಷತೆಗಾಗಿ ಪ್ರಾರ್ಥಿಸುತ್ತೇನೆ.." ಎಂದು ತಿಳಿಸಿದ್ದಾರೆ.

தமிழக முதல்வர் திரு @mkstalin உடன் பேசினேன். மாநிலத்தின் சில பகுதிகளில் கனமழை பெய்து வரும் நிலைமை குறித்து ஆலோசித்தேன். மீட்பு மற்றும் நிவாரணப் பணிகளில் நடுவன் அரசால் முடிந்த எல்லா உதவிகளையும் அளிப்பதாக உறுதியளித்தேன். அனைவரின் நலன் மற்றும் பாதுகாப்புக்காக நான் வேண்டுகிறேன்.

— Narendra Modi (@narendramodi) November 7, 2021

***(Release ID: 1770030) Visitor Counter : 143