ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಯುನಿಸೆಫ್‌ನ ವಿಶ್ವದ ಮಕ್ಕಳ ವರದಿಯನ್ನು ಶ್ರೀ ಮನ್ಸುಖ್ ಮಾಂಡವಿಯ ಅವರು ಬಿಡುಗಡೆ ಮಾಡಿದರು


ಮಕ್ಕಳು ಮತ್ತು ಯುವಜನರಲ್ಲಿ ಮಾನಸಿಕ ಆರೋಗ್ಯದ ಮೇಲೆ ಕೋವಿಡ್-19ರ ಪ್ರಭಾವದ ಕುರಿತು ಈ ವರದಿ ಬೆಳಕು ಚೆಲ್ಲುತ್ತದೆ

"ಸಮಗ್ರ ಆರೋಗ್ಯಕ್ಕೆ ಮಹತ್ವ ನೀಡುವ ಭಾರತೀಯ ವೈದ್ಯಕೀಯ ಸಂಪ್ರದಾಯಗಳಲ್ಲಿ ದೇಹ ಮತ್ತು ಮನಸ್ಸಿನ ಆರೋಗ್ಯವನ್ನು ಬೇರ್ಪಡಿಸಲಾಗದು,"

ಆರೋಗ್ಯಕರ ಸಮಾಜವನ್ನು ಸೃಷ್ಟಿಸಲು ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಪರಿಹರಿಸುವುದು ಅತ್ಯಗತ್ಯ: ಕೇಂದ್ರ ಆರೋಗ್ಯ ಸಚಿವ

"ಮಕ್ಕಳ ಪರೀಕ್ಷೆಯ ಒತ್ತಡವನ್ನು ನಿವಾರಿಸಲು ಪ್ರಧಾನಮಂತ್ರಿ ಜೀ ಅವರು ವೈಯಕ್ತಿಕವಾಗಿ ಪ್ರಯತ್ನವನ್ನು ಮಾಡಿದರು": 'ಪರೀಕ್ಷಾ ಪೇ ಚರ್ಚಾ' ಕುರಿತು ಕೇಂದ್ರ ಸಚಿವ ಶ್ರೀ ಮಾಂಡವಿಯ

Posted On: 05 OCT 2021 4:06PM by PIB Bengaluru

ಯುನಿಸೆಫ್ ಜಾಗತಿಕ ಪ್ರಮುಖ ಪ್ರಕಟಣೆದಿ ಸ್ಟೇಟ್ ಆಫ್ ದಿ ವರ್ಲ್ಡ್ ಚಿಲ್ಡ್ರನ್ 2021; ನನ್ನ ಮನಸ್ಸಿನಲ್ಲಿ: ಮಕ್ಕಳ ಮಾನಸಿಕ ಆರೋಗ್ಯವನ್ನು ಉತ್ತೇಜಿಸುವುದು, ರಕ್ಷಿಸುವುದು ಮತ್ತು ಕಾಳಜಿವಹಿಸುವುದು " ಅನ್ನು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶ್ರೀ ಮನ್ಸುಖ್ ಮಾಂಡವಿಯ ಅವರು ಇಂದು ಬಿಡುಗಡೆ ಮಾಡಿದರು. ಮಕ್ಕಳ ಮಾನಸಿಕ ಆರೋಗ್ಯದ ಮೇಲೆ ಕೋವಿಡ್-19 ಸಾಂಕ್ರಾಮಿಕದ ಪರಿಣಾಮವನ್ನು ವರದಿಯು ವಿವರಿಸುತ್ತದೆ

