ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಶ್ರೀ ಎಸ್. ಸೆಲ್ವಗಣಪತಿ ರಾಜ್ಯಸಭೆಗೆ ಆಯ್ಕೆಯಾಗಿದ್ದಕ್ಕೆ ಸಂತಸ ವ್ಯಕ್ತಪಡಿಸಿದ ಪ್ರಧಾನಿ

ಪ್ರಕಟಣಾ ದಿನಾಂಕ: 28 SEP 2021 11:24AM by PIB Bengaluru

ರಾಜ್ಯಸಭೆಗೆ ಪುದುಚೇರಿಯಿಂದ ಶ್ರೀ ಎಸ್‌ ಸೆಲ್ವಗಣಪತಿ ಆಯ್ಕೆಯಾಗಿರುವುದಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಸಂತಸ ವ್ಯಕ್ತಪಡಿಸಿದ್ದಾರೆ.

ಪ್ರಧಾನಮಂತ್ರಿ ಅವರು ತಮ್ಮ ಟ್ವೀಟ್ ನಲ್ಲಿ "ಶ್ರೀ ಎಸ್.‌ಸೆಲ್ವಗಣಪತಿ ಅವರನ್ನು ಪುದುಚೇರಿಯಿಂದ ನಮ್ಮ ಪಕ್ಷದ ಮೊತ್ತ ಮೊದಲ ರಾಜ್ಯಸಭಾ ಸದಸ್ಯರಾಗಿ ಪಡೆದಿರುವುದು ನಮ್ಮ ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರಿಗೂ ಹೆಮ್ಮೆಯ ವಿಷಯವಾಗಿದೆ.‌ ನಮ್ಮ ಮೇಲೆ ಪುದುಚೇರಿ ಜನರು ಇಟ್ಟಿರುವ ನಂಬಿಕೆಗೆ ಆಭಾರಿ. ಪುದುಚೇರಿಯ ಪ್ರಗತಿಗಾಗಿ ಕೆಲಸ ಮಾಡುವುದನ್ನು ನಾವು ಮುಂದುವರಿಸುತ್ತೇವೆ." ಎಂದು ಹೇಳಿದ್ದಾರೆ. ‌

***


(ಪ್ರಕಟಣೆ ಐ.ಡಿ.: 1758989) ವಿಸಿಟರ್ ಕೌಂಟರ್ : 279