ಪ್ರಧಾನ ಮಂತ್ರಿಯವರ ಕಛೇರಿ
ಕೆವಿಐಸಿಯ ವಿಶ್ವದ ಅತಿದೊಡ್ಡ ಖಾದಿ ರಾಷ್ಟ್ರೀಯ ಧ್ವಜಕ್ಕೆ ಪ್ರಧಾನಮಂತ್ರಿ ಶ್ಲಾಘನೆ
ಹಬ್ಬದ ಋತುವಿನಲ್ಲಿ ಖಾದಿ ಮತ್ತು ಕರಕುಶಲ ಉತ್ಪನ್ನಗಳ ಖರೀದಿಗೆ ಮನವಿ
Posted On:
03 OCT 2021 5:24PM by PIB Bengaluru
ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರಿಗೆ ಗೌರವ ಸಲ್ಲಿಸಲು ಖಾದಿ ಗ್ರಾಮೀಣ ಕೈಗಾರಿಕಾ ಆಯೋಗ, ಲಡಾಖ್ ನ ಲೇಹ್ ನಲ್ಲಿ ವಿಶ್ವದ ಅತಿ ದೊಡ್ಡ ಖಾದಿ ರಾಷ್ಟ್ರೀಯ ಧ್ವಜ (225 ಅಡಿ ಎತ್ತರ ಹಾಗೂ 150 ಅಡಿ ಅಗಲ)ವನ್ನು ಪ್ರದರ್ಶಿಸಿದ್ದನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶ್ಲಾಘಿಸಿದ್ದಾರೆ.
ಪ್ರಧಾನಮಂತ್ರಿ ಅವರು ತಮ್ಮ ಟ್ವೀಟ್ ನಲ್ಲಿ ಹೀಗೆ ತಿಳಿಸಿದ್ದಾರೆ, “ಬಾಪು ಅವರ ಖಾದಿ ಬಗೆಗಿನ ಒಲವು ಚೆನ್ನಾಗಿ ತಿಳಿದಿರುವುದರಿಂದ ಇದು ವಿನೂತನ ರೀತಿಯಲ್ಲಿ ಗೌರವ ಸಲ್ಲಿಸಿದಂತಾಗಿದೆ.
“ಈ ಹಬ್ಬಗಳ ಋತುವಿನಲ್ಲಿ, ಖಾದಿ ಮತ್ತು ಕರಕುಶಲ ಉತ್ಪನ್ನಗಳನ್ನು ನಿಮ್ಮ ಜೀವನದ ಭಾಗವನ್ನಾಗಿ ಮಾಡಿಕೊಳ್ಳಲು ಪರಿಗಣಿಸಿ ಮತ್ತು ಆತ್ಮ ನಿರ್ಭರ ಭಾರತ ನಿರ್ಮಿಸುವ ಸಂಕಲ್ಪವನ್ನು ಬಲವರ್ಧನೆಗೊಳಿಸಿ.” ಎಂದು ಹೇಳಿದ್ದಾರೆ.
***
(Release ID: 1760682)
Visitor Counter : 262
Read this release in:
English
,
Urdu
,
Marathi
,
Hindi
,
Bengali
,
Manipuri
,
Assamese
,
Punjabi
,
Gujarati
,
Odia
,
Tamil
,
Telugu
,
Malayalam