ವರದಿಯನ್ನು ಇಂದು ಜಾಗತಿಕವಾಗಿ ಬಿಡುಗಡೆ ಮಾಡಲಾಗಿದೆ. ಮಾನಸಿಕ ಆರೋಗ್ಯದ ಮೇಲೆ ಕೇಂದ್ರೀಕರಿಸುವ ವರದಿಯ ಮಹತ್ವವನ್ನು ವಿವರಿಸಿದ ಕೇಂದ್ರ ಸಚಿವ ಶ್ರೀ ಮಾಂಡವಿಯವರು, "ಮಾನಸಿಕ ಆರೋಗ್ಯವು ಹಳೆಯ ಸಮಸ್ಯೆಯಾಗಿದೆ ಮತ್ತು ಜೊತೆಗೆ ಉದಯೋನ್ಮುಖ ಸಮಸ್ಯೆ ಕೂಡಾ ಆಗಿದೆ. ನಮ್ಮ ಸಾಂಪ್ರದಾಯಿಕ ಔಷಧ ವ್ಯವಸ್ಥೆಗಳು ಸಮಗ್ರ ಆರೋಗ್ಯ ಮತ್ತು ಸಂಪೂರ್ಣ ಯೋಗಕ್ಷೇಮವನ್ನು ಸಂಪೂರ್ಣವಾಗಿ ಒತ್ತಿಹೇಳುತ್ತವೆ, ಭಾರತದಂತಹ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಮಾನಸಿಕ ಆರೋಗ್ಯ ಸಮಸ್ಯೆಗಳು ಹೆಚ್ಚುತ್ತಿವೆ”. ಗ್ರಾಮೀಣ-ಕೃಷಿ ಹಿನ್ನೆಲೆಯಿಂದ ಬಂದಿರುವ ಸಚಿವರು ತನ್ನ ಅವಿಭಕ್ತ ಕುಟುಂಬದ ಉದಾಹರಣೆಯನ್ನು ನೀಡಿದ ಸಚಿವವರು, “ಮಕ್ಕಳು ಮತ್ತು ಹದಿಹರೆಯದವರು ಹೆಚ್ಚಿನ ಸಂಖ್ಯೆಯ ಕುಟುಂಬ ಇತರ ಸದಸ್ಯರೊಂದಿಗೆ ಸಂವಹನ ನಡೆಸಲು ಅವಕಾಶವನ್ನು ಪಡೆಯುತ್ತಾರೆ, ಮತ್ತು ಅವರು ತಮ್ಮ ಭಾವನಾತ್ಮಕ ಸಂಕಷ್ಟದ ಸಮಯದಲ್ಲಿ ತೆರೆದುಕೊಳ್ಳಬಹುದು ಮತ್ತು ಮಾರ್ಗದರ್ಶನ ಪಡೆಯಬಹುದು, ಆದರೆ ಸಣ್ಣ ವೈಯ್ಯಕ್ತಿಕ ಕುಟುಂಬಗಳ ಸಂಸ್ಕೃತಿಯು ಪರಕೀಯತೆಯ ಹೆಚ್ಚಳಕ್ಕೆ ಕಾರಣವಾಗಿದೆ ಮತ್ತು ಇದರ ಪರಿಣಾಮವಾಗಿ ಮಾನಸಿಕ ಯಾತನೆ ಹೆಚ್ಚಾಗಿದೆಎಂದು ಸಚಿವರು ಹೇಳಿದರು

"ಕೋವಿಡ್ -19 ಇಡೀ ಸಮಾಜಕ್ಕೆ ಮಾನಸಿಕ ಒತ್ತಡದ ಪರೀಕ್ಷೆಯಾಗಿದೆ" ಎಂದು ಕೇಂದ್ರ ಆರೋಗ್ಯ ಸಚಿವರು ಹೇಳಿದರು. ಅವರು ಕೋವಿಡ್ 19 ಎರಡನೇ ಹಂತದ ಉಲ್ಬಣ ಸಂದರ್ಭದಲ್ಲಿ ಆರೋಗ್ಯ ಸಚಿವರಾಗಿ ತಮ್ಮ ವೈಯಕ್ತಿಕ ಅನುಭವವನ್ನು ಸಂದರ್ಭದಲ್ಲಿ ವಿವರಿಸಿದರು. "ಔಷಧಿಗಳ ಉತ್ಪಾದನಾ ಸಾಮರ್ಥ್ಯವನ್ನು ವರ್ಧಿಸಬೇಕಾಗಿದೆ ಮತ್ತು ಹೊಸ ಘಟಕಗಳನ್ನು ಸ್ಥಾಪಿಸುವ ಸರ್ಕಾರಿ ಔಪಚಾರಿಕ ಅಧಿಕೃತ ಪ್ರಕ್ರಿಯೆಗಳನ್ನು ತೀವ್ರಗೊಳಿಸಬೇಕಾಗಿದೆ. ಸಂದರ್ಭದಲ್ಲಿ ತೆರೆದುಕೊಳ್ಳುತ್ತಿದ್ದ ಮಾನವ ದುರಂತದ ನಡುವೆ ತುಂಬಾ ಒತ್ತಡವನ್ನು ಕೂಡಾ ಉಂಟು ಮಾಡಿದೆ. ಯೋಗ, ದೀರ್ಘ ಉಸಿರಾಟ ಮತ್ತು ಸೈಕ್ಲಿಂಗ್ ಗಳು ತನ್ನ ಒತ್ತಡವನ್ನು ನಿವಾರಿಸಲು ಸಹಾಯ ಮಾಡಿವೆ ಎಂದು ಸಚಿವರು ಹೇಳಿದರು.

