ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ

ವಾಹನ ಸ್ಕ್ರ್ಯಾಪಿಂಗ್ ನೀತಿಯ ಅಡಿಯಲ್ಲಿ ರಿಯಾಯಿತಿಗೆ ಸಂಬಂಧಿಸಿದ ಅಧಿಸೂಚನೆ ಪ್ರಕಟ

Posted On: 07 OCT 2021 10:32AM by PIB Bengaluru

ಅಧಿಕ ನಿರ್ವಹಣೆ ಮತ್ತು ಇಂಧನ ವೆಚ್ಚಗಳನ್ನು ಒಳಗೊಂಡಹಳೆಯ ಮತ್ತು ಮಾಲಿನ್ಯಕಾರಕ ವಾಹನಗಳನ್ನು ತ್ಯಜಿಸುವಂತೆ ವಾಹನ ಮಾಲೀಕರನ್ನು ಉತ್ತೇಜಿಸುವ ಸಲುವಾಗಿ ಪ್ರೋತ್ಸಾಹಕ ವ್ಯವಸ್ಥೆಯೊಂದನ್ನು ಹೊಂದಲು ವಾಹನ ಸ್ಕ್ರ್ಯಾಪಿಂಗ್‌ ನೀತಿಯಲ್ಲಿ ಪ್ರಸ್ತಾಪಿಸಲಾಗಿದೆ.

ಇದಕ್ಕೆ ಅನುಗುಣವಾಗಿ, ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಭಾರತದ ಗೆಜೆಟ್‌ನಲ್ಲಿ ದಿನಾಂಕ 05.10.2021ರಂದು ʻಜಿಎಸ್ಆರ್ ಅಧಿಸೂಚನೆ 720()ʼ ಅನ್ನು ಹೊರಡಿಸಿದ್ದು, ಇದು ಏಪ್ರಿಲ್ 1, 2022 ರಿಂದ ಜಾರಿಗೆ ಬರಲಿದೆ.

ಹಳೆಯ ವಾಹನವನ್ನು ಗುಜರಿಗೆ ಹಾಕಲು ಪ್ರೋತ್ಸಾಹಕವಾಗಿ, " ವಾಹನ ಜಮೆ ಪ್ರಮಾಣಪತ್ರ" ಸಲ್ಲಿಸಿದವರಿಗೆ ಹೊಸ ವಾಹನ ನೋಂದಣಿ ವೇಳೆ ಮೋಟಾರು ವಾಹನ ತೆರಿಗೆಯಲ್ಲಿ ರಿಯಾಯಿತಿಯನ್ನು ನಿಗದಿಪಡಿಸಲಾಗಿದೆ. ನೋಂದಾಯಿತ ವಾಹನ ಸ್ಕ್ರ್ಯಾಪಿಂಗ್ ಘಟಕದಿಂದವಾಹನ ಜಮೆ ಪ್ರಮಾಣಪತ್ರಪಡೆಯಬಹುದಾಗಿದೆ. ಇದರ ಅಡಿ ದೊರೆಯುವ ರಿಯಾಯಿತಿ ಕೆಳಗಿನಂತಿದೆ:

    (1) ಸಾರಿಗೆಯೇತರ (ವೈಯಕ್ತಿಕ) ವಾಹನಗಳಿಗೆ 25% ವರೆಗೆ ಮತ್ತು

    (2) ಸಾರಿಗೆ (ವಾಣಿಜ್ಯ) ವಾಹನಗಳಿಗೆ 15%ವರೆಗೆ.

ಸಾರಿಗೆ ವಾಹನಗಳ ವಿಚಾರದಲ್ಲಿ ಎಂಟು ವರ್ಷಗಳವರೆಗೆ ಮತ್ತು ಸಾರಿಗೆಯೇತರ ವಾಹನಗಳ ವಿಚಾರದಲ್ಲಿ ಹದಿನೈದು ವರ್ಷಗಳವರೆಗೆ ರಿಯಾಯಿತಿ ಲಭ್ಯವಿರುತ್ತದೆ.

ಗೆಜೆಟ್ ಅಧಿಸೂಚನೆ ತೆರೆಯಲು ಇಲ್ಲಿ ಕ್ಲಿಕ್ ಮಾಡಿ

***



(Release ID: 1761700) Visitor Counter : 219