ಆರೋಗ್ಯಯುತ ಸಮಾಜವನ್ನು ಸೃಷ್ಟಿಸಲು ಮಾನಸಿಕ ಆರೋಗ್ಯವನ್ನು ಕಾಪಾಡುವುದು ಒಂದು ಪ್ರಮುಖ ಅಂಶವಾಗಿದೆ. ಪೋಷಕರು ಮತ್ತು ಕುಟುಂಬದೊಂದಿಗೆ ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಪರಿಹರಿಸಲು ಶಿಕ್ಷಕರು ಬಹಳ ಮುಖ್ಯವಾದ ಪಾಲುದಾರರಾಗಿದ್ದಾರೆ. ಕುಟುಂಬ ಮತ್ತು ಶಿಕ್ಷಕರು ಪರಸ್ಪರ ನಂಬಿಕೆ ಮತ್ತು ಗೌರವದ ಸ್ಥಾನದಿಂದ ಮಕ್ಕಳೊಂದಿಗೆ ಮುಕ್ತ ಸಮಾಲೋಚನೆ ನಡೆಸಬೇಕುಎಂದು ಸಚಿವರು ಹೇಳಿದರು.

ವಿಸ್ತೃತ ಮಟ್ಟದಲ್ಲಿ ಸಮಸ್ಯೆಯನ್ನು ಬಗೆಹರಿಸುವ ಸರ್ಕಾರದ ಬದ್ಧತೆಯ ಬಗ್ಗೆ ಮಾತನಾಡುತ್ತಾ, ಸಚಿವ ಶ್ರೀ ಮಾಂಡವೀಯವರುತಮ್ಮ ಜೀವನದಲ್ಲಿ ಪ್ರಮುಖ ಪರೀಕ್ಷೆಗಳಿಗೆ ಹಾಜರಾಗುವ ಹದಿಹರೆಯದವರೊಂದಿಗೆ ಪ್ರಧಾನಮಂತ್ರಿ ಅವರ 'ಪರೀಕ್ಷಾ ಪೇ ಚರ್ಚಾ' ಕಾರ್ಯಕ್ರಮವನ್ನು ನೆನಪಿಸಿಕೊಂಡರು: "ಪರೀಕ್ಷೆಯಲ್ಲಿ ವಿದ್ಯಾರ್ಥಿಗಳ ಒತ್ತಡಗಳನ್ನು ನಿವಾರಿಸಲು ಪ್ರಧಾನಮಂತ್ರಿ ಜೀ ಅವರು ವೈಯಕ್ತಿಕವಾಗಿ ಬಹಳಷ್ಟು ಪ್ರಯತ್ನವನ್ನು ಮಾಡಿದ್ದಾರೆ. ಫಲಿತಾಂಶಗಳು ಮತ್ತು ಭವಿಷ್ಯದ ಬಗ್ಗೆ ಚಿಂತಿಸದೆ ಶಾಲೆಗೆ ಹೋಗುವ ಮಕ್ಕಳಿಗೆ ನೈತಿಕವಾಗಿ ಉತ್ತಮ ಜೀವನ ನಡೆಸುವಂತೆ ಮನ್ ಕಿ ಬಾತ್' ನಂತಹ ವೇದಿಕೆಗಳ ಮೂಲಕ ಪ್ರಧಾನಮಂತ್ರಿ ಅವರು ನಿಯಮಿತವಾಗಿ ಸಲಹೆ ನೀಡುತ್ತಾ ಇದ್ದಾರೆ. ಪರೀಕ್ಷೆಗಳು ಮತ್ತು ಇತರ ಸಮಸ್ಯೆಗಳಿಂದಾಗಿ ಉದ್ವಿಗ್ನರಾಗಿರುವ ಮಕ್ಕಳ ಮೇಲೆ ಇಂತಹ ಹೆಜ್ಜೆಗಳು, ಪ್ರಯತ್ನಗಳು ಬಹಳ ದೊಡ್ಡ ಪರಿಣಾಮವನ್ನು ಬೀರುತ್ತವೆ”. ಎಂದು ಹೇಳಿದರು

ಮಾನಸಿಕ ಆರೋಗ್ಯ ಮತ್ತು ದೈಹಿಕ ಆರೋಗ್ಯ ಒಂದೇ ನಾಣ್ಯದ ಎರಡು ಮುಖಗಳುಎಂದು ಕೇಂದ್ರ ಆರೋಗ್ಯ ಕಾರ್ಯದರ್ಶಿ ಶ್ರೀ ರಾಜೇಶ್ ಭೂಷಣ್ ಹೇಳಿದರು. ಮಾನಸಿಕ ಆರೋಗ್ಯ ಸಮಸ್ಯೆಗಳಿಗೆ ಸಂಬಂಧಿಸಿದ ಸಾಮಾಜಿಕ ಕಳಂಕದ ಹರಡುವಿಕೆಯನ್ನು ಅವರು  ತಿಳಿಸಿದರು. ಹಲವಾರು ಪ್ರತಿಷ್ಠಿತ ಶಾಲೆಗಳಲ್ಲಿ ಪೂರ್ಣ ಸಮಯದ ವಿದ್ಯಾರ್ಥಿ-ಸಲಹೆಗಾರರ ಕೊರತೆಯನ್ನು ಕೂಡಾ ಅವರು ಸಂದರ್ಭದಲ್ಲಿ ಎತ್ತಿ ತೋರಿಸಿದ್ದಾರೆ

ಯುನಿಸೆಫ್ ಇಂಡಿಯಾ ಪ್ರತಿನಿಧಿ ವರದಿಯ ಕೆಲವು ಪ್ರಮುಖ ಸಂಶೋಧನೆಗಳನ್ನು ಡಾ. ಯಾಸ್ಮಿನ್ ಅಲಿ ಹಕ್, ಅವರು ಮಂಡಿಸಿದರು. ಜಾಗತಿಕ ಮಕ್ಕಳ ವರದಿ 2021 ಪ್ರಕಾರ, ಭಾರತದಲ್ಲಿ 15 ರಿಂದ 24 ವರ್ಷ ವಯಸ್ಸಿನವರಲ್ಲಿ ಸರಾಸರಿ 14 ಪ್ರತಿಶತದಷ್ಟು ಅಥವಾ 7 ರಲ್ಲಿ 1 ರಷ್ಟು ಜನರು ಸಾಮಾನ್ಯವಾಗಿ ಖಿನ್ನತೆಯನ್ನು ಅನುಭವಿಸುತ್ತಾರೆ ಅಥವಾ ಕೆಲಸ ಮಾಡುವಲ್ಲಿ ಸ್ವಲ್ಪ ಆಸಕ್ತಿಯನ್ನು ಕಳೆದುಕೊಳ್ಳುತ್ತಾರೆ ಎಂದು ವರದಿ ಮಾಡಿದೆ. "ಮಕ್ಕಳು ಕೇವಲ ಭಾವನಾತ್ಮಕ ಸಮಸ್ಯೆಯನ್ನು ಅನುಭವಿಸುತ್ತಿಲ್ಲ, ಅನೇಕರು ನಿರ್ಲಕ್ಷ್ಯ ಮತ್ತು ದುರುಪಯೋಗದಿಂದ ಹೆಚ್ಚಿನ ಅಪಾಯದಲ್ಲಿದ್ದಾರೆ" ಎಂದು ಅವರು ಹೇಳಿದರು

ಶ್ರೀ ವಿಶಾಲ್ ಚೌಹಾಣ್, ಜಂಟಿ ಕಾರ್ಯದರ್ಶಿ-ನೀತಿ (ಆರೋಗ್ಯ), ಡಾ.ಪ್ರತಿಮಾ ಮೂರ್ತಿ, ನಿರ್ದೇಶಕರು, ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನಗಳ ಸಂಸ್ಥೆ (ನಿಮ್ಹಾನ್ಸ್) ಮತ್ತು ಇತರ ಸಚಿವಾಲಯ ಮತ್ತು ಯುನಿಸೆಫ್ ಅಧಿಕಾರಿಗಳು ಸಹ ಕಾರ್ಯಕ್ರಮದಲ್ಲಿ ಹಾಜರಿದ್ದರು

***



(Release ID: 1761453) Visitor Counter : 294